OTT Releases This Week: ಈ ವಾರ ಓಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಚಿತ್ರಗಳು, ಇಲ್ಲಿದೆ ಲಿಸ್ಟ್
ಐಪಿಎಲ್ ನಡುವೆ ಸಿನಿರಸಿಕರು ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಓಟಿಟಿಯಲ್ಲೇ ಹೆಚ್ಚು ಹೆಚ್ಚು ಸಿನಿಮಾ ನೋಡಲು ಬಯಸುತ್ತಿದ್ದಾರೆ. ಈ ವಾರ ಬ್ಲಾಕ್‌ಬಸ್ಟರ್ ಸಿನಿಮಾಗಳು ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಲಿವೆ.
ಈ ವೀಕೆಂಡ್ ಯಾವುದೇ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರ್ತಿಲ್ಲ. ಆದರೆ ಓಟಿಟಿಯಲ್ಲಿ ಸೂಪರ್ ಹಿಟ್ ಸಿನಿಮಾಗಳು ಸ್ಟ್ರೀಮಿಂಗ್ ಆಗಲಿವೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳು ಓಟಿಟಿ ವೀಕ್ಷಕರನ್ನು ರಂಜಿಸಲಿವೆ. ಇನ್ನು ಕೆಲ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬರ್ತಿವೆ.

ಅಮೇಜಾನ್ ಪ್ರೈಂ
1. ವೀರ ಧೀರ ಶೂರನ್(ಕನ್ನಡ ಡಬ್)
ವಿಕ್ರಂ ನಟನೆಯ ತಮಿಳು ಆಕ್ಷನ್ ಥ್ರಿಲ್ಲರ್ ಸಿನಿಮಾ ಈ ವಾರ ಅಮೇಜಾನ್ ಪ್ರೈಂ ವೀಡಿಯೋಗೆ ಬರ್ತಿದೆ. ಅರುಣ್ ಕುಮಾರ್ ಆಕ್ಷನ್ ಕಟ್ ಹೇಳಿದ್ದ 25 ದಿನಗಳ ಹಿಂದೆ ತೆರೆಗಪ್ಪಳಿಸಿತ್ತು. ತಕ್ಕಮಟ್ಟಿಗೆ ಪ್ರೇಕ್ಷಕರನ್ನು ರಂಜಿಸಿತ್ತು. ಆದರೆ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಸಾಕಷ್ಟು ಜನ ಚಿತ್ರವನ್ನು ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದಾರೆ. ದುಷಾರ ವಿಜಯನ್, ಎಸ್. ಜೆ ಸೂರ್ಯ, ಪೃಥ್ವಿರಾಜ್ ಚಿತ್ರದ ತಾರಾಗಣದಲ್ಲಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಓಟಿಟಿಗೆ ಬರ್ತಿದೆ.
2. ಕ್ರೇಜಿ(ಹಿಂದಿ ಸಿನಿಮಾ)
ಗಿರೀಶ್ ಕೊಹ್ಲಿ ನಿರ್ದೇಶನದ ಹಿಂದಿ ಥ್ರಿಲ್ಲರ್ ಸಿನಿಮಾ 'ಕ್ರೇಜಿ' ಎರಡು ತಿಂಗಳ ಹಿಂದೆ ತೆರೆಗೆ ಬಂದಿತ್ತು. ಈ ವಾರ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸೋಹಮ್ ಶಾ ಲೀಡ್ ರೋಲ್‌ನಲ್ಲಿ ನಟಿಸಿರುವ ಸಿನಿಮಾ ಇದು.

