ಕ್ರಿಸ್‌ಮಸ್ ಸಂಭ್ರಮದಲ್ಲಿ ಓಟಿಟಿಗೆ ಬಂದ 20 ಚಿತ್ರಗಳು; ಇಂಟ್ರೆಸ್ಟಿಂಗ್ ಯಾವ್ದು ಅಂದ್ರೆ?

ವರ್ಷಾಂತ್ಯದ ಕೊನೆಗೆ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಸಿಗುತ್ತಿದೆ. ತೆರೆಕಂಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. 'ಪುಷ್ಪ'-2 ಜೊತೆಗೆ ಕನ್ನಡದ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ 'ಬೇಬಿ ಜಾನ್', ತಮಿಳಿನ 'ವಿಡುತಲೈ'-2 ಚಿತ್ರಗಳ ಸದ್ದು ಜೋರಾಗಿದೆ.

ವರ್ಷದ ಕೊನೆಯಲ್ಲಿ ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಶೇಕ್ ಆಗುತ್ತಿದೆ. ಸಾಲು ಸಾಲು ರಜೆಗಳು ಚಿತ್ರದ ಗಳಿಕೆಗೆ ಪ್ಲಸ್ ಆಗಿದೆ. 'ಯುಐ' ಮತ್ತು 'ಮ್ಯಾಕ್ಸ್' ಸೂಪರ್ ಹಿಟ್ ಆಗಿದೆ. ಹಾಲಿವುಡ್‌ ಸಿನಿಮಾ 'ಮುಫಾಸ'- ದಿ ಲಯನ್ ಕಿಂಗ್ ಕೂಡ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ.

From singham again to Bagheera christmas week ott streaming films and web series list

ತೆರೆಗಪ್ಪಳಿಸಿರುವ ಸಿನಿಮಾಗಳ ಕತೆ ಒಂದು ಕಡೆ ಆದರೆ ಇತ್ತ ಓಟಿಟಿಯಲ್ಲಿ ವಿಭಿನ್ನ ಚಿತ್ರಗಳು ಬಂದಿದೆ. 'RRR' ಮೇಕಿಂಗ್ ಡಾಕ್ಯುಮೆಂಟರಿ ಕೂಡ ಸಿನಿರಸಿಕರ ಗಮನ ಸೆಳೆದಿದೆ. ಈ ವಾರ ತೆರೆಕಂಡು ಓಟಿಟಿ ವೀಕ್ಷಕರನ್ನು ರಂಜಿಸುತ್ತಿರುವ ಚಿತ್ರಗಳ ಲಿಸ್ಟ್ ಇಲ್ಲಿದೆ ಓದಿ.

ಹಾಟ್‌ಸ್ಟರ್

1. ಬಘೀರ(ಹಿಂದಿ ಡಬ್ಬಿಂಗ್)

ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ 'ಬಘೀರ' ಸಿನಿಮಾ ಹಿಂದಿ ಡಬ್ ಆಗಿ ಓಟಿಟಿಗೆ ಬಂದಿದೆ. ಚಿತ್ರಮಂದಿರದಲ್ಲೇ ಹಿಂದಿ ವರ್ಷನ್ ರಿಲೀಸ್ ಮಾಡುವಂತೆ ಸಾಕಷ್ಟು ಜನ ಕೇಳಿದ್ದರು. ಆದರೆ ಓಟಿಟಿಗೆ ಸಿನಿಮಾ ಎಂಟ್ರಿ ಕೊಟ್ಟಿದೆ. ಪ್ರಶಾಂಲ್ ನೀಲ್ ಕತೆ ಬರೆದಿದ್ದ ಚಿತ್ರಕ್ಕೆ ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದರು. ಶ್ರೀಮುರಳಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ. ತೆರೆಗೆ ಬಂದ 20 ದಿನಕ್ಕೆ ಚಿತ್ರದ ಕನ್ನಡ, ತೆಲುಗು, ತಮಿಳು, ಮಲಯಾಳಂ ವರ್ಷನ್ ನೆಟ್‌ಫ್ಲಿಕ್ಸ್‌ಗೆ ಬಂದಿತ್ತು.

