OTT Releases This Week: 'ಕೃಷ್ಣಂ ಪ್ರಣಯ ಸಖಿ' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್
ಕಳೆದೊಂದು ವಾರದಿಂದ ಓಟಿಟಿಯಲ್ಲಿ ಕನ್ನಡ ಸಿನಿಮಾಗಳ ಕಾರುಬಾರು ಜೋರಾಗಿದೆ. ಶ್ರೀಮುರಳಿ ನಟನೆಯ 'ಬಘೀರ' ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ 'ಮಾರ್ಟಿನ್' ಚಿತ್ರವನ್ನು ಪ್ರೈಮ್ ವೀಡಿಯೋದಲ್ಲಿ ಜನ ಮುಗಿಬಿದ್ದು ನೋಡುತ್ತಿದ್ದಾರೆ.
ಕಳೆದ ಶುಕ್ರವಾರ ನಾಲ್ಕೈದು ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗೆ ಬಂದಿದ್ದವು. ತೆಲುಗಿನ 'ಜೀಬ್ರಾ' ಚಿತ್ರ ಕನ್ನಡಕ್ಕೆ ಡಬ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ಮರ್ಯಾದೆ ಪ್ರಶ್ನೆ', 'ಲವ್ ರೆಡ್ಡಿ', 'ಆರಾಮ್ ಅರವಿಂದ್ ಸಾಮಿ' ಸಿನಿಮಾಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು 2 ವಾರಗಳ ಹಿಂದೆ ತೆರೆಗೆ ಬಂದಿದ್ದ ಶಿವಣ್ಣನ 'ಭೈರತಿ ರಣಗಲ್' ಆರ್ಭಟ ಮುಂದುವರೆದಿದೆ. ಒಟ್ಟಾರೆ ಇತ್ತ ಥಿಯೇಟರ್ ಅತ್ತ ಓಟಿಟಿಯಲ್ಲಿ ಕನ್ನಡ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಸಿಗ್ತಿದೆ.

ಈ ವೀಕೆಂಡ್ ಕನ್ನಡದ ಮತ್ತೊಂದು ಯಶಸ್ವಿ ಸಿನಿಮಾ ಓಟಿಟಿಗೆ ಬರ್ತಿದೆ. ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆ ಆಗಿದ್ದ ತೆಲುಗು, ತಮಿಳಿನ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಈ ವೀಕೆಂಡ್ ಓಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ, ವೆಬ್ ಸೀರಿಸ್ ಲಿಸ್ಟ್ ಮುಂದೆ ಇದೆ ಓದಿ.
ಸನ್ ನೆಕ್ಸ್ಟ್
1. ಕೃಷ್ಣಂ ಪ್ರಣಯ ಸಖಿ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಅಂತೂ ಇಂತೂ ಓಟಿಟಿಗೆ ಬರ್ತಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ ಬಳಿಕ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿದೆ. ಮ್ಯೂಸಿಕ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿತ್ತು. ಸಿಂಪಲ್ ಕಥೆಯನ್ನು ಶ್ರೀನಿವಾಸ್ ರಾಜು ಬಹಳ ಸೊಗಸಾಗಿ ತೆರೆಗೆ ತಂದು ಗೆದ್ದಿದ್ದರು. ನವೆಂಬರ್ 29ಕ್ಕೆ ಅಂದ್ರೆ ಇದೇ ಶುಕ್ರವಾರ ಸನ್ ನೆಕ್ಸ್ಟ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.

