OTT Releases This week: 'ಸು ಫ್ರಮ್ ಸೋ' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್

"13 ವರ್ಷಗಳ ಹಿಂದೆ ಓಟಿಟಿ ಬಗ್ಗೆ ಕಮಲ್ ಹಾಸನ್ ಸರ್ ಮಾತನಾಡುತ್ತಿದ್ದರು. ಆಗ ಎಲ್ಲರಿಗೂ ಅದು ಹೊಸದು ಅನ್ನಿಸಿತ್ತು. ಈಗ ಓಟಿಟಿ ಬ್ಯುಸಿನೆಸ್ ಆಗದೇ ಸಿನಿಮಾ ಬಿಡುಗಡೆ ಸಾಧ್ಯವಿಲ್ಲ ಎನ್ನುವಂತಾಗಿದೆ" ಎಂದು ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಹೇಳಿದ್ದಾರೆ. ಇತ್ತೀಚೆಗೆ ಓಟಿಟಿ ಅಷ್ಟು ಮಹತ್ವ ಪಡೆದುಕೊಂಡಿದೆ.

ದೊಡ್ಡ ದೊಡ್ಡ ಸಿನಿಮಾಗಳೇ ಬಹಳ ಬೇಗ ಓಟಿಟಿಗೆ ಬರ್ತಿದೆ. ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರುತ್ತೆ ಎನ್ನುವ ಚರ್ಚೆ ಶುರುವಾಗಿದೆ. ಕನ್ನಡ ಸೂಪರ್ ಹಿಟ್ 'ಸು ಫ್ರಮ್ ಸೋ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ.

From Su From so to Kannappa This week Ott streaming movies list

ಈ ವಾರ ಚಿತ್ರಮಂದಿರಗಳಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಇತ್ತ ಓಟಿಟಿಯಲ್ಲಿ ಕೂಡ ಕೆಲ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸಲು ಸಜ್ಜಾಗಿದೆ. ಅಂತಹ ಸಿನಿಮಾಗಳ ಲಿಸ್ಟ್ ಮುಂದೆ ಓದಿ.

1. ಸು ಫ್ರಮ್ ಸೋ

ಕನ್ನಡದ ಸೂಪರ್ ಹಿಟ್ 'ಸು ಫ್ರಮ್ ಸೋ' ಸಿನಿಮಾ ಈ ವೀಕೆಂಡ್ ಓಟಿಟಿಗೆ ಬರಲಿದೆ. ಸೆಪ್ಟೆಂಬರ್ 5 ಅಥವಾ 8ರಂದು ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತದೆ ಎಂದು ಸ್ವತಃ ರಾಜ್ ಬಿ ಶೆಟ್ಟಿ ಮಾಹಿತಿ ನೀಡಿದ್ದಾರೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರದರ್ಶನ ಆಗಲಿದೆ.

From Su From so to Kannappa This week Ott streaming movies list

ಜೆ.ಪಿ ತುಮ್ಮಿನಾಡ್ ನಿರ್ದೇಶನದ ಕಾಮಿಡಿ ಸಿನಿಮಾ 'ಸು ಫ್ರಮ್ ಸೋ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ತೆಲುಗು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಪ್ರೇಕ್ಷಕರನ್ನು ರಂಜಿಸಿದೆ. ವಿಶ್ವದಾದ್ಯಂತ 120 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. ಸಣ್ಣ ಸಿನಿಮಾವೊಂದು ತೆರೆಮೇಲೆ ಅಕ್ಷರಶಃ ಮ್ಯಾಜಿಕ್ ಮಾಡಿದೆ.

2. ಕಣ್ಣಪ್ಪ

ತೆಲುಗಿನ ಭಕ್ತಿಪ್ರಧಾನ ಸಿನಿಮಾ 'ಕಣ್ಣಪ್ಪ' ಇದೇ ಗುರುವಾರ(ಸೆಪ್ಟೆಂಬರ್ 4) ಸ್ಮಾಲ್‌ ಸ್ಕ್ರೀನ್‌ಗೆ ಬರ್ತಿದೆ. ಈ ಬಗ್ಗೆ ನಟ ಮಂಚು ವಿಷ್ಣು ಮಾಹಿತಿ ನೀಡಿದ್ದಾರೆ. ಜೂನ್ 27ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಪ್ರಭಾಸ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು.

