OTT Releases This Week: ಈ ವಾರ ಓಟಿಟಿಯಲ್ಲಿ 8 ಇಂಟ್ರೆಸ್ಟಿಂಗ್ ಸಿನಿಮಾಗಳು ರಿಲೀಸ್; ಗಿಲ್ಲಿ ಸಿನಿಮಾ ಕೂಡ

ಕನ್ನಡದ 'ಕೆಡಿ' ಹಾಗೂ ತಮಿಳಿನ 'ಕಾರಾ' ಸಿನಿಮಾಗಳು ಕಳೆದ ವಾರ ತೆರೆಗಪ್ಪಳಿಸಿತ್ತು. ಎರಡೂ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಒಳ್ಳೆ ಗಳಿಕೆ ಜೊತೆಗೆ ಎರಡನೇ ವಾರದತ್ತ ಧ್ರುವ ಹಾಗೂ ಧನುಷ್ ಸಿನಿಮಾಗಳು ಮುನ್ನುಗ್ಗುತ್ತಿವೆ. ಇತ್ತ ಓಟಿಟಿಯಲ್ಲಿ ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆ ಆಗ್ತಿವೆ.

ಐಪಿಎಲ್ ಹಿನ್ನೆಲೆ ಯಾವುದೇ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿಲ್ಲ. ಏಪ್ರಿಲ್ 30ರಂದು ಬಿಡುಗಡೆ ಆಗಬೇಕಿದ್ದ 'ಪೆದ್ದಿ' ಸಿನಿಮಾ ಒಂದು ತಿಂಗಳು ತಡವಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಇನ್ನುಳಿದಂತೆ ತಮಿಳಿನ 'ಜನ ನಾಯಗನ್', 'ಕರುಪ್ಪು' ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿದೆ.

From Love Mocktail- 3 To Vaazha-2 This Week Ott Streaming Movies List

'ಧುರಂಧರ್'-2 ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಈಗಾಗಲೇ 'ಬಾಹುಬಲಿ'-2 ದಾಖಲೆ ಹಿಂದಿಕ್ಕಿ ರಣ್‌ವೀರ್ ಸಿಂಗ್ ಸಿನಿಮಾ ಸಂಚಲನ ಸೃಷ್ಟಿಸಿದೆ. 45 ದಿನ ಕಳೆದರೂ ಸಿನಿಮಾ ಕ್ರೇಜ್ ಕಮ್ಮಿ ಆಗ್ತಿಲ್ಲ. ಈ ವಾರ ಓಟಿಟಿಯಲ್ಲಿ ಯಾವೆಲ್ಲಾ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ ಮುಂದೆ ಓದಿ.

1. ಲವ್ ಮಾಕ್ಟೇಲ್-3

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ ನಟಿಸಿದ್ದ ಲವ್ 'ಮಾಕ್ಟೇಲ್-3' ಸಿನಿಮಾ ಸೂಪರ್ ಹಿಟ್ ಆಗಿತ್ತು. ಮಾರ್ಚ್ 19ರಂದು ತೆರೆಗೆ ಬಂದಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ತಂದೆ ಮಗಳ ಬಾಂಧವ್ಯದ ಕಥೆ ಮೋಡಿ ಮಾಡಿತ್ತು. ಭರ್ಜರಿ ಗಳಿಕೆ ಕಂಡ ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ.

From Love Mocktail- 3 To Vaazha-2 This Week Ott Streaming Movies List

ಜೀ-5ನಲ್ಲಿ 'ಮಾಕ್ಟೇಲ್-3' ಸಿನಿಮಾ ಮಾರ್ಚ್ 8ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ಈಗಾಗಲೇ ಸಾಕಷ್ಟು ಜನ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಇದೀಗ ಓಟಿಟಿಗೆ ಬರ್ತಿರುವುದರಿಂದ ಮತ್ತಷ್ಟು ಜನರನ್ನು ಸಿನಿಮಾ ತಲುಪಲಿದೆ.

2. ಡಕಾಯಿತ್

ಅಡಿವಿ ಶೇಷ್ ಹಾಗೂ ಮೃಣಾಲ್ ಠಾಕೂರ್ ನಟನೆಯ 'ಡಕಾಯಿತ್' ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಆದರೆ ನಿರ್ಮಾಪಕರಿಗೆ ಲಾಭ ತಂದು ಕೊಡುವಲ್ಲಿ ವಿಫಲವಾಗಿತ್ತು. ಮೇ 8ರಂದು ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋಗೆ ಬರ್ತಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ವೀಕ್ಷಣೆಗೆ ಸಿಗಲಿದೆ.

3. ಸೂಪರ್ ಹಿಟ್

ಬಿಗ್‌ಬಾಸ್ ವಿನ್ನರ್ ಹಾಗೂ ಗೌರವ್ ಶೆಟ್ಟಿ ನಟನೆಯ 'ಸೂಪರ್ ಹಿಟ್' ಸಿನಿಮಾ ಕೂಡ ಓಟಿಟಿ ಬಿಡುಗಡೆಗೆ ಸಜ್ಜಾಗಿದೆ. ಮೇ 8ರಂದು ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ವಿಜಯಾನಂದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದೆ.

4. ವಾಳಾ-2

ಮಲಯಾಳಂ ಬ್ಲಾಕ್‌ಬಸ್ಟರ್ 'ವಾಳಾ- 2' ಸಿನಿಮಾ ಕೂಡ ಈ ವಾರ ಓಟಿಟಿಗೆ ಬರ್ತಿದೆ. ಸವಿನ್ ಎಸ್‌ಎ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕೇವಲ 10 ಕೋಟಿ ರೂ. ಬಜೆಟ್ ಸಿನಿಮಾ 20 ಪಟ್ಟು ಹೆಚ್ಚು ಗಳಿಕೆ ಕಂಡು ಎಲ್ಲರ ಹುಬ್ಬೇರಿಸಿತ್ತು. ಹಾಟ್‌ಸ್ಟರ್‌ನಲ್ಲಿ ಮೇ 8ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.

5. ಲವ್ ಇನ್ಸುರೆನ್ಸ್ ಕಂಪನಿ

ವಿಘ್ನೇಶ್ ಶಿವನ್ ನಿರ್ದೇಶನದ ರೊಮ್ಯಾಂಟಿಕ್ ಎಂಟರ್‌ಟೈನರ್ 'ಲವ್ ಇನ್ಸುರೆನ್ಸ್ ಕಂಪನಿ' ಚಿತ್ರಕ್ಕೂ ಈ ವಾರ ಓಟಿಟಿ ಬಿಡುಗಡೆ ಭಾಗ್ಯ. ಪ್ರದೀಪ್ ರಂಗನಾಥನ್ ಹಾಗೂ ಕೃತಿ ಶೆಟ್ಟಿ ನಟನೆಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಇದೀಗ ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿದೆ. ಅಮೆಜಾನ್ ಪ್ರೈಂನಲ್ಲಿ ಸಿನಿಮಾ ವೀಕ್ಷಿಸಬಹುದು.

ಇನ್ನುಳಿದಂತೆ ತೆಲುಗಿನ 'ಭರತನಾಟ್ಯಂ-2', 'ಸಿಟಾಡೆಲ್-2' ವೆಬ್ ಸೀರಿಸ್, ತಮಿಳಿನ 'ಓ ಬಟ್ಟರ್ ಫ್ಲೈ' ಸೇರಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಈ ವಾರ ಓಟಿಟಿಗೆ ಬರ್ತಿವೆ. ಮನೆಯಲ್ಲೇ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಸಿಗಲಿದೆ.

Read more about: krishna sandalwood kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X