OTT Releases This Week: 'ಮಾರ್ಟಿನ್' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ
ಥಿಯೇಟರ್‌ಗಳಲ್ಲಿ ಕನ್ನಡದ 'ಭೈರತಿ ರಣಗಲ್' ಹಾಗೂ ತಮಿಳಿನ 'ಕಂಗುವ' ಸಿನಿಮಾಗಳು ಪ್ರದರ್ಶನವಾಗುತ್ತಿದೆ. ರಣಗಲ್ ಆಗಿ ಶಿವಣ್ಣನ ಆರ್ಭಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. 'ಕಂಗುವ' ಚಿತ್ರಕ್ಕೆ ಭಾರೀ ಹಿನ್ನಡೆಯಾಗಿದೆ. ಇದೆಲ್ಲದರ ನಡುವೆ ಈ ವಾರ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ರಿಲೀಸ್ ಆಗ್ತಿದೆ.
ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಕನ್ನಡದ 'ಬಘೀರ', ತಮಿಳಿನ 'ಅಮರನ್' ಹಾಗೂ ತೆಲುಗಿನ 'ಲಕ್ಕಿ ಭಾಸ್ಕರ್' ಚಿತ್ರಗಳ ಗೆಲುವಿನ ಓಟ ಮುಂದುವರೆದಿದೆ. ಬಾಲಿವುಡ್‌ನಲ್ಲಿ 'ಸಿಂಗಂ ಅಗೇನ್' ಹಾಗೂ 'ಭೂಲ್ ಭೂಲಯ್ಯ' ಚಿತ್ರಗಳು 3ನೇ ವಾರಕ್ಕೆ ಕಾಲಿಟ್ಟಿವೆ.

ಈ ವಾರ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್, ಡಾಕ್ಯೂಮೆಂಟರಿ ಸ್ಟ್ರೀಮಿಂಗ್ ಆಗುತ್ತಿದೆ. ಈಗಾಗಲೇ ನಯನತಾರ ಹುಟ್ಟುಹಬ್ಬದ ಸಂಭ್ರಮದಲ್ಲಿ "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್' ಡಾಕ್ಯುಮೆಂಟರಿ ರಿಲೀಸ್ ಆಗಿದೆ.
ಅಮೇಜಾನ್ ಪ್ರೈಂ
1. ಮಾರ್ಟಿನ್
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಈ ವಾರವೇ ಓಟಿಟಿಗೆ ಬರುವ ಸಾಧ್ಯತೆಯಿದೆ. ಈಗಾಗಲೇ ಯೂಎಸ್, ಯುಕೆ ದೇಶಗಳಲ್ಲಿ ಪ್ರೈಂ ಚಂದಾದಾದರೂ ಹಣ ಪಾವತಿಸಿ ಸಿನಿಮಾ ವೀಕ್ಷಿಸುವ ಅವಕಾಶ ಸಿಕ್ಕಿದೆ. ಎ.ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಮಾರ್ಟಿನ್' ಸಿನಿಮಾ ಭಾರೀ ಸದ್ದು ಮಾಡಿತ್ತು. ಆದರೆ ಸಿನಿಮಾ ಗೆಲ್ಲಲಿಲ್ಲ.
ಉದಯ್ ಕೆ, ಮೆಹ್ತಾ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಕ್ಟೋಬರ್ 11ರಂದು ಸಿನಿಮಾ ರಿಲೀಸ್ ಆಗಿತ್ತು. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ.

