OTT Releases This Week: ಮಾರ್ಚ್ ಮೊದಲ ವಾರ ಓಟಿಟಿಯಲ್ಲಿ ಹಿಟ್ ಚಿತ್ರಗಳು, ಇಲ್ಲಿದೆ ಲಿಸ್ಟ್
ಕನ್ನಡದ ದೊಡ್ಡ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರಮಂದಿರಗಳು ಪ್ರೇಕ್ಷಕರ ಬರ ಎದುರಿಸುತ್ತಿವೆ. ಪರಭಾಷೆಯ ಸಿನಿಮಾಗಳೇ ರಾಜ್ಯದ ಚಿತ್ರಮಂದಿರಗಳನ್ನು ಆವರಿಸಿಕೊಂಡಿದೆ. ವಾರಕ್ಕೆ ಏಳೆಂಟು ಕನ್ನಡ ಸಿನಿಮಾಗಳು ಓಟಿಟಿಗೆ ಬರ್ತಿವೆ. ಆದರೆ ಯಾವುದೂ ಗೆಲ್ಲುತ್ತಿಲ್ಲ.
ಇತ್ತೀಚೆಗೆ ಬಂದ ಸಿನಿಮಾಗಳಲ್ಲಿ 'ವಿಷ್ಣುಪ್ರಿಯ' ಹಾಗೂ 'ಎಲ್ಲೋ ಜೋಗಪ್ಪ ನಿನ್ನರಮನೆ' ರೀತಿಯ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿವೆ. ಆದರೂ ದೊಡ್ಡದಾಗಿ ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ. ಓಟಿಟಿಯಲ್ಲಿ ಕೂಡ ಕನ್ನಡ ಸಿನಿಮಾಗಳ ಅಭಾವ ಎದ್ದು ಕಾಣುತ್ತಿದೆ. 'ಮ್ಯಾಕ್ಸ್', 'ಟೆನೆಂಟ್', 'ವಿಜಯಾನಂದ' ಚಿತ್ರಗಳ ಬಳಿಕ ಯಾವುದೇ ಸಿನಿಮಾ ಬಂದಿಲ್ಲ. ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ ಮುಂದೆ ಓದಿ.

ನೆಟ್‌ಫ್ಲಿಕ್ಸ್
1. ವೀಡಾಮುಯರ್ಚಿ(ಕನ್ನಡ ಡಬ್ಬಿಂಗ್ ಚಿತ್ರ)
ತಮಿಳಿನಲ್ಲಿ ಅಜಿತ್ ನಟನೆಯ 'ವೀಡಾಮುಯರ್ಚಿ' ಸಿನಿಮಾ ಈಗಾಗಲೇ ಓಟಿಟಿಗೆ ಬಂದಿದೆ. ಅಂದಾಜು 100 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ ಚಿತ್ರದ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಕನ್ನಡಕ್ಕೂ ಈ ಆಕ್ಷನ್ ಎಂಟರ್‌ಟೈನರ್ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿದೆ. ಫೆಬ್ರವರಿ 6ರಂದು ಸಿನಿಮಾ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ತಿಂಗಳಿಗೂ ಮುನ್ನ ಓಟಿಟಿಗೆ ಬಂದಿದೆ.
ಅಜಿತ್ ಜೊತೆ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ಮಿಂಚಿದ್ದಾರೆ. ಮಗಿಳ್ ತಿರುಮೇನಿ ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಸರ್ಜಾ, ರೆಜಿನಾ ಕಸೆಂದ್ರಾ, ಆರವ್ ಚಿತ್ರದ ತಾರಾಗಣದಲ್ಲಿದ್ದಾರೆ. ನಾಯಕಿಯ ಅಪಹರಣದ ಸುತ್ತಾ ವೀಡಾಮುಯರ್ಚಿ ಸಿನಿಮಾ ಕಥೆ ಸುತ್ತುತ್ತದೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರಕ್ಕೆ ಅನಿರುದ್ಧ್ ರವಿಚಂದನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

