Ott Releases This week: ಈ ವಾರ 2 ಕನ್ನಡ ಸೇರಿ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ

ಚಿತ್ರಮಂದಿರಗಳಲ್ಲಿ ಈ ವಾರ ನಾಲ್ಕು ವಿಭಿನ್ನ ಸಿನಿಮಾಗಳು ಬಿಡುಗಡೆ ಆಗುತ್ತಿವೆ. 'ದೂರತೀರ ಯಾನ', 'ಕಾಟನ್‌ಪೇಟೆ ಗೇಟ್', 'ಫಸ್ಟ್‌ ಡೇ ಫಸ್ಟ್ ಶೋ' ಹಾಗೂ 'ಮಾಲಿಕ್' ಎಂಬ ಸಿನಿಮಾಗಳು ಲಿಸ್ಟ್‌ನಲ್ಲಿವೆ. ಇನ್ನು ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಅದರಲ್ಲಿ ಕನ್ನಡ ಚಿತ್ರಗಳು ಇವೆ.

ಕಳೆದ ವಾರ ದೊಡ್ಡ ಸಿನಿಮಾಗಳು ಓಟಿಟಿಗೆ ಬಂದಿದ್ದು ಗೊತ್ತೇಯಿದೆ. ಲೂಸ್ ಮಾದ ಯೋಗಿ ನಟನೆಯ 'ಸಿದ್ಲಿಂಗು- 2' ಸಿನಿಮಾ ಕನ್ನಡ ಸಿನಿರಸಿಕರನ್ನು ರಂಜಿಸಿತ್ತು. ಇನ್ನುಳಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲೀಷ್ ಸಿನಿಮಾಗಳು ಓಟಿಟಿಗೆ ಹೊಸದಾಗಿ ಎಂಟ್ರಿ ಕೊಟ್ಟಿದ್ದರು.

From Mr Rani kaliyugam To Karki This Week s Movie Releases in Ott

ಮತ್ತೊಂದು ವೀಕೆಂಡ್ ಹತ್ತಿರವಾಗಿದ್ದು ಒಂದಷ್ಟು ಸಿನಿಮಾ ಹಾಗೂ ವೆಬ್ ಸೀರಿಸ್ ಅಮೇಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಜೀ5, ಸನ್‌ ನೆಕ್ಸ್ಟ್, ಹಾಟ್‌ಸ್ಟರ್ ಓಟಿಟಿಗೆ ಬರಲು ಸಜ್ಜಾಗಿವೆ. ಆ ಲಿಸ್ಟ್ ಮುಂದೆ ಇದೆ ಓದಿ.

ಲಯನ್ಸ್ ಗೆಟ್ ಪ್ಲೇ

1. ಮಿಸ್ಟರ್ ರಾಣಿ

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಯಂತ್‌ ಪಾತ್ರದ ಮೂಲಕ ಖ್ಯಾತಿ ಗಳಿಸಿದ ದೀಪಕ್ ಸುಬ್ರಹ್ಮಣ್ಯ ನಟಿಸಿದ್ದ ಸಿನಿಮಾ ಇದು. ಫೆಬ್ರವರಿ 7ರಂದು ತೆರೆಗೆ ಬಂದಿದ್ದ 'ಮಿಸ್ಟರ್ ರಾಣಿ' ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಇದೀಗ ಲಯನ್ಸ್ ಗೆಟ್ ಪ್ಲೇ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸಿನಿಮಾಗಳಲ್ಲಿ ಹೀರೊ ಆಗಬೇಕು ಎಂದು ಕನಸು ಕಂಡ ಯುವಕ ಅದಕ್ಕಾಗಿ ನಡೆಸುವ ಸರ್ಕಸ್ ಹೇಗಿರುತ್ತದೆ? ಹೀರೊ ಆಗಲು ಹೋಗಿ ಹೆಣ್ಣಿನ ವೇಷ ಹಾಕಿ ಸಿನಿಮಾ ನಾಯಕಿಯಾಗಿ ನಟಿಸುವುದು ಯಾಕೆ? ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು.

