OTT Releases This Week: ಈ ವಾರ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಚಿತ್ರಗಳು; ಇವೆರಡು ಮಿಸ್ ಮಾಡ್ಬೇಡಿ

ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಮತ್ತೆ ಚಿತ್ರರಂಗ ಎದ್ದು ನಿಲ್ಲಲು ಕಾಯ್ತಿದೆ. ಮುಂದಿನ ವಾರ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ರಾಮ್‌ಚರಣ್ ನಟನೆಯ 'ಪೆದ್ದಿ' ಹಾಗೂ ಕನ್ನಡದ 'ಮ್ಯಾಂಗೋ ಪಚ್ಚ' ಚಿತ್ರಗಳು ತೆರೆಗಪ್ಪಳಿಸಲು ಕಾಯ್ತಿವೆ. ಇತ್ತ ಓಟಿಟಿಯಲ್ಲಿ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗ್ತಿವೆ.

ತಮಿಳಿನಲ್ಲಿ 'ಕರುಪ್ಪು' ಹಾಗೂ ಮಲಯಾಳಂನಲ್ಲಿ 'ದೃಶ್ಯಂ- 3' ಸಿನಿಮಾಗಳು ಗೆದ್ದಿವೆ. ಐಪಿಎಲ್ ಕ್ರಿಕೆಟ್‌ಗೂ ಜಗ್ಗದೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಕಂಡಿವೆ. ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿವೆ. ಆದರೆ ಕನ್ನಡದಲ್ಲಿ ಒಂದೇ ಒಂದು ಸಿನಿಮಾ ದೊಡ್ಡದಾಗಿ ಗೆದ್ದಿಲ್ಲ. ಈ ವರ್ಷ ಕನ್ನಡದ ದೊಡ್ಡ ಸಿನಿಮಾಗಳು ಬಿಡುಗಡೆ ಆಗುವುದೇ ಅನುಮಾನ ಎನ್ನುವಂತಾಗಿದೆ. ಸಣ್ಣಪುಟ್ಟ ಸಿನಿಮಾಗಳು ಬಂದು ಹೋಗುವುದೇ ಗೊತ್ತಾಗುತ್ತಿಲ್ಲ.

From KD the devil to Kara this week ott streaming movies list

ಇನ್ನು ಓಟಿಟಿ ವಿಚಾರಕ್ಕೆ ಬಂದರೆ ಕನ್ನಡ ಸಿನಿರಸಿಕರಿಗೆ ಅಲ್ಲಿ ಕೂಡ ನಿರಾಸೆ. ಬೇರೆ ಆ ಭಾಷೆಯ ಸಿನಿಮಾ, ವೆಬ್ ಸೀರಿಸ್ ನೋಡುವಂತಾಗಿದೆ. ಈ ವಾರವೇ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಓಟಿಟಿಗೆ ಬರುತ್ತೆ ಎನ್ನಲಾಗ್ತಿದೆ.

1. ಕೆಡಿ: ದಿ ಡೆವಿಲ್

ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ನಟನೆಯ 'ಕೆಡಿ: ದಿ ಡೆವಿಲ್' ಸಿನಿಮಾ ಏಪ್ರಿಲ್ 30ರಂದು ತೆರೆಗೆ ಬಂದಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿ ಕೊಂಚಮಟ್ಟಿಗೆ ಬಲ ತುಂಬಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ ಕನ್ನಡದಲ್ಲಿ ಮಾತ್ರ ತೆರೆಗೆ ಬಂದಿತ್ತು.

From KD the devil to Kara this week ott streaming movies list

ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿದೆ. ಕಳೆದ ವಾರ ತೆಲುಗು ವರ್ಷನ್ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆ ಆಗಿತ್ತು. ಮೇ 28ರಂದು 'ಕೆಡಿ' ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನಲಾಗ್ತಿದೆ. 5 ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

2. ಕಾರಾ

ಧನುಷ್ ನಟನೆಯ 'ಕಾರಾ' ಸಿನಿಮಾ ಏಪ್ರಿಲ್ 30ರಂದು ಪ್ರೇಕ್ಷಕರ ಮುಂದೆ ಬಂದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಮೇ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ಬರಲಿದೆ.

