OTT Releases This Week; ಈ ವಾರ ಓಟಿಟಿಗೆ ಯಾವೆಲ್ಲಾ ಚಿತ್ರಗಳು ಬರ್ತಿವೆ ಗೊತ್ತಾ?
ನೋಡ್ತಾ ನೋಡ್ತಾ ಹೊಸ ವರ್ಷದ ಮೊದಲ ತಿಂಗಳು ಕಳೆದೆ ಹೋಯ್ತು. ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಬಂದ ಕೆಲ ಸಿನಿಮಾಗಳು ಸದ್ದು ಮಾಡಿದ್ದವು. ಕನ್ನಡದಲ್ಲಿ 'ಛೂ ಮಂತರ್' ಕೊಂಚ ಗಮನ ಸೆಳೆದಿತ್ತು. ಓಟಿಟಿಯಲ್ಲಿ ಈ ವರ್ಷ ಯಾವುದೇ ದೊಡ್ಡ ಸಿನಿಮಾ ಬಂದಿಲ್ಲ.
ಕಳೆದ ವರ್ಷದ ಕೊನೆಗೆ ಬಂದಿದ್ದ ಕನ್ನಡದ 'ಮ್ಯಾಕ್ಸ್' ಹಾಗೂ 'ಯುಐ' ಚಿತ್ರಗಳು ಯಾವಾಗ ಓಟಿಟಿಗೆ ಬರುತ್ತದೆ ಎಂದು ಸಿನಿರಸಿಕರು ಕಾಯುವಂತಾಗಿದೆ. ಆದರೆ ಬ್ಲಾಕ್‌ಬಸ್ಟರ್ 'ಪುಷ್ಪ'-2 ಸಿನಿಮಾ ಅಂತೂ ಇಂತೂ ಈ ವಾರ ಓಟಿಟಿಗೆ ಬರ್ತಿದೆ. ಈಗಾಗಲೇ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದರೂ ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿದ್ದರು.

56 ದಿನ ಕಳೆಯುವವರೆಗೂ ಸಿನಿಮಾ ಓಟಿಟಿ ಬರಲ್ಲ ಎಂದು ಚಿತ್ರತಂಡ ಹೇಳಿತ್ತು. ಇನ್ನು 'ಪುಷ್ಪ'-2 ಜೊತೆಗೆ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗಿವೆ. ಆ ಬಗ್ಗೆ ಮುಂದೆ ಓದಿ.
ನೆಟ್‌ಫ್ಲಿಕ್ಸ್
1. ಪುಷ್ಪ-2(ಕನ್ನಡ ಡಬ್ಬಿಂಗ್)
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾ ಸೂಪರ್ ಹಿಟ್ ಆಗಿದೆ. 1800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡವೇ ಹೇಳಿದೆ. 4 ವರ್ಷಗಳ ಹಿಂದೆ ತೆರೆಗೆ ಬಂದು ಗೆದ್ದಿದ್ದ 'ಪುಷ್ಪ' ಚಿತ್ರದ ಸೀಕ್ವೆಲ್ ಇದು. ಇನ್ನು 3 ಗಂಟೆ 23 ನಿಮಿಷಗಳ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಸಂಕ್ರಾಂತಿ ಸಂಭ್ರಮದಲ್ಲಿ 20 ನಿಮಿಷ ಡಿಲೀಟ್ ಫುಟೇಜ್ ಸೇರಿಸಲಾಗಿತ್ತು. ಇದೀಗ ಓಟಿಟಿ 3 ಗಂಟೆ 43 ನಿಮಿಷದ ಸಿನಿಮಾ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಕನ್ನಡ ವರ್ಷನ್ ಕೂಡ ಬರಲಿದೆ. ಈ ವಾರವೇ 'ಪುಷ್ಪ-2' ಸ್ಟ್ರೀಮಿಂಗ್ ಎನ್ನಲಾಗಿತ್ತು. ಆದರೆ ಇದೀಗ ಗೊಂದಲ ಮೂಡಿದೆ. ಮುಂದಿನ ವಾರಕ್ಕೆ ಪೋಸ್ಟ್‌ಪೋನ್ ಆಗುತ್ತಾ ಕಾದು ನೋಡಬೇಕಿದೆ.

2. ಅಮೇರಿಕನ್ ಮ್ಯಾನ್‌ಹಂಟ್; ಓಜೆ ಸಿಂಪ್ಸನ್- ಜನವರಿ 29
3. ಲುಕ್ಸಾಸ್ ವರ್ಲ್ಡ್- ಜನವರಿ 31
4. ದಿ ರಿಕ್ರೂಟ್ ಸೀಸನ್-2- ಜನವರಿ 30
5. ದಿ ಸ್ನೋ ಗರ್ಲ್ ಸೀಸನ್-2- ಜನವರಿ 31
ಜೀ-5
1. ಐಡೆಂಟಿಟಿ
ಮಲಯಾಳಂನ 'ಐಡೆಂಟಿಟಿ' ಸಿನಿಮಾ ಜನವರಿ 31ರಂದು ಜೀ-5ನಲ್ಲಿ ರಿಲೀಸ್ ಆಗಲಿದೆ. ಅಖಿಲ್ ಪಾಲ್ ಹಾಗೂ ಅನಸ್ ಖಾನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ತಕ್ಕಮಟ್ಟಿಗೆ ಗೆದ್ದಿತ್ತು. ಕನವರಿ 2ರಂದು ತೆರೆಗೆ ಬಂದಿದ್ದ ಚಿತ್ರದಲ್ಲಿ ಟೊವಿನೊ ಥಾಮಸ್, ತ್ರಿಶಾ, ವಿನಯ್ ರೈ ನಟಿಸಿದ್ದಾರೆ. ಸಿನಿಮಾ 18 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ.
ಹಾಟ್‌ಸ್ಟರ್
1. ಯುವರ್ ಫ್ರೆಂಡ್ಲಿ ನೈಬರ್‌ವುಡ್ ಸ್ಪೈಡರ್‌ಮ್ಯಾನ್(ಕಾರ್ಟೂನ್ ಸೀರಿಸ್) ಜನವರಿ 29
2. ದಿ ಸ್ಟೋರಿ ಟೆಲ್ಲರ್- ಜನವರಿ 28
3. ದಿ ಸೀಕ್ರೆಟ್ ಆಫ್ ದಿ ಷಿಲೆದಾರ್ಸ್- ಜನವರಿ 31
ಅಮೇಜಾನ್ ಪ್ರೈಂ
1. ಬ್ರೀಚ್- ಜನವರಿ 30
2. ರಾಂಪೇಜ್- ಜನವರಿ 26
3. ಟ್ರಿಬ್ಯೂನಲ್ ಜಸ್ಟೀಸ್ ಸೀಸನ್-2- ಜನವರಿ 27
4. ಫ್ರೈಡೇ ನೈಟ್ ಲೈಟ್ಸ್- ಜನವರಿ 30
5. ಯು ಆರ್ ಕಾರ್ಡಿಯಲಿ ಇನ್‌ವೈಟೆಡ್- ಜನರಿ 30
ಲಯನ್ಸ್ ಗೆಟ್ಸ್ ಪ್ಲೇ
1. ಬ್ಯಾಡ್ ಜೀನಿಯಸ್- ಜನವರಿ 31
ಸೋನಿಲಿವ್
1. ಸಾಲೆ ಆಶಿಕ್- ಫೆಬ್ರವರಿ 1


Click it and Unblock the Notifications











