OTT releases this week: ವೀಕೆಂಡ್‌ನಲ್ಲಿ 25 ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್.. ನಿಮ್ಮ ಆಯ್ಕೆ?
ನೋಡ್ತಾ ನೋಡ್ತಾ ವರ್ಷದ ಕೊನೆ ತಿಂಗಳು ಬಂದೇಬಿಡ್ತು. ಮತ್ತೊಂದು ವಾರ ಕಳೆದು ಹೊಸ ವಾರ ಶುರುವಾಗಿದೆ. ಕಳೆದ ವಾರಾಂತ್ಯ ಕನ್ನಡದಲ್ಲಿ 5 ಸಿನಿಮಾಗಳು ಬಿಡುಗಡೆಯಾಗಿತ್ತು. 'ಬ್ಯಾಡ್ ಮ್ಯಾನರ್ಸ್', 'ಶುಗರ್ ಫ್ಯಾಕ್ಟರಿ' ಹಾಗೂ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.
ಹೊಸದಾಗಿ 5 ಸಿನಿಮಾಗಳು ತೆರೆಕಂಡರೂ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ 2ನೇ ವಾರಾಂತ್ಯ ಒಳ್ಳೆ ಕಲೆಕ್ಷನ್ ಮಾಡಿತ್ತು. 4 ಸಿನಿಮಾಗಳು ಈ ವಾರವೂ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇನ್ನು ಈ ವೀಕೆಂಡ್‌ನಲ್ಲಿ ಓಟಿಟಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಕಾದಿದೆ. ಬಾಕ್ಸಾಫೀಸ್‌ನಲ್ಲಿ ಗೆಲ್ಲದಿದ್ದರೂ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾಗಳು ಈ ವಾರ ಡಿಜಿಟಲ್ ಫ್ಲಾಟ್‌ಪಾರ್ಮ್‌ಗೆ ಎಂಟ್ರಿ ಕೊಡ್ತಿವೆ.

ಹಾಲಿವುಡ್ ಸಿನಿಮಾಗಳು, ವೆಬ್ ಸೀರಿಸ್‌ಗಳು ಕೂಡ ವೀಕೆಂಡ್‌ನಲ್ಲಿ ವೀಕ್ಷಕರ ಮುಂದೆ ಬರ್ತಿವೆ. ಈ ವಾರ ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಂ, ಸೋನಿ ಲಿವ್, ಜಿಯೋ ಸಿನಿಮಾ, ಬುಕ್ ಮೈ ಶೋ, ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಸಿನಿಮಾ, ವೆಬ್ ಸೀರಿಸ್ ಲಿಸ್ಟ್ ಇಲ್ಲಿದೆ.
ನೆಟ್‌ಫ್ಲಿಕ್ಸ್
1. ಮಿಷನ್ ರಾಣಿಗಂಜ್(ಹಿಂದಿ ಸಿನಿಮಾ)
2. ಅಮೇರಿಕನ್ ಸಿಂಫನಿ(ಇಂಗ್ಲೀಷ್ ಸಿನಿಮಾ)- ನವೆಂಬರ್ 29
3. ಓನ್ಮಿಯೀಜಿ (ಜಪಾನೀಸ್ ವೆಬ್ ಸೀರಿಸ್)- ನವೆಂಬರ್ 28
4. ಲವ್ ಲೈಕ್ ಎ K-ಡ್ರಾಮಾ(ಜಪಾನೀಸ್ ವೆಬ್ ಸೀರಿಸ್)- ನವೆಂಬರ್ 28
5. ಬ್ಯಾಟ್ ಸರ್ಜನ್: ಲವ್ ಅಂಡರ್ ದ ನೈಫ್(ಇಂಗ್ಲೀಷ್ ಸೀರಿಸ್)- ನವೆಂಬರ್ 29
6. ಫ್ಯಾಮಿಲಿ ಸ್ವಿಚ್(ಇಂಗ್ಲೀಷ್ ಸಿನಿಮಾ)- ನವೆಂಬರ್ 30
7. ಹಾರ್ಡ್ ಡೇಸ್(ಜಪಾನೀಸ್ ಸಿನಿಮಾ)- ನವೆಂಬರ್ 30
8. ದಿ ಬ್ಯಾಡ್ ಗಾಯ್ಸ್: ಎ ವೆರಿ ಬ್ಯಾಡ್ ಹಾಲಿಡೇ(ಇಂಗ್ಲೀಷ್ ಶಾರ್ಟ್ ಫಿಲ್ಮ್)- ನವೆಂಬರ್ 30
9. ವರ್ಜಿನ್ ರಿವರ್ ಸೀಸನ್-5(ಇಂಗ್ಲೀಷ್ ವೆಬ್ ಸೀರಿಸ್)- ನವೆಂಬರ್ 30
10. ಮೇ ಡಿಸೆಂಬರ್ (ಇಂಗ್ಲೀಷ್ ಸಿನಿಮಾ)- ಡಿಸೆಂಬರ್ 1
11. ಒಬ್ಲಿಟೆರೆಟೆಡ್- (ಇಂಗ್ಲೀಷ್ ಸೀರಿಸ್)- ನವೆಂಬರ್ 30
12. ಸ್ವೀಟ್ ಹೋಮ್ ಸೀಸನ್-2(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 1
13. ದಿ ಇಕ್ವೆಲೈಝರ್-3 (ಇಂಗ್ಲೀಷ್ ಸಿನಿಮಾ)- ಡಿಸೆಂಬರ್ -1

