OTT Releases This Week; 16ಕ್ಕೂ ಹೆಚ್ಚು ಸಿನಿಮಾ, ಸೀರಿಸ್ ಈ ವಾರ ಸ್ಟ್ರೀಮಿಂಗ್; ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಎಲೆಕ್ಷನ್, ಐಪಿಎಲ್ ಭರಾಟೆ ಮುಗಿದಿಲ್ಲ. ಚಿತ್ರಮಂದಿರಗಳಿಗೆ ದೊಡ್ಡ ಸಿನಿಮಾಗಳು ಬರ್ತಿಲ್ಲ. ಸಣ್ಣ ಪುಟ್ಟ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ. ಆಂಧ್ರದಲ್ಲಿ ಪ್ರೇಕ್ಷಕರಿಲ್ಲದೇ ಥಿಯೇಟರ್‌ಗಳ ಬಾಗಿಲು ಬಂದ್ ಆಗಿದೆ. ಇದೆಲ್ಲದರ ನಡುವೆ ಮತ್ತೊಂದು ವಾರ ಕಳೆದಿದೆ.

ಪ್ರತಿ ವಾರ ಓಟಿಟಿಯಲ್ಲಿ ಹೊಸ ಹೊಸ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ಬಿಡುಗಡೆ ಆಗುತ್ತಿರುತ್ತದೆ. ಸದ್ಯಕ್ಕೆ ಪ್ರೇಕ್ಷಕರು ಥಿಯೇಟರ್‌ ಕಡೆ ಹೋಗುವಂತೆ ಕಾಣುತ್ತಿಲ್ಲ. ಹಾಗಾಗಿ ಓಟಿಟಿ ಕಂಟೆಂಟ್ ಹುಡುಕಾಡುತ್ತಿದ್ದಾರೆ. ಈ ವೀಕೆಂಡ್ ಕೂಡ ಸಾಕಷ್ಟು ಸಿನಿಮಾ, ಸೀರಿಸ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿದೆ.

From Manjummel Boys to Shaitaan New OTT releases this week

ಈ ವಾರ ಬರೋಬ್ಬರಿ 16ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್‌ ಈ ವಾರ(ಏಪ್ರಿಲ್ 29- ಮೇ 5) ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಅದರಲ್ಲಿ ಎಲ್ಲರೂ ಕುತೂಹಲದಿಂದ ಕಾಯುತ್ತಿರುವುದು ಮಲಯಾಳಂ ಸೂಪರ್ ಹಿಟ್ 'ಮಂಜುಮೇಲ್ ಬಾಯ್ಸ್' ಚಿತ್ರಕ್ಕಾಗಿ ಅಂದ್ರೆ ತಪ್ಪಾಗಲ್ಲ.

ಡಿಸ್ನಿ ಹಾಟ್‌ಸ್ಟರ್

1. ಮಂಜುಮೇಲ್ ಬಾಯ್ಸ್

ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ 'ಮಂಜುಮೇಲ್ ಬಾಯ್ಸ್'. ಫೆಬ್ರವರಿ 22ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಮಲಯಾಳಂ ಚಿತ್ರರಂಗದಲ್ಲಿ ಈವರೆಗೆ ಯಾವುದೇ ಸಿನಿಮಾ ಮಾಡದ ದಾಖಲೆಗಳು 'ಮಂಜುಮೇಲ್ ಬಾಯ್ಸ್' ಪಾಲಾಗಿದೆ. ಚಿದಂಬರಂ ನಿರ್ದೇಶನದ ಈ ಸರ್ವೈವಲ್ ಥ್ರಿಲ್ಲರ್ ಸಿನಿಮಾ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಮೇ 5ಕ್ಕೆ ಸ್ಟ್ರೀಮಿಂಗ್ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಅಪ್‌ಲೋಡ್ ಆಗಲಿದೆ.

2. ಮಾನ್‌ಸ್ಟರ್ಸ್ ಅಟ್ ವರ್ಕ್ ಸೀಸನ್-2 (ಇಂಗ್ಲೀಷ್ ಸೀರಿಸ್) ಮೇ 5

3. ದಿ ವೆಯಿಲ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 30

ನೆಟ್‌ಫ್ಲಿಕ್ಸ್

1. ಶೈತಾನ್

ಮಾರ್ಚ್‌ 8ಕ್ಕೆ ತೆರೆಕಂಡಿದ್ದ ಬಾಲಿವುಡ್ ಸಿನಿಮಾ 'ಶೈತಾನ್' ಈ ವಾರವೇ ಓಟಿಟಿ ಬರುವ ನಿರೀಕ್ಷೆಯಿದೆ. ವಿಕಾಸ್ ಬೇಲ್ ನಿರ್ದೇಶನದ ಈ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಅಜಯ್ ದೇವಗನ್, ಜ್ಯೋತಿಕಾ, ಮಾಧವನ್ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ಪ್ರೇಕ್ಷಕರಿಗೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಮೇ 3ಕ್ಕೆ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ.

