OTT Releases This Week: ಈ ವಾರ ಓಟಿಟಿ ಸ್ಟ್ರೀಮಿಂಗ್ ಚಿತ್ರಗಳ ಲಿಸ್ಟ್; ಇಂಟ್ರೆಸ್ಟಿಂಗ್ ಯಾವ್ದು ಅಂದ್ರೆ?
ಮತ್ತೊಂದು ವಾರ ಕಳೆದು ದಸರಾ ವೀಕೆಂಡ್ ಹತ್ತಿರವಾಗುತ್ತಿದೆ. ಬೆಳ್ಳಿ ಪರದೆಗೆ ಈ ವಾರ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಹಾಗೂ ರಜನಿಕಾಂತ್- ಅಮಿತಾಬ್ ಬಚ್ಚನ್ ಜೋಡಿಯ 'ವೆಟ್ಟೆಯಾನ್' ಸಿನಿಮಾಗಳು ಬರ್ತಿದೆ. ತೆಲುಗು, ತಮಿಳಿನಲ್ಲಿ ಮತ್ತಷ್ಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.
ಓಟಿಟಿಯಲ್ಲಿ ಕೂಡ 20ಕ್ಕೂ ಅಧಿಕ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತಿವೆ. ಅದರಲ್ಲಿ ಕನ್ನಡ ಸಿನಿಮಾ ಕೂಡ ಇದೆ. ಅಮೇಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಹಾಟ್‌ಸ್ಟರ್ ಸೇರಿದಂತೆ ವಿವಿಧ ಓಟಿಟಿ ವೇದಿಕೆಗಳಲ್ಲಿ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಈ ವಾರ ರಿಲೀಸ್ ಆಗುತ್ತದೆ ಎನ್ನುವ ಲಿಸ್ಟ್ ಮುಂದೆ ಇದೆ ಓದಿ.

ಕಳೆದ ವಾರ ದಿಗಂತ್, ಧನ್ಯಾ ರಾಮ್‌ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ನಟನೆಯ 'ಪೌಡರ್' ಸಿನಿಮಾ ಪ್ರೈಂ ವೀಡಿಯೋಗೆ ಬಂದಿತ್ತು. ಈ ವಾರವೂ ಕನ್ನಡ ವೀಕ್ಷಕರು ಇದೇ ಕಾಮಿಡಿ ಎಂಟರ್‌ಟೈನರ್ ಸಿನಿಮಾ ವೀಕ್ಷಿಸುತ್ತಿದ್ದಾರೆ.
ಅಮೇಜಾನ್ ಪ್ರೈಂ
1. ಪೆಪೆ
ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿತ್ತು. ಶ್ರೀಲೇಶ್ ನಾಯರ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮೊದಲ ಬಾರಿಗೆ ರಾಘಣ್ಣ ಹಿರಿಮಗ ವಿಭಿನ್ನ ಪಾತ್ರದಲ್ಲಿ ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದರು. ಟೀಸರ್, ಟ್ರೈಲರ್‌ನಿಂದ ಸದ್ದು ಮಾಡಿದ್ದ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಲಿಲ್ಲ. ಆದರೂ ಸಾಕಷ್ಟು ಜನ ಓಟಿಟಿಯಲ್ಲಿ 'ಪೆಪೆ' ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈ ವೀಕೆಂಡ್‌ನಲ್ಲೇ ಸಿನಿಮಾ ಪ್ರೈಂ ವೀಡಿಯೋಗೆ ಬಂದರೆ ಅಚ್ಚರಿ ಪಡಬೇಕಿಲ್ಲ.
2. ಸಿಟಾಡೆಲ್: ಡಯಾನಾ (ವೆಬ್ ಸೀರಿಸ್) ಅಕ್ಟೋಬರ್ 10
ಜಿಯೋ ಸಿನಿಮಾ
1. ಟೀ ಕಪ್(ಹಾರರ್ ವೆಬ್ ಸೀರಿಸ್) ಅಕ್ಟೋಬರ್ 11
2. ಗುಟರ್ ಗು (ಹಿಂದಿ ವೆಬ್ ಸೀರಿಸ್) ಅಕ್ಟೋಬರ್ 11
ಆಹಾ ಓಟಿಟಿ
1. ಲೆವೆಲ್ ಕ್ರಾಸ್ (ಮಲಯಾಳಂ ಸಿನಿಮಾ) ಅಕ್ಟೋಬರ್ 11
2. ಗೊರ್ರೆ ಪುರಾಣಂ (ತೆಲುಗು ಸಿನಿಮಾ) ಅಕ್ಟೋಬರ್ 11

