OTT Releases This Week: ಈ ವಾರ ಬ್ಲಾಕ್‌ಬಸ್ಟರ್ ಚಿತ್ರಗಳು ಓಟಿಟಿಗೆ ಎಂಟ್ರಿ; 2 ಕನ್ನಡ ಸಿನಿಮಾ ಮಿಸ್ ಮಾಡ್ಬೇಡಿ

ಈ ವಾರ ಚಿತ್ರಮಂದಿರಗಳಲ್ಲಿ ಪೆದ್ದಿ ಹಾಗೂ ಮ್ಯಾಂಗೋ ಪಚ್ಚ ಸಿನಿಮಾಗಳು ಬಿಡುಗಡೆ ಆಗ್ತಿದೆ. ಐಪಿಎಲ್ ಮುಗಿದು ಚಿತ್ರರಂಗದವರು ನಿಟ್ಟುಸಿರು ಬಿಟ್ಟಿದ್ದಾರೆ. ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಿದೆ.

ಓಟಿಟಿಯಲ್ಲಿ ಕೂಡ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಈ ವಾರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲಿದೆ. ಧುರಂಧರ್ -2 ಹಾಗೂ ಕನ್ನಡದ 'ಕೆಡಿ' ಸಿನಿಮಾ ಲಿಸ್ಟ್‌ನಲ್ಲಿರುವುದು ವಿಶೇಷ. ಇನ್ನು ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ನಟನೆಯ 'ಪ್ರೇಟ್ರಿಯಾಟ್' ಸಿನಿಮಾ ಕೂಡ ನೇರವಾಗಿ ಓಟಿಟಿಗೆ ಬರ್ತಿದೆ.

From KD the devil to Dhurandhar 2 This Week Ott streaming movies list

ಕನ್ನಡದ ಎರಡು ಸಿನಿಮಾಗಳು ಈ ವಾರ ಓಟಿಟಿಗೆ ಬರ್ತಿರೋದು ವಿಶೇಷ. ಇದಕ್ಕಾಗಿ ಓಟಿಟಿ ಚಂದಾದಾರರು ಕಾಯುತ್ತಿದ್ದಾರೆ. ಇನ್ನು ಪರಭಾಷೆಯ ಕೆಲ ಸಿನಿಮಾ ಕನ್ನಡಕ್ಕೆ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ. ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾ, ವೆಬ್ ಸೀರಿಸ್ ಲಿಸ್ಟ್ ಮುಂದೆ ಇದೆ ಓದಿ.

1. ಕೆಡಿ: ದಿ ಡೆವಿಲ್

ಏಪ್ರಿಲ್ 30ರಂದು ಬಿಡುಗಡೆಯಾಗಿದ್ದ 'ಕೆಡಿ: ದಿ ಡೆವಿಲ್' ಸಿನಿಮಾ ಈ ವಾರ ಓಟಿಟಿಗೆ ಎಂಟ್ರಿ ಕೊಡ್ತಿದೆ. 5 ಭಾಷೆಗಳಲ್ಲಿ ಸಿನಿಮಾ ವೀಕ್ಷಿಸಬಹುದು. ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ ಜೀ-5 ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ.

From KD the devil to Dhurandhar 2 This Week Ott streaming movies list

ಪ್ರೇಮ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿಸ ಸಂಜಯ್ ದತ್, ಶಿಲ್ಪಾ ಶೆಟ್ಟಿ ಹಾಗೂ ರವಿಚಂದ್ರನ್ ಕೂಡ ನಟಿಸಿದ್ದಾರೆ. ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಬಲ ತುಂಬಿದ್ದಾರೆ. ಕೆವಿಎನ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿತ್ತು. ಆದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿಲ್ಲ. ಬಾಕ್ಸಾಫೀಸ್‌ನಲ್ಲಿ ಕೂಡ ಸಿನಿಮಾ ಮುಗ್ಗರಿಸಿತ್ತು. ಜೂನ್ 5ರಂದು ಜೀ-5ನಲ್ಲಿ ಸಿನಿಮಾ ನೋಡಬಹುದು.

