'ಬಘೀರ'ನೇ ಮೊದಲಲ್ಲ; ಇದಕ್ಕೂ ಮುನ್ನ ನೆಟ್‌ಫ್ಲಿಕ್ಸ್‌ಗೆ ಬಂದಿದ್ದ ಕನ್ನಡ ಚಿತ್ರಗಳು ಯಾವುವು?

ಶ್ರೀಮುರಳಿ ನಟನೆಯ ಸೂಪರ್ ಹಿಟ್ 'ಬಘೀರ' ಸಿನಿಮಾ ಓಟಿಟಿಯಲ್ಲಿ ಕೂಡ ಧೂಳೆಬ್ಬಿಸಿದೆ. ನೆಟ್‌ಫ್ಲಿಕ್ಸ್‌ನಲ್ಲಿ 2ನೇ ಸ್ಥಾನದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಸಿನಿರಸಿಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ಗೆ ಬಂದ ಮೊದಲ ಕನ್ನಡ ಸಿನಿಮಾ 'ಬಘೀರ' ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ಆದರೆ ಇದಕ್ಕೂ ಮುನ್ನ ಕೆಲ ಚಿತ್ರಗಳನ್ನು ನೆಟ್‌ಫ್ಲಿಕ್ಸ್ ಕೊಂಡುಕೊಂಡಿತ್ತು.

ಮೊದಲಿನಿಂದಲೂ ನೆಟ್‌ಫ್ಲಿಕ್ಸ್ ಕನ್ನಡ ಚಿತ್ರಗಳ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳ ರೈಟ್ಸ್ ಕೊಂಡುಕೊಳ್ಳುತ್ತಿತ್ತು. ಆದರೆ ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಡೆ ಹೊಂದಿತ್ತು. ಯಾರು ಕನ್ನಡ ಸಿನಿಮಾಗಳನ್ನು ನೋಡಲ್ಲ ಎನ್ನುವ ಕುಂಟು ನೆಪ ಹೇಳುತ್ತಿತ್ತು. ಒಳ್ಳೆ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡಿದರೆ ಅಲ್ಲವೇ? ಕನ್ನಡಿಗರು ನೋಡಲು.

From U turn to Nathicharami list kannada movies streamed on Netflix before Bagheera

ಆರಂಭದಲ್ಲಿ ಮೂರ್ನಾಲ್ಕು ಕನ್ನಡ ಸಿನಿಮಾಗಳನ್ನು ನೆಟ್‌ಫ್ಲಿಕ್ಸ್ ಕೊಂಡುಕೊಂಡಿತ್ತು. ಬಳಿಕ ಯಾರು ನೋಡುತ್ತಿಲ್ಲ ಎಂದು ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಲೇ ಬಂದಿತ್ತು. ಇವತ್ತಿಗೂ ಕನ್ನಡ ಕ್ಯಾಟಗರಿ ಕೂಡ ಇಲ್ಲ. ಆದರೆ ಅಮೇಜಾನ್ ಪ್ರೈಂ ಹೆಚ್ಚು ಸಿನಿಮಾಗಳನ್ನು ಕೊಂಡುಕೊಳ್ಳುತ್ತಿದೆ. ಹಾಗಾಗಿ ಪ್ರೈಂ ವೀಡಿಯೋದಲ್ಲಿ ಕನ್ನಡ ಸಿನಿಮಾ ನೋಡಲು ಸಿನಿರಸಿಕರು ಕಾಯುವಂತಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಯಾವುದೇ ದೊಡ್ಡ ಕನ್ನಡ ಸಿನಿಮಾಗಳು ಬರುತ್ತಿರಲಿಲ್ಲ. ಹಾಗಾಗಿ ಜನ ಚಂದಾದಾರದಾಗುತ್ತಿರಲಿಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಸಿನಿಮಾಗಳನ್ನು ನೋಡುವವರು ಇದ್ದಾರೆ ಎಂದು 'ಬಘೀರ' ಸಾಧಿಸಿ ತೋರಿಸಿದೆ.

ಮುಂದೆ ಹೊಂಬಾಳೆ ಸಂಸ್ಥೆ 'ಸಲಾರ್'-2 ಹಾಗೂ 'ಕಾಂತಾರ'-1 ಚಿತ್ರಗಳ ರೈಟ್ಸ್ ಕೂಡ ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲು ಚರ್ಚಿಸುತ್ತಿದೆ. ವೆಬ್ ಸೀರಿಸ್‌ಗಳನ್ನು ಮಾಡಲು ಮಾತುಕತೆ ನಡೆಸುತ್ತಿದೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ನೆಟ್‌ಫ್ಲಿಕ್ಸ್‌ನಲ್ಲಿ ಈ ಹಿಂದೆ ಕೆಲ ಕನ್ನಡ ಚಿತ್ರಗಳು ಸ್ಟ್ರೀಮಿಂಗ್ ಆಗಿದ್ದವು. ಅಂತಹ ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ.

