OTT Releases This Week: ಈ ವಾರ(ಮೇ 26ರಿಂದ 30) ಬ್ಲಾಕ್‌ಬಸ್ಟರ್ ಚಿತ್ರಗಳು ಓಟಿಟಿಯಲ್ಲಿ ಸ್ಟ್ರೀಮಿಂಗ್, ಇಲ್ಲಿದೆ ಲಿಸ್ಟ್

ಒಂದ್ಕಡೆ ಐಪಿಎಲ್ ಫೀವರ್, ಮತ್ತೊಂದು ಕಡೆ ಮಳೆ. ಹಾಗಾಗಿ ಜನ ಚಿತ್ರಮಂದಿರಗಳಿಗೆ ಹೋಗಲು ಮೀನಾಮೇಷ ಎಣಿಸುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳ ಬಿಡುಗಡೆ ಸುಳಿವು ಸಿಗುತ್ತಿಲ್ಲ. ಮುಂದಿನ ವಾರ ತೆರೆಗೆ ಬರಬೇಕಿದ್ದ 'ಎಕ್ಕ' ಸಿನಿಮಾ ಕಾರಣಾಂತರಗಳಿಂದ ಬರೋದು ತಡವಾಗುತ್ತಿದೆ.

ದೊಡ್ಡ ಸಿನಿಮಾಗಳು ತೆರೆಗೆ ಬರದೇ ಜನ ಮನರಂಜನೆಗಾಗಿ ಓಟಿಟಿಯನ್ನು ಅವಲಂಬಿಸುವಂತಾಗಿದೆ. ಈ ವಾರ ಬ್ಲಾಕ್‌ಬಸ್ಟರ್ ಸಿನಿಮಾಗಳು ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿವೆ. ತಿಂಗಳ ಹಿಂದೆ ತೆರೆಕಂಡಿದ್ದ ಸಿನಿಮಾಗಳು ಕೂಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿವೆ. ಒಂದು ಕನ್ನಡ ಸಿನಿಮಾ ಕೂಡ ಈ ಲಿಸ್ಟ್‌ನಲ್ಲಿದೆ. ಈ ವಾರ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ ಮುಂದೆ ಓದಿ.

From Retro To Agnyathavasi This Week Ott Streaming Movies and web series list

ನೆಟ್‌ಫ್ಲಿಕ್ಸ್

1. ರೆಟ್ರೋ

ತಮಿಳಿನ 'ರೆಟ್ರೋ' ಸಿನಿಮಾ ಈ ವಾರವೇ ಓಟಿಟಿಗೆ ಬರ್ತಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಸಿನಿಮಾ ಮೇ 1ಕ್ಕೆ ತೆರೆಗೆ ಬಂದಿತ್ತು. ಈ ರೊಮ್ಯಾಂಟಿಕ್ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಸೂರ್ಯ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಚಿತ್ರದಲ್ಲಿ 70, 80ರ ದಶಕದ ಕತೆಯನ್ನು ಕಟ್ಟಿಕೊಡಲಾಗಿದೆ. ಡಿಫ್‌ರೆಂಟ್ ಗೆಟಪ್‌ಗಳಲ್ಲಿ ಸೂರ್ಯ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಸದ್ಯ 25 ದಿನ ಪೂರೈಸಿರುವ ಸಿನಿಮಾ ಮೇ 31ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಂದಾಜು 80 ಕೋಟಿ ರೂ.ಗೆ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ ಎಂದು ಹೇಳಲಾಗಿತ್ತು. ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾರಿವೇಲ್ ಆಗಿ ಸೂರ್ಯ ಕಾಣಿಸಿಕೊಂಡಿದ್ದಾರೆ. ನಾಸರ್, ಪ್ರಕಾಶ್ ರಾಜ್, ಕರುಣಾಕರನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಸಿನಿಮಾ 235 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಕನ್ನಡಕ್ಕೂ ಚಿತ್ರದ ಡಬ್ ಆಗಿ ಓಟಿಟಿಯಲ್ಲಿ ಸಿಗಲಿದೆ.