2. ದಿ ರೈಸ್ ಆಫ್ ಅಶೋಕ

ವಿನೋದ್ ವಿ ಧೋಂಡಾಳೆ ನಿರ್ದೇಶನದ 'ದಿ ರೈಸ್ ಆಫ್ ಅಶೋಕ' ಸಿನಿಮಾ ಈ ವರ್ಷದ ಆರಂಭದಲ್ಲೇ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆದರೆ ದೊಡ್ಡದಾಗಿ ಸಿನಿಮಾ ಸದ್ದು ಮಾಡಲಿಲ್ಲ. ಸತೀಶ್ ನೀನಾಸಂ ಹಾಗೂ ಸಪ್ತಮಿ ಗೌಡ ಚಿತ್ರದ ತಾರಾಗಣದಲ್ಲಿದ್ದಾರೆ.

ಸನ್‌ ನೆಕ್ಸ್ಟ್ ಓಟಿಟಿ ವೇದಿಕೆಯಲ್ಲಿ ಜೂನ್ 5ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗಿಗೂ 'ದಿ ರೈಸ್ ಆಫ್ ಅಶೋಕ' ಸಿನಿಮಾ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ.

3. ಧುರಂಧರ್- 2

ಬಾಕ್ಸಾಫೀಸ್‌ನಲ್ಲಿ 1500 ಕೋಟಿ ರೂ. ಕೊಳ್ಳೆ ಹೊಡೆದ 'ಧುರಂಧರ್- 2' ಸಿನಿಮಾ ಅಂತೂ ಇಂತೂ ಓಟಿಟಿಗೆ ಎಂಟ್ರಿ ಕೊಡ್ತಿದೆ. ಜೂನ್ 4ರಿಂದ ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ನೋಡಬಹುದು. ಕಳೆದ ವರ್ಷ 'ಧುರಂಧರ್' ಸಿನಿಮಾ ಬಂದು ಗೆದ್ದಿತ್ತು. ಅದರ ಸೀಕ್ವೆಲ್ ಇದು.

4. ಪೇಟ್ರಿಯಾಟ್

ಮಲಯಾಳಂ ಚಿತ್ರರಂಗದ ದಿಗ್ಗಜ ನಟರಾಗಿ ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ನಟನೆಯ ಸಿನಿಮಾ 'ಪೇಟ್ರಿಯಾಟ್'. ಇವತ್ತು(ಜೂನ್ 2) ಮಮ್ಮುಟ್ಟಿ ಹುಟ್ಟುಹಬ್ಬ. ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇದೇ ಸಂಭ್ರಮದಲ್ಲಿ ಇನ್ನೆರಡು ದಿನಕ್ಕೆ 'ಪೇಟ್ರಿಯಾಟ್' ಸಿನಿಮಾ ಓಟಿಟಿಗೆ ಬರ್ತಿದೆ. ಜೀ-5ನಲ್ಲಿ ಸಿನಿಮಾ ವೀಕ್ಷಿಸಬಹುದು. ಮೇ 1ರಂದು ಸಿನಿಮಾ ತೆರೆಗೆ ಬಂದಿತ್ತು. ಮಹೇಶ್ ನಾರಾಯಣ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ನೆಟ್‌ಫ್ಲಿಕ್ಸ್

1. ದ ಮರ್ಡರ್ ಆಫ್ ರೆಚಲ್ ನಿಕಲ್(ಇಂಗ್ಲೀಷ್ ಸಿನಿಮಾ) ಜೂನ್ 4

2. ಮಾ ಬೆಹೆನ್(ಹಿಂದಿ ಸಿನಿಮಾ) ಜೂನ್ 4

3. ಆಫೀಸ್ ರೊಮ್ಯಾನ್ಸ್(ಇಂಗ್ಲೀಷ್ ಸಿನಿಮಾ) ಜೂನ್ 5

Read more about: kd sandalwood Dhurandhar 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X