OTT releases this week: ಈ ವಾರ 25ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್.. ಲಿಸ್ಟ್‌ನಲ್ಲಿ 4 ಹಿಟ್ಸ್
ನವೆಂಬರ್ 4ನೇ ವಾರದಲ್ಲಿ 'ಬ್ಯಾಡ್ ಮ್ಯಾನರ್ಸ್', 'ಸ್ವಾತಿ ಮುತ್ತಿನ ಮಳೆ ಹನಿಯೇ' ಹಾಗೂ 'ಶುಗರ್ ಫ್ಯಾಕ್ಟರಿ' ಸೇರಿ ಒಂದಷ್ಟು ಸಿನಿಮಾಗಳು ಪ್ರೇಕ್ಷಕರು ಮುಂದೆ ಬರ್ತಿವೆ. ಈ ಮೂರು ಸಿನಿಮಾಗಳು ನಿರೀಕ್ಷೆ ಹುಟ್ಟುಹಾಕಿವೆ.
ರಾಜ್ ಬಿ. ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸಿನಿಮಾ 'ಸ್ವಾತಿ ಮುತ್ತಿನ ಮಳೆ ಹನಿಯೇ' ಒಂದು ಫೀಲ್ ಗುಡ್ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಇನ್ನು ಸೂರಿ- ಅಭಿ ಕಾಂಬಿನೇಷನ್‌ನ ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಬ್ಯಾಡ್ ಮ್ಯಾನರ್ಸ್'. ಇವೆರಡು ಸಿನಿಮಾಗಳ ಜೊತೆಗೆ ಡಾರ್ಲಿಂಗ್ ಕೃಷ್ಣ ನಟನೆಯ ರೊಮ್ಯಾಂಟಿಕ್ ಸಿನಿಮಾ 'ಶುಗರ್ ಫ್ಯಾಕ್ಟರಿ' ಕುತೂಹಲ ಮೂಡಿಸಿದೆ. ಇದು ಥಿಯೇಟರ್‌ನಲ್ಲಿ ರಿಲೀಸ್ ಆಗುವ ಸಿನಿಮಾಗಳ ಕಥೆ ಆಯಿತು. ಓಟಿಟಿಯಲ್ಲೂ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲಿದೆ.

ಈ ವಾರ ಒಂದಲ್ಲ ಎರಡಲ್ಲ ಬರೋಬ್ಬರಿ 25ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ರೆಡಿಯಾಗಿದೆ. ಅದರಲ್ಲಿ 'ಲಿಯೋ', 'ಓಪನ್ ಹೈಮರ್' ರೀತಿಯ ಸೆನ್ಸೇಷನಲ್ ಸಿನಿಮಾಗಳು ಇವೆ. ಕಂಪ್ಲೀಟ್ ಲಿಸ್ಟ್ ಮುಂದೆ ಇದೆ ಓದಿ.
ಅಮೇಜಾನ್ ಪ್ರೈಂ
1. ಹೆಲ್ಪ್ ಮಿ (ಇಟಲಿ ಸಿನಿಮಾ)- ನವೆಂಬರ್ 24
2. ದ ವಿಲೇಜ್ (ತಮಿಳು ವೆಬ್ ಸೀರಿಸ್)
ಡಿಸ್ನಿ ಪ್ಲಸ್ ಹಾಟ್‌ಸ್ಟರ್
1. ಫರ್ಗೋ: ಸೀಸನ್ 5( ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 21
ಜೀ5
1. ದಿ ಆಮ್ ಆದ್ಮಿ ಫ್ಯಾಮಿಲಿ: ಸೀಸನ್ 4 (ಹಿಂದಿ ವೆಬ್ ಸೀರಿಸ್) ನವೆಂಬರ್ 23
ಜಿಯೋ ಸಿನಿಮಾ
1. ದಿ ಗುಡ್ ಓಲ್ಡ್ ಡೇಸ್ (ತೆಲುಗು ವೆಬ್ ಸೀರಿಸ್) ನವೆಂಬರ್ 24

