OTT Releases This Week: ಚಿತ್ರಮಂದಿರಗಳಲ್ಲಿ 'ಪೆದ್ದಿ', 'ಪಚ್ಚ' ಹವಾ; ಓಟಿಟಿಯಲ್ಲಿ ಯಾವೆಲ್ಲಾ ಚಿತ್ರಗಳು ಬರ್ತಿವೆ

ಬಾಕ್ಸಾಫೀಸ್‌ನಲ್ಲಿ 'ಪೆದ್ದಿ' ಆರ್ಭಟ ಜೋರಾಗಿದೆ. 2ನೇ ವಾರಕ್ಕೆ ಸಿನಿಮಾ ಕಾಲಿಡುತ್ತಿದೆ. ಕನ್ನಡದ 'ಮ್ಯಾಂಗೋ ಪಚ್ಚ' ಹಾಗೂ 'ಲೋ ನವೀನ' ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿವೆ. ಇನ್ನು ಮೋಹನ್ ಲಾಲ್ ನಟನೆಯ 'ದೃಶ್ಯಂ'- 3 ಸಿನಿಮಾ ತೆರೆಕಂಡು 20 ದಿನ ಕಳೆದರೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ.

ಐಪಿಎಲ್ ಬಳಿಕ ನಿಧಾನವಾಗಿ ಸಿನಿಮಾ ಬಾಕ್ಸಾಫೀಸ್ ಸದ್ದು ಮಾಡ್ತಿದೆ. ಜನ ಚಿತ್ರಮಂದಿರಗಳ ಕಡೆ ಮುಖ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಇದರ ನಡುವೆ ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಈ ವಾರ ಸ್ಟ್ರೀಮಿಂಗ್ ಆರಂಭಿಸಲಿವೆ.

From Karuppu to Dridam this Week Ott streaming movies and web series List

ಬ್ಲಾಕ್‌ಬಸ್ಟರ್ ಹಿಟ್ 'ಕರುಪ್ಪು' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ. ನೆಟ್‌ಫ್ಲಿಕ್ಸ್, ಪ್ರೈಂ ವಿಡಿಯೋ, ಜಿಯೋ ಹಾಟ್‌ಸ್ಟರ್ ಹಾಗೂ ಜೀ5ನಲ್ಲಿ ಯಾವೆಲ್ಲಾ ಸಿನಿಮಾಗಳು ಈ ವಾರ ಸ್ಟ್ರೀಮಿಂಗ್ ಆಗ್ತಿದೆ ಬನ್ನಿ ನೋಡೋಣ.

1. ಕರುಪ್ಪು

ಸೂರ್ಯ ನಟನೆಯ ತಮಿಳಿನ 'ಕರುಪ್ಪು' ಸಿನಿಮಾ ಓಟಿಟಿಗೆ ಬರ್ತಿದೆ. ಜೂನ್ 12ರಂದು ಕನ್ನಡಕ್ಕೂ ಡಬ್ ಆಗಿ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಆರ್‌ಜೆ ಬಾಲಾಜಿ ಈ ಫ್ಯಾಂಟಸಿ ಎಂಟರ್‌ಟೈನರ್ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಪ್ರಮುಖ ಪಾತ್ರದಲ್ಲಿ ಕೂಡ ನಟಿಸಿ ಗಮನ ಸೆಳೆದಿದ್ದಾರೆ. ತ್ರಿಷಾ ನಾಯಕಿಯಾಗಿ ಮಿಂಚಿದ್ದಾರೆ.

From Karuppu to Dridam this Week Ott streaming movies and web series List

ನ್ಯಾಯಾಲಯಗಳಲ್ಲಿ ಬಡವರು, ಮುಗ್ಧರಿಗೆ ಅಷ್ಟು ಸುಲಭವಾಗಿ ನ್ಯಾಯ ಸಿಗುವುದಿಲ್ಲ. ಭ್ರಷ್ಟಾಚಾರ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಕೊನೆಗೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲು ಕರುಪ್ಪು ಸ್ವಾಮಿಯೇ ವಕೀಲನ ವೇಷದಲ್ಲಿ ಬರುವ ಕಥೆ ಚಿತ್ರದಲ್ಲಿದೆ. ಮೇ 15ರಂದು ತೆರೆಗೆ ಬಂದಿದ್ದ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

