OTT Releases This Week; ಈ ವಾರ ಓಟಿಟಿಗೆ ಬರ್ತಿರೋ ಇಂಟ್ರೆಸ್ಟಿಂಗ್ ಚಿತ್ರಗಳ ಲಿಸ್ಟ್
ಪ್ರತಿ ವಾರದಂತೆ ಈ ವಾರವೂ ಒಂದಷ್ಟು ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ. ಚಿತ್ರಮಂದಿರಗಳಲ್ಲಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗ್ತಿಲ್ಲ. ಇದ್ದಿದ್ದರಲ್ಲಿ ಕೋಮಲ್ ನಟನೆಯ 'ಯಲಾಕುನ್ನಿ' ಕೊಂಚ ನಿರೀಕ್ಷೆ ಮೂಡಿಸಿದೆ. ಇನ್ನುಳಿದಂತೆ 'ಪ್ರಾಪ್ತಿ', 'ಎಲ್ಲಿಗೆ ಪಯಣ ಯಾವುದೋ ದಾರಿ', 'ನಸಾಬ್' ಸೇರಿ ಒಂದಷ್ಟು ಕನ್ನಡ ಚಿತ್ರಗಳು ತೆರೆಗಪ್ಪಳಿಸುತ್ತಿದೆ.
ಜ್ಯೂ. ಎನ್‌ಟಿಆರ್ ನಟನೆಯ 'ದೇವರ', ರಜನಿಕಾಂತ್ 'ವೆಟ್ಟೆಯಾನ್' ಹಾಗೂ ಧ್ರುವ ಸರ್ಜಾ ಮಿಂಚಿರುವ 'ಮಾರ್ಟಿನ್' ಚಿತ್ರಗಳ ಆರ್ಭಟವೇ ಚಿತ್ರಮಂದಿರಗಳಲ್ಲಿ ಮುಂದುವರೆದಿದೆ. ಮುಂದೆ ದೀಪಾವಳಿ ವೀಕೆಂಡ್‌ನಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಚಿತ್ರಗಳು ತೆರೆಗೆ ಬರಲಿವೆ. ಶ್ರೀಮುರಳಿ 'ಬಘೀರ' ಕೂಡ ಈ ಲಿಸ್ಟ್‌ನಲ್ಲಿದೆ.

ಈ ವಾರ ಯಾವೆಲ್ಲಾ ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿವೆ. ಮನೆಯಲ್ಲೇ ಕೂತು ಯಾವ್ಯಾವ ಸಿನಿಮಾ, ವೆಬ್ ಸೀರಿಸ್ ನೋಡಬಹುದು ಕಂಪ್ಲೀಟ್ ಲಿಸ್ಟ್ ಇಲ್ಲಿದೆ. ಮುಂದೆ ಓದಿ.
ನೆಟ್‌ಫ್ಲಿಕ್ಸ್
1. ಮೇಯಳಗನ್
ತಮಿಳಿನಲ್ಲಿ ಕಾರ್ತಿ ಹಾಗೂ ಅರವಿಂದ್ ಸ್ವಾಮಿ ನಟನೆಯ 'ಮೇಯಳಗನ್' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸೂರ್ಯ ಹಾಗೂ ಜ್ಯೋತಿಕಾ ಈ ಚಿತ್ರವನ್ನು ನಿರ್ಮಿಸಿದ್ದರು. ಸೆಪ್ಟೆಂಬರ್ 27ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಒಂದು ತಿಂಗಳ ಅಂತರದಲ್ಲಿ ಓಟಿಟಿಗೆ ಬರ್ತಿದೆ. ಪ್ರೇಮ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
2. ಡೋಂಟ್ ಮೂವ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 25
3. ಹೆಲ್ಬೌಂಡ್ ಸೀಸನ್ 1(ಕೊರಿಯನ್ ಸೀರಿಸ್) ಅಕ್ಟೋಬರ್ 25
4. ಬ್ಯೂಟಿ ಇನ್ ಬ್ಲ್ಯಾಕ್ ( ವೆಬ್ ಸೀರಿಸ್)- ಅಕ್ಟೋಬರ್ 24
5. ದಿ 90's ಶೋ ಭಾಗ 3 (ಇಂಗ್ಲಿಷ್ ವೆಬ್ ಸೀರಿಸ್) - ಅಕ್ಟೋಬರ್ 24
6. ದಿ ಟೆರಿಟರಿ (ಇಂಗ್ಲಿಷ್ ವೆಬ್ ವೆಬ್ ಸೀರಿಸ್) - ಅಕ್ಟೋಬರ್ 24
