ಈ ವಾರ ಚಿತ್ರಮಂದಿರಕ್ಕೆ ಹಾಗೂ ಓಟಿಟಿಗೆ ಬರುವ ಚಿತ್ರಗಳ ಲಿಸ್ಟ್ ಇಲ್ಲಿದೆ
ಐಪಿಎಲ್ ಆರ್ಭಟದ ನಡುವೆ ಚಿತ್ರರಂಗ ಸೈಲೆಂಟ್ ಆಗಿಬಿಟ್ಟಿದೆ. ದೊಡ್ಡ ಸಿನಿಮಾಗಳು ಬಿಡುಗಡೆ ಆಗುವುದು ತಡವಾಗುತ್ತಿದೆ. ಇತ್ತ ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ. ಈ ವಾರ ಎರಡು ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುವ ಧೈರ್ಯ ಮಾಡಿವೆ.
ತೆಲುಗಿನ 'ಹಿಟ್- 3' ಚಿತ್ರ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಆದರೆ ತಮಿಳಿನ 'ರೆಟ್ರೋ' ಸಿನಿಮಾ ತಮಿಳು, ತೆಲುಗು ವರ್ಷನ್‌ಗಳಲ್ಲಿ ಬರ್ತಿದೆ. ಇವೆರಡು ಸಿನಿಮಾಗಳ ಜೊತೆಗೆ ಓಟಿಟಿಯಲ್ಲಿ ಕೆಲ ಚಿತ್ರಗಳು ಹಾಗೂ ವೆಬ್ ಸೀರಿಸ್ ಈ ವಾರ ಸಿನಿರಸಿಕರನ್ನು ರಂಜಿಸಲು ಮುಂದಾಗಿವೆ. ಮುಂದೆ ಆ ಕಂಪ್ಲೀಟ್ ಲಿಸ್ಟ್ ಇದೆ ನೋಡಿ.

ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ಈ ವಾರ ತೆರೆಗೆ ಬರ್ತಿಲ್ಲ ಓಟಿಟಿಯಲ್ಲಿ ಕೂಡ ಕನ್ನಡ ಸಿನಿಮಾ ರಿಲೀಸ್ ಅನುಮಾನ ಎನ್ನುವಂತಾಗಿದೆ. ಈ ಹಿಂದೆ ಹಣ ಪಾವತಿಸಿ ನೋಡಲು ಅವಕಾಶ ಇದ್ದ ಸಿನಿಮಾಗಳು ಓಟಿಟಿಯಲ್ಲಿ ಉಚಿತವಾಗಿ ಸಿಗುವ ನಿರೀಕ್ಷೆಯಿದೆ. 'ಪಪ್ಪಿ' ಎಂಬ ಮಕ್ಕಳ ಚಿತ್ರವೊಂದು ಮಾತ್ರ ಈ ವಾರ ಕನ್ನಡ ಸಿನಿರಸಿಕರ ಮುಂದೆ ಬರ್ತಿದೆ.
ಥಿಯೇಟರ್ ರಿಲೀಸ್ ಚಿತ್ರಗಳು
ರೆಟ್ರೋ
ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ರೆಟ್ರೋ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಮೇ 1 ಅಂದರೆ ಕಾರ್ಮಿಕರ ದಿನ. ಹಾಗಾಗಿ ರಜೆ ಇದೆ. ಇಂತಹ ಸಮಯದಲ್ಲಿ ಗುರುವಾರವೇ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಸೂರ್ಯ ಹಾಗೂ ಪೂಜೆ ಹೆಗ್ಡೆ 'ರೆಟ್ರೋ' ಚಿತ್ರದ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ.
'ಕಂಗುವ' ಸಿನಿಮಾ ಮಾಡಿ ಸೋತಿದ್ದ ಸೂರ್ಯ 'ರೆಟ್ರೋ' ಚಿತ್ರದ ಮೂಲಕ ಕಂಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ಚಿತ್ರದ 'ಕನ್ನಿಮಾ' ಸಾಂಗ್ ಹಿಟ್ ಆಗಿದೆ. ಇನ್ನು ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಸೂರ್ಯ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಮಾರ್ಷಲ್ ಆರ್ಟ್ಸ್ ಕಲಿತು ನಟಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದ್ದು ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 10 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿರುವ ಅಂದಾಜಿದೆ.
