ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ; ಹೊಟ್ಟೆ ಹುಣ್ಣಾಗುವಂತೆ ನಗಿಸೋ ಕನ್ನಡ ಚಿತ್ರ ಕೂಡ ಇದೆ
ಐಪಿಎಲ್ ಆರ್ಭಟದ ನಡುವೆ ಚಿತ್ರರಂಗ ಕೊಂಚ ಡಲ್ ಆಗಿದೆ. ಏಪ್ರಿಲ್ ಕೊನೆಗೆ ಕನ್ನಡದ 'KD' ಸೇರಿದಂತೆ ಕೆಲ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಈ ವಾರ 'ಕೋಟಿಗೊಬ್ಬ' ಸಿನಿಮಾ ರೀ-ರಿಲೀಸ್ ಆಗ್ತಿದೆ. ಇನ್ನುಳಿದಂತೆ 'ಗ್ಯಾಂಗ್ಸ್ ಆಫ್ ಯುಕೆ', 'ಟೆರರ್', 'ಪೀಟರ್', 'ಕ್ಯಾಲೆಂಡರ್' ಎಂಬ ಕನ್ನಡ ಸಿನಿಮಾಗಳು ಬಿಡುಗಡೆ ಆಗ್ತಿದೆ.
ಓಟಿಟಿಯಲ್ಲಿ ಈ ವೀಕೆಂಡ್ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆರಂಭಿಸುತ್ತಿವೆ. ತಮಿಳಿನ ಸೂಪರ್ ಹಿಟ್ 'ಥಾಯ್ ಕಿಳವಿ' ಸಿನಿಮಾ ಕೂಡ ಈ ಲಿಸ್ಟ್‌ನಲ್ಲಿದೆ. ಕನ್ನಡದ ಒಂದು ಕಾಮಿಡಿ ಎಂಟರ್‌ಟೈನರ್ ಸಿನಿಮಾ ಕೂಡ ಓಟಿಟಿಗೆ ಬಂದಿದೆ.

ಐಪಿಎಲ್ ದರ್ಬಾರ್ ನಡುವೆ ಸಿನಿರಸಿಕರು ಮನರಂಜನೆಗಾಗಿ ಓಟಿಟಿಯನ್ನು ನೆಚ್ಚಿಕೊಳ್ಳುವಂತಾಗಿದೆ. ದೊಡ್ಡ ಸಿನಿಮಾಗಳು ತೆರೆಗೆ ಬರದೇ ಇರುವುದು ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿರುವ ಸಿನಿಮಾ, ವೆಬ್ ಸೀರಿಸ್ ಲಿಸ್ಟ್ ಮುಂದೆ ಓದಿ.
1. ಥಾಯ್ ಕಿಳವಿ
ತಮಿಳಿನ 'ಥಾಯ್ ಕಿಳವಿ' ಸಿನಿಮಾ ಕನ್ನಡಕ್ಕೂ ಡಬ್ ಆಗಿ ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ರಾಧಿಕಾ ಶರತ್‌ಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಂದಾಜು 10 ಕೋಟಿ ರೂ. ಬಜೆಟ್ ಸಿನಿಮಾ 80 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ದಾಖಲೆ ಬರೆದಿತ್ತು. ಈ ವರ್ಷ ಮೊದಲ ಹಿಟ್ ತಮಿಳು ಸಿನಿಮಾ ಎನಿಸಿಕೊಂಡಿದೆ.

