Ott Releases This week: ಈ ವಾರ ಓಟಿಟಿಗೆ ಇಂಟ್ರೆಸ್ಟಿಂಗ್ ಸಿನಿಮಾಗಳು ಬರ್ತಿವೆ
ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಒಂದಕ್ಕಿಂತ ಒಂದು ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರಲ್ಲಿ ಕನ್ನಡದ 'ಸು ಫ್ರಂ ಸೋ' ಹಾಗೂ 'ಎಕ್ಕ' ಚಿತ್ರಗಳು ಇವೆ. ಹೊಂಬಾಳೆ ಫಿಲ್ಮ್ಸ್ ಅರ್ಪಿಸಿರುವ 'ಮಹಾವತಾರ್ ನರಸಿಂಹ' ಚಿತ್ರ ಕೂಡ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಆನಿಮೇಷನ್ ಸಿನಿಮಾ ತೆರೆಕಂಡು ಸದ್ದು ಮಾಡ್ತಿದೆ. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ಮುಂದಿನ ವಾರ 'ಕೂಲಿ' ಹಾಗೂ 'ವಾರ್-2' ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಈ ಎಲ್ಲಾ ಸಿನಿಮಾಗಳ ನಡುವೆ ಓಟಿಟಿಯಲ್ಲಿ ಈ ವಾರ ಇಂಟ್ರೆಸ್ಟಿಂಗ್ ಚಿತ್ರಗಳು ಸ್ಟ್ರೀಮಿಂಗ್ ಆಗಲಿವೆ.

22ಕ್ಕೂ ಹೆಚ್ಚು ಸಿನಿಮಾ ಹಾಗೂ ವೆಬ್ ಸೀರಿಸ್ ಈ ವಾರ ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಆಗುತ್ತಿವೆ. ಪಟ್ಟಿಯಲ್ಲಿ ಕನ್ನಡದ ಸಿನಿಮಾಗಳು ಇವೆ. ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ 'ಜ್ಯೂನಿಯರ್' ಸಿನಿಮಾ ಕೂಡ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ.
ಮಾಮನ್
ತಮಿಳು ಹಾಸ್ಯನಟ ಸೂರಿ ಹೀರೊ ಆಗಿ ನಟಿಸಿರುವ 'ಮಾಮನ್' ಸಿನಿಮಾ ಈ ವಾರವೇ ಓಟಿಟಿಗೆ ಬರ್ತಿದೆ. ಮೇ 16ಕ್ಕೆ ತೆರೆಗೆ ಬಂದಿದ್ದ ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಆಗಸ್ಟ್ 8ರಂದು ಜೀ5 ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಹೆಬ್ಬುಲಿ ಕಟ್
ಟೈಟಲ್‌ನಿಂದಲೇ ಕನ್ನಡದಲ್ಲಿ ಬಹಳ ಕುತೂಹಲ ಮೂಡಿಸಿದ್ದ ಸಿನಿಮಾ ಇದು. ಜುಲೈ 4ರಂದು ತೆರೆಗೆ ಬಂದಿದ್ದ ಸಿನಿಮಾ ತಿಂಗಳ ಬಳಿಕ ಓಟಿಟಿ ಕಡೆ ಮುಖ ಮಾಡಿದೆ. ಸನ್ ನೆಕ್ಸ್ಟ್ ಓಟಿಟಿಯಲ್ಲಿ ಆಗಸ್ಟ್ 8ಕ್ಕೆ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ತಮಾಷೆಯಾಗಿಯೇ ಒಂದು ಗಂಭೀರ ವಿಚಾರದ ಬಗ್ಗೆ ಈ ಚಿತ್ರದಲ್ಲಿ ಚರ್ಚಿಸಲಾಗಿದೆ. ಚಿತ್ರ ನೋಡಿದವರು ಮೆಚ್ಚಿಕೊಂಡರೂ ಬಳಿಕ ಪ್ರೇಕ್ಷಕರ ಬೆಂಬಲ ಸಿಕ್ಕಿರಲಿಲ್ಲ. ಭೀಮರಾವ್ ನಿರ್ದೇಶನದ ಈ ಚಿತ್ರದಲ್ಲಿ ಮೌನೇಶ್ ನಟರಂಗ, ಅನನ್ಯಾ, ಮಹಾದೇವ ಹಡಪದ, ಪುನೀತ್ ಶೆಟ್ಟಿ ಸೇರಿ ಹಲವರು ನಟಿಸಿದ್ದರು. ನಟ ನೀನಾಸಂ ಸತೀಶ್ ಚಿತ್ರಕ್ಕೆ ಹಣ ಹೂಡಿದ್ದರು.

