OTT Releases This Week: ದರ್ಶನ್ 'ಡೆವಿಲ್' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್

ಒಳ್ಳೆ ಸಿನಿಮಾ ಬರ್ತಿಲ್ಲ, ಅದಕ್ಕೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರ್ತಿಲ್ಲ ಎನ್ನುವ ಆರೋಪ ಒಂದ್ಕಡೆ. ಒಳ್ಳೆ ಸಿನಿಮಾ ಬಂದ್ರು ಪ್ರೇಕ್ಷಕರು ನೋಡ್ತಿಲ್ಲ ಎನ್ನುವ ಬೇಸರ ಮತ್ತೊಂದು ಕಡೆ. ಸದ್ಯ ಚಿತ್ರಮಂದಿರಗಳಲ್ಲಿ ಕನ್ನಡದ 'ಮದರ್ ಪ್ರಾಮಿಸ್' ಹಾಗೂ ತೆಲುಗಿನ 'ಲೆನಿನ್' ಚಿತ್ರಗಳ ದರ್ಬಾರ್ ನಡೀತಿದೆ. ಇತ್ತ ಓಟಿಟಿಯಲ್ಲಿ 'ಡೆವಿಲ್' ಸೇರಿದಂತೆ ಒಂದಷ್ಟು ಸಿನಿಮಾಗಳು ಈ ವಾರ ಸ್ಟ್ರೀಮಿಂಗ್ ಆಗ್ತಿವೆ.

ಗ್ರಾಮಾಯಣ ಹಾಗೂ 'ಮದರ್ ಪ್ರಾಮಿಸ್' ಚಿತ್ರಗಳಿಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಆದರೆ ದೊಡ್ಡ ಮಟ್ಟದಲ್ಲಿ ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ. ಕರ್ನಾಟಕದಲ್ಲೇ ಕನ್ನಡದ 'ಮದರ್‌ ಪ್ರಾಮಿಸ್' ಚಿತ್ರಕ್ಕಿಂತ ತೆಲುಗಿನ 'ಲೆನಿನ್' ಚಿತ್ರಕ್ಕೆ ರೆಸ್ಪಾನ್ಸ್ ಉತ್ತಮವಾಗಿದೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಓಟಿಟಿಗೆ ಬಂದಾಗ ನೋಡಿಕೊಳ್ಳೋಣ ಬಿಡು ಎನ್ನುವ ಮನಸ್ಥಿತಿಯಲ್ಲಿದ್ದಾರೆ.

From The Devil to Maa Inti Bangaaram This Week ott streaming movies list

ಇತ್ತ ಓಟಿಟಿಯಲ್ಲಿ ಕೂಡ ಕನ್ನಡ ಕಂಟೆಂಟ್ ಕಮ್ಮಿ ಇದೆ. ಸಣ್ಣ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡೋಕೆ ಯಾರು ಮುಂದೆ ಬರ್ತಿಲ್ಲ. 8 ತಿಂಗಳ ಬಳಿಕ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿದೆ. ಬೇರೆ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗ್ತಿದೆ ಬನ್ನಿ ನೋಡೋಣ.

ದಿ ಡೆವಿಲ್

ಪ್ರಕಾಶ್ ನಿರ್ಮಿಸಿ ನಿರ್ದೇಶನದ ಮಾಡಿದ್ದ ಆಕ್ಷನ್ ಥ್ರಿಲ್ಲರ್ 'ಡೆವಿಲ್' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಜುಲೈ 17ರಂದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ರಚನಾ ರೈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ದ್ವಿಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 11ರಂದು ಸಿನಿಮಾ ತೆರೆಗೆ ಬಂದಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾ ಬಿಡುಗಡೆ ಆಗಿತ್ತು. ಫಸ್ಟ್ ವೀಕೆಂಡ್ ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ಬಳಿಕ ಯಾಕೋ ಸದ್ದು ಮಾಡಲಿಲ್ಲ. ಬಹಳ ತಡವಾಗಿ ಸಿನಿಮಾ ಓಟಿಟಿಗೆ ಬರ್ತಿದೆ.