2. ಫೋರ್ ಇಯರ್ಸ್ ಲೇಟರ್(ವೆಬ್ ಸೀರಿಸ್) ಜುಲೈ 11

3. ದಿ ಸೈಲೆಂಡ್ ಅವರ್(ಹಾಲಿವುಡ್ ಸಿನಿಮಾ) ಜುಲೈ 11

From Mr Rani kaliyugam To Karki This Week s Movie Releases in Ott

ಸನ್‌ ನೆಕ್ಸ್ಟ್

1. ಕರ್ಕಿ

ಕಳೆದ ವರ್ಷ ತೆರೆಗೆ ಬಂದಿದ್ದ 'ಕರ್ಕಿ' ಎಂಬ ಕನ್ನಡ ಸಿನಿಮಾ ಕೂಡ ಈ ವಾರ ಓಟಿಟಿಗೆ ಬರ್ತಿದೆ. ಸನ್‌ ನೆಕ್ಸ್ಟ್ ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಪ್ರಕಾಶ್ ಪಳನಿ ನಿರ್ಮಾಣದ ಚಿತ್ರಕ್ಕೆ ಪವಿತ್ರನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಜಯಪ್ರಕಾಶ್ ರೆಡ್ಡಿ ನಾಯಕನಾಗಿ ಹಾಗೂ ಮೀನಾಕ್ಷಿ ದಿನೇಶ್ ನಾಯಕಿಯಾಗಿ ಚಿತ್ರದಲ್ಲಿ ಮಿಂಚಿದ್ದಾರೆ. ಹಳ್ಳಿ ಸೊಗಡಿನ ಕಥೆ ಈ ಚಿತ್ರದಲ್ಲಿದೆ.

2. ಕಲಿಯುಗಂ

ಕಿಶೋರ್ ಹಾಗೂ ಶ್ರದ್ಧಾ ಶ್ರೀನಾಥ್ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ 'ಕಲಿಯುಗಂ' ಕೂಡ ಈ ವಾರ ಓಟಿಟಿಗೆ ಬರ್ತಿದೆ. ಸನ್‌ನೆಕ್ಸ್ಟ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಪ್ರಮೋದ್ ಸುಂದರ್ ನಿರ್ದೇಶನದ ಈ ಸಿನಿಮಾ ಮೇ 9ರಂದು ತೆರೆಗೆ ಬಂದಿತ್ತು. ಆದರೆ ಸಿನಿಮಾ ದೊಡ್ಡದಾಗಿ ಸದ್ದು ಮಾಡಿರಲಿಲ್ಲ. ಈಗ ಓಟಿಟಿಗೆ ಬರಲಿದೆ.

ಅಹಾ ಓಟಿಟಿ

1. ಸ್ಯಾರಿ(ತೆಲುಗು ಸಿನಿಮಾ) ಜುಲೈ 11

ನೆಟ್‌ಫ್ಲಿಕ್ಸ್

1. 8 ವಸಂತಾಲು(ತೆಲುಗು ಸಿನಿಮಾ) ಜುಲೈ 11

2. ಮಡಿಯಾಸ್ ಡೆಸ್ಟಿನೇಶನ್ ವೆಡ್ಡಿಂಗ್(ಇಂಗ್ಲೀಷ್ ಸಿನಿಮಾ) ಜುಲೈ 11

3. ಡಿಟೆಕ್ಟಿವ್ ಉಜ್ವಲನ್(ಮಲಯಾಳಂ ಸಿನಿಮಾ) ಜುಲೈ 11

ಹಾಟ್‌ಸ್ಟರ್

1. ಬರಿಡೇ ಇನ್ ಬ್ಯಾಕ್‌ಯಾರ್ಡ್-ಸೀಸನ್ 6(ವೆಬ್ ಸೀರಿಸ್) ಜುಲೈ 13

2. ಜಾಸ್ ದಿ ಡೆಫಿನೇಟಿವ್ ಇನ್‌ಸೈಡ್ ವೆಡ್ಡಿಂಗ್- ಜುಲೈ 11

3. ದಿ ರಿಯಲ್ ಹೌಸ್‌ವೈಫ್ಸ್ ಆಫ್ ಆರೆಂಜ್ ಕಂಟ್ರೀ-9(ವೆಬ್ ಸೀರಿಸ್) ಜುಲೈ 11

More from Filmibeat

English summary
'Karki' and 'Kaliyugam' many movies and web series arrive on OTT platforms
Read more about: sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X