OTT releases this week: ಈ ವಾರ ಓಟಿಟಿಯಲ್ಲಿ 15 ಸಿನಿಮಾ, ವೆಬ್ ಸೀರಿಸ್ ಮಿಸ್‌ ಮಾಡ್ಬೇಡಿ

ದೇಶದಲ್ಲಿ ಎಲೆಕ್ಷನ್, ಐಪಿಎಲ್ ಕಾವು ಹೆಚ್ಚಾಗುತ್ತಿದ್ದಂತೆ ದೊಡ್ಡ ಸಿನಿಮಾಗಳು ಥಿಯೇಟರ್‌ಗೆ ಬರಲು ಹಿಂದೇಟು ಹಾಕುತ್ತಿದೆ. ಈಗಾಗಲೇ ಘೋಷಣೆ ಆಗಿದ್ದ ಸಿನಿಮಾಗಳ ರಿಲೀಸ್ ಡೇಟ್ ಸಹ ಮುಂದೂಡಲಾಗುತ್ತಿದೆ. ಜೂನ್ 15ರ ಬಳಿಕವೇ ದೊಡ್ಡ ಸಿನಿಮಾಗಳನ್ನು ತೆರೆಗೆ ತರುವ ಲೆಕ್ಕಾಚಾರ ಶುರುವಾಗಿದೆ.

ಕನ್ನಡದಲ್ಲಿ 'ಯುಐ', 'ಭೀಮ', 'ಮಾರ್ಟಿನ್', 'ಮ್ಯಾಕ್ಸ್' ಹೀಗೆ ದೊಡ್ಡ ಸಿನಿಮಾಗಳು ಎಲೆಕ್ಷನ್ ಮುಗಿಯುವುದನ್ನು ಕಾಯುತ್ತಿವೆ. ಈ ವರ್ಷ 70ಕ್ಕೂ ಅಧಿಕ ಸಿನಿಮಾಗಳು ಬಂದೋಗಿವೆ. ಇನ್ನು ಓಟಿಟಿಯಲ್ಲಿ ಕೂಡ ದೊಡ್ಡ ಸಿನಿಮಾಗಳ ಬರ ಎದುರಿಸುವಂತಾಗಿದೆ. ಇತ್ತೀವೆಗೆ ಕೆಲ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು ಡಿಜಿಟಲ್ ಸ್ಟ್ರೀಮಿಂಗ್ ತಡವಾಗುತ್ತಿದೆ.

from Siren to Article 370 this week OTT release movies web series list

ಕನ್ನಡದಲ್ಲಿ ಸದ್ಯಕ್ಕೆ ಈ ವಾರ ಯಾವುದೇ ಸಿನಿಮಾ, ವೆಬ್‌ ಸೀರಿಸ್ ಓಟಿಟಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿರುವ ಕೆಲ ಸಿನಿಮಾ ಓಟಿಟಿಯಲ್ಲಿ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಆದರೆ ರಿಲೀಸ್ ಡೇಟ್ ಘೋಷಣೆಯಾಗಿಲ್ಲ. ಇನ್ನುಳಿದಂತೆ ಈ ವಾರ ಓಟಿಟಿಗೆ ಸ್ಟ್ರೀಮಿಂಗ್‌ಗೆ ಸಜ್ಜಾಗಿರುವ ಸಿನಿಮಾ, ವೆಬ್‌ ಸೀರಿಸ್ ಲಿಸ್ಟ್ ಇಲ್ಲಿದೆ ನೋಡಿ.

