OTT Releases This Week: 'ಪೆದ್ದಿ' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಮೂರು ಸಿನಿಮಾ ಮಿಸ್ ಮಾಡ್ಬೇಡಿ

'ಬಲರಾಮನ ದಿನಗಳು' ಹಾಗೂ 'ಗ್ರಾಮಾಯಣ' ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿವೆ. ಆದರೆ ದೊಡ್ಡಮಟ್ಟದಲ್ಲಿ ಚಿತ್ರಗಳಿಗೆ ರೆಸ್ಪಾನ್ಸ್ ಸಿಕ್ತಿಲ್ಲ. ಈ ವಾರ ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್ ಪ್ರಾಮೀಸ್' ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಪ್ರೀಮಿಯರ್ ಶೋಗಳು ಶುರುವಾಗಿದೆ. ಮತ್ತೊಂದು ಕಡೆ ಓಟಿಟಿಯಲ್ಲಿ ಒಂದಷ್ಟು ಸಿನಿಮಾ, ವೆಬ್ ಸೀರಿಸ್ ರಿಲೀಸ್ ಆಗ್ತಿದೆ.

ಕನ್ನಡದ ಸಿನಿಮಾಗಳು ದೊಡ್ಡದಾಗಿ ಓಟಿಟಿಯಲ್ಲಿ ಸದ್ದು ಮಾಡ್ತಿಲ್ಲ. 'ರಕ್ಕಸಪುರದೋಳ್' ಸೇರಿ ಒಂದಷ್ಟು ಸಿನಿಮಾಗಳನ್ನು ಓಟಿಟಿ ವೀಕ್ಷಕರು ಎದುರು ನೋಡುತ್ತಿದ್ದಾರೆ. ವರ್ಷದ ಮೊದಲ 6 ತಿಂಗಳು ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಬರಲಿಲ್ಲ. ಒಂದೆರಡು ಸಿನಿಮಾ ಗೆದ್ದರೂ ಓಟಿಟಿಯಲ್ಲಿ ಅಂತಹ ಆರ್ಭಟ ಕಾಣಲಿಲ್ಲ. ಈ ವಾರ ತೆಲುಗಿನ 'ಪೆದ್ದಿ' ಜೊತೆಗೆ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿವೆ.

From Peddi to Sing Geetham This week ott Release movies and web series list

'ಪೆದ್ದಿ' ಜೊತೆಗೆ ಮ್ಯೂಸಿಕಲ್ ಸಿನಿಮಾ 'ಸಿಂಗ್‌ ಗೀತಂ' ಕೂಡ ಓಟಿಟಿಗೆ ಬರ್ತಿದೆ. ಇನ್ನುಳಿದಂತೆ ನೆಟ್‌ಫ್ಲಿಕ್ಸ್, ಪ್ರೈಂ ವೀಡಿಯೋ, ಸನ್ ನೆಕ್ಸ್ಟ್, ಜಿಯೋ ಹಾಟ್‌ಸ್ಟರ್ ಹಾಗೂ ಜೀ-5ನಲ್ಲಿ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತೆ ಎನ್ನುವ ಲಿಸ್ಟ್ ಮುಂದೆ ಇದೆ ನೋಡಿ.

ಪೆದ್ದಿ

ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ 400 ಕೋಟಿ ರೂ. ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಜುಲೈ 9ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಬುಚ್ಚಿಬಾಬು ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್‌ಕುಮಾರ್, ಜಗಪತಿ ಬಾಬು ಕೂಡ ತಾರಾಗಣದಲ್ಲಿದ್ದಾರೆ. ಜೂನ್ 4ಕ್ಕೆ ತೆರೆಗೆ ಬಂದಿದ್ದ ಸಿನಿಮಾ ತಿಂಗಳು ಕಳೆಯುತ್ತಿದ್ದಂತೆ ಆನ್ಲೈನ್‌ಗೆ ಎಂಟ್ರಿ ಕೊಡುತ್ತಿದೆ. ಹಿಂದಿ ವರ್ಷನ್ ಕೊಂಚ ತಡವಾಗಿ ಬಿಡುಗಡೆ ಆಗಲಿದೆ.

