OTT Releases This Week: ಮಾರ್ಚ್ ಕೊನೆ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್

ಒಂದ್ಕಡೆ IPL ಆರ್ಭಟ ಶುರುವಾಗಿದೆ. ಜನರ ಗಮನ ಅತ್ತ ಸರಿದಿದೆ. ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡುತ್ತಿಲ್ಲ. ಇದ್ದಿದ್ದರಲ್ಲಿ ಮಲಯಾಳಂ 'L2: ಎಂಪೂರನ್' ಹಾಗೂ ತೆಲುಗಿನ 'ರಾಬಿನ್‌ಹುಡ್' ಚಿತ್ರಗಳು ಈ ವಾರ ತೆರೆಗೆ ಬರ್ತಿವೆ. ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ಈ ಪ್ರಯತ್ನ ಮಾಡ್ತಿಲ್ಲ.

IPL ಕ್ರಿಕೆಟ್ ಬಿಟ್ಟರೆ ಓಟಿಟಿಯಲ್ಲಿ ಸಿನಿಮಾ ನೋಡಲು ಕೆಲವರು ಕಾಯುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದು ಗೆದ್ದ ಸಿನಿಮಾಗಳನ್ನು ಸ್ಮಾಲ್‌ ಸ್ಕ್ರೀನ್‌ನಲ್ಲಿ ವೀಕ್ಷಿಸಲು ಕೆಲವರು ಮನಸ್ಸು ಮಾಡಿದ್ದಾರೆ. ಮಾರ್ಚ್ ಕೊನೆ ವಾರ ಯಾವೆಲ್ಲಾ ಸಿನಿಮಾ ಹಾಗೂ ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ.

From Mufasa The Lion King to UI this week Ott Release movies web series list

ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ಹಾಗೂ ವೆಬ್ ಸೀರಿಸ್ ಓಟಿಟಿಗೆ ಎಂಟ್ರಿ ಕೊಡುತ್ತಿದೆ. ಕನ್ನಡದ ಯಾವುದೇ ಸಿನಿಮಾ ಈ ವೀಕೆಂಡ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆಕೆ ಕೆಲ ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ವೀಕ್ಷಣೆಗೆ ಲಭ್ಯವಾಗಲಿದೆ. ಕಂಪ್ಲೀಟ್ ಲಿಸ್ಟ್ ಮುಂದೆ ಇದೆ ಓದಿ.

ಜಿಯೋ ಹಾಟ್‌ಸ್ಟರ್

1. ಮುಫಾಸಾ: ದಿ ಲಯನ್ ಕಿಂಗ್

ಹಾಲಿವುಡ್ ಸೂಪರ್ ಹಿಟ್ ಆನಿಮೇಟೆಡ್ ಸಿನಿಮಾ 'ಮುಫಾಸಾ: ದಿ ಲಯನ್ ಕಿಂಗ್' ಇದೀಗ ಓಟಿಟಿಗೆ ಬಂದಿದೆ. ಕಳೆದ ವರ್ಷ ಡಿಸೆಂಬರ್ 20ರಂದು ಸಿನಿಮಾ ತೆರೆಗೆ ಬಂದಿತ್ತು. ಇದೀಗ ಜಿಯೋ ಹಾಟ್‌ಸ್ಟರ್‌ನಲ್ಲಿ ಉಚಿತವಾಗಿ ಸ್ಟ್ರೀಮಿಂಗ್ ಆರಂಭಿಸಿದೆ. ಇದು 2019ರಲ್ಲಿ ಬಂದಿದ್ದ 'ದಿ ಲಯನ್ ಕಿಂಗ್' ಚಿತ್ರದ ಸೀಕ್ವೆಲ್ ಹಾಗೂ ಪ್ರೀಕ್ವೆಲ್ ಕೂಡ ಆಗಿದೆ. ಬ್ಯಾರಿ ಜೆಂಕಿನ್ಸ್ ನಿರ್ದೇಶನದ ಸಿನಿಮಾ ಮಕ್ಕಳಿಗೆ ಒಳ್ಳೆ ಮನರಂಜನೆ ಉಣಬಡಿಸಿತ್ತು. ಸದ್ಯ ಮಕ್ಕಳು ಬೇಸಿಗೆ ರಜೆಯ ಮಜೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಈ ಚಿತ್ರವನ್ನು ತಪ್ಪದೇ ತೋರಿಸಿ.