2. ಥಂಡೆಲ್(ಕನ್ನಡ ಡಬ್ಬಿಂಗ್ ಚಿತ್ರ)
ಈ ವರ್ಷದ ತೆಲುಗಿನ ಮೊದಲ ಸೂಪರ್ ಹಿಟ್ ಸಿನಿಮಾ 'ಥಂಡೆಲ್'. ಚಂದೂ ಮೊಂಡೆಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬನ್ನಿ ವಾಸು ಚಿತ್ರಕ್ಕೆ ಹಣ ಹೂಡಿದ್ದರು. ಫೆಬ್ರವರಿ 7ಕ್ಕೆ ಸಿನಿಮಾ ತೆರೆಗೆ ಬಂದಿತ್ತು. 100 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಗೆದ್ದಿತ್ತು. ಚಿತ್ರಕ್ಕೆ ಪೈರಸಿ ಕಾಟವೂ ಎದುರಾಗಿತ್ತು. ಮಾರ್ಚ್ 7ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ.
3. ನದಾನಿಯನ್(ಹಿಂದಿ ಸಿನಿಮಾ) ಮಾರ್ಚ್ 7
ಸೋನಿಲಿವ್
1. ರೇಖಾಚಿತ್ರಂ (ಕನ್ನಡ ಡಬ್ಬಿಂಗ್ ಚಿತ್ರ)
ಮಲಯಾಳಂ ಸೂಪರ್ ಹಿಟ್ 'ರೇಖಾಚಿತ್ರಂ' ಸಿನಿಮಾ ಕೂಡ ಈ ವಾರ ಓಟಿಟಿಗೆ ಬರ್ತಿದೆ. ಚಿತ್ರ ಕನ್ನಡ, ತೆಲುಗಿಗೂ ಡಬ್ ಆಗಿ ಸೋನಿಲಿವ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಜೋಫಿನ್ ಟಿ. ಚಾಕೊ ನಿರ್ದೇಶನದ ಚಿತ್ರದಲ್ಲಿ ಆಸಿಫ್ ಅಲಿ ಹಾಗೂ
ಅನಸ್ವರ ರಾಜನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಂದಾಜು 10 ಕೋಟಿ ರೂ. ಬಜೆಟ್ಟಿನ ಮಿಸ್ಟರಿ ಕ್ರೈಂ ಥ್ರಿಲ್ಲರ್ ಸಿನಿಮಾ 55 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು.
2. ದಿ ವಾಕಿಂಗ್ ಆಫ್ ಎ ನೇಷನ್(ಹಿಂದಿ ವೆಬ್ ಸೀರಿಸ್)ಮಾರ್ಚ್ 7
ಪ್ರೈಂ ವೀಡಿಯೋ
1. ದುಪಹಿಯಾ(ಹಿಂದಿ ಸೀರಿಸ್) ಮಾರ್ಚ್ 7
ಬುಕ್‌ಮೈ ಶೋ
1. ಬಾರಾ ಬೈ ಬಾರಾ(ಹಿಂದಿ ಸಿನಿಮಾ) ಮಾರ್ಚ್ 7
ಹಾಟ್‌ಸ್ಟರ್
1. ಡೆಲಿ ಬಾಯ್ಸ್(ವೆಬ್ ಸೀರಿಸ್) ಮಾರ್ಚ್ 6
2. ಬಾಪು(ತೆಲುಗು ಸಿನಿಮಾ) ಮಾರ್ಚ್ 7
3. ಡೇರ್ ಡೆವಿಲ್: ಬಾರ್ನ್ ಅಗೇನ್(ವೆಬ್ ಸೀರಿಸ್) ಮಾರ್ಚ್ 4
4. ತುಗೇಶ್ vs ದ ವರ್ಲ್ಡ್(ಹಿಂದಿ ವೆಬ್ ಸೀರಿಸ್) ಮಾರ್ಚ್ 7


Click it and Unblock the Notifications