ಅಮೇಜಾಜ್ ಪ್ರೈಂ
1. ದೂತ
ತೆಲುಗು ನಟ ನಾಗಚೈತನ್ಯ ಈಗ ವೆಬ್ ಸೀರಿಸ್‌ಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ಚೈತು ನಟನೆಯ 'ದೂತ' ತೆಲುಗು ವೆಬ್ ಸೀರಿಸ್ ಡಿಸೆಂಬರ್ 1ಕ್ಕೆ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮರ್ಡರ್ ಮಿಸ್ಟ್ರಿ 'ದೂತ' ಸೀರಿಸ್ ಬಹಳ ನಿರೀಕ್ಷೆ ಮೂಡಿಸಿದ್ದು ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ಸೀರಿಸ್‌ನಲ್ಲಿ ನಾಗಚೈತನ್ಯ ಜರ್ನಲಿಸ್ಟ್ ಪಾತ್ರದಲ್ಲಿ ನಟಿಸಿದ್ದಾರೆ.
2. ಶೆಹರ್ ಲಾಖೋಟ್(ಹಿಂದಿ ವೆಬ್ ಸೀರಿಸ್) ನವೆಂಬರ್ 30
3. ಕ್ಯಾಂಡಿಕೇನ್ ಲೈನ್(ಇಂಗ್ಲೀಷ್ ಸಿನಿಮಾ)- ಡಿಸೆಂಬರ್ 1
ಸೋನಿ ಲಿವ್
1. ಮಾರ್ಟಿನ್ ಲೂಥರ್ ಕಿಂಗ್(ತೆಲುಗು ಸಿನಿಮಾ)- ನವೆಂಬರ್ 29
ಜಿಯೋ ಸಿನಿಮಾ
1. 800
ಶ್ರೀಲಂಕಾ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಜೀವನವನ್ನಾಧರಿಸಿದ 800 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಈ ಬಯೊಗ್ರಫಿಕಲ್ ಸ್ಪೋರ್ಟ್ಸ್ ಡ್ರಾಮಾದಲ್ಲಿ ಶ್ರೀಲಂಕಾ ಸ್ಪಿನ್ನರ್ ಪಾತ್ರದಲ್ಲಿ ಮಧುರ್ ಮಿತ್ತಲ್ ಕಾಣಿಸಿಕೊಂಡಿದ್ದಾರೆ. ಎಂ. ಎಸ್ ಶ್ರೀಪತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಿಸೆಂಬರ್ 2ಕ್ಕೆ ಜಿಯೋ ಸಿನಿಮಾದಲ್ಲಿ '800' ಸಿನಿಮಾ ರಿಲೀಸ್ ಆಗಲಿದೆ. ಕ್ರಿಕೆಟ್ ಪ್ರೇಮಿಗಳು ಕ್ರಿಕೆಟ್ ಲೋಕದ ದಂತಕತೆ ಮುತ್ತಯ್ಯ ಜೀವನದ ಕುರಿತು ತಿಳಿದುಕೊಳ್ಳಲು ಇದು ಒಳ್ಳೆ ಸಿನಿಮಾ.
2. ಜರಾ ಹಟ್ಕೆ ಜರಾ ಬಚ್ಕೆ(ಹಿಂದಿ ಸಿನಿಮಾ)- ಡಿಸೆಂಬರ್ 2
ಬುಕ್‌ಮೈ ಶೋ
1. ಬ್ಯಾಕ್ ಆನ್ ದಿ ಸ್ಕ್ರಿಪ್ಟ್(ಇಂಗ್ಲೀಷ್ ಸಿನಿಮಾ)- ನವೆಂಬರ್ 28
ಡಿಸ್ನಿ ಪ್ಲಸ್ ಹಾಟ್‌ಸ್ಟರ್
1. ಚಿತ್ತಾ
ಸಿದ್ದಾರ್ಥ್ ನಿರ್ಮಿಸಿ ನಟಿಸಿದ 'ಚಿತ್ತಾ' ಸಿನಿಮಾ ತೆಲುಗು, ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. ಕೆಲವರು ಸಿನಿಮಾ ಮೆಚ್ಚಿಕೊಂಡರೂ ಬಹಳ ದಿನ ಥಿಯೇಟರ್‌ಗಳಲ್ಲಿ ಉಳಿಯಲಿಲ್ಲ. ಇದೇ ಚಿತ್ರದ ಕನ್ನಡ ವರ್ಷನ್ ಸುದ್ದಿಗೋಷ್ಠಿ ಬೆಂಗಳೂರಿನಲ್ಲಿ ನಡೆದಿತ್ತು. ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರರು ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ್ದರು. ನವೆಂಬರ್ 28ಕ್ಕೆ ಸಿನಿಮಾ ಡಿಸ್ನಿಪ್ಲಸ್ ಹಾಟ್‌ಸ್ಟರ್‌ಗೆ ಬರಲಿದೆ.
2. ಇಂಡಿಯಾನಾ ಜೋನ್ಸ್ ಮತ್ತು ಡಯಲ್ ಆಫ್ ಡೆಸ್ಟಿನಿ(ಇಂಗ್ಲೀಷ್ ಸಿನಿಮಾ)- ಡಿಸೆಂಬರ್ 1
3. ಮಾನ್‌ಸ್ಟರ್ ಇನ್‌ಸೈಡ್ ಅಮೇರಿಕಾಸ್ ಮೋಸ್ಟ್ ಎಕ್ಸ್‌ಸ್ಟ್ರೀಮ್ ಹಾಂಟೆಡ್ ಹೌಸ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 1
4. ದಿ ಶೆಫರ್ಡ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 1


Click it and Unblock the Notifications