ಹಿಟ್-3
ನಾನಿ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ 'ಹಿಟ್-3' ಸಿನಿಮಾ ಕೂಡ ಸದ್ದು ಮಾಡ್ತಿದೆ. 'ಹಿಟ್' ಸರಣಿಯ 2 ಚಿತ್ರಗಳು ಹಿಟ್ ಆಗಿ 3ನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿವೆ. ಶೈಲೇಶ್ ಕೊಲನು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಸರ್ಕಾರ್ ಎಂಬ ಐಪಿಎಸ್ ಆಫೀಸರ್ ಪಾತ್ರದಲ್ಲಿ ನಾನಿ ಅಬ್ಬರಿಸಿದ್ದಾರೆ. ಆತನ ಪ್ರೇಯಸಿಯಾಗಿ ಶ್ರೀನಿಧಿ ಮಿಂಚಿದ್ದಾರೆ.
ಕನ್ನಡಕ್ಕೂ 'ಹಿಟ್- 3' ಚಿತ್ರ ಡಬ್ ಆಗಿದೆ. ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ಶ್ರೀನಿಧಿ ಶೆಟ್ಟಿ ತಾವೇ ಖುದ್ದಾಗಿ ಡಬ್ ಮಾಡಿದ್ದಾರೆ. ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಸಾನ್ವಿ ಸುದೀಪ್ ಹಾಡಿದ್ದಾರೆ. ಅಂದಾಜು 60 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಸರಣಿಯ ಹಿಂದಿನ ಎರಡು ಸಿನಿಮಾಗಳು ಗೆದ್ದು ಸಹಜವಾಗಿಯೇ 3ನೇ ಸಿನಿಮಾ ಬಗ್ಗೆ ಕುತೂಹಲ ಮೂಡುವಂತಾಗಿದೆ. ಚಿತ್ರತಂಡ ಭರ್ಜರಿ ಪ್ರಚಾರ ಮಾಡ್ತಿದೆ. 50ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಕನ್ನಡ ವರ್ಷನ್ ರಿಲೀಸ್ ಆಗುತ್ತದೆ ಎಂದು ಚಿತ್ರತಂಡ ಹೇಳಿದೆ.
ರೈಡ್-2
ಬಾಲಿವುಡ್ ಕ್ರೈಂ ಥ್ರಿಲ್ಲರ್ 'ರೈಡ್-2' ಚಿತ್ರಕ್ಕೂ ಈ ವಾರವೇ ಬಿಡುಗಡೆ ಭಾಗ್ಯ ಸಿಗುತ್ತಿದೆ. ರಾಜ್‌ಕುಮಾರ್ ಗುಪ್ತಾ ನಿರ್ದೇಶನದ ಈ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಅಜಯ್ ದೇವಗನ್, ರಿತೇಶ್ ದೇಶ್‌ಮುಖ್, ವಾಣಿ ಕಪೂರ್ ನಟಿಸಿದ್ದಾರೆ. ಟೀ-ಸೀರಿಸ್ ಹಾಗೂ ಪನೋರಮಾ ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ.
ಕಂದಾಯ ಇಲಾಖೆಯ ಅಧಿಕಾರಿ ಅಮಯ್ ಪಟ್ನಾಯಕ್ ಪಾತ್ರದ ಸುತ್ತಾ 'ರೈಡ್- 2' ಸಿನಿಮಾ ಕಥೆ ಸುತ್ತಲಿದೆ. ಭ್ರಷ್ಟಾಚಾರಿಗಳ ವಿರುದ್ಧ ಸಮರ ಸಾರುವ ನಾಯಕನ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. 'ನಶಾ' ಎಂಬ ಸ್ಪೆಷಲ್ ಸಾಂಗ್‌ನಲ್ಲಿ ತಮನ್ನಾ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದಾರೆ. ಈ ಹಾಡಿನ ಬಗ್ಗೆಯೂ ಸೆನ್ಸಾರ್ ಮಂಡಳಿ ಚಕಾರ ಎತ್ತಿದೆ. ಚಿತ್ರದ ಸೆಕೆಂಡ್ ಡೈಲಾಗ್‌ಗೆ ಕತ್ತರಿ ಹಾಕಲಾಗಿದೆ.
