OTT Releases This week: 'ಓಜಿ' ಜೊತೆ ಈ ವಾರ (ಅಕ್ಟೋಬರ್ 20- 25) ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್
ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ದೀಪಾವಳಿ ಸಂಭ್ರಮದಲ್ಲಿ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ. ಚಿತ್ರಮಂದಿರಗಳಲ್ಲಿ 'ಕಾಂತಾರ- 1' ಆರ್ಭಟ ನಡೀತಿದೆ. 'ಥಮ್ಮಾ' ಸೇರಿ ಕೆಲ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜನ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಇದೀಗ ಓಟಿಟಿಯಲ್ಲಿ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತದೆ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಈ ವಾರ ಪ್ರೈಂ ವೀಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟರ್, ಜೀ5ನಲ್ಲಿ ಬಿಡುಗಡೆ ಆಗುತ್ತಿವೆ.

ಕಳೆದ ವಾರ ಕನ್ನಡದ 'ಏಳುಮಲೆ' ಹಾಗೂ 'ಅಂದೊಂದಿತ್ತು ಕಾಲ' ಕನ್ನಡ ಸಿನಿಮಾಗಳು ಓಟಿಟಿಗೆ ಬಂದಿತ್ತು. ವೀಕ್ಷಕರಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಈ ವಾರ ಕೂಡ ಒಂದು ಕಾಮಿಡಿ ಎಂಟರ್‌ಟೈನರ್ ಸಿನಿಮಾ ಒಟಿಟಿಗೆ ಬರ್ತಿದೆ.
1. OG
ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 'ಕಾಂತಾರ- 1' ಆರ್ಭಟದ ನಡುವೆಯೂ ಪವರ್ ಸ್ಟಾರ್ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು. ಭಾರೀ ಓಪನಿಂಗ್ ಪಡೆದುಕೊಂಡಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಬಹಳ ದಿನ ಸಿನಿಮಾ ಚಿತ್ರಮಂದಿರಗಳಲ್ಲಿ ಸದ್ದು ಮಾಡಲಿಲ್ಲ.

ಸುಜಿತ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಚಿತ್ರವನ್ನು ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ. ಇಮ್ರಾನ್ ಹಶ್ಮಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಸೆಪ್ಟೆಂಬರ್ 25ರಂದು ತೆರೆಗೆ ಬಂದಿದ್ದ ಸಿನಿಮಾ 250 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಲಭ್ಯವಿದೆ.
2. ಜಂಬೂ ಸರ್ಕಸ್
ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಕನ್ನಡದ 'ಜಂಬೂ ಸರ್ಕಸ್' ಸಿನಿಮಾ ಈ ವಾರ ಓಟಿಟಿಗೆ ಲಗ್ಗೆ ಇಡ್ತಿದೆ. ಎಂ. ಡಿ ಶ್ರೀಧರ್ ನಿರ್ದೇಶನದ ಈ ಆಕ್ಷನ್ ಚಿತ್ರದಲ್ಲಿ ಪ್ರವೀನ್ ತೇಜ್, ಅಂಜಲಿ, ಅವಿನಾಶ್, ಅಚ್ಯುತ್ ಕುಮಾರ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 12ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಸಿನಿಮಾ ಅಕ್ಟೋಬರ್ 24ರಂದು ಸನ್‌ನೆಕ್ಸ್ಟ್ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
3. ಪರಮ್ ಸುಂದರಿ
ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಜಾನ್ವಿ ಕಪೂರ್ ನಟನೆಯ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದೀಗ ಓಟಿಟಿಯಲ್ಲಿ ಬಿಡುಗಡೆ ಆಗ್ತಿದೆ. ಆಗಸ್ಟ್ 29ರಂದು ಈ ಸಿನಿಮಾ ತೆರೆಗೆ ಬಂದಿತ್ತು. ತುಷಾರ್ ಜಲೋತ್ತಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಮಡೋಕ್ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿತ್ತು. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಅಕ್ಟೋಬರ್ 24ರಂದು ಸಿನಿಮಾ ವೀಕ್ಷಣೆಗೆ ಸಿಗಲಿದೆ.
4. ಲೋಕ
ಮಾಲಿವುಡ್ ಸೂಪರ್ ಹಿಟ್ 'ಲೋಕ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಹತ್ತಿರವಾಗ್ತಿದೆ. ಶೀಘ್ರದಲ್ಲೇ ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಮಾಡುವುದಾಗಿ ಘೋಷಿಸಲಾಗಿದೆ. ಆದರೆ ದಿನಾಂಕ ಮಾತ್ರ ಗೊತ್ತಾಗಿಲ್ಲ. ಈ ವೀಕೆಂಡ್‌ನಲ್ಲೇ ಸಿನಿಮಾ ಓಟಿಟಿಯಲ್ಲಿ ಸಿಗಬಹುದು ಎನ್ನುವ ನಿರೀಕ್ಷೆಯಿದೆ. 30 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಲೇಡಿ ಸೂಪರ್ ಹೀರೊ ಸಿನಿಮಾ 300 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇನ್ನು ಯಾವೆಲ್ಲಾ ಸಿನಿಮಾಗಳು ಲಿಸ್ಟ್‌ನಲ್ಲಿದೆ ಮುಂದೆ ನೋಡಿ.
ನೆಟ್‌ಫ್ಲಿಕ್ಸ್
1. ದಿ ಮಾನ್‌ಸ್ಟರ್ ಆಫ್ ಫ್ಲೋರೆಸ್(ವೆಬ್ ಸೀರಿಸ್) ಅಕ್ಟೋಬರ್ 20
2. ನೋಬಡಿ ವಾಂಟ್ಸ್ ದಿಸ್ ಸೀಸನ್-2 (ವೆಬ್ ಸಿರಿಸ್) ಅಕ್ಟೋಬರ್ 23
3. ಕುರುಕ್ಷೇತ್ರ(ಆನಿಮೇಟೆಡ್ ಸೀರಿಸ್) ಅಕ್ಟೋಬರ್ 24
4. ದಿ ಡ್ರೀಮ್ ಲೈಫ್ ಆಫ್ ಮಿನಿಸ್ಟರ್ ಕಿಮ್ (ವೆಬ್ ಸಿರಿಸ್) ಅಕ್ಟೋಬರ್ 25
5. ಪರೀಷ್(ವೆಬ್ ಸಿರಿಸ್) ಅಕ್ಟೋಬರ್ 24
ಜಿಯೋ ಹಾಟ್‌ಸ್ಟರ್
1. ಮಹಾಭಾರತ್: ಏಜ್ ಧರ್ಮ ಯುದ್ಧ್(ಆನಿಮೇಟೆಡ್ ಸೀರಿಸ್) ಅಕ್ಟೋಬರ್ 25
2. ಶಕ್ತಿ ತಿರುಮಗನ್(ತಮಿಳು ಸಿನಿಮಾ) ಅಕ್ಟೋಬರ್ 24
ಪ್ರೈಂ ವೀಡಿಯೋ
1. ಲಜಾರಸ್(ವೆಬ್ ಸೀರಿಸ್) ಅಕ್ಟೋಬರ್ 22
2. ಈಡೆನ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 24
3. ಎಲಿವೇಷನ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 21
4. ಹಾರ್ಲನ್ ಕೋಬೆನ್'ಸ್ ಲಾಜರಸ್(ವೆಬ್ ಸೀರಿಸ್) ಅಕ್ಟೋಬರ್ 22


Click it and Unblock the Notifications