From Manjummel Boys to Shaitaan New OTT releases this week

2. ಫಿಯಾಸ್ಕೋ(ಫ್ರೆಂಚ್ ಸೀರಿಸ್) ಏಪ್ರಿಲ್ 30

3. ಟಿ ಪಿ ಬನ್(ಜಪನೀಸ್ ಸೀರಿಸ್) ಮೇ 2

4. ದಿ ಅಟಿಫಿಕಲ್ ಫ್ಯಾಮಿಲಿ(ಕೊರಿಯನ್ ಸೀರಿಸ್) ಮೇ 4

ಅಮೇಜಾನ್ ಪ್ರೈಂ

1. ಅವತಾರ ಪುರುಷ-2

ಸಿಂಪಲ್ ಸುನಿ ನಿರ್ದೇಶನದಲ್ಲಿ ಶರಣ್ ನಟನೆಯ 'ಅವತಾರ ಪುರುಷ-2' ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಈಗಾಗಲೇ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಏಪ್ರಿಲ್ 5ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಶ್ರೀನಗರ ಕಿಟ್ಟಿ, ಆಶಿಕಾ ರಂಗನಾಥ್, ಸಾಯಿಕುಮಾರ್, ಭವ್ಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 2 ವರ್ಷದ ಹಿಂದೆ ಈ ಹಾರರ್ ಕಾಮಿಡಿ ಪ್ರೀಕ್ವೆಲ್ ಬಂದಿತ್ತು.

2. ಅಂಬರ್ ಗರ್ಲ್ಸ್ ಸ್ಕೂಲ್

ಹೈಸ್ಕೂಲ್ ಹೆಣ್ಣುಮಕ್ಕಳ ಸುತ್ತಾ ಸುತ್ತುವ ಹಿಂದಿ ವೆಬ್ ಸೀರಿಸ್ 'ಅಂಬರ್ ಗರ್ಲ್ಸ್ ಸ್ಕೂಲ್'. ರಾಜ್‌ಲಕ್ಷ್ಮಿ ರತನ್ ಸೇಟ್ ಆಕ್ಷನ್ ಕಟ್ ಹೇಳಿದ್ದು ಸೆಲೆಸ್ಟಿ ಬೈರಾಗೇಯ್, ಕಾಜೋಲ್ ಚುಗ್, ಶ್ರುತಿ ಉಲ್ಫತ್, ಹರ್ಷ್ ಖುರಾನಾ, ಇಶಿಕಾ ಗಗ್ನೇಜಾ, ಅದ್ರಿಜಾ ಸಿನ್ಹಾ, ಸಮೈರಾ ಜೈನ್ ತಾರಾಗಣದಲ್ಲಿದ್ದಾರೆ. ಟೀನೇಜ್ ಕ್ರಶ್, ಶೈಕ್ಷಣಿಕ ಮಹತ್ವಾಕಾಂಕ್ಷೆಗಳ ಬಗ್ಗೆ ಸಾಕಷ್ಟು ಸಂಗತಿಗಳಲ್ಲಿ ಇದರಲ್ಲಿದೆ. ಅಮೇಜಾನ್ ಮಿನಿಟಿವಿಯಲ್ಲಿ 'ಅಂಬರ್ ಗರ್ಲ್ಸ್ ಸ್ಕೂಲ್' ಸೀರಿಸ್ ಮೇ 1ರಿಂದ ಸ್ಟ್ರೀಮಿಂಗ್ ಆಗಲಿದೆ.

3. ಕ್ಲಾರ್ಕ್ ಸನ್ ಫಾರ್ಮ್ ಸೀಸನ್-3(ಇಂಗ್ಲೀಷ್ ಸೀರಿಸ್) ಮೇ 3

4. ದಿ ಐಡಿಯಾ ಆಫ್ ಯೂ(ಇಂಗ್ಲಿಷ್ ಸಿನಿಮಾ) ಮೇ 2

5. ಉಮನ್ ಆಫ್ ಮೈ ಬಿಲಿಯನ್(ಇಂಗ್ಲೀಷ್ ಡಾಕ್ಯುಮೆಂಟರಿ) ಮೇ 3

ಜಿಯೋ ಸಿನಿಮಾ

1. ಹ್ಯಾಕ್ಸ್ ಸೀಸನ್ 3(ಇಂಗ್ಲೀಷ್ ಸೀರಿಸ್) ಮೇ 3

2. ಮೈಗ್ರೇಷನ್ (ಇಂಗ್ಲೀಷ್ ಸಿನಿಮಾ) ಮೇ 1

3. ದಿ ಟಾಟ್ಯೂಯಿಸ್ಟ್ ಆಫ್ ಅಟ್ವಿಡ್ಜ್(ಇಂಗ್ಲೀಷ್ ಸೀರಿಸ್) ಮೇ 3

4. ವೊಂಕಾ(ಇಂಗ್ಲೀಷ್ ಸಿನಿಮಾ) ಮೇ 3

ಆಪಲ್ ಪ್ಲಸ್ ಟಿವಿ

1. ಅಕಾಪುಲ್ಕೊ ಸೀಸನ್ 3 (ಇಂಗ್ಲೀಷ್ ಸೀರಿಸ್) ಮೇ 1

More from Filmibeat

English summary
OTT releases this week: 16 new movies and web series to watch on Netflix, Prime and Disney+ Hotstar;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X