ಶುಕ್ರವಾರ(ಏ. 4) ಒಟ್ಟು 18 ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬಂದಿದೆ; 2 ಕನ್ನಡ ಚಿತ್ರಗಳು ಇವೆ

ಈ ವಾರ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲಿಲ್ಲ. ಕಳೆದ ವಾರ ಕನ್ನಡದ 'ಮನದ ಕಡಲು', ಮಲಯಾಳಂ 'ಎಂಪುರಾನ್', ಹಿಂದಿಯ 'ಸಿಕಂದರ್', ತೆಲುಗಿನ 'ರಾಬಿನ್‌ಹುಡ್' ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದ್ದವು. ಈ ವಾರವೂ ಅದೇ ಸಿನಿಮಾಗಳು ಪ್ರದರ್ಶನ ಮುಂದುವರೆಸಲಿದೆ. ಮುಂದಿನ ವಾರ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿವೆ. ಕನ್ನಡದ ಬಹುನಿರೀಕ್ಷಿತ 3 ಚಿತ್ರಗಳು ಲಿಸ್ಟ್‌ನಲ್ಲಿವೆ.

ಚಿತ್ರಮಂದಿರಗಳಲ್ಲಿ ತೆರೆಕಂಡ ಸಿನಿಮಾಗಳ ಕಥೆ ಇದಾದರೆ ಓಟಿಟಿಯಲ್ಲಿ ಒಂದಷ್ಟು ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ಸ್ಟ್ರೀಮಿಂಗ್ ಆರಂಭಿಸಿವೆ. ಸದ್ದಿಲ್ಲದೇ ಒಂದು ಕನ್ನಡ ಸಿನಿಮಾ ಕೂಡ ಓಟಿಟಿ ವೀಕ್ಷಕರ ಬಳಿಗೆ ಬಂದಿದೆ. ಇನ್ನುಳಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಹಿಂದಿ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ವೀಕ್ಷಣೆಗೆ ಲಭ್ಯವಿದೆ.

From Shivamma to test 18 movies and web series released on apryl 4th Friday

ಇವತ್ತು(ಏಪ್ರಿಲ್) ಒಂದೇ ದಿನ ಬರೋಬ್ಬರಿ 18 ಸಿನಿಮಾ ಹಾಗೂ ವೆಬ್ ಸೀರಿಸ್ ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಎಂಟ್ರಿ ಕೊಟ್ಟಿದೆ. ಆ ಲಿಸ್ಟ್ ಮುಂದೆ ಇದೆ ಓದಿ.

ನೆಟ್‌ಫ್ಲಿಕ್ಸ್

1. ಟೆಸ್ಟ್

ಶಶಿಕಾಂತ್ ನಿರ್ದೇಶನದ ಸ್ಪೋರ್ಟ್ ಡ್ರಾಮಾ 'ಟೆಸ್ಟ್‌' ಇದೀಗ ನೆಟ್‌ಫ್ಲಿಕ್ಸ್‌ಗೆ ಬಂದಿದೆ. ಮಾಧವನ್, ನಯನತಾರಾ ಹಾಗೂ ಸಿದ್ದಾರ್ಥ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಸಿನಿಮಾ ನೇರವಾಗಿ ಓಟಿಟಿಗೆ ಬಂದಿದೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ನೇರವಾಗಿ ಓಟಿಟಿಗೆ ಬರೋದು ಕಮ್ಮಿ. ತೆಲುಗು, ತಮಿಳಿನಲ್ಲಿ ಆ ಪ್ರಯತ್ನ ಜೋರಾಗಿದೆ.

2. ಪಲ್ಸ್(ಇಂಗ್ಲೀಷ್ ಸೀರಿಸ್)

3. ಕರ್ಮ(ಕೊರಿಯನ್ ಕ್ರೈಂ ಥ್ರಿಲ್ಲರ್)

