Kannada Movies OTT This Week: ನಾಲ್ಕು ಸೂಪರ್ ಹಿಟ್ ಕನ್ನಡ ಚಿತ್ರಗಳು ಈ ವಾರ ಓಟಿಟಿಗೆ; ಮಿಸ್ ಮಾಡ್ಲೇಬೇಡಿ

ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲ್ಲ ಎನ್ನುವ ಆರೋಪವಿದೆ. ದೊಡ್ಡ ದೊಡ್ಡ ಸಿನಿಮಾಗಳ ರೈಟ್ಸ್ ಖರೀದಿಸಲು ಚೌಕಾಸಿ ಮಾಡುತ್ತಾರೆ. ಇದೇ ಕಾರಣಕ್ಕೆ ಸ್ಟಾರ್ ನಟರ ಸಿನಿಮಾಗಳನ್ನು ಬಿಟ್ಟರೆ ಸಣ್ಣ ಸಿನಿಮಾಗಳು ಓಟಿಟಿಗೆ ಬರುವುದು ಅಪರೂಪ ಎನ್ನುವಂತಾಗಿದೆ.

ಕನ್ನಡ ಸಿನಿಮಾಗಳಿಗೆ ಹೆಚ್ಚು ಹಣ ಕೊಟ್ಟು ಕೊಂಡುಕೊಳ್ಳಲ್ಲ. ಬೇಕಿದ್ದರೆ ಪೇ ಫಾರ್ ವೀವ್ಸ್ ಲೆಕ್ಕಾಚಾರದಲ್ಲಿ ಒಪ್ಪಂದ ಮಾಡಿಕೊಳ್ಳೋಣ ಎನ್ನುತ್ತಾರೆ. ದರ್ಶನ್ ನಟನೆಯ 'ಡೆವಿಲ್' ಸಿನಿಮಾ ತೆರೆಕಂಡು 6 ತಿಂಗಳು ಕಳೆದರೂ ಓಟಿಟಿಗೆ ಬಂದಿಲ್ಲ. ಇದೆಲ್ಲದರ ನಡುವೆ ಈ ವಾರ ಒಂದಲ್ಲ ಎರಡಲ್ಲ 4 ಸೂಪರ್ ಹಿಟ್ ಕನ್ನಡ ಸಿನಿಮಾಗಳು ಓಟಿಟಿಗೆ ಎಂಟ್ರಿ ಕೊಡ್ತಿದೆ. ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಸಿನಿಮಾಗಳು ಎನ್ನುವುದು ವಿಶೇಷ.

From KD The Devil to Peter this Week Ott streaming kannada movies list

1. ಕೆಡಿ: ದಿ ಡೆವಿಲ್

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್' ಸಿನಿಮಾ 33 ದಿನಕ್ಕೆ ಓಟಿಟಿಗೆ ಬರ್ತಿದೆ. ಏಪ್ರಿಲ್ 30ರಂದು ತೆರೆಕಂಡಿದ್ದ ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಕನ್ನಡ ಹಾಗೂ ತೆಲುಗಿನಲ್ಲಿ ಮಾತ್ರ ಸಿನಿಮಾ ತೆರೆಗೆ ಬಂದಿತ್ತು.

From KD The Devil to Peter this Week Ott streaming kannada movies list

ಜೂನ್ 5ರಂದು 'ಕೆಡಿ' ಸಿನಿಮಾ ಜೀ-5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಪ್ರೈಂ ವಿಡಿಯೋಗೆ ರೈಟ್ಸ್ ಮಾರಾಟವಾಗಿದೆ ಎನ್ನಲಾಗಿತ್ತು. ಆದರೆ ಜೀ5ನಲ್ಲಿ ಸಿನಿಮಾ ಬಿಡುಗಡೆ ಆಗುವುದು ಖಚಿತವಾಗಿದೆ. 7 ಕೋಟಿ ರೂ.ಗೂ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಅಂದಾಜು 70 ಕೋಟಿ ರೂ. ಬಜೆಟ್‌ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಹಾಗೂ ರಮೇಶ್ ಅರವಿಂದ್ ಚಿತ್ರದ ತಾರಾಗಣದಲ್ಲಿದ್ದಾರೆ. ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