ವಿಘ್ನೇಶ್ ರಾಜಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 90ರ ದಶಕದಲ್ಲಿ ಕಾರಸಾಮಿ ಎಂಬ ಕಳ್ಳನ ಕಥೆ ಚಿತ್ರದಲ್ಲಿದೆ. ಒಂದು ಹಂತಕ್ಕೆ ತಾನು ಮಾಡುತ್ತಿರುವುದು ತಪ್ಪು ಎಂದು ಗೊತ್ತಾಗಿ ಅದರಿಂದ ಹೊರಬರಲು ಯತ್ನಿಸುತ್ತಾರೆ. ಆದರೆ ಮತ್ತೆ ಮತ್ತೆ ಕಳ್ಳತನಕ್ಕೆ ಮುಂದಾಗಿ ಆತನ ಜೀವನದಲ್ಲಿ ಏನೆಲ್ಲಾ ಸಂಭವಿಸುತ್ತದೆ ಎನ್ನುವುದು ಸಿನಿಮಾ ಕಥೆ.

3. ಜೆಟ್ಲಿ

ರಿತೇಶ್ ರಾಣ ನಿರ್ದೇಶನದ ತೆಲುಗು ಕಾಮಿಡಿ ಸಿನಿಮಾ 'ಜೆಟ್ಲಿ' ಕೂಡ ಓಟಿಟಿಯಲ್ಲಿ ಬಿಡುಗಡೆಗೆ ಆಗ್ತಿದೆ. ಸತ್ಯ, ರಿಯಾ ಸಿಂಹ, ವೆನ್ನೆಲ ಕಿಶೋರ್, ಅಜಯ್ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ.

4. ರೂಮ್‌ಮೇಟ್ಸ್

ಕನ್ನಡದಲ್ಲಿ ವೆಬ್ ಸೀರಿಸ್ ಕಮ್ಮಿ. ಕೊನೆಯದಾಗಿ ಜೀ-5ನಲ್ಲಿ ವಿಜಯರಾಘವೇಂದ್ರ ನಟನೆಯ 'ರಾಕ್ಷಸ' ಎಂಬ ಸೀರಿಸ್ ಬಂದಿತ್ತು. ಈ ವಾರ 'ರೂಮ್‌ಮೇಟ್ಸ್' ಎಂಬ ಕಾಮಿಡಿ ವೆಬ್ ಸೀರಿಸ್ ಜೀ5ಗೆ ಎಂಟ್ರಿ ಕೊಟ್ಟಿದೆ. ಆಶಿತ್ ಆಹಾನ್, ಜೆರೋಮ್ ತಾರಾಗಣದಲ್ಲಿದ್ದಾರೆ.

ಪ್ರೈಂ ವೀಡಿಯೊ

1. ಲೀಡರ್(ತಮಿಳು ಸಿನಿಮಾ) ಮೇ 28

2. ಸ್ಪೈಡರ್ ನೋಯಿರ್(ಇಂಗ್ಲೀಷ್ ವೆಬ್ ಸೀರಿಸ್) ಮೇ 27

ನೆಟ್‌ಫ್ಲಿಕ್ಸ್

1. ಏಮಿ ಮಾರ್ಟಿನಜ್(ಇಂಗ್ಲೀಷ್ ಸಿನಿಮಾ) ಮೇ 28

2. ದಿ ಫೋರ್ ಸೀಸನ್ಸ್-2 (ಇಂಗ್ಲೀಷ್ ವೆಬ್ ಸೀರಿಸ್) ಮೇ 28

3. ಕಲಬಾಸಸ್ ಕಾನ್ಪಿಡೆಂಟಲ್ (ಇಂಗ್ಲೀಷ್ ವೆಬ್ ಸೀರಿಸ್) ಮೇ 29

4. ಎ ಗುಡ್ ಗರ್ಲ್ ಗೈಡ್ ಟು ಮರ್ಡರ್ ಸೀಸನ್-2 (ಇಂಗ್ಲೀಷ್ ವೆಬ್ ಸೀರಿಸ್) ಮೇ 27

ಹಾಟ್‌ಸ್ಟರ್

1. ಕಸೀನ್ಸ್ ಅಂಡ್ ಕಲ್ಯಾಣಂಸ್(ಮಲಯಾಳಂ ವೆಬ್ ಸೀರಿಸ್) ಮೇ 29

2. ಬ್ರದರ್ಸ್ ಅಂಡ್ ಸಿಸ್ಟರ್ಸ್ (ತಮಿಳು ವೆಬ್ ಸೀರಿಸ್) ಮೇ 29

Read more about: kd dhanush dhruva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X