OTT Releases This Week: ದೀಪಾವಳಿ ವೀಕೆಂಡ್‌ನಲ್ಲಿ ಮನೆಯಲ್ಲೇ ಈ ಚಿತ್ರಗಳನ್ನು ನೋಡಿ

ದಿಢೀರನೆ ರಂಗೇರುವ ಚಿತ್ರರಂಗ ಒಮ್ಮೊಮ್ಮೆ ಫುಲ್ ಸೈಲೆಂಟ್ ಆಗಿಬಿಡುತ್ತದೆ. 'ದೇವರ', 'ಮಾರ್ಟಿನ್' ಹಾಗೂ 'ವೆಟ್ಟೆಯಾನ್' ಸದ್ದು ಚಿತ್ರಮಂದಿರಗಳಲ್ಲಿ ಕಮ್ಮಿ ಆಗಿದೆ. ಈ ಬಾರಿ ದೀಪಾವಳಿ ಸಂಭ್ರಮದಲ್ಲಿ ಒಂದಷ್ಟು ಚಿತ್ರಗಳು ತೆರೆಗೆ ಬರ್ತಿವೆ.

ಕನ್ನಡದಲ್ಲಿ 'ಬಘೀರ', ಹಿಂದಿಯಲ್ಲಿ 'ಸಿಂಗಂ ಅಗೇನ್' ಹಾಗೂ 'ಬೂಲ್ ಭೂಲಯ್ಯ'- 3, ಅತ್ತ ತೆಲುಗಿನಲ್ಲಿ 'ಲಕ್ಕಿ ಭಾಸ್ಕರ್' ಮತ್ತು 'ಕ' ಚಿತ್ರಗಳು ಈ ವಾರ ರಿಲೀಸ್ ಆಗುತ್ತಿವೆ. ತಮಿಳಿನಲ್ಲಿ 'ಅಮರನ್' ಜೊತೆಗೆ 'ಬ್ರದರ್' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಓಟಿಟಿಯಲ್ಲಿ ಕೂಡ ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ವೀಕ್ಷಕರನ್ನು ರಂಜಿಸಲಿದೆ.

from Thangalaan to viswam Diwali weekend ott release movies web series list

'ಬಘೀರ' ಸಿನಿಮಾ ಗುರುವಾರವೇ ತೆರೆಗೆ ಬಂದಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಓಟಿಟಿಯಲ್ಲಿ ಈ ವಾರ ಸ್ಟ್ರೀಮಿಂಗ್‌ ಆಗುತ್ತಿರುವ ಸಿನಿಮಾ ವೆಬ್‌ ಸೀರಿಸ್ ಲಿಸ್ಟ್ ಮುಂದೆ ಇದೆ ಓದೆ.

ನೆಟ್‌ಫಿಕ್ಸ್

1. ತಂಗಲಾನ್

ಚಿಯಾನ್ ವಿಕ್ರಂ ನಿರ್ದೇಶನದ ಬಹುನಿರೀಕ್ಷಿತ 'ತಂಗಲಾನ್' ಸಿನಿಮಾ ಈ ವಾರ ಓಟಿಟಿಗೆ ಬರುವ ನಿರೀಕ್ಷೆಯಿದೆ. ದೀಪಾವಳಿ ವಿಶೇಷವಾಗಿ ಸಿನಿಮಾ ಸ್ಟ್ರೀಮಿಂಗ್ ಎಂದು ಚಿತ್ರತಂಡ ಹೇಳಿತ್ತು. ಆದರೆ ಅಧಿಕೃತವಾಗಿ ನೆಟ್‌ಫ್ಲಿಕ್ಸ್‌ ರಿಲೀಸ್ ಡೇಟ್ ಹೇಳಿಲ್ಲ. ಆಗಸ್ಟ್ 15ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಪಾ. ರಂಜಿತ್ ನಿರ್ದೇಶನದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು.

from Thangalaan to viswam Diwali weekend ott release movies web series list

ಕನ್ನಡದಲ್ಲಿ 'KGF' ಗಣಿಯ ಹಿನ್ನೆಲೆಯಲ್ಲಿ ಯಶ್ ಒಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾಡಿದ್ದರು. ಕಾಲ್ಪನಿಕ ಕಥೆ ಚಿತ್ರದಲ್ಲಿತ್ತು. ಬ್ರಿಟೀಷರು ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯ ಬುಡಕಟ್ಟು ಜನರನ್ನು ಬಳಸಿಕೊಂಡು ಕೆಜಿಎಫ್ ಚಿತ್ರಕ್ಕಾಗಿ ಹುಡುಕಾಟ ನಡೆಸಿದ ಕಥೆ 'ತಂಗಲಾನ್' ಚಿತ್ರದಲ್ಲಿದೆ. ಕೆಲವರು ಈ ಸಿನಿಮಾ ಓಟಿಟಿಯಲ್ಲಿ ವೀಕ್ಷಿಸಲು ಕಾದು ಕೂತಿದ್ದಾರೆ.

