OTT Releases This Week: ಈ ವಾರ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಚಿತ್ರಗಳು ಸ್ಟ್ರೀಮಿಂಗ್, ಇಲ್ಲಿದೆ ಲಿಸ್ಟ್
ಅತ್ತ ಚಿತ್ರಮಂದಿರಗಳಲ್ಲಿ ಇತ್ತ ಓಟಿಟಿಯಲ್ಲಿ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಕಾಯ್ತಿದೆ. 'ರಕ್ಕಸಪುರದೋಳ್', 'ಜೆಸಿ' ಸೇರಿ ಹಲವು ಕನ್ನಡ ಸಿನಿಮಾಗಳು ಈ ವಾರ ತೆರೆಗೆ ಬರ್ತಿದೆ. ಓಟಿಟಿಯಲ್ಲಿ ಕೂಡ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸುತ್ತಿವೆ.
ಕೆಲ ಸಿನಿಮಾಗಳು ವಾರದ ಆರಂಭದಲ್ಲೇ ಓಟಿಟಿಗೆ ಬಂದಿದ್ದವು. ಈಗ ಶುಕ್ರವಾರ ಬ್ಲಾಕ್‌ಬಸ್ಟರ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. 'ದಿ ರಾಜಾ ಸಾಬ್', 'ಪರಾಶಕ್ತಿ' ಸೇರಿದಂತೆ ಸೇರಿದಂತೆ ಕೆಲ ಸ್ಟಾರ್ ನಟರ ಸಿನಿಮಾಗಳು ಲಿಸ್ಟ್‌ನಲ್ಲಿವೆ.

1. ದಿ ರಾಜಾ ಸಾಬ್
ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಮಾರುತಿ ನಿರ್ದೇಶನದ ಈ ಹಾರರ್ ಕಾಮಿಡಿ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು. ಸಂಜಯ್ ದತ್ ರೀತಿಯ ಸ್ಟಾರ್ ನಟರು ಚಿತ್ರದಲ್ಲಿ ಇದ್ದರೂ ಪ್ರಯೋಜನವಾಗಲಿಲ್ಲ. ಭರ್ಜರಿ ಓಪನಿಂಗ್ ಪಡೆದರೂ 3 ದಿನಗಳ ಬಳಿಕ ಕಲೆಕ್ಷನ್ ಡಲ್ ಆಗಿತ್ತು. ಅಂದಾಜು 100 ಕೋಟಿ ರೂ.ವರೆಗೂ ಸಿನಿಮಾ ನಷ್ಟ ತಂದೊಡ್ಡಿದೆ ಎನ್ನಲಾಗ್ತಿದೆ.
ಭಾರೀ ಬಜೆಟ್‌ನಲ್ಲಿ ಪ್ರಭಾಸ್ ಹೀರೊ ಆಗಿ ಹಾರರ್ ಕಾಮಿಡಿ ಸಿನಿಮಾ ಮಾಡುವ ಪ್ರಯತ್ನವೇ ಕೈಕೊಟ್ಟಿತ್ತು. ಅಭಿಮಾನಿಗಳಿಗೂ ಸಿನಿಮಾ ರುಚಿಸಲಿಲ್ಲ. ಹಾಗಾಗಿ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಮತ್ತೊಂದು ಸಿನಿಮಾ 'ಮನ ಶಂಕರವರಪ್ರಸಾದ್ ಗಾರು' ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿತು. ಫೆಬ್ರವರಿ 6ರಂದು ಜಿಯೋ ಹಾಟ್‌ಸ್ಟರ್‌ನಲ್ಲಿ 'ದಿ ರಾಜಾಸಾಬ್' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳು ಓಟಿಟಿಯಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.

