OTT Releases This Week: ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾ, ಸೀರಿಸ್‌ನಲ್ಲಿ ಇಂಟ್ರೆಸ್ಟಿಂಗ್ ಯಾವ್ದು?
ಕಳೆದ ವಾರ ತೆರೆಗೆ ಬಂದಿರುವ 'ಮಾದೇವ' ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ವಿನೋದ್ ಪ್ರಭಾಕರ್ ಜೋಡಿಯಾಗಿ ಸೋನಲ್ ಮಂಥೆರೋ ನಟಿಸಿದ್ದಾರೆ. ಇನ್ನುಳಿದಂತೆ ಯಾವುದೇ ಕನ್ನಡ ಸಿನಿಮಾ ಚಿತ್ರಮಂದಿರದಲ್ಲಿ ಸದ್ದು ಮಾಡ್ತಿಲ್ಲ. ಇತ್ತ ಓಟಿಟಿಯಲ್ಲಿ ಕೂಡ ಕಳೆದ ವಾರ ಯಾವುದೇ ಕನ್ನಡ ಸಿನಿಮಾ ಸ್ಟ್ರೀಮಿಂಗ್ ಆಗಲಿಲ್ಲ.
ಈ ವಾರ ಓಟಿಟಿಯಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆ ಆಗುವುದು ಅನುಮಾನ ಎನ್ನುವಂತಾಗಿದೆ. ಇನ್ನುಳಿದಂತೆ ಪರಭಾಷೆಯ ಕೆಲ ಸಿನಿಮಾಗಳು, ವೆಬ್ ಸೀರಿಸ್‌ಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರಲಿವೆ. ಕೆಲವರು ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿವೆ. ಸಿದ್ಲಿಂಗು-2 ಸೇರಿದಂತೆ ಕೆಲ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.

ಈ ವಾರ ಯಾವೆಲ್ಲಾ ಸಿನಿಮಾಗಳು, ವೆಬ್ ಸೀರಿಸ್‌ಗಳು ಓಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಮುಂದೆ ಓದಿ.
ಜಿಯೋ ಹಾಟ್‌ಸ್ಟರ್
1. ಶುಭಂ(ತೆಲುಗು ಸಿನಿಮಾ)
ನಟಿ ಸಮಂತಾ ರುತ್‌ಪ್ರಭ್ ನಿರ್ಮಾಣದ ಚೊಚ್ಚಲ ಸಿನಿಮಾ 'ಶುಭಂ'. ಈ ಹಾರರ್ ಕಾಮಿಡಿ ಸಿನಿಮಾ ಮೇ 9ಕ್ಕೆ ತೆರೆಗೆ ಬಂದಿತ್ತು. ತಕ್ಕಮಟ್ಟಿಗೆ ಸದ್ದು ಮಾಡಿತ್ತು ಕೂಡ. ಸ್ಯಾಮ್ ಕೂಡ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಬಹುತೇ ಹೊಸ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದರು. ಜೂನ್ 13ಕ್ಕೆ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಹಾಟ್‌ಸ್ಟರ್‌ನಲ್ಲಿ ಬಿಡುಗಡೆ ಆಗಲಿದೆ.
2. ಪದಕ್ಕಲಂ(ಕನ್ನಡ ಡಬ್ಬಿಂಗ್) ಜೂನ್ 11
3. ದಿ ರಿಯಲ್ ಹೌಸ್ ವೈಫ್ ಮಿಯಾಮಿ ಸೀಸನ್-4 (ಇಂಗ್ಲೀಷ್ ಸೀರಿಸ್) ಜೂನ್ 12
4. ಅಂಡರ್ ಡಾಗ್ಸ್(ಇಂಗ್ಲೀಷ್ ವೆಬ್ ಸೀರಿಸ್) ಜೂನ್ 15
ಅಮೇಜಾನ್ ಪ್ರೈಂ
1. ಇನ್ ಟ್ರಾನಿಟ್ಸ್(ಹಿಂದಿ ವೆಬ್ ಸೀರಿಸ್) ಜೂನ್ 13
2. ದಿ ಟ್ರೈಟರ್ಸ್(ಹಿಂದಿ ರಿಯಾಲಿಟಿ ಶೋ) ಜೂನ್ 12
ಅಹಾ ಓಟಿಟಿ
1. ಇಲೆವೆನ್(ತೆಲುಗು ಸಿನಿಮಾ) ಜೂನ್ 13
ನೆಟ್‌ಫ್ಲಿಕ್ಸ್
1. ರಾನಾ ನಾಯುಡು
ತೆಲುಗು ನಟರಾದ ವೆಂಕಟೇಶ್ ಹಾಗೂ ರಾಣಾ ದಗ್ಗುಬಾಟಿ ನಟನೆಯ 'ರಾನಾ ನಾಯುಡು' ವೆಬ್ ಸೀರಿಸ್ ಸೀಸನ್-2 ಜೂನ್ 13ಕ್ಕೆ ಓಟಿಟಿಗೆ ಬರಲಿದೆ. ತೆಲುಗು ಹಾಗೂ ಕನ್ನಡ ಸೇರಿ ದಕ್ಷಿಣದ ಭಾಷೆಗಳಲ್ಲಿ ಡಬ್ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕರಣ್ ಅನ್ಷುಮಾನ್ ನಿರ್ದೇಶನದ ಈ ಕ್ರೈಂ ಡ್ರಾಮಾ ನಿರೀಕ್ಷೆ ಹುಟ್ಟಾಕ್ಕಿದೆ. ಮೊದಲ ಸೀಸನ್ ಸಖತ್ ಸದ್ದು ಮಾಡಿತ್ತು. ಹಾಗಾಗಿ ಸಹಜವಾಗಿಯೇ 2ನೇ ಸೀಸನ್ ನೋಡಲು ವೀಕ್ಷಕರು ಕಾಯುವಂತಾಗಿದೆ.
2. ಫ್ಯಾಮಿಲೀಸ್ ಲೈಕ್ ಅವರ್ಸ್(ಇಂಗ್ಲೀಷ್ ವೆಬ್ ಸೀರಿಸ್) ಜೂನ್ 10
3. ಟ್ರೈನ್ ರೆಕ್(ಇಂಗ್ಲೀಷ್ ಸಿನಿಮಾ) ಜೂನ್ 10
4. ಕೊಕೇನ್ ಎಯಿರ್(ಇಂಗ್ಲೀಷ್ ವೆಬ್ ಸೀರಿಸ್) ಜೂನ್ 11
5. ಟೈಟಾನ್(ಇಂಗ್ಲೀಷ್ ಸಿನಿಮಾ) ಜೂನ್ 11
6. ಫ್ಯೂಬರ್ ಸೀಸನ್-2 (ಇಂಗ್ಲೀಷ್ ವೆಬ್ ಸೀರಿಸ್) ಜೂನ್ 12
7. ದಿ ಕ್ರಿಯೇಚರ್ ಕೆಸಿಸ್ ಸೀಸನ್ 5 (ಇಂಗ್ಲೀಷ್ ವೆಬ್ ಸೀರಿಸ್) ಜೂನ್ 09
ಸೋನಿ ಲಿವ್
1. ಜಿಮ್ಖಾನಾ (ಕನ್ನಡ ಡಬ್ಬಿಂಗ್ ಸಿನಿಮಾ)


Click it and Unblock the Notifications











