ಐಪಿಎಲ್ ಆರ್ಭಟದ ಮಧ್ಯೆ ಈ ವಾರ ಥಿಯೇಟರ್ ಹಾಗೂ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ

ದೇಶದಲ್ಲಿ IPL ಫೀವರ್ ಜೋರಾಗಿದೆ. ಸಂಜೆ ಆಗ್ತಿದ್ದಂತೆ ಜನ ಮನರಂಜನೆಗಾಗಿ ಟಿ20 ಪಂದ್ಯಗಳನ್ನು ನೋಡಲು ಮುಗಿಬೀಳುತ್ತಿದ್ದಾರೆ. IPL ಆರ್ಭಟದ ಹಿನ್ನೆಲೆಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದು ಮುಂದು ನೋಡುವಂತಾಗಿದೆ. ಸದ್ಯ ಲೀಗ್ ಹಂತದ ಪಂದ್ಯಗಳು ನಡೆಯುತ್ತಿರುವುದರಿಂದ ಧೈರ್ಯ ಮಾಡಿ ಈ ವಾರ ಒಂದಷ್ಟು ಸಿನಿಮಾಗಳನ್ನು ತೆರೆಗೆ ತರಲಾಗುತ್ತಿದೆ.

ಕನ್ನಡದಲ್ಲಿ ಸದ್ಯಕ್ಕೆ ದೊಡ್ಡ ಸಿನಿಮಾಗಳು ತೆರೆಗೆ ಬರುವ ಪ್ರಯತ್ನ ಮಾಡುತ್ತಿಲ್ಲ. ದುನಿಯಾ ವಿಜಯ್ 'ಭೀಮ', ಧ್ರುವ ಸರ್ಜಾ 'ಮಾರ್ಟಿನ್', ಉಪೇಂದ್ರ 'UI' ಸೇರಿದಂತೆ ಹಲವು ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. IPL ಹಾಗೂ ಲೋಕಸಭೆ ಚುನಾವಣೆ ಬಳಿಕವೇ ಈ ಸಿನಿಮಾ ಥಿಯೇಟರ್‌ಗಳ ಮುಖ ಮಾಡಲಿವೆ.

From Tillu Square to Inspector Rishi OTT theatres releases this week

1. ಯುವ

ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವ' ಸಿನಿಮಾ ಈ ವಾರ ತೆರಗಪ್ಪಳಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ನಿರ್ಮಿಸಿದೆ. ಯುವ ರಾಜ್‌ಕುಮಾರ್ ಹೀರೊ ಆಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಇದು. ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದಾರೆ.

2. ಆಡು ಜೀವಿತಂ

ಪೃಥ್ವಿರಾಜ್‌ ಸುಕುಮಾರನ್ ನಟನೆಯ 'ಆಡು ಜೀವಿತಂ'(ದಿ ಗೋಟ್ ಲೈಫ್) ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಇದೇ ಗುರುವಾರ ಸಿನಿಮಾ ತೆರೆಗೆ ಬರುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಖರೀದಿಸಿದೆ. ಬ್ಲೆಸ್ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪೃಥ್ವಿರಾಜ್ ಪಾತ್ರಕ್ಕಾಗಿ ತೂಕ ಇಳಿಸಿ ನಟಿಸಿದ್ದಾರೆ. ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ತೆರೆಗೆ ತರಲಾಗುತ್ತಿದೆ.

3. ಟಿಲ್ಲು ಸ್ಕೇರ್

ತೆಲುಗಿನ 'ಡಿಜೆ ಟಿಲ್ಲು' ಸೀಕ್ವೆಲ್ ಕೂಡ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ.