2. ದ ಮ್ಯಾನ್‌ಹ್ಯಾಟನ್ ಏಲಿಯನ್ ಅಬ್ಡಕ್ಷನ್(ಇಂಗ್ಲೀಷ್ ವೆಬ್ ಸೀರಿಸ್) ಅಕ್ಟೋಬರ್ 30

3. ಮರ್ಡರ್ ಮೈಂಡ್‌ಫುಲ್ಲಿ(ಜರ್ಮನ್ ಸೀರಿಸ್) ಅಕ್ಟೋಬರ್ 31

4. ಬಾರ್ಬಿ ಮಿಸ್ಟರೀಸ್: ದ ಗ್ರೇಟ್ ಹಾರ್ಸ್ ಚೇಂಜ್ (ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 1

5. ಟೈಮ್ ಕಟ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 30

6. ಮರ್ಥ(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 30

ಅಮೇಜಾನ್ ಪ್ರೈಂ

1. ಇಬ್ಬನಿ ತಬ್ಬಿದ ಇಳೆಯಲಿ

ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ನವೆಂಬರ್ 1ಕ್ಕೆ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ವಿಹಾನ್ ಹಾಗೂ ಅಂಕಿತಾ ಅಮರ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

2. ಜೋಕರ್; ಫೊಲಿ ಎ ಡಾಕ್ಸ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 29

3. ಮಿದಸ್ ಮ್ಯಾನ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 30

4. ಅಂದಗನ್(ತಮಿಳು ಸಿನಿಮಾ) ಅಕ್ಟೋಬರ್ 30

5. ವಿಶ್ವಂ(ತೆಲುಗು ಸಿನಿಮಾ) ಈ ವಾರ ರಿಲೀಸ್ ಸಾಧ್ಯತೆ

ಅಹಾ ಓಟಿಟಿ

1. ಅರ್ಥಮೈಂದಾ ಅರುಣ್ ಕುಮಾರ್ ಸೀಸನ್ -2 (ತೆಲುಗು ವೆಬ್ ಸೀರಿಸ್) ಅಕ್ಟೋಬರ್ 31

2. ಅಂಜಮೈ(ತಮಿಳು ಸಿನಿಮಾ) ಅಕ್ಟೋಬರ್ 29

ಜಿಯೋ ಸಿನಿಮಾ

1. ಸಮ್‌ಬಡಿ ಸಮ್‌ವೇರ್ ಸೀಸನ್ 3(ಇಂಗ್ಲೀಷ್ ಸೀರಿಸ್) ಅಕ್ಟೋಬರ್ 28

ಜೀ 5

1. ಮಿಥ್ಯ: ದ ಡಾರ್ಕ್ ಚಾಪ್ಟರ್ (ಹಿಂದಿ ಸೀರಿಸ್) ನವೆಂಬರ್ 1

ಹಾಟ್‌ಸ್ಟರ್

1. ಲಬ್ಬರ್ ಪಂಡು(ತಮಿಳು ಸಿನಿಮಾ) ಅಕ್ಟೋಬರ್ 31

2. ಕಿಷ್ಕಿಂದ ಕಾಂಡಂ(ಮಲಯಾಳಂ ಸಿನಿಮಾ) ನವೆಂಬರ್ 1

3. ವಿಜರ್ಡ್ಸ್ ಬಿಯಾಂಡ್ ವೆವರ್ಲಿ ಪ್ಲೇಸ್(ಇಂಗ್ಲೀಷ್ ಸೀರಿಸ್) ಅಕ್ಟೋಬರ್ 30

ಇನ್ನು ಕನ್ನಡದ 'ಲವ್‌ ಮಾಕ್ಟೇಲ್'-2 ಸಿನಿಮಾ ತೆಲುಗಿಗೆ ಡಬ್ ಆಗಿ ಈ ವಾರ ಸ್ಟ್ರೀಮಿಂಗ್ ಆಗ್ತಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿದ ಸಿನಿಮಾ ಈ ಟಿವಿ ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗಲಿದೆ.

More from Filmibeat

English summary
Kishkindha Kaandam, Andhagan, viswam and many films and web series streaming this week in ott platforms;
Read more about: diwali ott tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X