2. ದಿ ರೈಸ್ ಆಫ್ ಅಶೋಕ

ನೀನಾಸಂ ಸತೀಶ್ ಹಾಗೂ ಸಪ್ತಮಿ ಗೌಡ ನಟನೆಯ 'ದಿ ರೈಸ್ ಆಫ್ ಅಶೋಕ' ಸಿನಿಮಾ ಕೂಡ ಈ ವಾರ ಸ್ಮಾಲ್‌ಸ್ಕ್ರೀನ್‌ಗೆ ಬರ್ತಿದೆ. ಫೆಬ್ರವರಿಯಲ್ಲಿ ತೆರೆಗೆ ಬಂದಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡಲಿಲ್ಲ. ಜೂನ್ 5ರಂದು ಸನ್‌ನೆಕ್ಸ್ಟ್ ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲಿದೆ.

ಕ್ಷೌರಿಕ ಗಂಗಣ್ಣನ (ಬಿ.ಸುರೇಶ) ಮಗ ಅಶೋಕ (ಸತೀಶ್ ನೀನಾಸಂ)ನ ಜೀವನದ ಏಳುಬೀಳಿನ ಕಥೆ ಚಿತ್ರದಲ್ಲಿದೆ. ವಿನೋದ್ ವಿ ಧೋಂಡಾಳೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ವಿಮರ್ಶಕರಿಂದಲೂ ಚಿತ್ರಕ್ಕೆ ಒಳ್ಳೆ ಮಾತುಗಳು ಕೇಳಿಬಂದಿತ್ತು.

3. ವಲವಾರ

'ತಿಥಿ' ರೀತಿಯಲ್ಲಿ 'ವಲವಾರ' ಕನ್ನಡದ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ. ಕೆಲ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಗಮನ ಸೆಳೆದಿದ್ದ ಸಿನಿಮಾ ಜನವಿ 30ರಂದು ತೆರೆಗೆ ಬಂದಿತ್ತು. ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಹೆಚ್ಚು ಪ್ರೇಕ್ಷಕರನ್ನು ಸಿನಿಮಾ ತಲುಪಲು ಸಾಧ್ಯವಾಗಲಿಲ್ಲ. ಇದೀಗ ಸಿನಿಮಾ ಓಟಿಟಿಗೆ ಬರ್ತಿದೆ.

ಸುತನ್ ಗೌಡ ನಿರ್ದೇಶನದ 'ವಲವಾರ' ಸಿನಿಮಾ ಜೂನ್ 5ರಂದು ಜೀ-5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕಳೆದು ಹೋದ ಗೌರ ಹಸುವಿನ ಹುಡುಕಾಟದ ಸುತ್ತಾ ಸಿನಿಮಾ ಕಥೆ ಸಾಗುತ್ತದೆ. ವೇದಿಕ್, ಶಯನ್, ಮಾಲತೇಶ್, ಹರ್ಷಿತಾ ಗೌಡ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

4. ಪೀಟರ್

ರಾಜೇಶ್ ಧ್ರುವ ನಟನೆಯ 'ಪೀಟರ್' ಸಿನಿಮಾ ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಹೈಪ್-ಅಪ್‌ ಸಸ್ಪೆನ್ಸ್ ಡ್ರಾಮಾ ಹಾಗೂ ಕ್ರೈಂ ಕಥಾಹಂದರದ ಸಿನಿಮಾ ಏಪ್ರಿಲ್ 10ರಂದು ತೆರೆಗೆ ಬಂದಿತ್ತು. ಜೂನ್ 5ರಂದು ಪ್ರೈಂ ವೀಡಿಯೋದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಒಟ್ಟಾರೆ ವೀಕೆಂಡ್ ಮನೆಯಲ್ಲೇ ಕನ್ನಡ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಕಾದಿದೆ.

Read more about: dhruva sarja sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X