OTT Releases This WeeK: ವ್ಯಾಲಂಟೈನ್ಸ್ ಡೇ ವೀಕೆಂಡ್ ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್
ವ್ಯಾಲಂಟೈನ್ಸ್ ಡೇ ವೀಕೆಂಡ್ ಹತ್ತಿರವಾಗುತ್ತಿದೆ. ಈ ವಾರ ಕನ್ನಡದಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಸಿದ್ಲಿಂಗು- 2 ಜೊತೆಗೆ ದರ್ಶನ್ ನಟನೆಯ 'ನಮ್ಮ ಪ್ರೀತಿಯ ರಾಮು' ಸಿನಿಮಾ ರೀ-ರಿಲೀಸ್ ಆಗುತ್ತಿದೆ. 'ರಾಜು ಜೇಮ್ಸ್ ಬಾಂಡ್', 'ನಿಮಿತ್ತ ಮಾತ್ರ' ಹಾಗೂ 'ಭುವನಂ ಗಗನಂ' ಚಿತ್ರಗಳು ಕೂಡ ಲಿಸ್ಟ್‌ನಲ್ಲಿದೆ.
ಓಟಿಟಿಗೆ ವಿಚಾರಕ್ಕೆ ಬಂದರೆ ಕಳೆದ ವಾರ 'ಮರ್ಯಾದೆ ಪ್ರಶ್ನೆ' ಸಿನಿಮಾ ಪ್ರೈಂ ವೀಡಿಯೋಗೆ ಬಂದಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ಮುಂದಿನ ವಾರ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಜೀ-5ಗೆ ಬರುವ ನಿರೀಕ್ಷಿಯಿದೆ. ಉಪೇಂದ್ರ ನಟನೆಯ 'ಯುಐ' ಸಿನಿಮಾ ಕೂಡ ದಿಢೀರೆನೆ ಓಟಿಟಿಗೆ ಬರುವ ಸಾಧ್ಯತೆಯಿದೆ.

ವ್ಯಾಲಂಟೈನ್ಸ್ ಡೇ ವೀಕೆಂಡ್‌ನಲ್ಲಿ ಕೆಲ ಸಿನಿಮಾ, ವೆಬ್ ಸೀರಿಸ್ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಅದರ ಕಂಪ್ಲೀಟ್ ಲಿಸ್ಟ್ ಮುಂದೆ ಇದೆ ಓದಿ.
ನೆಟ್‌ಫ್ಲಿಕ್ಸ್
1. ಕಾದಲಿಕ್ಕ ನೇರಮಿಲ್ಲೈ
ಕಿರಿತಿಗ ಉದಯನಿಧಿ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಕಾದಲಿಕ್ಕ ನೇರಮಿಲ್ಲೈ' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಇದೀಗ ಈ ತಮಿಳು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜಯಂ ರವಿ ಹಾಗೂ ನಿತ್ಯಾ ಮೆನನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದರಲ್ಲೂ ನಿತ್ಯಾ ನಟನೆಗೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಮನೆಯಲ್ಲೇ ಕೂತು ಪ್ರೇಕ್ಷಕರು ಸಿನಿಮಾ ನೋಡಬಹುದು.