2. ಹಿಟ್-3

ತೆಲುಗಿನಲ್ಲಿ ನಾನಿ ನಟನೆಯ 'ಹಿಟ್- 3' ಸಿನಿಮಾ ಇತ್ತೀಚೆಗೆ ಸದ್ದು ಮಾಡಿತ್ತು. ಶೈಲೇಶ್ ಕೊಲನು ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೇ 1ರಂದು ಬಿಡುಗಡೆ ಆಗಿತ್ತು. ಅತಿಯಾದ ವೈಲೆನ್ಸ್ ಕಾರಣಕ್ಕೆ ಚಿತ್ರ ಕೆಲವರಿಗೆ ಇಷ್ಟವಾಗಿರಲಿಲ್ಲ. ಇನ್ನು ಚಿತ್ರದ ನಿರ್ಮಾಪಕರಲ್ಲಿ ನಟ ನಾನಿ ಕೂಡ ಒಬ್ಬರು. ನಾಯಕಿಯಾಗಿ ಕನ್ನಡ ನಟಿ ಶ್ರೀನಿಧಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

ಮೇ 29ರಂದು 'ಹಿಟ್- 3' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಕನ್ನಡ ಸೇರಿದಂತೆ ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ. ಈ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿತ್ತು. ಈ ವಾರ ಮನೆಯಲ್ಲೇ ಸಿನಿಮಾ ನೋಡುವ ಅವಕಾಶ ಸಿಗಲಿದೆ.

