New OTT Releases; ಭಾನುವಾರ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಚಿತ್ರಗಳು; ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ ಮಿಸ್ ಮಾಡ್ಬೇಡಿ
ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ ಹೋಗ್ತಿದೆ. ಐಪಿಎಲ್ ಆರ್ಭಟ ಕೂಡ ಅದಕ್ಕೆ ಒಂದು ಕಾರಣ ಎನ್ನಬಹುದು. ಏಪ್ರಿಲ್ 30ಕ್ಕೆ ಬರಬೇಕಿದ್ದ 'ಪೆದ್ದಿ' ಹಾಗೂ 'ಕೆಡಿ' ಚಿತ್ರಗಳ ಬಿಡುಗಡೆ ಕೂಡ ಮುಂದೂಡುವಂತಾಗಿದೆ. ಕ್ರಿಕೆಟ್ ಬಿಟ್ಟು ಸಿನಿಆ ಮನರಂಜನೆ ಬಯಸುವವರು ಓಟಿಟಿಯನ್ನೆ ನೆಚ್ಚಿಕೊಳ್ಳುವಂತಾಗಿದೆ.
ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಸಿನಿಮಾಗಳು ಈಗ ಓಟಿಟಿಗೆ ಎಂಟ್ರಿ ಕೊಡ್ತಿವೆ. ವೀಕೆಂಡ್ ಮನೆಯಲ್ಲೇ ಕೂತು ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಕನ್ನಡದ ಒಂದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕೂಡ ಪಟ್ಟಿಯಲ್ಲಿರುವುದು ವಿಶೇಷ.

ಪ್ರತಿವಾರದಂತೆ ಈ ವಾರ ಕೂಡ ಸಾಕಷ್ಟು ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ, ಜೀ5ನಲ್ಲಿ ಹೊಸದಾಗಿ ಅಪ್‌ಲೋಡ್ ಆಗಿರುವ ಸಿನಿಮಾ, ವೆಬ್ ಸೀರಿಸ್ ಲಿಸ್ಟ್ ಇಲ್ಲಿದೆ ನೋಡಿ.
1. ಉಸ್ತಾದ್ ಭಗತ್ ಸಿಂಗ್
ಪವನ್ ಕಲ್ಯಾಣ್ ನಟಿಸಿದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬಂದಿದೆ. ಮಾರ್ಚ್ 19ರಂದು ತೆರೆಕಂಡಿದ್ದ ಸಿನಿಮಾ ಏಪ್ರಿಲ್ 16ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಹರೀಶ್ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ.

ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಪವರ್ ಸ್ಟಾರ್ ಅಬ್ಬರಿಸಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿತ್ತು. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಸಿನಿಮಾ ಭಾರೀ ನಷ್ಟ ತಂದೊಡ್ಡಿತ್ತು. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
2. ದೋ ದೀವಾನೆ ಸೆಹೆರ್ ಮೇ
ರವಿ ಉದ್ಯವಾರ್ ನಿರ್ದೇಶನದಲ್ಲಿ ಸಿದ್ದಾರ್ಥ್ ಚತುರ್ವೇದಿ ಹಾಗೂ ಮೃಣಾಲ್ ಠಾಕೂರ್ ನಟನೆಯ ಸಿನಿಮಾ 'ದೋ ದೀವಾನೆ ಸೆಹೆರ್ ಮೇ'.. ಫೆಬ್ರವರಿ 20ರಂದು ಈ ರೊಮ್ಯಾಂಟಿಕ್ ಸಿನಿಮಾ ತೆರೆಗೆ ಬಂದಿತ್ತು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಸಿಗುತ್ತಿದೆ. ಏಪ್ರಿಲ್ 17ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. 30-50 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 10 ಕೋಟಿ ರೂ. ಕಲೆಕ್ಷನ್ ಮಾಡಲು ವಿಫಲವಾಗಿತ್ತು.
3. ಸೆಕೆಂಡ್ ಕೇಸ್ ಆಫ್ ಸೀತಾರಾಮ್
ಕನ್ನಡ ಸಿನಿಮಾಗಳು ಓಟಿಟಿಗೆ ಬರುವುದೇ ಅಪರೂಪ ಎನ್ನುವಂತಾಗಿದೆ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತವೆ. ಈ ವಾರ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಜೀ-5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ವೀಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.
ದೇವಿ ಪ್ರಸಾದ್ ಶೆಟ್ಟಿ ಈ ಕ್ರೈಂ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮತ್ತೊಮ್ಮೆ ಪೊಲೀಸ್ ಆಫೀಸರ್ ಸೀತಾರಾಮ್ ಪಾತ್ರದಲ್ಲಿ ವಿಜಯರಾಘವೇಂದ್ರ ನಟಿಸಿ ಗೆದ್ದಿದ್ದಾರೆ. ತಮಿಳಿನಲ್ಲಿ ಕೂಡ ಸಿನಿಮಾ ಹಿಟ್ ಆಗಿತ್ತು. ಫೆಬ್ರವರಿ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಕಳೆದೆರಡು ದಿನಗಳಿಂದ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗ್ತಿದೆ.
ಪ್ರೈಂ ವಿಡಿಯೋ
1. ಯುಫಾರಿಯಾ ಸೀಸನ್-3 (ಇಂಗ್ಲೀಷ್ ಸೀರಿಸ್) ಏಪ್ರಿಲ್ 13
2. ಇರವಿನ್ ವಿಳಿಗಳ್(ತಮಿಳು ಸಿನಿಮಾ) ಏಪ್ರಿಲ್ 13
3. ಅಮೆರಿಕನ್ ಗ್ಲಾಡಿಯೇಟರ್ಸ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 17
4. ಮಟ್ಕಾ ಕಿಂಗ್(ಹಿಂದಿ ಸೀರಿಸ್) ಏಪ್ರಿಲ್ 17
ನೆಟ್‌ಫ್ಲಿಕ್ಸ್
1. ಯೂತ್(ತಮಿಳು ಸಿನಿಮಾ) ಏಪ್ರಿಲ್ 16
2. ಟೊಸ್ಟರ್(ಹಿಂದಿ ಸಿನಿಮಾ) ಏಪ್ರಿಲ್ 15
3. WWE ರೆಸ್ಲ್ಮೇನಿಯಾ 42 (ಇಂಗ್ಲೀಷ್ ಸಿನಿಮಾ) ಏಪ್ರಿಲ್ 16
4. ಎ ಗೊರಿಲ್ಲಾ ಸ್ಟೋರಿ(ಇಂಗ್ಲೀಷ್ ಸೀರಿಸ್) ಏಪ್ರಿಲ್ 17
5. ರೂಮ್‌ಮೇಟ್ಸ್(ಇಂಗ್ಲೀಷ್ ಸಿನಿಮಾ) ಏಪ್ರಿಲ್ 17
ಹಾಟ್‌ಸ್ಟರ್
1. ಟ್ರೈಬ್ಸ್ ವರ್ಸ್(ಹಿಂದಿ ರಿಯಾಲಿಟಿ ಸೀರಿಸ್) ಏಪ್ರಿಲ್ 17
2. ಸಂಭವಂ ಅಧ್ಯಾಯ ವನ್(ಕನ್ನಡ ಡಬ್ಬಿಂಗ್ ಸಿನಿಮಾ) ಏಪ್ರಿಲ್ 15


Click it and Unblock the Notifications