Ott Releases This week; ಈ ವಾರ 20ಕ್ಕೂ ಹೆಚ್ಚು ಚಿತ್ರಗಳು ಓಟಿಟಿಗೆ; ಯಾವುದು ಬೆಸ್ಟ್?
ಮತ್ತೊಂದು ವೀಕೆಂಡ್ ಬಂದೇ ಬಿಟ್ಟಿದೆ. ಚಿತ್ರಮಂದಿರಗಳಲ್ಲಿ ಈ ವಾರ ಒಂದಷ್ಟು ಸಿನಿಮಾಗಳು ಬಿಡುಗಡೆ ಆಗಿದೆ. ಓಟಿಟಿಯಲ್ಲಿ ಕೂಡ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತಿದೆ. ಮತ್ತೆ ಕೆಲವು ಇನ್ನೆರಡು ದಿನಗಳಲ್ಲಿ ರಿಲೀಸ್ ಆಗಲಿವೆ.
ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದ 'ಮಾದೇವ', 'ಕಾಲೇಜ್ ಕಲಾವಿದ', 'ನೀತಿ', 'ಸ್ಕೂಲ್ ರಾಮಣ್ಣ', 'ಸೀಸ್ ಕಡ್ಡಿ' ಎಂಬ ಸಿನಿಮಾಗಳು ಬಿಡುಗಡೆ ಆಗಿದೆ. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ 'ಸಂಜು ವೆಡ್ಸ್ ಗೀತಾ'-2 ಸಿನಿಮಾ ಮತ್ತೆ ತೆರೆಗೆ ಬಂದಿದೆ. ಓಟಿಟಿಯಲ್ಲಿ ಕನ್ನಡದ ಯಾವುದೇ ದೊಡ್ಡ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿಲ್ಲ.

ಪರಭಾಷೆಯ ಕೆಲ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಓಟಿಟಿಯಲ್ಲಿ ರಿಲೀಸ್ ಆಗಿದೆ. ಇನ್ನುಳಿದಂತೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಗಳ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ಓಟಿಟಿಗೆ ಲಗ್ಗೆ ಇಟ್ಟಿದೆ.
ಸನ್ ನೆಕ್ಸ್ಟ್
1. ಲಾಲ್ ಸಲಾಂ
ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಸಿನಿಮಾ ಅಂತೂ ಇಂತೂ ಓಟಿಟಿಗೆ ಬಂದಿದೆ. ಸನ್ ನೆಕ್ಸ್ಟ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಕಳೆದ ವರ್ಷ ಫೆಬ್ರವರಿ 9ಕ್ಕೆ ಈ ಸ್ಪೋರ್ಟ್ಸ್ ಡ್ರಾಮಾ ತೆರೆಗೆ ಬಂದಿತ್ತು. ಐಶ್ವರ್ಯ ರಜನಿಕಾಂತ್ ನಿರ್ದೇಶನದ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಮತ್ತೊಂದು ಪ್ರಮುಖ ಪಾತ್ರದಲ್ಲಿ ರಜನಿಕಾಂತ್ ಮಿಂಚಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಇದೀಗ ಕನ್ನಡಕ್ಕೂ ಡಬ್ ಆಗಿ ಓಟಿಟಿಯಲ್ಲಿ ವೀಕ್ಷಣೆಗೆ ಸಿಗುತ್ತಿದೆ.
ಅಮೇಜಾನ್ ಪ್ರೈಂ
1. ಸ್ಟೋಲೆನ್(ಹಿಂದಿ ಸಿನಿಮಾ) ಜೂನ್ 4
2. ಭೂಲ್ ಚುಕ್ ಮಾಫ್(ಹಿಂದಿ ಸಿನಿಮಾ) ಜೂನ್ 5

ಜಿಯೋ ಹಾಟ್‌ಸ್ಟರ್
1. ಟೂರಿಸ್ಟ್ ಫ್ಯಾಮಿಲಿ
ಈ ವರ್ಷ ತಮಿಳಿನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಸಣ್ಣ ಬಜೆಟ್ ಸಿನಿಮಾ 'ಟೂರಿಸ್ಟ್ ಫ್ಯಾಮಿಲಿ'. ಶಶಿಕುಮಾರ್ ಹಾಗೂ ಸಿಮ್ರನ್ ನಟನೆಯ ಈ ಫೀಲ್ ಗುಡ್ ಸಿನಿಮಾ ಜೂನ್ 2ರಂದು ಜಿಯೋ ಹಾಟ್‌ಸ್ಟರ್‌ಗೆ ಬಂದಿತ್ತು. ಶ್ರೀಲಂಕಾದಿಂಧ ವಾಮಮಾರ್ಗದಲ್ಲಿ ಭಾರತದ ಗಡಿ ಪ್ರವೇಶಿಸಿದ ಕುಟುಂಬವೊಂದರ ಕಥೆ ಚಿತ್ರದಲ್ಲಿದೆ. 10 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 70 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು.
2. ಗಜಾನಾ(ತಮಿಳು ಸಿನಿಮಾ) ಜೂನ್ 2
3. ದೇವಿಕಾ ಅಂಡ್ ಡ್ಯಾನಿ(ತೆಲುಗು ವೆಬ್ ಸೀರಿಸ್) ಜೂನ್ 6
ಜೀ-5
1. ಚಾಲ್ ಕಪಟ್(ಹಿಂದಿ ವೆಬ್ ಸೀರಿಸ್) ಜೂನ್ 6
ನೆಟ್‌ಫ್ಲಿಕ್ಸ್
1. ಒನ್ ಆಫ್ ದೆಮ್ ಡೇಸ್(ಇಂಗ್ಲೀಷ್ ಸಿನಿಮಾ) ಜೂನ್ 4
2. ಜಾಟ್(ಹಿಂದಿ ಸಿನಿಮಾ)
ಸನ್ನಿ ಡಿಯೋಲ್, ರಣ್‌ದೀಪ್ ಹೂಡಾ ನಟನೆಯ 'ಜಾಟ್' ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಏಪ್ರಿಲ್ 10ಕ್ಕೆ ಈ ಆಕ್ಷನ್ ಥ್ರಿಲ್ಲರ್ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ತೆಲುಗಿನ ಗೋಪಿಚಂದ್ ಮಲಿನೇನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಜೂನ್ 5ರಂದು ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬಂದಿದೆ.
3. ದಿ ಸರ್ವೈವರ್ಸ್(ವೆಬ್ ಸೀರಿಸ್) ಜೂನ್ 6
4. ಗಿನ್ನಿ & ಜಾರ್ಜಿಯಾ ಸೀಸನ್- 3(ವೆಬ್ ಸೀರಿಸ್) ಜೂನ್5
5. ಟೈರ್ಸ್- ಸೀಸನ್-2 (ವೆಬ್ ಸೀರಿಸ್) ಜೂನ್ 5
6. ಮೆರ್ಸಿ ಫರ್ ನನ್(ಇಂಗ್ಲೀಷ್ ಸಿನಿಮಾ) ಜೂನ್ 6
7. ಕ್ರಿಮಿನಲ್ ಕೋಡ್-ಸೀಸನ್-4(ವೆಬ್ ಸೀರಿಸ್)ಜೂನ್ 4
8. ದಿ ಮಾರ್ಟಿಷಿಯನ್(ಡಾಕ್ಯುಮೆಂಟರಿ) ಜೂನ್ 2


Click it and Unblock the Notifications