2. ಭೂತ್‌ಬಾಂಗ್ಲಾ

ಪ್ರಿಯದರ್ಶನ್ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್ ನಟನೆಯ ಕಾಮಿಡಿ ಹಾರರ್ ಸಿನಿಮಾ ಇದು. ಏಪ್ರಿಲ್ 17ರಂದು ತೆರೆಗೆ ಬಂದಿದ್ದ 'ಭೂತ್‌ಬಾಂಗ್ಲಾ' ಸಿನಿಮಾ ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗ್ತಿದೆ. ಜೂನ್ 12ರಿಂದ ಓಟಿಟಿ ಚಂದಾದಾರರು ಸಿನಿಮಾ ವೀಕ್ಷಿಸಬಹುದು. ಪರೇಶ್ ರಾವಲ್, ಜಿಶು ಸೆಂಗುಪ್ತ, ರಾಜಪಾಲ್ ಯಾದವ್, ತಬು, ವಾಮಿಕಾ ಗಬ್ಬಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ 'ಭೂತ್‌ಬಾಂಗ್ಲಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ 246 ಕೋಟಿ ರೂ. ಗಳಿಕೆ ಕಂಡಿದ್ದಾಗಿ ವರದಿಯಾಗಿತ್ತು. ಬಹಳ ದಿನಗಳ ಬಳಿಕ ಅಕ್ಷಯ್‌ ಕುಮಾರ್ ತಕ್ಕ ಮಟ್ಟಿಗೆ ಗೆದ್ದಿದ್ದರು.

3. ದೃಢಂ

ಶೇನ್ ನಿಗಮ್, ಶೋಬಿ ತಿಲಕನ್, ಕೃಷ್ಣ ಪ್ರಭಾ, ನಂದನ್ ಉನ್ನಿ ನಟನೆಯ ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾ 'ದೃಢಂ'. ಕೇರಳದ ಇಡುಕ್ಕಿಯಲ್ಲಿರುವ ಹಳ್ಳಿಯೊಂದರಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಮಾರ್ಟಿನ್ ಜೋಸೆಫ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಜೂನ್ 12ರಂದು ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ. ಬೇರೆ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಬರ್ತಿದೆ ಮುಂದೆ ಓದಿ.

ಅಮೇಜಾನ್ ಪ್ರೈಂ

1. ದಿ ರೆಸ್ಟ್ ಈಸ್ ಫುಟ್‌ಬಾಲ್(ಡಾಕ್ಯುಮೆಂಟರಿ ಸಿನಿಮಾ) ಜೂನ್ 10

2. ಎವ್ರಿ ಇಯರ್ ಆಫ್ಟರ್(ಇಂಗ್ಲೀಷ್ ಸಿನಿಮಾ) ಜೂನ್ 10

3. ರಾಖ್(ಕನ್ನಡ ಡಬ್ಬಿಂಗ್ ವೆಬ್ ಸೀರಿಸ್) ಜೂನ್ 12

ನೆಟ್‌ಫ್ಲಿಕ್ಸ್

1. ಮೈ ಫ್ಯಾಮಿಲಿ ಸೀಸನ್-2(ಇಂಗ್ಲೀಷ್ ವೆಬ್ ಸೀರಿಸ್) ಜೂನ್ 10

2. ಕಲರ್ಸ್ ಆಫ್ ಈವಿಲ್: ಬ್ಲ್ಯಾಕ್(ಇಂಗ್ಲೀಷ್ ಸಿನಿಮಾ) ಜೂನ್ 10

3. ಸ್ವೀಟ್ ಮಗ್ನೊಲಿಯಸ್- ಸೀಸನ್ 5(ಇಂಗ್ಲೀಷ್ ವೆಬ್ ಸೀರಿಸ್) ಜೂನ್ 11

4. ದಿ ಈವಿಲ್ ಲಾಯರ್(ಇಂಗ್ಲೀಷ್ ವೆಬ್ ಸೀರಿಸ್) ಜೂನ್ 11

Read more about: kannada tamil suriya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X