OTT Releases This Week; ಈ ವಾರ 25ಕ್ಕೂ ಹೆಚ್ಚು ಚಿತ್ರಗಳು ಸ್ಟ್ರೀಮಿಂಗ್; ಇಂಟ್ರೆಸ್ಟಿಂಗ್ ಯಾವ್ದು ಅಂದ್ರೆ?

ಚಿತ್ರಮಂದಿರಗಳಲ್ಲಿ ಈಗ 'ಪುಷ್ಪ'-2 ಆರ್ಭಟ ಜೋರಾಗಿದೆ. ಸಿನಿಮಾ ಈಗಾಗಲೇ 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಈ ವಾರ ಕೂಡ ದೊಡ್ಡದಾಗಿ ಯಾವುದೇ ಸಿನಿಮಾ ತೆರೆಗೆ ಬರ್ತಿಲ್ಲ. ಸದ್ಯಕ್ಕೆ ಪುಷ್ಪರಾಜ್ ಆರ್ಭಟಕವೇ ಮುಂದುವರೆಯಲಿದೆ.

ಮುಂದಿನ ವಾರ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು, ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ. ಈಗಾಗಲೇ ಕೆಲ ಸಿನಿಮಾಗಳು ಸದ್ದಿಲ್ಲದೇ ಸ್ಟ್ರೀಮಿಂಗ್ ಆರಂಭಿಸಿವೆ.

From Singham Again to Thangalaan Latest Ott Release Movies amp amp web series list

ಕಳೆದ ವಾರ ಕನ್ನಡದ ಎರಡು ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದ್ದವು. 'ಮ್ಯಾಟ್ನಿ' ಸಿನಿಮಾ ಸನ್ ನೆಕ್ಸ್ಟ್‌ಗೆ ಬಂದಿದೆ. ಇನ್ನು 'ಮರ್ಫಿ' ಸಿನಿಮಾ ಪ್ರೈಂ ವೀಡಿಯೋಗೆ ಬಂದು ಅದ್ಭುತ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಈ ವೀಕೆಂಡ್ ಯಾವ ಭಾಷೆಯ ಯಾವ ಸಿನಿಮಾ ಓಟಿಟಿಗೆ ಬರ್ತಿದೆ ಮುಂದೆ ಓದಿ.

ಅಮೇಜಾನ್ ಪ್ರೈಂ

1. ಕಂಗುವ(ಕನ್ನಡ ಡಬ್ಬಿಂಗ್)

ಸೂರ್ಯ ನಟನೆಯ 'ಕಂಗುವ' ಸಿನಿಮಾ ಕಳೆದ ವಾರದ ಕೊನೆಗೆ ಓಟಿಟಿಗೆ ಬಂದಿತ್ತು. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಣೆ ಲಭ್ಯವಿದೆ. ನವೆಂಬರ್ 15ಕ್ಕೆ ತೆರೆಗೆ ಬಂದಿದ್ದ ಫ್ಯಾಂಟಸಿ ಕಾಸ್ಟ್ಯೂಮ್ ಡ್ರಾಮಾ ಬಹಳ ಟೀಕೆಗೆ ಗುರಿಯಾಗಿತ್ತು. ನಿರ್ಮಾಪಕರಿಗೆ ಭಾರೀ ನಷ್ಟವನ್ನು ತಂದೊಡ್ಡಿದೆ. ಇದೀಗ ಓಟಿಟಿಗೆ ಬಂದು ವೀಕ್ಷಕರನ್ನು ರಂಜಿಸುತ್ತಿದೆ. ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿದೆ.

2. ಸಿಂಗಂ ಅಗೇನ್(ಹಿಂದಿ ಸಿನಿಮಾ)

ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ 'ಸಿಂಗಂ ಅಗೇನ್' ಸಿನಿಮಾ ಡಿಸೆಂಬರ್ 12ಕ್ಕೆ ಓಟಿಟಿಗೆ ಬರ್ತಿದೆ. ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಸಿಗಲಿದೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಬಾಲಿವುಡ್ ಬಡಾ ಸ್ಟಾರ್‌ಗಳು ನಟಿಸಿದ್ದಾರೆ. ಅಜಯ್ ದೇವಗನ್ ಜೊತೆಗೆ ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಆರ್ಜುನ್ ಕಪೂರ್ ಚಿತ್ರದಲ್ಲಿದ್ದಾರೆ. ರವಿಬಸ್ರೂರು ಚಿತ್ರಕ್ಕೆ ಬಿಜಿಎಂ ಕಂಪೋಸ್ ಮಾಡಿದ್ದಾರೆ.