7. ದಿ ಲಾಸ್ಟ್ ನೈಟ್ ಅಟ್ ಟ್ರೆಮರ್ ಬೀಚ್ (ಸ್ಪ್ಯಾನಿಷ್ ವೆಬ್ ಸೀರಿಸ್) - ಅಕ್ಟೋಬರ್ 25
8. ದೋ ಪಟ್ಟಿ (ಹಿಂದಿ ಸಿನಿಮಾ) - ಅಕ್ಟೋಬರ್ 25
9. ಹಸನ್ ಮಿನ್ಹಾ (ಇಂಗ್ಲಿಷ್ ಸಿನಿಮಾ)- ಅಕ್ಟೋಬರ್ 22
10. ದಿ ಕಮ್ ಬ್ಯಾಕ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 23
11. ಫ್ಯಾಮಿಲಿ ಪ್ಯಾಕ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 23
ಜೀ 5
1. ಐಂತಂ ವೇದಂ(ತಮಿಳು ವೆಬ್ ಸೀರಿಸ್) ಅಕ್ಟೋಬರ್ 25
2. ಹಾಯ್ ಜಿಂದಗಿ (ಹಿಂದಿ ಸಿನಿಮಾ) ಅಕ್ಟೋಬರ್ 25
ಅಮೇಜಾನ್ ಪ್ರೈಂ
1. ಜ್ವಿಗಾಟೊ
ಕಪಿಲ್ ಶರ್ಮಾ ನಟನೆಯ 'ಜ್ವಿಗಾಟೊ' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. 2 ವರ್ಷಗಳ ಹಿಂದೆ ಈ ಸಿನಿಮಾ ತೆರೆಗೆ ಬಂದಿತ್ತು. ನಂದಿತಾ ದಾಸ್ ನಿರ್ದೇಶನದ ಸಿನಿಮಾ ಬಹಳ ತಡವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿದೆ. ಒಂದು ಫ್ಯಾಕ್ಟರಿಯಲ್ಲಿ ಪ್ಲೋರ್ ಮ್ಯಾನೇಜರ್ ಆಗಿದ್ದ ಮಾನಸ್ ಕೆಲಸ ಕಳೆದುಕೊಂಡು ಕೊನೆಗೆ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಚಿತ್ರದಲ್ಲಿದೆ.
2. ಲೈಕ್ ಎ ಡ್ರಾಗನ್; ಯಾಕುಜಾ (ಜಪಾನೀಸ್ ಸೀರಿಸ್) ಅಕ್ಟೋಬರ್ 25
3. ಕಡೈಸಿ ಉಳಗ ಪೊರ್(ತಮಿಳು ಸಿನಿಮಾ) ಅಕ್ಟೋಬರ್ 25
4. ನಾಟಿಲಸ್ (ಇಂಗ್ಲಿಷ್ ಸೀರಿಸ್) ಅಕ್ಟೋಬರ್ 25
ಜಿಯೋ ಸಿನಿಮಾ
1. ಫ್ಯೂರೋಸಿಯಾ: ಎ ಮ್ಯಾಡ್ ಮ್ಯಾಕ್ಸ್ ಸಾಗಾ (ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 23
2. ಬೈಕ್ ರೈಡರ್ಸ್ (ಇಂಗ್ಲಿಷ್ ಸಿನಿಮಾ) ಅಕ್ಟೋಬರ್ 21
ಅಹಾ ಓಟಿಟಿ
1. ಅನ್‌ಸ್ಟಾಪಬಲ್ ಸೀಸನ್-4 (ಟಾಕ್ ಶೋ) ಅಕ್ಟೋಬರ್ 23
ತೆಲುಗಿನಲ್ಲಿ ಬಾಲಕೃಷ್ಣ ನಡೆಸಿಕೊಡುವ ಅನ್‌ಸ್ಟಾಪಬಲ್ ಟಾಕ್ ಶೋ ಹೊಸ ಸೀಸನ್ ಆರಂಭವಾಗಿದೆ. 4ನೇ ಸೀಸನ್ ಮೊದಲ ಅತಿಥಿಯಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಭಾಗಿ ಆಗಿದ್ದಾರೆ. ಬೀಗರು ಆಗಿರುವ ಬಾಲಯ್ಯ- ಚಂದ್ರಬಾಬು ಸಂದರ್ಶನ ಕಾರ್ಯಕ್ರಮ ವೀಕ್ಷಕರಿಗೆ ಇಷ್ಟವಾಗಿದೆ.


Click it and Unblock the Notifications