ದಿ ಭೂತ್ನಿ
ಸಂಜಯ್ ದತ್ ಹಾಗೂ ಮೌನಿ ರಾಯ್ ನಟನೆಯ ಹಾರರ್ ಸಿನಿಮಾ 'ದಿ ಭೂತ್ನಿ' ಯಾವುದೇ ಸದ್ದು ಗದ್ದಲ ಇಲ್ಲದೇ ತೆರೆಗೆ ಬರ್ತಿದೆ. ಸಿದ್ದಾಂತ್ ಸಚ್‌ದೇವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸನ್ನಿ ಸಿಂಗ್, ಆಸಿಫ್ ಖಾನ್ ಕೂಡ ತಾರಾಗಣದಲ್ಲಿದ್ದಾರೆ. ಆದರೆ ಸಿನಿಮಾ ಬಿಡುಗಡೆ ಬಗ್ಗೆ ಹೆಚ್ಚು ಜನರಿಗೆ ಗೊತ್ತೇಯಿಲ್ಲ. ಸನ್ನಿ ಸಿಂಗ್, ಪಲಕ್ ತಿವಾರಿ ಬಣ್ಣ ಹಚ್ಚಿ ನಟಿಸಿದ್ದಾರೆ.
ಓಟಿಟಿ ರಿಲೀಸ್ ಸಿನಿಮಾಗಳು
ಅಮೇಜಾನ್ ಪ್ರೈಂ
1. ಕೆರೆಬೇಟೆ
ರಾಜ್‌ಗುರು ನಿರ್ದೇಶನದ 'ಕೆರೆಬೇಟೆ' ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋಗೆ ಬಂದಿದೆ. ಮಲೆನಾಡ ಸೊಗಡಿನ ಚಿತ್ರದಲ್ಲಿ ಗೌರಿಶಂಕರ್ ಹೀರೊ ಆಗಿ ನಟಿಸಿದ್ದಾರೆ. ಸದ್ಯ ಪ್ರೈಂ ವೀಡಿಯೋದಲ್ಲಿ 99 ರೂಪಾಯಿ ಪಾವತಿಸಿ ಸಿನಿಮಾ ವೀಕ್ಷಿಸಲು ಅವಕಾಶವಿದೆ. ಮುಂದಿನ ವಾರ ಉಚಿತವಾಗಿ ಸಿಗಬಹುದು.
2. ಅನದರ್ ಸಿಂಪಲ್ ಫೇವರ್
ಸನ್‌ನೆಕ್ಸ್ಟ್
1. ಕಾಲಪತ್ಧರ್
ವಿಕ್ಕಿ ವರುಣ್ ನಿರ್ದೇಶಿಸಿ ನಟಿಸಿದ್ದ 'ಕಾಲಪತ್ಥರ್' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ನಟಿಸಿದ್ದರು. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಸಿನಿಮಾ ಸನ್‌ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಬಂದಿದೆ. ವೀಕೆಂಡ್ ಮನೆಯಲ್ಲೇ ಕನ್ನಡ ಸಿನಿಮಾ ನೋಡಿ.