ಜೀ-5

1. ಕಾಮ್ ಚಾಲು ಹೈ(ಹಿಂದಿ ಸಿನಿಮಾ) ಏಪ್ರಿಲ್ 19

2. ಡಿಮಾನ್ಸ್(ಹಿಂದಿ ಸಿನಿಮಾ) ಏಪ್ರಿಲ್ 19

3. ಸೈಲೆನ್ಸ್ 2: ದಿ ನೈಟ್ ಔಲ್ ಬಾರ್ ಶೂಟೌಟ್ (ಹಿಂದಿ ಸಿನಿಮಾ) ಏಪ್ರಿಲ್ 16

ನೆಟ್‌ಫ್ಲಿಕ್ಸ್

1. ಅವರ್ ಲಿವಿಂಗ್ ವರ್ಲ್ಡ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 17

2. ಎನಿವನ್ ಬಟ್ ಯೂ(ಇಂಗ್ಲೀಷ್ ಸಿನಿಮಾ) ಏಪ್ರಿಲ್ 15

3. ದಿ ಗ್ರೀಮ್ ವೇರಿಯೇಷನ್ಸ್(ಜಪಾನಿ ಸೀರಿಸ್) ಏಪ್ರಿಲ್ 17

4. ರೆಬಲ್ ಮೂನ್: ಪಾರ್ಟ್-2 (ಇಂಗ್ಲೀಷ್ ಸಿನಿಮಾ) ಏಪ್ರಿಲ್ 19

from Siren to Article 370 this week OTT release movies web series list

ಹಾಟ್‌ಸ್ಟರ್

1. ಸಿರೇನ್

ತಮಿಳು ಆಕ್ಷನ್ ಥ್ರಿಲ್ಲರ್ 'ಸಿರೇನ್' ಸಿನಿಮಾ ಈ ವಾರ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆಂಟೋನಿ ಭಾಗ್ಯರಾಜ್ ನಿರ್ದೇಶದ ಚಿತ್ರದಲ್ಲಿ ಜಯಂ ರವಿ ಹಾಗೂ ಕೀರ್ತಿ ಸುರೇಶ್ ನಟಿಸಿದ್ದಾರೆ. ಫೆಬ್ರವರಿ 16ಕ್ಕೆ ತೆರಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಲಿಲ್ಲ.

2. ದಿ ಸೀಕ್ರೆಟ್ ಸ್ಕೋರ್(ಸ್ಪ್ಯಾನಿಶ್ ಸೀರಿಸ್) ಏಪ್ರಿಲ್ 17

3. ಸೀ ಯೂ ಇನ್ ಎನದರ್ ಲೈಫ್(ಸ್ಪ್ಯಾನಿಶ್ ಸೀರಿಸ್) ಏಪ್ರಿಲ್ 17

4. ಚೀಫ್ ಡಿಟೆಕ್ಟಿವ್ 1958 (ಕೊರಿಯನ್ ಸೀರಿಸ್) ಏಪ್ರಿಲ್ 17

ಜಿಯೋ ಸಿನಿಮಾ

1. ಆರ್ಟಿಕಲ್ 370

ಬಾಲಿವುಡ್ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ 'ಆರ್ಟಿಕಲ್ 370' ಸಿನಿಮಾ ಏಪ್ರಿಲ್ 19ಕ್ಕೆ ಓಟಿಟಿಗೆ ಬರ್ತಿದೆ. ಆದಿತ್ಯಾ ಸುಹಾಸ್ ಜಾಂಬಲೆ ನಿರ್ದೇಶನದ ಈ ಚಿತ್ರದಲ್ಲಿ ಯಾಮಿ ಗೌತಮ್ ಹಾಗೂ ಪ್ರಿಯಾಮಣಿ ನಟಿಸಿದ್ದಾರೆ. ಫೆಬ್ರವರಿ 23ಕ್ಕೆ ತೆರೆಕಂಡಿದ್ದ ಸಿನಿಮಾ ಒಂದು ಹಂತಕ್ಕೆ ಸಕ್ಸಸ್ ಕಂಡಿತ್ತು. ಇದೀಗ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ.

2. ದಿ ಸಿಂಪಥೈಸರ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 15

3. ಓರ್ಲಾಂಡೊ ಬ್ಲೂಮ್: ಟು ದಿ ಎಡ್ಜ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 19

ಬುಕ್‌ಮೈ ಶೋ

1. ಡ್ಯೂನ್ ಪಾರ್ಟ್-2(ಇಂಗ್ಲೀಷ್ ಸಿನಿಮಾ) ಏಪ್ರಿಲ್ 16

More from Filmibeat

English summary
OTT platform movies and web series releasing this week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X