OTT Releases This Week: ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ; ಕನ್ನಡ ಚಿತ್ರಗಳು ಇದ್ಯಾ?

ಎಲ್ಲೆಲ್ಲೂ 'ಕಾಂತಾರ- 1' ಆರ್ಭಟ ಜೋರಾಗಿದೆ. ಮತ್ತೊಂದು ಕಡೆ ಧನುಷ್ ನಿರ್ದೇಶಿಸಿ ನಟಿಸಿರುವ 'ಇಡ್ಲಿ ಕಡೇ' ಹಾಗೂ ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದೆಲ್ಲದರ ನಡುವೆ ಈ ವಾರ ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲಿದೆ.

'ಕಾಂತಾರ- 1' ಬಿಟ್ಟರೆ ಕಳೆದೆರಡು ವಾರಗಳಲ್ಲಿ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಅಂತ ಬಾಲಿವುಡ್‌ನಲ್ಲಿ "ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ" ಸಿನಿಮಾ ರಿಷಬ್ ಶೆಟ್ಟಿ ಚಿತ್ರಕ್ಕೆ ಪೈಪೋಟಿ ಕೊಡುತ್ತಿದೆ. ಕನ್ನಡದ 'ಏಳುಮಲೆ' ಮುಂದಿನ ವಾರ(ಅಕ್ಟೋಬರ್ 17) ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

From Mirai to War-2 This Week Ott Release movies and web series list

ಓಟಿಟಿಯಲ್ಲಿ ಈ ವಾರ ಬಿಡುಗಡೆ ಆಗುತ್ತಿರುವ ಸಿನಿಮಾ ಹಾಗೂ ವೆಬ್ ಸೀರಿಸ್ ಪಟ್ಟಿ ಮುಂದೆ ಇದೆ ಓದಿ.

1. ಮಿರಾಯ್

ತೆಲುಗಿನ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾ 'ಮಿರಾಯ್' ಓಟಿಟಿಗೆ ಬರ್ತಿದೆ. ಅಕ್ಟೋಬರ್ 10ರಂದು ಸಿನಿಮಾ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ಹಿಂದಿ ವರ್ಷನ್ ಮಾತ್ರ ತಡವಾಗಿ ಅಪ್‌ಲೋಡ್ ಆಗಲಿದೆ.

ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ 'ಮಿರಾಯ್' ಚಿತ್ರದಲ್ಲಿ ತೇಜ ಸಜ್ಜಾ ಹಾಗೂ ಮಂಚು ಮನೋಜ್ ನಟಿಸಿದ್ದಾರೆ. 60 ಕೋಟಿ ರೂ. ಬಜೆಟ್ ಸಿನಿಮಾ 140 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗುತ್ತಿದೆ. ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬರ್ತಿದೆ.

2. ತ್ರಿಬನಧಾರಿ ಬಾರ್ಬರಿಕ್

ಸತ್ಯರಾಜ್, ವಸಿಷ್ಠ ಸಿಂಹ, ಉದಯ ಭಾನು ನಟನೆಯ 'ತ್ರಿಬನಧಾರಿ ಬಾರ್ಬರಿಕ್' ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಮೋಹನ್ ಶ್ರೀವತ್ಸ ನಿರ್ದೇಶನದ ಸಿನಿಮಾ ಆಗಸ್ಟ್ 29ಕ್ಕೆ ತೆರೆಗೆ ಬಂದಿತ್ತು. ಇದೇ ಶುಕ್ರವಾರ ಸನ್ ನೆಕ್ಸ್ಟ್ ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲಿದೆ.

From Mirai to War-2 This Week Ott Release movies and web series list

3. ವಾರ್- 2

ಆಗಸ್ಟ್ 14ರಂದು 'ಕೂಲಿ' ಸಿನಿಮಾ ಎದುರು 'ವಾರ್- 2' ಸಿನಿಮಾ ತೆರೆಗಪ್ಪಳಿಸಿತ್ತು. ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟಿಸಿದ್ದ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಕೂಡ ಸಿನಿಮಾ ಮುಗ್ಗರಿಸಿತ್ತು. 'ಕೂಲಿ' ಪೈಪೋಟಿ ಕೂಡ ಚಿತ್ರಕ್ಕೆ ಸವಾಲಾಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಅಕ್ಟೋಬರ್ 9ಕ್ಕೆ ಸಿನಿಮಾ ಬಿಡುಗಡೆ ಆಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.

4. ಕುರುಕ್ಷೇತ್ರ

ಹಿಂದಿ ಆನಿಮೇಟೆಡ್ ಸೀರಿಸ್ 'ಕುರುಕ್ಷೇತ್ರ' ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. 'ಮಹಾವೀರ್ ನರಸಿಂಹ' ಸೂಪರ್ ಹಿಟ್ ಬಳಿಕ ಆನಿಮೇಷನ್ ಸಿನಿಮಾ, ವೆಬ್ ಸೀರಿಸ್ ಕ್ರೇಜ್ ಹೆಚ್ಚುತ್ತಿದೆ. ದೀಪಾವಳಿಗೆ 'ಮಹಾಯೋಧ ರಾಮ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

ನೆಟ್‌ಫ್ಲಿಕ್ಸ್

1. ಮ್ಯಾಟ್ ಮೆಕ್‌ಕಸ್ಕರ್: ಎ ಹಂಬಲ್ ಆಫರಿಂಗ್(ವೆಬ್ ಸೀರಿಸ್) ಅಕ್ಟೋಬರ್ 7

2. ಟ್ರೂ ಹಂಟಿಂಗ್(ವೆಬ್ ಸೀರಿಸ್) ಅಕ್ಟೋಬರ್ 7

3. ಈಜ್ ಇಟ್ ಕೇಕ್? ಹಾಲೋವಿನ್(ವೆಬ್ ಸೀರಿಸ್) ಅಕ್ಟೋಬರ್ 8

4. ಬೂಟ್ಸ್ (ವೆಬ್ ಸೀರಿಸ್) ಅಕ್ಟೋಬರ್ 8

5. ದಿ ವುಮೆನ್ ಇನ್ ಕ್ಯಾಬಿನ್ 10(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 9

6. ವಿಕ್ಟೊರಿಯಾ ಬೆಕಹಮ್ (ವೆಬ್ ಸೀರಿಸ್) ಅಕ್ಟೋಬರ್ 9

ಸನ್ ನೆಕ್ಸ್ಟ್

1. ರಾಂಬೋ(ತಮಿಳು ಸಿನಿಮಾ) ಅಕ್ಟೋಬರ್ 10

ಅಮೇಜಾನ್ ಪ್ರೈಂ

1. ಮೇಯಿಂಟೈನೆನ್ಸ್ ರಿಕ್ವೈರ್ಡ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 8

2. ಜಾನ್ ಕ್ಯಾಂಡಿ: ಐ ಲೈಕ್ ಮಿ (ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 10

ಇನ್ನುಳಿದಂತೆ ಹಾಟ್‌ಸ್ಟರ್‌ನಲ್ಲಿ 'ಸರ್ಚ್‌: ದ ನೈನಾ ಮರ್ಡರ್ ಕೇಸ್'(ಅಕ್ಟೋಬರ್ 10) ಹಾಗೂ ಜೀ-5ನಲ್ಲಿ 'ವೆದುವನ್' ವೆಬ್ ಸೀರಿಸ್(ಅಕ್ಟೋಬರ್ 10) ಸ್ಟ್ರೀಮಿಂಗ್ ಆರಂಭಿಸಲಿವೆ.

More from Filmibeat

Read more about: kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X