ಹಾಟ್‌ಸ್ಟರ್
1. ಕುಲ್ಲೆ: ದಿ ಲೆಗಸಿ ಆಫ್ ದ ರೈಸಿಂಗ್ಸ್(ವೆಬ್ ಸೀರಿಸ್) ಮೇ-2
2.ದ ಬ್ರೌನ್ ಹಾರ್ಟ್(ಡಾಕ್ಯುಮೆಂಟರಿ) ಮೇ-3
ಆಹಾ ಓಟಿಟಿ
1. ವೇರೆಲೆವೆಲ್ ಆಫೀಸ್ ರೀಲೋಡೆಡ್(ತೆಲುಗು ವೆಬ್ ಸೀರಿಸ್) ಮೇ 1
ಸೋನಿಲಿವ್
1. ಬ್ಲ್ಯಾಕ್, ವೈಟ್ & ಗ್ರೇ: ಲವ್ ಕಿಲ್ಸ್(ವೆಬ್ ಸೀರಿಸ್) ಮೇ 1
2. ಬ್ರೋಮ್ಯಾನ್ಸ್
ಅರುಣ್ ಜಿ. ಜೊಶ್ ನಿರ್ದೇಶನದ ಮಲಯಾಳಂ ಕಾಮಿಡಿ ಅಡ್ವೆಂಚರ್ಸ್ ಸಿನಿಮಾ ಇದು. ಮ್ಯಾಥ್ಯೂ ಥಾಮಸ್, ಅರ್ಜನ್ ಅಶೋಕನ್, ಮಹಿಮಾ ನಂಬಿಯಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಫೆಬ್ರವರಿ 14ರಂದು ತೆರೆಗೆ ಬಂದಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಸಹ ಮಾಡಿತ್ತು. ಈ ವಾರ ಸೋನಿಲಿವ್ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸುತ್ತಿದೆ.
ನೆಟ್‌ಫ್ಲಿಕ್ಸ್
1. ಆಸ್ಟರಿಕ್ಸ್ & ಒಬೆಲಿಕ್ಸ್: ದಿ ಬಿಗ್ ಫೈಟ್- ಸೀಸನ್ 1(ವೆಬ್ ಸೀರಿಸ್) ಏಪ್ರಿಲ್ 30
2. ದಿ ಎಟರ್ನಾಟ್(ವೆಬ್ ಸೀರಿಸ್) ಏಪ್ರಿಲ್ 30
3. ದಿ ರಾಯಲ್ಸ್(ವೆಬ್ ಸೀರಿಸ್) ಮೇ 1
4. ದಿ ಬಿಗ್ಗೆಸ್ಟ್ ಫ್ಯಾನ್-
5. ಚೆಫ್ಸ್ ಟೇಬಲ್: ಲೆಜೆಂಡ್ಸ್ - ಸೀಸನ್ 1- ಏಪ್ರಿಲ್ 28
6. ದಿ ಫೋರ್ ಸೀಸನ್ಸ್(ವೆಬ್ ಸೀರಿಸ್) ಮೇ 1
7. ಬ್ಯಾಡ್ ಬಾಯ್(ವೆಬ್ ಸೀರಿಸ್) ಮೇ 2
8. ಟರ್ನಿಂಗ್ ಪಾಯಿಂಟ್: ವಿಯೆಟ್ನಾಂ ವಾರ್(ವೆಬ್ ಸೀರಿಸ್) ಏಪ್ರಿಲ್ 30
9. ಯಾಂಗಿ: ಫೇಕ್ ಲೈಫ್, ಟ್ರೂ ಕ್ರೈಂ(ವೆಬ್ ಸೀರಿಸ್) ಮೇ 1
ಜೀ-5
1. ಕೋಸ್ಟಾವೊ
ಬಾಲಿವುಡ್ ಬಯೊಗ್ರಫಿಕಲ್ ಕ್ರೈಂ ಥ್ರಿಲ್ಲರ್ ಸಿನಿಮಾ 'ಕೋಸ್ಟಾವೊ' ನೇರವಾಗಿ ಓಟಿಟಿಗೆ ಬರ್ತಿದೆ. ಮೇ 1ರಂದು ಸಿನಿಮಾ ಜೀ-5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಸೆಜಲ್ ಶಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಲೀಡ್ ರೋಲ್ ಕೋಸ್ಟಾವೊ ಫೆರ್ನಾಂಡಿಸ್ ಆಗಿ ನವಾಜುದ್ದೀನ್ ಸಿದ್ದಿಕಿ ನಟಿಸಿದ್ದಾರೆ. 1990 ರ ದಶಕದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಗೋವಾ ಕಸ್ಟಮ್ಸ್ ಅಧಿಕಾರಿ ಕೋಸ್ಟಾವೊ ಫೆರ್ನಾಂಡಿಸ್ ಜೀವನಾಧರಿತ ಕಥೆಯನ್ನು ಚಿತ್ರದಲ್ಲಿ ನೋಡಬಹುದು.


Click it and Unblock the Notifications











