Ott Releases This Week: ಈ ವಾರ ಓಟಿಟಿಗೆ ಬರ್ತಿರೋ ಹಿಟ್ ಚಿತ್ರಗಳ ಪಟ್ಟಿ; ಕನ್ನಡ ಚಿತ್ರಗಳು ಇವೆ

ಒಂದು ತಿಂಗಳಿಂದ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಸಿಗುತ್ತಿದೆ. 'ಎಕ್ಕ', 'ಸು ಫ್ರಂ ಸೋ', 'ಜ್ಯೂನಿಯರ್', 'ಹರಿಹರ ವೀರಮಲ್ಲು', 'ಮಹಾವತಾರ್ ನರಸಿಂಹ', 'ಕಿಂಗ್‌ಡಮ್‌', 'ಕೂಲಿ' ಹಾಗೂ 'ವಾರ್- 2' ಸೇರಿ ಹಲವು ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿವೆ.

ಕನ್ನಡದ ಹೊಸಬರ ಸಿನಿಮಾ 'ಸು ಫ್ರಂ ಸೋ' 100 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ಬರೋಬ್ಬರಿ 200 ಕೋಟಿ ರೂ. ಗಳಿಕೆ ಕಂಡು ಹುಬ್ಬೇರಿಸಿದೆ. ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ನುಗ್ಗಿ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಕಳೆದ ವಾರ 'ಕೂಲಿ' ಹಾಗೂ 'ವಾರ್- 2' ಚಿತ್ರಗಳು ಮಿಶ್ರಪ್ರತಿಕ್ರಿಯೆ ಪಡೆದಿವೆ. ಇನ್ನು ತೆರೆಗೆ ಬಂದು ಸದ್ದು ಮಾಡಿದ ಸಿನಿಮಾಗಳ ಜೊತೆಗೆ ಓಟಿಟಿಯಲ್ಲಿ ಒಂದಷ್ಟು ಸಿನಿಮಾ, ವೆಬ್ ಸೀರಿಸ್ ನೋಡುಗರನ್ನು ರಂಜಿಸಿವೆ.

From Thalaivan Thalaivii to shodha This Week Ott release Movies and web series list

ಈ ವಾರವೂ ಒಂದಷ್ಟು ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿವೆ. ಅದರಲ್ಲಿ ಕನ್ನಡ ಸಿನಿಮಾ, ವೆಬ್ ಸೀರಿಸ್ ಕೂಡ ಇದೆ. ಆಗಸ್ಟ್ 22ರಂದು ಹಿಟ್ ಸಿನಿಮಾಗಳು ಓಟಿಟಿ ಬರ್ತಿರೋದು ವಿಶೇಷ.

1. ಮಾರೀಸನ್(ಕನ್ನಡ ಡಬ್ಬಿಂಗ್ ಚಿತ್ರ)

ತಮಿಳು ಥ್ರಿಲ್ಲರ್ ಸಿನಿಮಾ 'ಮಾರೀಸನ್' ಆಗಸ್ಟ್ 22ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸುತ್ತಿದೆ. ವಡಿವೇಲು ಹಾಗೂ ಫಹಾದ್ ಫಾಸಿಲ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜುಲೈ 25ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸುದೀಶ್ ಶಂಕರ್ ನಿರ್ದೇಶನದ ಸಿನಿಮಾ ತಕ್ಕ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಇದೀಗ ಕನ್ನಡ ಸೇರಿ 5 ಭಾಷೆಗಳಲ್ಲಿ ಓಟಿಟಿಗೆ ಬರ್ತಿದೆ.

2. ಮಾ

ಬಾಲಿವುಡ್ ಮೈಥಲಾಜಿಕಲ್ ಹಾರರ್ ಸಿನಿಮಾ 'ಮಾ' ಚಿತ್ರ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಜೂನ್ 27ಕ್ಕೆ ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ವಿಶಾಲ್ ಫೂರಿಯಾ ನಿರ್ದೇಶನದ ಚಿತ್ರದಲ್ಲಿ ಕಾಜೋಲ್, ರೋನಿತ್ ರಾಯ್ ಪ್ರಧಾಣ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಆಗಸ್ಟ್ 22ರಂದು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.