ಮಾ ಇಂಟಿ ಬಂಗಾರಂ

ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಕೊಳ್ಳೆ ಹೊಡೆದ 'ಮಾ ಇಂಟಿ ಬಂಗಾರಂ' ಸಿನಿಮಾ ಬಹಳ ಬೇಗ ಓಟಿಟಿಗೆ ಬರ್ತಿದೆ. ಇದೇ ಶುಕ್ರವಾರ(ಜುಲೈ 17) ಹಾಟ್‌ಸ್ಟರ್‌ನಲ್ಲಿ ಸಮಂತಾ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ನಂದಿನಿ ರೆಡ್ಡಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ದಿಗಂತ್ ಸಹ ಬಣ್ಣ ಹಚ್ಚಿದ್ದಾರೆ. ಸಮಂತಾ ಪತಿ ರಾಜ್ ನಿಡುಮೋರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ತಿಂಗಳಿಗೂ ಮುನ್ನ ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಡಲಿದೆ.

ಸೆಕೆಂಡ್ ಲವ್

ರಮ್ಯಾಕೃಷ್ಣ ನಿರೂಪಣೆಯಲ್ಲಿ 'ಸೆಕೆಂಡ್ ಲವ್' ಎಂಬ ತಮಿಳು ರಿಯಾಲಿಟಿ ಸೀರಿಸ್ ಜುಲೈ 13ರಿಂದ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಲವ್ ಬ್ರೇಕಪ್ ಆಗಿರುವ 12 ಮಂದಿ ಸ್ಪರ್ಧಿಗಳನ್ನು ಒಂದೆಡೆ ಸೇರಿ ಈ ಶೋ ನಡೆಸಲಾಗುತ್ತಿದೆ. ಶುರುವಾಗುವ ಮುನ್ನವೇ ಶೋ ವಿವಾದ ಸೃಷ್ಟಿಸುವ ಸುಳಿವು ಸಿಕ್ಕಿತ್ತು. ಸದ್ಯ ಸ್ಟ್ರೀಮಿಂಗ್ ಆಗುತ್ತಿದೆ. ಮುಂದೆ ಶೋ ಹೇಗೆ ಸದ್ದು ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕು.

ನೆಟ್‌ಫ್ಲಿಕ್ಸ್

1. ಡಿಸೈರ್(ಇಂಗ್ಲೀಷ್ ಸಿನಿಮಾ) ಜುಲೈ 17

2. ಹಾರ್ಟ್ ಸ್ಟಾಪಪ್ ಫಾರ್‌ಎವರ್ (ಇಂಗ್ಲೀಷ್ ಸಿನಿಮಾ) ಜುಲೈ 17

3. ದಿ ಹಾಕ್(ಇಂಗ್ಲೀಷ್ ವೆಬ್ ಸೀರಿಸ್) ಜುಲೈ 15

ಹಾಟ್‌ಸ್ಟರ್

1. ವುಥರಿಂಗ್ ಹೈಟ್ಸ್(ಇಂಗ್ಲೀಷ್ ಸಿನಿಮಾ) ಜುಲೈ 13

2. ಪವಿತ್ರಂ (ಮಲಯಾಳಂ ವೆಬ್ ಸೀರಿಸ್) ಜುಲೈ 13

3. ರೆಡಿ ಆರ್ ನಾಟ್ 2(ಇಂಗ್ಲೀಷ್ ವೆಬ್ ಸೀರಿಸ್) ಜುಲೈ 16

ಪ್ರೈಂ ವೀಡಿಯೋ

1. ಬ್ಯಾಕ್ ರೂಮ್ಸ್(ಇಂಗ್ಲೀಷ್ ಸಿನಿಮಾ) ಜುಲೈ 14

2. ರೈಡ್ ಆರ್ ಡೈ(ಇಂಗ್ಲೀಷ್ ವೆಬ್ ಸೀರಿಸ್) ಜುಲೈ 15

ಜೀ-5

1. ಟ್ರಾನ್ಸ್‌ಫರ್ ತ್ರಿಮೂರ್ತುಲು(ತೆಲುಗು ಸಿನಿಮಾ) ಜುಲೈ 17

Read more about: samantha darshan ramyakrishna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X