2. ಡಾಕ್ಟರ್ ಹೂ(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 25

From singham again to Bagheera christmas week ott streaming films and web series list

ನೆಟ್‌ಫ್ಲಿಕ್ಸ್

1. RRR ಬಿಹೈಂಡ್ ಅಂಡ್ ಬಿಯಾಂಡ್

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಎರಡು ವರ್ಷಗಳ ಹಿಂದೆ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಲೀಡ್ ರೋಲ್‌ಗಳಲ್ಲಿ ನಟಿಸಿ ಗೆದ್ದಿದ್ದರು. ಚಿತ್ರದ ಮೇಕಿಂಗ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಆ ಮೇಕಿಂಗ್ ಹೇಗಿತ್ತು ಎನ್ನುವುದನ್ನು ಡಾಕ್ಯುಮೆಂಟರಿ ರೂಪದಲ್ಲಿ ತೆರೆಗೆ ತರಲಾಗಿದೆ. ಕಳೆದ ವಾರ ಚಿತ್ರಮಂದಿರಗಳಲ್ಲಿ ಈ ಡಾಕ್ಯುಮೆಂಟರಿ ರಿಲೀಸ್ ಆಗಿತ್ತು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

3. ಭೂಲ್ ಭುಲಯ್ಯ-3

ಹಿಂದಿಯಲ್ಲಿ 'ಭೂಲ್ ಭುಲಯ್ಯ' ಸರಣಿ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದೆ. ಸರಣಿಯ 3ನೇ ಭಾಗ ದೀಪಾವಳಿ ಸಂಭ್ರಮದಲ್ಲಿ ತೆರೆಗಪ್ಪಳಿಸಿ ಗೆದ್ದಿತ್ತು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಅನೀಶ್ ಬಜ್ಮಿ ನಿರ್ದೇಶನದ ಕಾಮಿಡಿ ಹಾರರ್ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾಬಾಲನ್ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

3. ಸ್ಕ್ವಿಡ್‌ ಗೇಮ್ ಸೀಸನ್-2(ವೆಬ್ ಸೀರಿಸ್) ಡಿಸೆಂಬರ್ 26

4. ಆರಿಜಿನ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 25

5. ಯುವರ್ ಫ್ರೆಂಡ್ ನೇಟ್ ಬರ್ಗಟ್ಜೆ(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 24

6. ಸೊರ್ಗವಾಸಲ್(ಕನ್ನಡ ಡಬ್ಬಿಂಗ್ ಸಿನಿಮಾ) ಡಿಸೆಂಬರ್ 27

7. ಆಸ್ಟ್ರಾಯಿಡ್ ಸಿಟಿ(ಇಂಗ್ಲೀಷ್ ಸೀರಿಸ್) ಡಿಸೆಂಬರ್ 25

ಜೀ-5

1. ಖೋಜ್: ಪರ್ಚೈಯೋ ಕೆ ಉಸ್ಸ್ ಪಾರ್(ಹಿಂದಿ ಸಿನಿಮಾ) -ಡಿಸೆಂಬರ್ 27

ಅಮೇಜಾನ್ ಪ್ರೈಂ

1. ಸಿಂಗಂ ಅಗೇನ್

ದೀಪಾವಳಿ ಸಂಭ್ರಮದಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿದ ಸಿನಿಮಾ 'ಸಿಂಗಂ ಅಗೇನ್'. ತೆರೆಮೇಲೆ ಪ್ರೇಕ್ಷಕರನ್ನು ರಂಜಿಸಿದ ಈ ಮಲ್ಟಿಸ್ಟಾರರ್ ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಕರೀನಾ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಅಕ್ಷಯ್‌ಕುಮಾರ್, ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್, ಅರ್ಜುನ್ ಕಪೂರ್, ಟೈಗರ್ ಶ್ರಾಫ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

2. ಗ್ಲಾಡಿಯೇಟರ್-2(ಇಂಗ್ಲಿಷ್ ಸಿನಿಮಾ) ಡಿಸೆಂಬರ್ 25

3. ಥಾನಾರಾ(ಮಲಯಾಳಂ ಸಿನಿಮಾ) ಡಿಸೆಂಬರ್ 27

4. ಪಾರ್ಟಿ ಟಿಲ್ ಡೈ(ಹಿಂದಿ ಸೀರಿಸ್) ಡಿಸೆಂಬರ್ 24

5. ಚಿಫ್ಸಾಲಿಕ್(ಇಂಗ್ಲಿಷ್ ಸಿನಿಮಾ) ಡಿಸೆಂಬರ್ 24

More from Filmibeat

English summary
Ott Releases This Week; 20 + films and series to watch on Netflix, Prime Video, Hotstar and more;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X