From Thalaivan Thalaivii to shodha This Week Ott release Movies and web series list

3. ತಲೈವನ್ ತಲೈವಿ

ವಿಜಯ್ ಸೇತುಪತಿ ಹಾಗೂ ನಿತ್ಯಾ ಮೆನನ್ ನಟನೆಯ ಸಿನಿಮಾ 'ತಲೈವನ್ ತಲೈವಿ'. ಜುಲೈ 25ಕ್ಕೆ ಈ ಚಿತ್ರ ಕೂಡ ತೆರೆಗೆ ಬಂದಿತ್ತು. ಗಂಡ- ಹೆಂಡತಿ ದಾಂಪತ್ಯ, ಜಗಳ, ನೋವು ನಲಿವಿನ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ಪಾಂಡಿರಾಜ್ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಆಗಸ್ಟ್ 22ಕ್ಕೆ ಪ್ರೈಂ ವೀಡಿಯೋದಲ್ಲಿ ಈ ಸಿನಿಮಾ ನೋಡಬಹುದು.

4. ಶೋಧ

ಕನ್ನಡದಲ್ಲಿ ವೆಬ್ ಸೀರಿಸ್ ನಿರ್ಮಾಣ ಕಮ್ಮಿ ಎನ್ನುವ ಆರೋಪ ಪದೇ ಪದೆ ಕೇಳಿಬರುತ್ತಿದೆ. 'ಅಯ್ಯನ ಮನೆ' ಶೋಧ ಎಂಬ ಮತ್ತೊಂದು ವೆಬ್ ಸೀರಿಸ್ ಈ ವಾರ ಜೀ 5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪವನ್ ಕುಮಾರ್, ಸಿರಿ ರವಿಕುಮಾರ್, ಅರುಣ್ ಸಾಗರ್, ಅನುಷಾ ರಂಗನಾಥ್ ತಾರಾಗಣದಲ್ಲಿದ್ದಾರೆ. ಸುನಿಲ್ ಮೈಸೂರು ನಿರ್ದೇಶನದ ಆರು ಸಂಚಿಕೆಗಳ ವೆಬ್ ಸೀರಿಸ್ ಆಗಸ್ಟ್ 22ಕ್ಕೆ ಬರ್ತಿದೆ.

5. ಕಪಟ ನಾಟಕ ಸೂತ್ರಧಾರಿ

ಜುಲೈ ಮೊದಲ ವಾರದಲ್ಲಿ 'ಕಪಟ ನಾಟಕ ಸೂತ್ರಧಾರಿ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಹೊಸಬರೇ ಸೇರಿ ಮಾಡಿದ್ದ ಸಿನಿಮಾ ಇದು. ವಿಎಸ್‌ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ಚಿತ್ರಕ್ಕೆ ಧೀರಜ್ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ಸನ್ ನೆಕ್ಸ್ಟ್ ಓಟಿಟಿಯಲ್ಲಿ ಸಿನಿಮಾ ಆಗಸ್ಟ್ 22ಕ್ಕೆ ರಿಲೀಸ್ ಆಗಲಿದೆ.

6. ಸಂಜು ವೆಡ್ಸ್ ಗೀತಾ-2

ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ 'ಸಂಜು ವೆಡ್ಸ್ ಗೀತಾ- 2' ಸಿನಿಮಾ ಕೊನೆಗೂ ಓಟಿಟಿಗೆ ಬರ್ತಿದೆ.. ಆಗಸ್ಟ್ 22ರಂದು ಪ್ರೈಂ ವೀಡಿಯೋದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ನಾಗಶೇಖರ್ ನಿರ್ದೇಶನದ ಸಿನಿಮಾ ತೆರೆಮೇಲೆ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಬಳಿಕ ರೀ-ರಿಲೀಸ್ ಕೂಡ ಆಗಿತ್ತು.

ಇನ್ನುಳಿದಂತೆ ಹಾಲಿವುಡ್ ಸಿನಿಮಾ 'ಮಿಷನ್: ಇಂಪಾಸಿಬಲ್- ದಿ ಫೈನಲ್ ರಿಕೊನಿಂಗ್' ಆಗಸ್ಟ್ 20ಕ್ಕೆ ಪ್ರೈಂ ವೀಡಿಯೋಗೆ ಬಂದಿದೆ. ಅಹಾ ಓಟಿಟಿಯಲ್ಲಿ 'ಕೊತ್ತಪಲ್ಲಿಲೊ ಒಕಪ್ಪುಡು' ಎಂದು ತೆಲುಗು ಸಿನಿಮಾ ಆಗಸ್ಟ್ 22ಎಂದು ರಿಲೀಸ್ ಆಗಲಿದೆ.

More from Filmibeat

English summary
Ott This Week; Shodha, Mission: Impossible – The Final Reckoning, Maa, Kothapallilo Okappudu, kapata nataka sutradhari; Interesting movies and web series releasing on ott This week;
Read more about: kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X