3. ಕೋಲ್ಡ್ ಕೇಸ್: ದಿ ಟೈಲಿನೋಲ್ ಮುರ್ಡೆರ್ಸ್(ಇಂಗ್ಲೀಷ್ ವೆಬ್ ಸೀರಿಸ್) ಮೇ 26

4. ಏಫ್‌1: ದಿ ಅಕಾಡೆಮಿ(ಇಂಗ್ಲೀಷ್ ವೆಬ್ ಸೀರಿಸ್) ಮೇ 28

5. ಡೆಪ್ಟ್‌.ಕ್ಯೂ(ಇಂಗ್ಲಿಷ್ ವೆಬ್ ಸೀರಿಸ್) ಮೇ 29

6. ಮ್ಯಾಡ್ ಯುನಿಕಾರ್ನ್(ಥಾಯ್ ವೆಬ್ ಸೀರಿಸ್) ಮೇ 29

7. ಎವರಿಥಿಂಗ್ ಅಬೌಟ್ ಮೈ ವೈಫ್(ಫಿಲಿಫೈನ್ಸ್ ಭಾಷೆ ಸಿನಿಮಾ) ಮೇ 29

8. ದಿ ವಿಂಡೋಸ್ ಗೇಮ್(ಸ್ಪ್ಯಾನಿಷ್) ಮೇ 30

9. ಲಾಸ್ಟ್ ಇನ್ ಸ್ಟಾರ್ ಲೈಟ್(ಕೊರಿಯನ್) ಮೇ 30

10. ದಿ ಕ್ರೂಕ್ಡ್ ಮ್ಯಾನ್(ಇಂಗ್ಲೀಷ್) ಜೂನ್ 1

11. ಪ್ರಿಸನ್ ಪ್ರಿನ್ಸೆಸಸ್(ಜಪಾನೀಸ್) ಜೂನ್ 1

From Retro To Agnyathavasi This Week Ott Streaming Movies and web series list

ಪ್ರೈಂ ವೀಡಿಯೋ

1. ದಿ ಕಿಂಗ್ ಆಫ್ ಕಿಂಗ್ಸ್(ಆನಿಮೇಷನ್ ಸಿನಿಮಾ) ಮೇ 27

2. ದಿ ಪ್ರೊಸೆಕೂಟರ್(ಇಂಗ್ಲೀಷ್) ಮೇ 27

3. ಶಾಡೋ ಫಾರ್ ಫೋರ್ಸ್(ಇಂಗ್ಲಿಷ್) ಮೇ 30

4. ಗುಡ್ ಬಾಯ್(ಕೊರಿಯನ್ ಸೀರಿಸ್) ಮೇ 31

5. ವೀರಚಂದ್ರಹಾಸ

ರವಿ ಬಸ್ರೂರು ನಿರ್ದೇಶನದ ಕನ್ನಡದ 'ವೀರಚಂದ್ರಹಾಸ' ಸಿನಿಮಾ ಮೇ 30ಕ್ಕೆ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಶಿವರಾಜ್‌ಕುಮಾರ್ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯಕ್ಷಗಾನವನ್ನು ಈ ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನವನ್ನು ರವಿ ಬಸ್ರೂರು ಮಾಡಿದ್ದಾರೆ.

ಜೀ-5

1. ಅಜ್ಞಾತವಾಸಿ

ರಂಗಾಯಣ ರಘು ನಟನೆಯ ಕನ್ನಡ ಕ್ರೈಂ ಥ್ರಿಲ್ಲರ್ 'ಅಜ್ಞಾತವಾಸಿ' ಮೇ 28ರಂದು ಜೀ-5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಏಕಕಾಲಕ್ಕೆ ಜೀ ಕನ್ನಡ ಕಿರುತೆರೆ ವಾಹಿನಿಯಲ್ಲಿ ಕೂಡ ಸಿನಿಮಾ ಪ್ರಸಾರವಾಗುವ ಸಾಧ್ಯತೆಯಿದೆ. ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಚಿತ್ರಕ್ಕೆ ನಿರ್ದೇಶಕ ಹೇಮಂತ್ ರಾವ್ ಹಣ ಹೂಡಿದ್ದರು.

ಹೆಚ್ಚು ಪ್ರಚಾರವಿಲ್ಲದೇ ಚಿಕ್ಕದಾಗಿಯೇ ಈ ಚಿತ್ರವನ್ನು ತೆರೆಗೆ ತರಲಾಗಿತ್ತು. ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. 'ಅಜ್ಞಾತವಾಸಿ' ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಇದೀಗ ಓಟಿಟಿಯಲ್ಲಿ ಹೆಚ್ಚು ಜನರನ್ನು ತಲುಪಲು ಸಜ್ಜಾಗಿದೆ. ಸಾಕಷ್ಟು ಜನ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ. ಏಪ್ರಿಲ್ 11ರಂದು ಸಿನಿಮಾ ತೆರೆಗೆ ಬಂದಿತ್ತು.

ಜಿಯೋ ಹಾಟ್‌ಸ್ಟರ್

1. ಕ್ಯಾಪ್ಟನ್ ಅಮೆರಿಕಾ: ಬ್ರೇವ್ ನ್ಯೂ ವರ್ಲ್ಡ್(ಇಂಗ್ಲೀಷ್ ಸಿನಿಮಾ) ಮೇ 28

2. ಕ್ರಿಮಿನಲ್ ಜಸ್ಟೀಸ್: ಎ ಫ್ಯಾಮಿಲಿ ಮ್ಯಾಟರ್ (ಹಿಂದಿ ಸೀರಿಸ್) ಮೇ 29

3. ಆಂಡ್ ಜಸ್ಟ್ ಲೈಕ್ ದಟ್(ಇಂಗ್ಲೀಷ್ ಸಿರಿಸ್) ಮೇ 30

4. ಎ ಕಂಪ್ಲೀಟ್ ಅನ್ನೌನ್(ಇಂಗ್ಲೀಷ್) ಮೇ 31

5. ಮೌಂಟೇನ್ ಹೆಡ್(ಇಂಗ್ಲಿಷ್) ಜೂನ್ 1

More from Filmibeat

English summary
OTT Releases This Week; blockbuster Films and web series Releasing in Zee-5, jio Hotstar, Netflix and prime video ott plot forms;
Read more about: kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X