From Peddi to Sing Geetham This week ott Release movies and web series list

ಸಿಂಗ್‌ ಗೀತಂ

ಸಿಂಗೀತಂ ಶ್ರೀನಿವಾಸ್ ನಿರ್ದೇಶನದ ಮ್ಯೂಸಿಕಲ್ ಫ್ಯಾಂಟಸಿ ಕಾಮಿಡಿ ಸಿನಿಮಾ ಇದು. ನಾಗ್ ಅಶ್ವಿನ್ ನಿರ್ಮಾಣದ 'ಸಿಂಗ್‌ ಗೀತಂ' ಸಿನಿಮಾ ಜೂನ್ 12ಕ್ಕೆ ತೆರೆಗೆ ಬಂದಿತ್ತು. ಜುಲೈ 8ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಅಯಾನ್, ಅಹಿಲ್ಯಾ, ಶಾಲಿನಿ ಕೊನೆಪುಡಿ, ಬ್ಯಾನರ್ಜಿ, ತುಳಸಿ ಚಿತ್ರದ ತಾರಾಗಣದಲ್ಲಿದ್ದಾರೆ. ವಿಜಯ್ ದೇವರಕೊಂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಪತಿ ಪತ್ನಿ ಔರ್ ವೋ ದೊ

ಆಯುಷ್ಮಾನ್ ಖುರಾನಾ, ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಮತ್ತು ವಾಮಿಕಾ ಗಬ್ಬಿ ನಟನೆಯ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಪತಿ ಪತ್ನಿ ಔರ್ ವೋ ದೋ'. ಮೇ 15ರಂದು ತೆರೆಗೆ ಬಂದಿದ್ದ ಈ ಸಿನಿಮಾ ಜುಲೈ 10ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ತೆರೆಕಂಡು 2 ತಿಂಗಳ ಬಳಿಕ ಸಿನಿಮಾ ಓಟಿಟಿಗೆ ಎಂಟ್ರಿ ಕೊಡುತ್ತಿದೆ. ಹಿಂದಿ ಸಿನಿಮಾಗಳು ತೆರೆಕಂಡ 2 ತಿಂಗಳ ಬಳಿಕ ಓಟಿಟಿಗೆ ಬರಬೇಕು ಎನ್ನುವ ನಿಯಮ ಮಾಡಿಕೊಂಡಿದ್ದಾರೆ.

ಅಮೇಜಾನ್ ಪ್ರೈಂ

ದಿ ವೆಸ್ಪಿಸ್(ಇಂಗ್ಲೀಷ್ ವೆಬ್ ಸೀರಿಸ್) ಜುಲೈ 12

ಜೀ-5

ಪರಿಮಿಳ ಅಂಡ್ ಕೋ(ತಮಿಳು ಸಿನಿಮಾ) ಜುಲೈ 10

ಫ್ರೇಮ್(ಮರಾಠಿ ಸಿನಿಮಾ) ಜುಲೈ 10

ಹಾಟ್‌ಸ್ಟರ್

ದಿ ಫೈವ್ ಸ್ಟಾರ್ ವೀಕೆಂಡ್(ಇಂಗ್ಲೀಷ್ ವೆಬ್ ಸೀರಿಸ್) ಜುಲೈ 10

ನೆಟ್‌ಫ್ಲಿಕ್ಸ್

ಐ ಯಾಮ್ ನಾಟ್ ಅಫ್ರೈಡ್(ಇಂಗ್ಲೀಷ್ ಸಿನಿಮಾ) ಜುಲೈ 8

ನಥಿಂಗ್ ಟು ಲೂಸ್ (ಇಂಗ್ಲೀಷ್ ಸಿನಿಮಾ) ಜುಲೈ 8

ಲಿಟ್ಲಿಲ್ ಹೌಸ್ ಆನ್ ದ ಪ್ರಯಿರ್(ಇಂಗ್ಲೀಷ್ ವೆಬ್ ಸೀರಿಸ್) ಜುಲೈ 9

Read more about: ramcharan tollywood sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X