ನೆಟ್‌ಫ್ಲಿಕ್ಸ್
1. ಲಕ್ಕಿ ಭಾಸ್ಕರ್(ಕನ್ನಡ ಡಬ್ಬಿಂಗ್)
ದೀಪಾವಳಿ ಸಂಭ್ರಮದಲ್ಲಿ ತೆಲುಗಿನಲ್ಲಿ ಬಿಡುಗಡೆ ಆಗಿದ್ದ 'ಲಕ್ಕಿ ಭಾಸ್ಕರ್' ಸಿನಿಮಾ ಇದೇ 28ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ದುಲ್ಕರ್ ಸಲ್ಮಾನ್, ಮೀನಾಕ್ಷಿ ಚೌಧರಿ ನಟನೆಯ ಕ್ರೈಂ ಥ್ರಿಲ್ಲರ್ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ವೆಂಕಿ ಅಟ್ಲೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 90ರ ದಶಕದಲ್ಲಿ ಮುಂಬೈ ಹಿನ್ನೆಲೆಯಲ್ಲಿ ಕಥೆ ಸಾಗುತ್ತಿದೆ. ಭಾಸ್ಕರ್ ಎಂಬ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿ ಬ್ಯಾಂಕ್ ಉದ್ಯೋಗಿ ಆಗಿರುತ್ತಾನೆ. ಆದರೆ ಕುಟುಂಬಕ್ಕಾಗಿ ಆತ ಒಂದು ರಿಸ್ಕ್ ತೆಗೆದುಕೊಳ್ಳುತ್ತಾನೆ. ಮುಂದೇನು ಎನ್ನವುದು ಸಿನಿಮಾ ಕಥೆ.
2. ಸಿಕಂದರ್ ಕಾ ಮುಕದ್ದಾರ್
ಆಶ್ರುತ್ ಜೈನ್, ತಮನ್ನಾ, ಜಿಮ್ಮಿ ಶೇರ್ಗಿಲ್ ನಟನೆಯ 'ಸಿಕಂದರ್ ಕಾ ಮುಕದ್ದಾರ್' ಹಿಂದಿ ಸಿನಿಮಾ ಕೂಡ ಈ ವಾರ ನೆಟ್‌ಫ್ಲಿಕ್ಸ್‌ಗೆ ಬರ್ತಿದೆ. ನೀರಜ್ ಪಾಂಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಜ್ರದ ಕಳ್ಳತನ ಪ್ರಕರಣದ ಸುತ್ತಾ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕಥೆ ಸಾಗುತ್ತದೆ. ಇದೇ ಶುಕ್ರವಾರ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
3. ಕೋಲ್ಡ್ ಕೇಸ್: Who Killed JonBenét Ramsey(ಇಂಗ್ಲೀಷ್ ಡಾಕ್ಯುಮೆಂಟರಿ) ನವೆಂಬರ್ 25
4. ದಿ ಮ್ಯಾಡ್‌ನೆಸ್ (ಇಂಗ್ಲೀಷ್ ವೆಬ್ ಸೀರಿಸ್)ನವೆಂಬರ್ 28
5. ಅವರ್ ಲಿಟಲ್ ಸೀಕ್ರೆಟ್(ಇಂಗ್ಲೀಷ್ ಸಿನಿಮಾ) ನವೆಂಬರ್ 27
6. ಪ್ಯಾರಿಸ್ ಕ್ರಿಸ್‌ಮಸ್ ವಾಲ್ಡ್ಜ್(ಇಂಗ್ಲೀಷ್ ಸಿನಿಮಾ) ನವೆಂಬರ್ 29
7. ದಿ ಟ್ರಂಕ್(ಕೊರಿಯನ್ ಸೀರಿಸ್) ನವೆಂಬರ್ 29
8. ಸೆನ್ನಾ (ಪೋರ್ಚುಗೀಸ್ ಸೀರಿಸ್)ನವೆಂಬರ್ 29
9. ಚೆಫ್ಸ್ ಟೇಬಲ್; ವಾಲ್ಯೂಮ್ 7(ಇಂಗ್ಲೀಷ್ ಸೀರಿಸ್) ನವೆಂಬರ್ 27
10. ಆಂಟೊನಿ ಜೆಸೆಲ್‌ನಿಕ್(ಇಂಗ್ಲೀಷ್ ಸಿನಿಮಾ) ನವೆಂಬರ್ 26
11. ಲವ್ ನೆವರ್ ಲೈಸ್: ಸೌತ್ ಆಫ್ರಿಕಾ (ಇಂಗ್ಲೀಷ್ ಸೀರಿಸ್) ನವೆಂಬರ್ 29
ಅಮೇಜಾನ್ ಪ್ರೈಂ
1. ಹಾರ್ಡ್ ನಾರ್ತ್(ಇಂಗ್ಲೀಷ್ ಸೀರಿಸ್) ನವೆಂಬರ್ 29
2. ಸೇವಿಂಗ್ ಗ್ರೇಸ್(ವೆಬ್ ಸೀರಿಸ್) ನವೆಂಬರ್ 28
ಜೀ-5
1. ಡಿವೋರ್ಸ್ ಕೆ ಲಿಯೇ ಕುಚ್ ಬಿ ಕರೆಗಾ(ಹಿಂದಿ ಸೀರಿಸ್) ನವೆಂಬರ್ 29
2. ವಿಕಟ ಕವಿ(ತೆಲುಗು ಸೀರಿಸ್) ನವೆಂಬರ್ 28
ಹಾಟ್‌ಸ್ಟರ್
1. ಪ್ಯಾರಾಚ್ಯೂಟ್(ಕನ್ನಡ ಡಬ್ ಸೀರಿಸ್) ನವೆಂಬರ್ 29
2. ಸುನಾಮಿ; ರೇಸ್ ಎಗೈನೆಸ್ಟ್ ಟೈಂ(ಇಂಗ್ಲಿಷ್ ಸೀರಿಸ್) ನವೆಂಬರ್ 25


Click it and Unblock the Notifications