ಡಿಸ್ನಿ ಹಾಟ್‌ಸ್ಟರ್
1. ಸರ್ಫಿರಾ
ಅಕ್ಷಯ್ ಕುಮಾರ್ ನಟನೆಯ 'ಸರ್ಫಿರಾ' ಸಿನಿಮಾ ಹೀನಾಯವಾಗಿ ಸೋತಿತ್ತು. ತಮಿಳಿನಲ್ಲಿ ಸೂರ್ಯ ನಟಿಸಿದ 'ಸುರರೈ ಪೊಟ್ರು' ಚಿತ್ರದ ರೀಮೆಕ್ ಇದು. ಸುಧಾ ಕೊಂಗರ ಹಿಂದಿಯಲ್ಲಿ ಕೂಡ ಚಿತ್ರ ಕಟ್ಟಿಕೊಟ್ಟಿದ್ದರು. ಆದರೆ ತಮಿಳಿನಲ್ಲಿ ಸಿನಿಮಾ ಮಾಡಿದ ಮ್ಯಾಜಿಕ್ ಬಾಲಿವುಡ್‌ನಲ್ಲಿ ನಡೆಯಲಿಲ್ಲ. ಡಿಸ್ನಿ ಹಾಟ್‌ಸ್ಟರ್‌ನಲ್ಲಿ 'ಸರ್ಫಿರಾ' ಅಕ್ಟೋಬರ್ 11ಕ್ಕೆ ಸ್ಟ್ರೀಮಿಂಗ್ ಆಗಲಿದೆ.
2. ವಾರ್ತೈ (ತಮಿಳು ಸಿನಿಮಾ) ಅಕ್ಟೋಬರ್ 11
ಸೋನಿ ಲಿವ್
1. ರಾತ್ ಜವಾನ್ ಹೈ (ಹಿಂದಿ ವೆಬ್ ಸೀರಿಸ್) ಅಕ್ಟೋಬರ್ 11
2. ಜೈ ಮಹೇಂದ್ರನ್ (ಮಲಯಾಳಂ ವೆಬ್ ಸೀರಿಸ್) ಅಕ್ಟೋಬರ್ 11
ನೆಟ್‌ಫ್ಲಿಕ್ಸ್
1. ಲೋನ್‌ಲಿ ಪ್ಲಾನೆಟ್- ಅಕ್ಟೋಬರ್ 11
2. ದಿ ಗ್ರೇಟ್ ಇಂಡಿಯನ್ ಕಪಲ್(ಟಾಕ್ ಶೋ) ಅಕ್ಟೋಬರ್ 11
3. ಅಪ್ ರೈಸಿಂಗ್(ಕೊರಿಯನ್ ಸೀರಿಸ್) ಅಕ್ಟೋಬರ್ 11
4. ದಿ ಮೆಹಂಜಡ್ ಬ್ರದರ್ಸ್ (ಕ್ರೈಂ ಡಾಕ್ಯುಮೆಂಟರಿ) ಅಕ್ಟೋಬರ್ 07
5. ಖೇಲ್ ಖೇಲ್ ಮೆ (ಹಿಂದಿ ಸಿನಿಮಾ) ಅಕ್ಟೋಬರ್ 09
6. ಯಂಗ್ ಷೆಲ್ಡನ್ (ಇಂಗ್ಲೀಷ್ ವೆಬ್ ಸೀರಿಸ್) ಅಕ್ಟೋಬರ್ 8
7. ಸ್ಟಾರ್ಟಿಂಗ್-05 (ವೆಬ್ ಸೀರಿಸ್) ಅಕ್ಟೋಬರ್ 9
8. ಗರ್ಲ್ ಹಾಂಟ್ಸ್ ಬಾಯ್ (ವೆಬ್ ಸೀರಿಸ್) ಅಕ್ಟೋಬರ್ 11
9. ಔಟರ್ ಬ್ಯಾಂಕ್ ಸೀಸನ್-4 ಪಾರ್ಟ್-1 (ವೆಬ್ ಸೀರಿಸ್) ಅಕ್ಟೋಬರ್ 11
10. ಮಾನ್‌ಸ್ಟರ್ ಹೈ-2 (ಇಂಗ್ಲೀಷ್ ವೆಬ್ ಸೀರಿಸ್) ಅಕ್ಟೋಬರ್ 10
11. ಟಾಂಬ್ ರೈಡರ್: ದಿ ಲೆಜೆಂಡ್ ಆಫ್ ಲಾರಾ ಕ್ರಾಫ್ಟ್(ಆನಿಮೇಷನ್ ಸೀರಿಸ್) ಅಕ್ಟೋಬರ್ 10


Click it and Unblock the Notifications