From Mufasa The Lion King to UI this week Ott Release movies web series list

ನೆಟ್‌ಫ್ಲಿಕ್ಸ್

1. ದೇವ(ಹಿಂದಿ ಸಿನಿಮಾ)

ಜನವರಿ 31ರಂದು ತೆರೆಗೆ ಬಂದಿದ್ದ ಬಾಲಿವುಡ್ ಆಕ್ಷನ್ ಸಿನಿಮಾ 'ದೇವ' ಈ ವಾರ ಓಟಿಟಿಗೆ ಬರಲಿದೆ. ರೋಷನ್ ಆಂಡ್ರೋಸ್ ನಿರ್ದೇಶನದ ಸಿನಿಮಾ ಮಾರ್ಚ್ 28ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ಮಲಯಾಳಂನ 'ಮುಂಬೈ ಪೊಲೀಸ್' ಚಿತ್ರದ ರೀಮೆಕ್ ಇದು. ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದಾರೆ.

2. ಜ್ಯುವೆಲ್ ಥೀಫ್ - ದಿ ಹೀಸ್ಟ್ ಬಿಗಿನ್ಸ್

3. ಮಿಲಿಯನ್ ಡಾಲರ್ ಸೀಕ್ರೆಟ್(ವೆಬ್ ಸೀರಿಸ್) ಮಾರ್ಚ್ 26

4. ಗೋಲ್ಡ್ & ಗ್ರೀಡ್: ದಿ ಹಂಟ್ ಫಾರ್(ವೆಬ್ ಸೀರಿಸ್)ಮಾರ್ಚ್ 27

5.ಫೆನ್ಸ್ ಟ್ರೆಶರ್(ಡಾಕ್ಯೂ ಸೀರಿಸ್) ಮಾರ್ಚ್ 27

6. ದಿ ಲೇಡೀಸ್ ಕಂಪಾನಿಯನ್(ವೆಬ್ ಸೀರಿಸ್) ಮಾರ್ಚ್ 28

7. ದಿ ಲೈಫ್ ಲಿಸ್ಟ್(ವೆಬ್ ಸೀರಿಸ್) ಮಾರ್ಚ್ 28

5. ಚೆಲ್ಸಿಯಾ ಹ್ಯಾಂಡ್ಲರ್(ಸ್ಟ್ಯಾಂಡಪ್ ಕಾಮೆಡಿ) ಮಾರ್ಚ್ 25

Take a Poll

ಜೀ-5

1. ವಿಡುತಲೈ-2

ತಮಿಳಿನ 'ವಿಡುತಲೈ-2' ಕಳೆದ ವರ್ಷ ಡಿಸೆಂಬರ್ 20ರಂದು ತೆರೆಗೆ ಬಂದಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಲಿಲ್ಲ. ಬಳಿಕ ಕನ್ನಡ ಸೇರಿ ದಕ್ಷಿಣದ 4 ಭಾಷೆಗಳಿಗೆ ಸಿನಿಮಾ ಡಬ್ ಆಗಿ ಓಟಿಟಿಗೆ ಬಂದಿತ್ತು. ಈ ವಾರ ಹಿಂದಿ ವರ್ಷನ್ ಜೀ-5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ವೆಟ್ರಿಮಾರನ್ ನಿರ್ದೇಶನದ ಚಿತ್ರದಲ್ಲಿ ವಿಜಯ್ ಸೇತುಪತಿ, ಮಂಜು ವಾರಿಯರ್, ಕಿಶೋರ್ ಹಾಗೂ ಸೂರಿ ಬಣ್ಣ ಹಚ್ಚಿದ್ದಾರೆ.

2. ಯುಐ(ಮಾರ್ಚ್ 30)

ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಆದರೆ 3 ತಿಂಗಳು ಕಳೆದರೂ ಸಿನಿಮಾ ಓಟಿಟಿಗೆ ಬಂದಿಲ್ಲ. ಯುಗಾದಿ ಸಂಭ್ರಮದಲ್ಲಿ ಮಾರ್ಚ್ 30ಕ್ಕೆ ಜೀ-ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗುತ್ತಿದೆ. ಅದೇ ದಿನ ಸಿನಿಮಾ ಜೀ-5 ಓಟಿಟಿಗೂ ಬರಬಹುದು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ.

3. ಮಜಾಕಾ(ತೆಲುಗು ಸಿನಿಮಾ) ಮಾರ್ಚ್ 28

ಪ್ರೈಂ ವೀಡಿಯೋ

1. ಬೋಸ್ಚ್: ಲೆಗಸಿ- ಸೀಸನ್-3(ವೆಬ್ ಸೀರಿಸ್) ಮಾರ್ಚ್ 27

More from Filmibeat

English summary
Ott Releases This Week: Interesting films and web series streaming on ott in march last week;
Read more about: ui kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X