ಡಾ. ರಾಜ್‌ಕುಮಾರ್ ನಟನೆಯ 'ಬೇಡರ ಕಣ್ಣಪ್ಪ' ಹಾಗೂ ಶಿವರಾಜ್‌ಕುಮಾರ್ ನಟನೆಯ 'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರಗಳ ಕಥೆ ಈ ಚಿತ್ರದಲ್ಲೂ ಇದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಓಟಿಟಿ ಮಂದಿ ಸಿನಿಮಾ ಖರೀದಿಸಲು ಹಿಂದೇಟು ಹಾಕಿದ್ದರು. ಬರೋಬ್ಬರಿ 2 ತಿಂಗಳ ಬಳಿಕ ಸಿನಿಮಾ ಪ್ರೈಂ ವೀಡಿಯೋದಲ್ಲಿ ಬಿಡುಗಡೆ ಆಗ್ತಿದೆ. ಕನ್ನಡಕ್ಕೂ ಡಬ್ ಆಗಿ ಬರ್ತಿದೆ.

3. ಕೊತ್ತಲವಾಡಿ

ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಸೆಪ್ಟೆಂಬರ್ 5ರಂದು ಸಿನಿಮಾ ಓಟಿಟಿಗೆ ಬರ್ತಿದೆ, ವಿಶೇಷ ಅಂದ್ರೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗಿ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

4. ಸರೆಂಡರ್

ಥರ್ಶನ್, ಸುಜಿತ್ ಶಂಕರ್ ನಟನೆಯ ತಮಿಳಿನ 'ಸರೆಂಡರ್' ಸಿನಿಮಾ ಸೆಪ್ಟೆಂಬರ್ 4ರಂದು ಸನ್‌ ನೆಕ್ಸ್ಟ್‌ ಓಟಿಟಿಗೆ ಬರ್ತಿದೆ. ಪೊಲೀಸ್ ತನಿಖೆ ಆಧರಿತ ಚಿತ್ರಕ್ಕೆ ಗೌತಮನ್ ಗಣಪತಿ ಆಕ್ಷನ್ ಕಟ್ ಹೇಳಿದ್ದಾರೆ. ಆಗಸ್ಟ್ 1ರಂದು ಸಿನಿಮಾ ತೆರೆಗೆ ಬಂದಿತ್ತು. ತಿಂಗಳ ಅಂತರದಲ್ಲಿ ಇದೀಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದೆ.

5. ಫುಟೇಜ್

ಮಂಜು ವಾರಿಯರ್ ನಟನೆಯ ಥ್ರಿಲ್ಲರ್ ಸಿನಿಮಾ 'ಫುಟೇಜ್' ಕೂಡ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಸೆಪ್ಟೆಂಬರ್ 5ರಂದು ಸನ್ ನೆಕ್ಸ್ಟ್ ವೇದಿಕೆಗೆ ಸಿನಿಮಾ ಅಪ್‌ಲೋಡ್ ಆಗಲಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಈ ಸಿನಿಮಾ ತೆರೆಗಪ್ಪಳಿಸಿತ್ತು. ಸೈಜು ಶ್ರೀಧರನ್ ನಿರ್ದೇಶನ ಚಿತ್ರಕ್ಕಿದೆ.

ಇನ್ನುಳಿದಂತೆ ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿ ಸಿನಿಮಾ 'ಇನ್ಸ್‌ಪೆಕ್ಟರ್ ಝೆಂಡೆ' ಹಾಗೂ ಇಂಗ್ಲೀಷ್ ಸಿನಿಮಾ 'ದಿ ಫಾಲ್ ಗಾಯ್' ಈ ವೀಕೆಂಡ್ ಓಟಿಟಿಗೆ ಬರ್ತಿದೆ. ಜೀ-5ನಲ್ಲಿ 'ಆಂಖೋ ಕಿ ಗುಸ್ತಾಖಿಯಾನ್' ಹಿಂದಿ ಸಿನಿಮಾ ಮತ್ತು 'ಕಮ್ಮಟ್ಟಂ' ಎಂಬ ಮಲಯಾಳಂ ವೆಬ್ ಸೀರಿಸ್ ಬಿಡುಗಡೆ ಆಗಲಿದೆ.

More from Filmibeat

English summary
OTT releases this week: latest movies, web series to watch online; Inspector Zende, Footage, Kannappa, su from So and more;
Read more about: raj b shetty sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X