2. ಪರಾಶಕ್ತಿ
ಸುಗ್ಗಿ ಸಂಭ್ರಮದಲ್ಲೇ ತೆರೆಗೆ ಬಂದಿದ್ದ ತಮಿಳಿನ 'ಪರಾಶಕ್ತಿ' ಚಿತ್ರ ಜೀ5ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಸುಧಾ ಕೊಂಗರ ನಿರ್ದೇಶನದ ಈ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ಶಿವಕಾರ್ತಿಕೇಯನ್, ರವಿ ಮೋಹನ್, ಅಥರ್ವ ಹಾಗೂ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜನವರಿ 10ರಂದು ಸಿನಿಮಾ ತೆರೆಗೆ ಬಂದಿತ್ತು. ಚಿತ್ರಕ್ಕೆ ಪ್ರೇಕ್ಷಕರಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
60ರ ದಶಕದಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರೋಧಿಸಿ ನಡೆದ ಹೋರಾಟಗಳ ಹಿನ್ನೆಲೆಯಲ್ಲಿ 'ಪರಾಶಕ್ತಿ' ಸಿನಿಮಾ ನಿರ್ಮಾಣವಾಗಿದೆ. ಡಾಲಿ ಧನಂಜಯ್ ಕೂಡ ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 7ರಂದು ಜೀ5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡದಲ್ಲೇ ಸಿನಿಮಾ ವೀಕ್ಷಿಸಬಹುದು.
3. ನಾರಿ ನಾರಿ ನಡುಮ ಮುರಾರಿ
ರಾಮ್ ಅಬ್ಬಾರಾಜ್ ನಿರ್ದೇಶನದ ತೆಲುಗಿನ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ನಾರಿ ನಾರಿ ನಡುಮ ಮುರಾರಿ'. ಜನವರಿ 14ರಂದು ಸಿನಿಮಾ ತೆರೆಗೆ ಬಂದಿತ್ತು. ಶರ್ವಾನಂದ್, ಸಂಯುಕ್ತ ಹಾಗೂ ಸಾಕ್ಷಿ ವೈದ್ಯ ಚಿತ್ರದ ತಾರಾಗಣದಲ್ಲಿದ್ದಾರೆ. ಇಬ್ಬರು ಯುವತಿಯರ ನಡುವೆ ಸಿಲುಕಿ ನಲಗುವ ಯುವಕನ ಕಥೆ ಚಿತ್ರದಲ್ಲಿದೆ. ಅಮೇಜಾನ್ ಪ್ರೈಮ್‌ನಲ್ಲಿ ಈಗಾಗಲೇ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಇನ್ನು ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಈ ವಾರ ಓಟಿಟಿಗೆ ಬರ್ತಿದೆ. ಮುಂದೆ ಓದಿ.
ನೆಟ್‌ಫ್ಲಿಕ್ಸ್
1. ದಿ ಲಿಂಕನ್ ಲಾಯರ್ ಸೀಸನ್-4(ವೆಬ್ ಸೀರಿಸ್) ಫೆಬ್ರವರಿ 5
2. ಕ್ವೀನ್ ಆಫ್ ಚೆಸ್(ಇಂಗ್ಲೀಷ್ ಸಿನಿಮಾ) ಫೆಬ್ರವರಿ 6
3. ಸಲ್ವಾಡಾರ್(ಸ್ಪ್ಯಾನಿಷ್ ಸಿನಿಮಾ) ಫೆಬ್ರವರಿ 6
4. ಕ್ಯಾಶ್‌ಕ್ವೀನ್ಸ್(ವೆಬ್ ಸೀರಿಸ್) ಫೆಬ್ರವರಿ 5
ಹಾಟ್‌ಸ್ಟರ್
1. ಷಾಬಾದ್(ಹಿಂದಿ ವೆಬ್ ಸೀರಿಸ್) ಫೆಬ್ರವರಿ 6
ಸನ್ ನೆಕ್ಸ್ಟ್
1. ನೀಲಕಂಠ(ತೆಲುಗು ಸಿನಿಮಾ) ಫೆಬ್ರವರಿ 6
ಅಮೇಜಾನ್ ಪ್ರೈಂ
1. ಪೆಂಡಿಂಗ್ ಹಾರ್ಮೊನಿ(ಇಂಗ್ಲೀಷ್ ಸಿನಿಮಾ) ಫೆಬ್ರವರಿ 6
2. ರಿಲೇಷನ್‌ಶಿಪ್ ಗೋಲ್ಸ್(ಇಂಗ್ಲೀಷ್ ಸಿನಿಮಾ) ಫೆಬ್ರವರಿ 4
3. ಎಲ್‌ಓಎಲ್(ಇಂಗ್ಲೀಷ್ ವೆಬ್ ಸೀರಿಸ್) ಫೆಬ್ರವರಿ 6
ಸೋನಿ ಲಿವ್
1. ಜಾಜ್ ಸಿಟಿ(ಹಿಂದಿ ವೆಬ್ ಸೀರಿಸ್) ಫೆಬ್ರವರಿ 6
ಆಹಾ ಓಟಿಟಿ
1. ಸೈಕ್ ಸಿದ್ಧಾರ್ಥ(ತೆಲುಗು ಸಿನಿಮಾ) ಫೆಬ್ರವರಿ 4


Click it and Unblock the Notifications