2. ದಿ ರಾಣ ದಗ್ಗುಬಾಟಿ ಶೋ
ಓಟಿಟಿಯಲ್ಲಿ ಈಗ ಸೆಲೆಬ್ರೆಟಿ ಟಾಕ್ ಶೋಗಳು ಸಖತ್ ಸದ್ದು ಮಾಡ್ತಿವೆ. ಅಹಾ ಓಟಿಟಿಗಾಗಿ ಬಾಲಕೃಷ್ಣ ನಡೆಸಿಕೊಡುವ ಅನ್‌ಸ್ಟಾಪಬಲ್ ಸೀಸನ್-4 ಆರಂಭವಾಗಿದೆ. ಇದೀಗ ಅಮೇಜಾನ್ ಪ್ರೈಂ ವೀಡಿಯೋಗಾಗಿ ನಟ ರಾಣಾ ದಗ್ಗುಬಾಟಿ ಹೊಸ ಟಾಕ್ ಶೋ ಹೋಸ್ಟ್ ಮಾಡ್ತಿದ್ದಾರೆ. 'ದಿ ರಾಣ ದಗ್ಗುಬಾಟಿ ಶೋ' ನವೆಂಬರ್ 23ರಿಂದ ಆರಂಭವಾಗುತ್ತಿದೆ. ರಿಷಬ್ ಶೆಟ್ಟಿ, ಶ್ರೀಲೀಲಾ, ರಾಜಮೌಳಿ ಸೇರಿದಂತೆ ಹಲವರು ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ.
3. ವ್ಯಾಕ್ ಗರ್ಲ್ಸ್(ಹಿಂದಿ ವೆಬ್ ಸೀರಿಸ್) ನವೆಂಬರ್ 22
4. ಕ್ಯಾಂಪಸ್ ಬೀಟ್ಸ್ ಸೀಸನ್-4(ಹಿಂದಿ ವೆಬ್‌ಸೀರಿಸ್) ನವೆಂಬರ್ 20
ಡಿಸ್ನಿ ಹಾಟ್‌ಸ್ಟರ್
1. ಎಲಿಯನ್: ರೋಮುಲಸ್(ಇಂಗ್ಲೀಷ್ ಸಿನಿಮಾ) ನವೆಂಬರ್ 21
2. ಔಟ್ ಆಫ್ ಮೈ ಮೈಂಡ್(ಇಂಗ್ಲೀಷ್ ಸಿನಿಮಾ) ನವೆಂಬರ್ 22
3. ಇಂಟೀರಿಯಲ್ ಚೈನಾ ಟೌನ್(ಇಂಗ್ಲೀಷ್ ಸೀರೀಸ್) ನವೆಂಬರ್ 19
4. ಕಿಷ್ಕಿಂದ ಕಾಂಡ(ಕನ್ನಡ ಡಬ್ಬಿಂಗ್ ಸಿನಿಮಾ) ನವೆಂಬರ್ 19
ಜಿಯೋ ಸಿನಿಮಾ
1. ದ ಸೆ* ಲೈವ್ಸ್ ಆಫ್ ಕಾಲೇಜ್ ಗರ್ಲ್ಸ್ ಸೀಸನ್-3(ಇಂಗ್ಲೀಷ್ ಸೀರಿಸ್) ನವೆಂಬರ್ 22
2. ಡ್ಯೂನ್: ಪ್ರೋಪೆಸಿ(ಇಂಗ್ಲೀಷ್ ಸೀರಿಸ್) ನವೆಂಬರ್ 18
3. ಬೇಸ್ಡ್ ಆನ್ ಓ ಟ್ರೂ ಸ್ಟೋರಿ ಸೀಸನ್ 2(ಇಂಗ್ಲೀಷ್ ಸೀರಿಸ್) ನವೆಂಬರ್ 22
4. ಹೆರಾಲ್ಡ್ ಅಂಡ್ ಪರ್ಪಲ್ ಕ್ರೇಯಾನ್(ಇಂಗ್ಲೀಷ್ ಸಿನಿಮಾ) ನವೆಂಬರ್ 23
ನೆಟ್‌ಫ್ಲಿಕ್ಸ್
1. ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್
ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಚರ್ಚೆ ಹುಟ್ಟಾಕ್ಕಿರುವ 'ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್' ಡಾಕ್ಯೂಮೆಂಟರಿ ಕೊನೆಗೂ ರಿಲೀಸ್ ಆಗಿದೆ. ನಯನತಾರ ತಮ್ಮ ಮದುವೆಯ ಚಿತ್ರಣ, ಪ್ರದರ್ಶನದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಿದ್ದರು. ತಮ್ಮದೇ ಕಥೆಯನ್ನು ಇದರಲ್ಲಿ ಹೇಳುತ್ತಾ ಹೋಗಿದ್ದಾರೆ. ಸಾಕಷ್ಟು ನಟ, ನಟಿಯರು ಆಕೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಮ್ಮ ಹಳೇ ರಿಲೇಷನ್‌ಶಿಪ್‌ಗಳ ಬಗ್ಗೆಯೂ ನಯನ್ ಮಾತನಾಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ನೀವು ನೋಡಬಹುದು.
2. ಎ ಮ್ಯಾನ್ ಆನ್ ದ ಇನ್ ಸೈಡ್(ಇಂಗ್ಲೀಷ್ ಸೀರಿಸ್) ನವೆಂಬರ್ 21
3. ವಂಡರೂಸ್ ಸೀಸನ್-2(ಇಂಗ್ಲೀಷ್ ಸೀರಿಸ್) ನವೆಂಬರ್ 18
4. ಅಡೋರೆಷನ್(ಇಟಾಲಿಯನ್ ಸೀರಿಸ್) ನವೆಂಬರ್ 20
5. ಜಾಯ್(ಇಂಗ್ಲೀಷ್ ಸಿನಿಮಾ) ನವೆಂಬರ್ 22
6. ಸ್ಪೆಲ್ ಬೌಂಡ್(ಇಂಗ್ಲೀಷ್ ಸಿನಿಮಾ) ನವೆಂಬರ್ 22
7. ದ ಪಿಯಾನೊ ಲೆಸನ್(ಇಂಗ್ಲೀಷ್ ಸಿನಿಮಾ) ನವೆಂಬರ್ 22
8. ಯೇ ಖಾಲಿ ಖಾಲಿ ಅಂಕೈನ್ ಸೀಸನ್ 2(ಹಿಂದಿ ವೆಬ್ ಸೀರಿಸ್) ನವೆಂಬರ್ 22
ಬುಕ್ ಮೈ ಶೋ
1. ದ ಗರ್ಲ್ ಇನ್ ದ ಟ್ರಂಕ್(ಇಂಗ್ಲೀಷ್ ಸಿನಿಮಾ) ನವೆಂಬರ್ 22
2. ಫ್ರಮ್ ಡಾರ್ಕ್‌ನೆಸ್(ಸ್ವೀಡಿಷ್ ಸಿನಿಮಾ) ನವೆಂಬರ್ 22
3. ದ ಟೈಂ ಮೈ ಡ್ಯಾಡ್ ಸೇವ್ಡ್ ಕ್ರಿಸ್ಮಸ್(ಸ್ಪ್ಯಾನಿಷ್ ಸಿನಿಮಾ) ನವೆಂಬರ್ 22


Click it and Unblock the Notifications