3. ಸೂಪರ್ ಬಾಯ್ಸ್ ಆಫ್ ಮಾಲೆಗಾವ್(ಹಿಂದಿ ಸಿನಿಮಾ) ಏಪ್ರಿಲ್ 25
4. ಸೋಮು ಸೌಂಡ್ ಇಂಜಿನಿಯರ್
ಅಭಿ ನಿರ್ದೇಶನದ 'ಸೋಮು ಸೌಂಡ್ ಇಂಜಿನಿಯರ್' ಕನ್ನಡ ಸಿನಿಮಾ ಈಗಾಗಲೇ ಪ್ರೈಂ ವಿಡಿಯೋದಲ್ಲಿ ಲಭ್ಯವಿದೆ. ಆದರೆ ಸದ್ಯಕ್ಕೆ 99 ರೂಪಾಯಿ ಪಾವತಿಸಿ ಸಿನಿಮಾ ನೋಡಬೇಕಿದೆ. ಶೀಘ್ರದಲ್ಲೇ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ಉತ್ತರ ಕರ್ನಾಟಕ ಸೊಗಡಿನ ಸಿನಿಮಾ ಇದು. ಶ್ರೇಷ್ಠಾ ಹೀರೊ ಆಗಿ ಚಿತ್ರದಲ್ಲಿ ನಟಿಸಿದ್ದಾರೆ.
ನೆಟ್‌ಫ್ಲಿಕ್ಸ್
1. ಎ ಟ್ರಾಜಿಡಿ ಫೊರ್‌ಟೋಲ್ಡ್: ಫ್ಲೈಟ್ 2054 (ಡಾಕ್ಯೂ ಸೀರಿಸ್) ಏಪ್ರಿಲ್ 23
2. ಬುಲ್ಲೆಟ್ ಟ್ರೈನ್ ಎಕ್ಸ್‌ಪ್ಲೋಷನ್(ಜಪಾನೀಸ್ ಸಿನಿಮಾ) ಏಪ್ರಿಲ್ 23
3. ಡಿಟೆಕ್ಟಿವ್ ಕೊನನ್(ಜಪಾನೀಸ್ ಆನಿಮೇಷನ್ ಸೀರಿಸ್) ಏಪ್ರಿಲ್ 25
4. ಜುವೆಲ್ ಥೀಫ್(ಹಿಂದಿ ಸಿನಿಮಾ)
ಸೈಫ್ ಅಲಿಖಾನ್, ಜೈದೀಪ್ ಅಹ್ವಾಟ್, ನಿಖಿತಾ ದತ್ ನಟನೆಯ ಹಿಂದಿ ಆಕ್ಷನ್ ಥ್ರಿಲ್ಲರ್ 'ಜುವೆಲ್ ಥೀಫ್' ನೇರವಾಗಿ ಓಟಿಟಿಗೆ ಬರ್ತಿದೆ. ಏಪ್ರಿಲ್ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕೂಕಿ ಗುಲಾಟಿ ಹಾಗೂ ರಾಬಿ ಗ್ರೆವಾಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
5. ಹ್ಯಾವೋಕ್(ಇಂಗ್ಲೀಷ್ ಸಿನಿಮಾ) ಏಪ್ರಿಲ್ 25
6. ಯು: ಸೀಸನ್ 5 (ಇಂಗ್ಲೀಷ್) ಏಪ್ರಿಲ್ 24
7. ಮ್ಯಾಡ್ ಸ್ಕ್ವೇರ್
ತೆಲುಗಿನ 'ಮ್ಯಾಡ್ ಸ್ಕ್ವೇರ್' ಸಿನಿಮಾ ಕೂಡ ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ. ಕಲ್ಯಾಣ್ ಶಂಕರ್ ನಿರ್ದೇಶನದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಸಕ್ಸಸ್ ಕಂಡಿತ್ತು. ರಾಮ್ ನಿತಿನ್, ಸಂಗೀತ್ ಶೋಭನ್, ಪ್ರಿಯಾಂಕಾ ಜವಾಲ್‌ಕರ್ ಈ ಚಿತ್ರದ ತಾರಾಗಣದಲ್ಲಿದ್ದಾರೆ.
ಜಿಯೋ ಹಾಟ್‌ಸ್ಟರ್
1. L2: ಎಂಪುರಾನ್
ಮೋಹನ್ ಲಾಲ್ ನಟನೆಯ 'ಎಂಪುರಾನ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತಿಯಿದೆ. ಏಪ್ರಿಲ್ 24ರಿಂದ ಸಿನಿಮಾ ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ತೆರೆಕಂಡು ತಿಂಗಳು ಕಳೆಯುವ ಮುನ್ನ ಸಿನಿಮಾ ಓಟಿಟಿಗೆ ಬರ್ತಿದೆ, ಟೊವಿನೋ ಥಾಮಸ್, ಪೃಥ್ವಿರಾಜ್ ಸುಕುಮಾರನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸೂಪರ್ ಹಿಟ್ 'ಲೂಸಿಫರ್' ಸೀಕ್ವೆಲ್ ಇದು.
2. ದಿ ರಿಹರ್ಸಲ್ಸ್: ಸೀಸನ್ 1(ಇಂಗ್ಲೀಷ್ ವೆಬ್ ಸೀರಿಸ್) ಏಪ್ರಿಲ್ 21
ಜೀ-5
1. ಅಯ್ಯನ ಮನೆ
ಕನ್ನಡದ ಮೊದಲ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರಿಸ್ 'ಅಯ್ಯನ ಮನೆ' ಈ ವಾರ ಸ್ಟ್ರೀಮಿಂಗ್ ಆರಂಭಿಸಲಿದೆ. ಏಪ್ರಿಲ್ 25ರಂದು ಜೀ5ನಲ್ಲಿ ಸೀರಿಸ್ ರಿಲೀಸ್ ಆಗಲಿದೆ. ಶ್ರುತಿ ನಾಯ್ಡು ನಿರ್ಮಿಸಿರುವ 6 ಸಂಚಿಕೆಗಳ ವೆಬ್ ಸೀರಿಸ್‌ಗೆ ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದಾರೆ. ಚಿಕ್ಕಮಗಳೂರಿನ ಕುಟುಂಬವೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಸರಣಿಯ ಕಥೆ ಇದೆ. ಖುಷಿ ರವಿ, ಅಕ್ಷಯ್ ನಾಯಕ್ ಮುಖ್ಯಭೂಮಿಕೆಯಲ್ಲಿದ್ದಾರೆ.


Click it and Unblock the Notifications