3. ಸೀಕ್ರೆಟ್ ಲೆವೆಲ್(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 10

4. ಬಂಡೀಸ್ ಬಂಡಿಟ್ಸ್ ಸೀಸನ್-2(ಹಿಂದಿ ವೆಬ್ ಸೀರಿಸ್) ಡಿಸೆಂಬರ್ 13

ನೆಟ್‌ಫ್ಲಿಕ್ಸ್

1. ತಂಗಲಾನ್(ಕನ್ನಡ ಡಬ್ಬಿಂಗ್)

ವಿಕ್ರಂ ನಟನೆಯ 'ತಂಗಲಾನ್' ಸಿನಿಮಾ ಅಂತೂ ಇಂತೂ ಓಟಿಟಿಗೆ ಬಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಸಿನಿಮಾ ತೆರೆಕಂಡು ಬರೋಬ್ಬರಿ 17 ವಾರಗಳ ಬಳಿಕೆ ಓಟಿಟಿಗೆ ಬಂದಂತಾಗಿದೆ. ಪಾ. ರಂಜಿತ್ ನಿರ್ದೇಶನದ ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.

'ತಂಗಲಾನ್' ಸಿನಿಮಾ ನೋಡಿ ಕೆಲವರು ಅದ್ಭುತ ಎಂದು ಬಣ್ಣಿಸಿದ್ದರು. ಮತ್ತೆ ಕೆಲವರು ಚೆನ್ನಾಗಿಲ್ಲ ಎಂದಿದ್ದರು. ಇದೀಗ ಓಟಿಟಿಯಲ್ಲಿ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಚಿತ್ರದಲ್ಲಿ ವಿಕ್ರಂ, ಪಾರ್ವತಿ ಮೆನನ್ ಹಾಗೂ ಮಾಳವಿಕಾ ಮೋಹನನ್ ನಟಿಸಿದ್ದಾರೆ. ಕರ್ನಾಟಕ-ತಮಿಳುನಾಡು ಗಡಿಯ ಬುಡಕಟ್ಟು ಜನರನ್ನು ಬಳಸಿಕೊಂಡು ಬ್ರಿಟೀಷರು ಕೆಜಿಎಫ್ ಚಿನ್ನದ ಗಣಿ ಹುಡುಕಿದ ಕಾಲ್ಪನಿಕ ಕಥೆ ಚಿತ್ರದಲ್ಲಿದೆ.

2. ಜೆಮಿಯಾ ಫಾಕ್ಸ್ (ಇಂಗ್ಲೀಷ್ ಸಿನಿಮಾ) - ಡಿಸೆಂಬರ್ 10

3. ಪೋಲೋ (ಇಂಗ್ಲೀಷ್ ವೆಬ್ ಸೀರಿಸ್) - ಡಿಸೆಂಬರ್ 10

4. ಮೆಕಾಲೆಸ್ ವಾಯ್ಸ್ (ಇಂಗ್ಲೀಷ್ ಸಿನಿಮಾ) - ಡಿಸೆಂಬರ್ 11

5. ಗ್ರೇಟ್ ಬ್ರಿಟಿಷ್ ಬೇಕಿಂಗ್ ಶೋ ಹಾಲಿಡೇಸ್ ಸೀಸನ್ 7 (ಇಂಗ್ಲೀಷ್ ವೆಬ್ ಸೀರಿಸ್) - ಡಿಸೆಂಬರ್ 9

6. ಮಾರಿಯಾ (ಇಂಗ್ಲೀಷ್ ಸಿನಿಮಾ) - ಡಿಸೆಂಬರ್ 11

7. ಕ್ವೀರ್: ಐ ಸೀಸನ್ 9 (ಇಂಗ್ಲಿಷ್ ವೆಬ್ ಸೀರಿಸ್) - ಡಿಸೆಂಬರ್ 11

8. ದಿ ಕಿಂಗ್ಸ್ ಆಫ್ ಟ್ಯೂಪ್ (ಇಂಗ್ಲಿಷ್ ವೆಬ್ ಸೀರಿಸ್) - ಡಿಸೆಂಬರ್ 11

9. ಕ್ಯಾರಿ ಆನ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 13

10. ಡಿಸಾಸ್ಟರ್ ಹಾಲಿಡೇ(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 13

11. ನೋ ಗುಡ್ ಡಿಡ್(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 12

ಹಾಟ್‌ಸ್ಟರ್

1. ಹರಿಕಥ(ತೆಲುಗು ವೆಬ್ ಸೀರಿಸ್) ಡಿಸೆಂಬರ್ 13

2. ಡ್ರೀಮ್ ಪ್ರೊಡಕ್ಷನ್ಸ್(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 11

3. ಎಲ್ಟನ್ ಜಾನ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 13

ಸೋನಿ ಲಿವ್

1. ಬೌಗೆನ್ವಿಲ್ಲಾ(ಕನ್ನಡ ಡಬ್ಬಿಂಗ್ ಸಿನಿಮಾ)

More from Filmibeat

English summary
Ott Releases This Week; Singham Again, Thangalaan, harikatha, Bougainvillea and more movies and series streaming in ott;
Read more about: ott tollywood kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X