ನೆಟ್‌ಫ್ಲಿಕ್ಸ್
1. ಲಿಯೋ
ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಈ ವಾರವೇ ಓಟಿಟಿಗೆ ಬರ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದ್ದು ಈಗಾಗಲೇ 2 ಡೇಟ್ ಅನೌನ್ಸ್ ಆಗಿದೆ. ಭಾರತದಲ್ಲಿ ನವೆಂಬರ್ 24ಕ್ಕೆ 5 ಭಾಷೆಗಳಲ್ಲಿ ಸಿನಿಮಾ ಸಿಗಲಿದೆ. ಹೊರ ದೇಶಗಳಲ್ಲಿ ಸಿನಿಮಾ 4 ದಿನ ತಡವಾಗಿ ಸ್ಟ್ರೀಮಿಂಗ್ ಆಗಲಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು.
2. ಸ್ಟಾಂಪ್ಡ್ ಫ್ರಮ್ ದಿ ಬಿಗಿನಿಂಗ್ (ಇಂಗ್ಲೀಷ್ ಸಿನಿಮಾ)- ನವೆಂಬರ್ 20
3. ಲಿಯೋ (ಹಾಲಿವುಡ್ ಆನಿಮೇಷನ್ ಸಿನಿಮಾ)- ನವೆಂಬರ್ 21
4. ಐ ಡೋಂಟ್ ಎಕ್ಸ್‌ಪೆಕ್ಟ್ ಎನಿವನ್ ಟು ಬಿಲೀವ್ ಮಿ (ಸ್ಪ್ಯಾನಿಷ್ ಸಿನಿಮಾ)- ನವೆಂಬರ್ 24
5. ಲಾಸ್ಟ್ ಕಾಲ್ ಫರ್ ಇಸ್ತಾಂಬುಲ್ (ಟರ್ಕಿಷ್ ಸಿನಿಮಾ)- ನವೆಂಬರ್ 24
6. ಸ್ಕ್ವಿಡ್ ಗೇಮ್: ದಿ ಚಾಲೆಂಜ್ (ತೆಲುಗು ಡಬ್ಬಿಂಗ್ ಸೀರಿಸ್)- ನವೆಂಬರ್ 22
7. ಮೈ ಡಾಮೆನ್ (ಜಪನೀಸ್ ವೆಬ್ ಸೀರಿಸ್)- ನವೆಂಬರ್ 23
8. ಪುಲಿಮಾಡ (ಮಲಯಾಳ ಸಿನಿಮಾ)- ನವೆಂಬರ್ 23
9. ಏ ನಿಯರ್ಲಿ ನಾರ್ಮಲ್ ಫ್ಯಾಮಿಲಿ (ಸ್ವೀಡಿಷ್ ಸರಣಿ)- ನವೆಂಬರ್ 24
10. ದಿ ಗ್ರಾನ್ ಟರಿಷ್ಮೋ (ಇಂಗ್ಲೀಷ್ ಸಿನಿಮಾ)- ನವೆಂಬರ್ 24
ಬುಕ್ ಮೈ ಶೋ
1. ಓಪನ್ ಹೈಮರ್
ಖ್ಯಾತ ವಿಜ್ಞಾನಿ 'ಓಪನ್ ಹೈಮರ್' ಜೀವನವನ್ನು ಆಧರಿಸಿ ಹಾಲಿವುಡ್‌ನಲ್ಲಿ ಸಿನಿಮಾ ಮೂಡಿ ಬಂದಿತ್ತು. ಕ್ರಿಸ್ಟೋಫರ್ ನೋಲನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಐರಿಷ್ ನಟ ಕಿಲಿಯನ್ ಮರ್ಫಿ ಚಿತ್ರದಲ್ಲಿ ಓಪನ್ ಹೈಮರ್ ಪಾತ್ರದಲ್ಲಿ ನಟಿಸಿದ್ದರು. ಜುಲೈ 21ಕ್ಕೆ ಸಿನಿಮಾ ಭಾರತದಲ್ಲೂ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಸಿನಿಮಾ ಸದ್ಯ ಬುಕ್ ಮೈ ಶೋ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
2. UFO ಸ್ವೀಡನ್ (ಸ್ವೀಡಿಶ್ ಸಿನಿಮಾ) ನವೆಂಬರ್ 24


Click it and Unblock the Notifications