ಶಿವಕುಮಾರ್ ಮುರುಗೇಶನ್ ನಿರ್ದೇಶನದ ಈ ಕಾಮಿಡಿ ಡ್ರಾಮಾ ಸಿನಿಮಾ ಫೆಬ್ರವರಿ 27ಕ್ಕೆ ತೆರೆಗೆ ಬಂದಿತ್ತು. ಹಳ್ಳಿಯೊಂದರ ವೃದ್ಧ ಮಹಿಳೆಯ ಸುತ್ತಾ ಚಿತ್ರದ ಕಥೆ ಸಾಗುತ್ತದೆ. ಬಡ್ಡಿ ವ್ಯವಹಾರ ಮಾಡುತ್ತಾ ಹಳ್ಳಿಯಲ್ಲಿ ಡಾನ್ ರೀತಿ ಅಬ್ಬರಿಸುವ ಪವುನುತಾಯಿ(ರಾಧಿಕಾ ಶರತ್‌ಕುಮಾರ್) ಪಾರ್ಶ್ವವಾಯು ಸಮಸ್ಯೆಯಿಂದ ಹಾಸಿಗೆ ಹಿಡಿದ ಬಳಿಕ ನಡೆಯುವ ಘಟನೆಗಳೇ ಚಿತ್ರದ ಕಥೆ.
2. ಅಮೃತ ಅಂಜನ್
ಯೂಟ್ಯೂಬ್‌ನಲ್ಲಿ 'ಅಮೃತ ಅಂಜನ್' ಶಾರ್ಟ್ ಮೂವಿ ವೀಡಿಯೋಗಳು ಸಖತ್ ಸದ್ದು ಮಾಡಿತ್ತು. ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಅದೇ ಕಾನ್ಸೆಪ್ಟ್‌ನಲ್ಲಿ ಅದೇ ಟೈಟಲ್‌ನಲ್ಲಿ ಸಿನಿಮಾ ಮಾಡಿ ತಂಡ ಗೆದ್ದಿತ್ತು. ಸುಧಾಕರ್ ಗೌಡ, ಪಾಯಲ್ ಚಂಗಪ್ಪ, ಗೌರವ್ ಶೆಟ್ಟಿ, ಶ್ರೀಭವ್ಯ, ಕಾರ್ತಿಕ್ ಚಿತ್ರದಲ್ಲಿ ನಟಿಸಿದ್ದಾರೆ. ನಟ ಯಶ್ ಕೂಡ ಚಿತ್ರತಂಡಕ್ಕೆ ಶುಭ ಕೋರಿದ್ದರು.
ಕಾಮಿಡಿ ಜೊತೆ ಜೊತೆಗೆ ಒಂದೊಳ್ಳೆ ಸಂದೇಶ ಕೂಡ 'ಅಮೃತ ಅಂಜನ್' ಚಿತ್ರದಲ್ಲಿದೆ. ಜನವರಿ 30ರಂದು ತೆರೆಗೆ ಬಂದಿದ್ದ ಸಿನಿಮಾ ಈಗ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
3. ಓ ರೊಮಿಯೊ
ಶಾಹಿದ್ ಕಪೂರ್ ಹಾಗೂ ತ್ರಿಪ್ತಿ ದಿಮ್ರಿ ನಟನೆಯ ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಓ ರೊಮಿಯೊ' ಪ್ರೈಂ ವಿಡಿಯೋಗೆ ಬಂದಿದೆ. ವಿಶಾಲ್ ಭಾರಧ್ವಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಎರಡು ತಿಂಗಳ ನಂತರ ಓಟಿಟಿ ಸ್ಟ್ರೀಮಿಂಗ್ ಆರಂಭಿಸಿದೆ.
ಪ್ರೈಂ ವೀಡಿಯೋ
1. ದಿ ಬಾಯ್ಸ್ ಸೀಸನ್-5(ವೆಬ್ ಸೀರಿಸ್) ಏಪ್ರಿಲ್ 8
2. ಕ್ಯಾಂಡಿ ಅಂಡ್ ದಿ ಪಿಜ್ಜಾ ಗರ್ಲ್(ಹಿಂದಿ ಸಿನಿಮಾ) ಏಪ್ರಿಲ್ 10
ಜೀ-5
1. ಖಾಕಿ ಸರ್ಕಸ್(ತಮಿಳು ಸೀರಿಸ್) ಏಪ್ರಿಲ್ 10
ಸನ್ ನೆಕ್ಸ್ಟ್
1. ಕನಿಮಂಗಳಂ ಕೊವಿಲಕಮ್(ಮಲಯಾಳಂ ಸಿನಿಮಾ) ಏಪ್ರಿಲ್ 10
2. ಹಾಲ್(ಮಲಯಾಳಂ ಸಿನಿಮಾ) ಏಪ್ರಿಲ್ 10
ನೆಟ್‌ಫ್ಲಿಕ್ಸ್
1. 18th ರೋಜ್(ಫಿಲಿಫೈನ್ಸ್ ಸಿನಿಮಾ) ಏಪ್ರಿಲ್ 9
2. ಬೀಫ್ ಸೀಸನ್-2(ಇಂಗ್ಲೀಷ್ ಸೀರಿಸ್) ಏಪ್ರಿಲ್ 8
3. ಬಿಗ್ ಮಿಸ್ಟೇಕ್ಸ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 9
4. ತು ಯಾ ಮೈ(ಹಿಂದಿ ಸಿನಿಮಾ) ಏಪ್ರಿಲ್ 10
5. ಬಿಗ್ ಮಿಸ್ಟೇಕ್ಸ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 9
6. ಟರ್ನ್ ಆಫ್ ದಿ ಟೈಡ್- ಸೀಸನ್-3(ಇಂಗ್ಲೀಷ್ ಸೀರಿಸ್) ಏಪ್ರಿಲ್ 10


Click it and Unblock the Notifications