ಅಮೇಜಾನ್ ಪ್ರೈಂ

1. ಪಾರು ಪಾರ್ವತಿ

ಬಿಗ್‌ಬಾಸ್ ಖ್ಯಾತಿಯ ದೀಪಿಕಾ ದಾಸ್ ಪ್ರಧಾನ ಪಾತ್ರದಲ್ಲಿ ನಟಿಸಿರುವ 'ಪಾರು ಪಾರ್ವತಿ' ಸಿನಿಮಾ ಪ್ರೈಂ ವೀಡಿಯೋಗೆ ಬಂದಿದೆ. ಜನವರಿ 31ರಂದು ಸಿನಿಮಾ ಬಿಡುಗಡೆ ಆಗಿತ್ತು. ಟ್ರಾವೆಲ್ ಇನ್ಫ್ಲೂಯೆನ್ಸರ್ ದೀಪಿಕಾ ದಾಸ್ ನಟಿಸಿರುವ ಸಿನಿಮಾ ಇದು. ಹಿರಿಯ ನಟಿ ಪೂನಂ, ಫವಾದ್ ಅಶರ್ಫ್, ಪ್ರಶಾಂತ್ ನಟನಾ ಚಿತ್ರದ ತಾರಾಗಣದಲ್ಲಿದ್ದಾರೆ. ರೋಹಿತ್ ಕೀರ್ತಿ ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ಪಿ.ಬಿ. ಪ್ರೇಮನಾಥ್ ನಿರ್ಮಿಸಿದ್ದಾರೆ. ಮಹಿಳಾ ಪ್ರೇಕ್ಷಕರನ್ನು ಈ ಅಡ್ವೆಂಚರಸ್ ಸಿನಿಮಾ ಹೆಚ್ಚು ರಂಜಿಸಿತ್ತು.

2. ಇಂಟಿ ನಂಬರ್ 13(ತೆಲುಗು ಸಿನಿಮಾ)

3. ದಿ ಬ್ಯಾಂಡ್‌ಮ್ಯಾನ್(ಇಂಗ್ಲೀಷ್ ಸಿನಿಮಾ)

4. 14 ಡೇಸ್ ಗರ್ಲ್ ಫ್ರೆಂಡ್ ಇಂಟ್ಲೋ(ತೆಲುಗು ಸಿನಿಮಾ)

5. ಮುರ್ ಮುರ್(ತಮಿಳು ಸಿನಿಮಾ)

6. ಮಚಾಂಟೆ ಮಾಲಾಖಾ(ಮಲಯಾಳಂ ಸಿನಿಮಾ)

From Shivamma to test 18 movies and web series released on apryl 4th Friday

ಸೋನಿ ಲಿವ್

1. ಚಮಕ್(ತೆಲುಗು ಸೀರಿಸ್)

ಹಾಟ್‌ಸ್ಟರ್

1. ಟಚ್ ಮಿ ನಾಟ್(ತೆಲುಗು ಸೀರಿಸ್)

2. ಲವ್ಯಪಾ(ಹಿಂದಿ ಸಿನಿಮಾ)

ಅಹಾ ಓಟಿಟಿ

1. ಹೋಂ ಟೌನ್(ತೆಲುಗು ಸೀರಿಸ್)

ಸನ್‌ ನೆಕ್ಸ್ಟ್

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ' ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದೆ. ಸನ್‌ನೆಕ್ಸ್ಟ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಕಳೆದ ವರ್ಷ ಜೂನ್ 14ರಂದು ಸಿನಿಮಾ ತೆರೆಗೆ ಬಂದಿತ್ತು. ಜಯಶಂಖರ್ ಆರ್ಯರ್ ನಿರ್ದೇಶನ ಚಿತ್ರಕ್ಕಿದೆ. ಯರೆಹಂಚಿನಾಳ ಎಂಬ ಊರಿನಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ.

ಇರಾನ್‌ನಲ್ಲಿ ನಡೆದ 'ಫಜರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ', ಚೀನಾದಲ್ಲಿ ನಡೆದ 'ಹೈನಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ', ರಷ್ಯಾದ 'ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ', 'ಸ್ವೀಡನ್‌ನ 'ಗೋಥೆಂಬರ್ಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ', ಸ್ಪೇನ್‌ನಲ್ಲಿ ನಡೆದ 'ಇಮ್ಯಾಜಿನ್ ಇಂಡಿಯಾ', ಕೆನಡಾದ 'ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ', ಮೆಲ್ಬೋರ್ನ್‌ನ 'ಇಂಡಿಯನ್ ಫಿಲ್ಮ್ ಫೆಸ್ಟಿವಲ್' ಸೇರಿದಂತೆ ಹಲವು ಚಿತ್ರೋತ್ಸವಗಳಲ್ಲಿ 'ಶಿವಮ್ಮ' ಸಿನಿಮಾ ಪ್ರದರ್ಶನ ಕಂಡಿತ್ತು.

ಶರಣಮ್ಮ ಚಟ್ಟಿ, ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿರುವ ಶಿವಮ್ಮ ಕುಟುಂಬ ಪೋಷಣೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿರುತ್ತಾಳೆ. ಕೊನೆಗೆ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಾಳೆ. ಮುಂದೇನು ಎನ್ನುವುದು ಸಿನಿಮಾ ಕಥೆ.

ಮನೋರಮ ಮ್ಯಾಕ್ಸ್

1. ಜೈಲರ್(ಮಲಯಾಳಂ ಸಿನಿಮಾ)

More from Filmibeat

English summary
Interesting movies and web series start streaming from this week;
Read more about: sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X