ಓಹೋ ಎಂಥನ್ ಬೇಬಿ
ತಮಿಳಿನ 'ಓಹೋ ಎಂಥನ್ ಬೇಬಿ' ಎಂಬ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಓಟಿಟಿಗೆ ಬರ್ತಿದೆ. ಆಗಸ್ಟ್ 8ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಕೃಷ್ಣಕುಮಾರ್ ರಾಮಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ರುದ್ರ ಹಾಗೂ ಮಿಥಿಲಾ ಪಾಲ್ಕರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಯಾವೆಲ್ಲಾ ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ ಮುಂದೆ ಲಿಸ್ಟ್ ನೋಡಿ.
ಹಾಟ್‌ಸ್ಟರ್
1. ಪರಂದು ಪೊ(ತಮಿಳು ಸಿನಿಮಾ) ಆಗಸ್ಟ್ 5
2. ಇಂಡಿಯಾನ್ ಬಿಗ್ಗೆಸ್ಟ್ ಫುಡ್ಡಿ(ಹಿಂದಿ ರಿಯಾಲಿಟಿ ಶೋ) ಆಗಸ್ಟ್ 4
3. ಲವ್ ಹಾರ್ಟ್ಸ್ (ಇಂಗ್ಲೀಷ್ ಸಿನಿಮಾ) ಆಗಸ್ಟ್ 7
4. ಮಿಕ್ಕಿ 17(ಇಂಗ್ಲೀಷ್ ಸಿನಿಮಾ) ಆಗಸ್ಟ್ 7
5. ಸಲಕಾರ್(ಹಿಂದಿ ವೆಬ್ ಸೀರಿಸ್) ಆಗಸ್ಟ್ 8
ನೆಟ್‌ಫ್ಲಿಕ್ಸ್
1. ವೆನ್ಸ್ ಡೇ ಸೀಸನ್-2 ಪಾರ್ಟ್-1 (ಇಂಗ್ಲಿಷ್ ವೆಬ್ ಸೀರಿಸ್) ಆಗಸ್ಟ್ 5
2. ಎನ್‌ಇಸಿ ಫುಟ್ಬಾಲ್ (ಇಂಗ್ಲಿಷ್ ವೆಬ್ ಸೀರಿಸ್ ಆಗಸ್ಟ್ 5
3. ಸ್ಟೋಲೆನ್: ಹೀಸ್ಟ್ ಆಫ್ ದ ಸೆಂಚುರಿ (ಇಂಗ್ಲೀಷ್ ಸಿನಿಮಾ) ಆಗಸ್ಟ್ 8
4. ಮ್ಯಾರಿ ಮಿ (ಇಂಗ್ಲೀಷ್ ಸಿನಿಮಾ) ಆಗಸ್ಟ್ 10
5. ಟೈಟನ್ಸ್: ದಿ ರೈಸ್ ಆಫ್ ಹಾಲಿವುಡ್ (ಇಂಗ್ಲಿಷ್ ವೆಬ್ ಸೀರಿಸ್ ಆಗಸ್ಟ್ 5
ಜೀ5
1. ಮಾತೆವಾರಿ ಲವ್ ಸ್ಟೋರಿ(ತೆಲುಗು ವೆಬ್ ಸೀರಿಸ್) ಆಗಸ್ಟ್ 8
ಸೋನಿ ಲಿವ್
1. ಮಾಯ ಸಭ (ತೆಲುಗು ವೆಬ್ ಸೀರಿಸ್) ಆಗಸ್ಟ್ 7


Click it and Unblock the Notifications