From Tillu Square to Inspector Rishi OTT theatres releases this week

4. ಗಾಡ್ಜಿಲ್ಲಾ Vs ಕಾಂಗ್: ದಿ ನ್ಯೂ ಎಂಫೈರ್

ಹಾಲಿವುಡ್ ಮಾಸ್ಟರ್ ಥ್ರಿಲ್ಲರ್ ಸಿನಿಮಾ ಗಾಡ್ಜಿಲ್ಲಾ Vs ಕಾಂಗ್: ದಿ ನ್ಯೂ ಎಂಫೈರ್ ಕೂಡ ಈ ವೀಕೆಂಡ್ ಪ್ರೇಕ್ಷಕರ ಮುಂದೆ ಬರಲಿದೆ. ಆಡಂ ವಿಂಗರ್ಡ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು 'ಗಾಡ್ಜಿಲ್ಲಾ Vs ಕಾಂಗ್' ಚಿತ್ರದ ಸೀಕ್ವೆಲ್ ಇದು. ಇನ್ನು ಓಟಿಟಿಯಲ್ಲಿ ಈ ವಾರ ಸ್ಟ್ರೀಮಿಂಗ್ ಆಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

ಹಾಟ್‌ಸ್ಟರ್

1. ಮಧು (ಡಾಕ್ಯುಮೆಂಟರಿ) ಮಾರ್ಚ್ 29

2. ಪಟ್ನಾ ಶುಕ್ಲಾ(ಹಿಂದಿ ಸಿನಿಮಾ) ಮಾರ್ಚ್ 29

3. ಟ್ರೂ ಲವ್ವರ್(ತೆಲುಗು ಸಿನಿಮಾ) ಮಾರ್ಚ್ 27

4. ರೆನೆಗೇಡ್ ನೆಲ್(ವೆಬ್ ಸೀರಿಸ್) ಮಾರ್ಚ್ 29

5. ದಿ ಬ್ಯೂಟಿಫುಲ್ ಗೇಮ್- ಮಾರ್ಚ್ 29

ಅಮೇಜಾನ್ ಪ್ರೈಂ

1. ದಿ ಬಾಕ್ಸ್‌ಟರ್ಸ್(ವೆಬ್ ಸೀರಿಸ್) ಮಾರ್ಚ್ 28

2. ಟಿಗ್ ನೋಟಾರೊ(ವೆಬ್ ಸೀರಿಸ್) ಮಾರ್ಚ್ 26

3. ಇನ್ಸ್‌ಪೆಕ್ಟರ್ ರಿಷಿ(ವೆಬ್‌ ಸೀರಿಸ್) ಮಾರ್ಚ್ 29

ನೆಟ್‌ಫ್ಲಿಕ್ಸ್

1. ಹಾರ್ಟ್ ಆಫ್‌ ದಿ ಹಂಟರ್(ಹಾಲಿವುಡ್) ಮಾರ್ಚ್ 29

2. ರೊಂಜಾ, ದಿ ರಾಬರ್ಸ್ ಡಾಟರ್(ವೆಬ್ ಸೀರಿಸ್) ಮಾಚರ್ 28

3. ದಿ ಬ್ಯೂಟಿಫುಲ್ ಗೇಮ್(ಹಾಲಿವುಡ್) ಮಾರ್ಚ್ 29

4. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ(ಹಿಂದಿ)ಮಾರ್ಚ್ 30

5. ಟೆಸ್ಟಾಮೆಂಟ್: ದಿ ಸ್ಟೋರಿ ಆಫ್ ಮಾಸೆಸ್(ವೆಬ್ ಸೀರಿಸ್) ಮಾರ್ಚ್ 27

ಜಿಯೋ ಸಿನಿಮಾ

1. ಎ ಜೆಂಟಲ್‌ಮನ್ ಇನ್ ಮಾಸ್ಕ್(ವೆಬ್ ಸೀರಿಸ್) ಮಾರ್ಚ್ 29

ಬುಕ್‌ಮೈ ಶೋ

1. ದಿ ಹಾರ್ಡೋವರ್ಸ್(ಹಾಲಿವುಡ್) ಮಾರ್ಚ್ 29

More from Filmibeat

English summary
Here's the complete list of this weekend release movies and web series;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X