2. ಡೆತ್ ಬಿಫೋರ್ ದ ವೆಡ್ಡಿಂಗ್(ಇಂಗ್ಲೀಷ್ ಸಿನಿಮಾ) ಫೆಬ್ರವರಿ 12
3. ಸೆರೆನ್ಸ್ ಆಫ್ ದಿ ಡೀಪ್(ಆನಿಮೇಟೆಡ್ ಸೀರಿಸ್) ಫೆಬ್ರವರಿ 11
4. ದ ಎಕ್ಸ್‌ಚೇಂಜ್ ಸೀಸನ್-2(ವೆಬ್ ಸೀರಿಸ್) ಫೆಬ್ರವರಿ 13
5. ಕೋಬ್ರಾ ಕೈ ಸೀಸನ್ 6 ಭಾಗ 3 (ವೆಬ್ ಸೀರಿಸ್) ಫೆಬ್ರವರಿ 13
6. ಧೂಮ್ ಧಾಮ್(ತೆಲುಗು ಸಿನಿಮಾ) ಫೆಬ್ರವರಿ 14
7. ಮೇಲೊ ಮೂವಿ(ಕೊರಿಯನ್ ಸಿನಿಮಾ) ಫೆಬ್ರವರಿ 14
8. ಐಯಾಮ್ ಮ್ಯಾರೀಡ್..ಬಟ್(ವೆಬ್ ಸೀರಿಸ್) ಫೆಬ್ರವರಿ 14
9. ಬ್ಲಾಕ್ ಹೌಕ್ ಡೌನ್ (ಡಾಕ್ಯುಮೆಂಟರಿ) ಫೆಬ್ರವರಿ 10
ಅಮೇಜಾನ್ ಪ್ರೈಂ
1. ಮೈ ಫಾಲ್ಟ್: ಲಂಡನ್(ಸಿನಿಮಾ) ಫೆಬ್ರವರಿ 13
ಅಹಾ
1. ಭೈರತಿ ರಣಗಲ್
ಕಳೆದ ವರ್ಷ ಕನ್ನಡದಲ್ಲಿ ಹಿಟ್ ಆಗಿದ್ದ 'ಭೈರತಿ ರಣಗಲ್' ಸಿನಿಮಾ ತೆಲುಗಿಗೂ ಡಬ್ ಆಗಿತ್ತು. ನರ್ತನ್ ನಿರ್ದೇಶನ ಚಿತ್ರವನ್ನು ಶಿವರಾಜ್‌ಕುಮಾರ್ ನಿರ್ಮಿಸಿ ನಟಿಸಿದ್ದರು. 'ಮಫ್ತಿ' ಪ್ರೀಕ್ವೆಲ್ ಆಗಿದ್ದ ಚಿತ್ರಕ್ಕೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಈಗಾಗಲೇ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಇದೀಗ ತೆಲುಗು ವರ್ಷನ್ ಅಹಾ ಓಟಿಟಿಗೂ ಎಂಟ್ರಿ ಕೊಡುತ್ತಿದೆ. ಫೆಬ್ರವರಿ 13ರಿಂದ ಸಿನಿಮಾ ತೆಲುಗು ಪ್ರೇಕ್ಷಕರನ್ನು ರಂಜಿಸಲಿದೆ.
2. ಡ್ಯಾನ್ಸ್ ಐಕಾನ್ -2 (ಡ್ಯಾನ್ಸ್ ಶೋ) ಫೆಬ್ರವರಿ 14
ಹಾಟ್‌ಸ್ಟರ್
1. ಬಾಬಿ ಔರ್ ರಿಷಿಕಿ ಲವ್ ಸ್ಟೋರಿ (ಹಿಂದಿ ಸಿನಿಮಾ) ಫೆಬ್ರವರಿ 11
ಸೋನಿಲಿವ್
1. ಮಾರ್ಕೊ
ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಯಾಗಿದೆ 'ಮಾರ್ಕೊ' ಮಲಯಾಳಂ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಉನ್ನಿ ಮುಕುಂದನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಮಾಸ್ ಪ್ರೇಕ್ಷಕರನ್ನು ರಂಜಿಸಿತ್ತು. ಅಂದಾಜು 30 ಕೋಟಿ ರೂ. ಬಜೆಟ್ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಫೆಬ್ರವರಿ 14ಕ್ಕೆ ಸೋನಿಲಿವ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ಜೀ-5
1. ಪ್ಯಾರ್ ಟೆಸ್ಟಿಂಗ್(ಹಿಂದಿ ಸಿನಿಮಾ) ಫೆಬ್ರವರಿ 14


Click it and Unblock the Notifications