1. ಯೂಟರ್ನ್

ಪವನ್ ಕುಮಾರ್ ನಿರ್ದೇಶನದ ಸೂಪರ್ ನ್ಯಾಚುರಲ್ ಥ್ರಿಲ್ಲರ್ 'ಯೂಟರ್ನ್' ಸಿನಿಮಾ ಬಹಳ ಹಿಂದೆಯೇ ನೆಟ್‌ಫ್ಲಿಕ್ಸ್‌ಗೆ ಬಂದಿತ್ತು. ಇವತ್ತಿಗೂ ಸಿನಿಮಾ ವೀಕ್ಷಣೆಗೆ ಸಿಗುತ್ತದೆ. ಶ್ರದ್ಧಾ ಶ್ರೀನಾಥ್, ರೋಜರ್ ನಾರಾಯಣ, ರಾಧಿಕಾ ಚೇತನ್, ದಿಲೀಪ್ ರಾಜ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್ ಆಗಿ ಬೇರೆ ಭಾಷೆಗಳಿಗೂ ರೀಮೆಕ್ ಆಗಿದ್ದ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಂಡ ಮೊದಲ ದೊಡ್ಡ ಕನ್ನಡ ಸಿನಿಮಾ ಎನ್ನಬಹುದು.

From U turn to Nathicharami list kannada movies streamed on Netflix before Bagheera

2. ನಾತಿಚರಾಮಿ

ಮಂಸೋರೆ ನಿರ್ದೇಶನದ 'ನಾತಿಚರಾಮಿ' ಸಿನಿಮಾ ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಆದರೆ 5 ವರ್ಷಕ್ಕೆ ಮಾತ್ರ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೇ ವರ್ಷ ಜನವರಿಯಲ್ಲಿ ಒಪ್ಪಂದ ಮುಗಿದು ಸಿನಿಮಾ ತೆಗೆದಿದ್ದಾರೆ. ಶ್ರುತಿ ಹರಿಹರನ್, ಸಂಚಾರಿ ವಿಜಯ್ ಈ ಚಿತ್ರದಲ್ಲಿ ನಟಿಸಿದ್ದರು.

3. ಮುಂದಿನ ನಿಲ್ದಾಣ

ವಿನಯ್ ಭಾರದ್ವಜ್ ನಿರ್ದೇಶನದ 'ಮುಂದಿನ ನಿಲ್ದಾಣ'ಕ್ಕೂ ನೆಟ್‌ಫ್ಲಿಕ್ಸ್ ಕೆಲ ದಿನಗಳ ಕಾಲ ನಿಲ್ದಾಣವಾಗಿತ್ತು. ಸದ್ಯಕ್ಕೆ ಈ ಚಿತ್ರ ಕೂಡ ವೀಕ್ಷಣೆಗೆ ಲಭ್ಯವಿಲ್ಲ. ಪ್ರವೀಣ್ ತೇಜ್, ಅನನ್ಯಾ ಕಶ್ಯಪ್ ಹಾಗೂ ರಾಧಿಕಾ ಚೇತನ್ ಈ ಚಿತ್ರದಲ್ಲಿ ನಟಿಸಿದ್ದರು.

4. ತಿಥಿ

ರಾಮ್‌ರೆಡ್ಡಿ ನಿರ್ದೇಶನದ 'ತಿಥಿ' ಸಿನಿಮಾ ಕೂಡ ನೆಟ್‌ಫ್ಲಿಕ್ಸ್‌ಗೆ ಬಂದಿತ್ತು. ಆದರೆ ಅದಕ್ಕೂ ಮುನ್ನ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದರಿಂದ ಹೆಚ್ಚು ಜನ ನೆಟ್‌ಫ್ಲಿಕ್ಸ್‌ನಲ್ಲಿ ನೋಡಿರಲಿಲ್ಲ. ದೇಶ ವಿದೇಶದ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡು ಗೆದ್ದಿತ್ತು. ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

5. ಗೋವಿಂದ ಗೋವಿಂದ

ಸುಮಂತ್ ಶೈಲೇಂದ್ರ, ಭಾವನಾ, ರೂಪೇಶ್ ಶೆಟ್ಟಿ ನಟಿಸಿದ್ದ 'ಗೋವಿಂದ ಗೋವಿಂದ' ಸಿನಿಮಾ ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. 'ಅಯನ' ಎಂಬ ಹೊಸಬರ ಮತ್ತೊಂದು ಸಿನಿಮಾ ಸಹ ರಿಲೀಸ್ ಆಗಿತ್ತು. ಆ ಬಳಿಕ ಯಾವುದೇ ಸಿನಿಮಾವನ್ನು ಆ ಸಂಸ್ಥೆ ಕೊಂಡುಕೊಂಡಿರಲಿಲ್ಲ. ಇದೀಗ 'ಬಘೀರ' ಸಿನಿಮಾ ರಿಲೀಸ್ ಆಗಿ ಸದ್ದು ಮಾಡ್ತಿದೆ.

More from Filmibeat

English summary
Here Is the List of Kannada Movies released on Netflix;
Read more about: filmibeat original ott kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X