Ott Releases This week; ಈ ವಾರ ಓಟಿಟಿಗೆ 25 ಚಿತ್ರಗಳು; ಕನ್ನಡ ಸಿನಿಮಾಗಳು ಯಾವ್ದು?

ಈ ವಾರ ಬಾಕ್ಸಾಫೀಸ್‌ನಲ್ಲಿ 'ಎಕ್ಕ' ಹಾಗೂ 'ಜ್ಯೂನಿಯರ್' ಚಿತ್ರಗಳ ಹವಾ ಜೋರಾಗಿದೆ. ಇನ್ನು ಈ ಶುಕ್ರವಾರ 'ಹರಿಹರ ವೀರಮಲ್ಲು' ಸಿನಿಮಾ ಬಿಡುಗಡೆ ಆಗುತ್ತಿದೆ. ಹೊಸಬರ 'ಸೈಯಾರಾ' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಇತ್ತ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಬಿಡುಗಡೆಗೆ ಸಜ್ಜಾಗಿದೆ.

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಲು ಯೋಚಿಸುತ್ತಿದ್ದಾರೆ. ಟಿಕೆಟ್ ದರ, ಪಾರ್ಕಿಂಗ್ ಚಾರ್ಜ್, ಸ್ನ್ಯಾಕ್ಸ್ ಅಂತೆಲ್ಲಾ ಸಾವಿರಾರು ರೂಪಾಯಿ ಖರ್ಚು ಆಗುತ್ತದೆ. ಹಾಗಾಗಿ ಓಟಿಟಿಯಲ್ಲಿ ಮನೆಯಲ್ಲೇ ಕೂತು ಸಿನಿಮಾ ನೋಡೋಣ ಎಂದು ಭಾವಿಸುವವರು ಇದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿವೆ.

From X and Y to Ronth This week Ott Release Movies and web series list

ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ವಾಹ್ ಎನ್ನುವಂತದ್ದು ಏನಾದರೂ ಇರಲೇಬೇಕು ಎಂದು ಕೆಲವರು ಭಾವಿಸುತ್ತಿದ್ದಾರೆ. ಅದೇ ಕಾರಣಕ್ಕೆ ಸ್ಟಾರ್ ನಟರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳ ಗುಂಗಿನಲ್ಲಿದ್ದಾರೆ. ದೊಡ್ಡ ಸಿನಿಮಾಗಳನ್ನು ನಿರ್ಮಿಸಿದರೆ ದೊಡ್ಡದಾಗಿ ಬ್ಯುಸಿನೆಸ್ ಮಾಡಬಹುದು ಎನ್ನುವ ಲೆಕ್ಕಾಚಾರ ಅದು. ಓಟಿಟಿ ರೈಟ್ಸ್ ಮಾರಾಟ ಮಾಡಿ ಒಳ್ಳೆ ಹಣ ಗಳಿಸಬಹುದು. ಸಣ್ಣ ಸಿನಿಮಾಗಳನ್ನು ಕೊಂಡುಕೊಳ್ಳಲು ಓಟಿಟಿ ಸಂಸ್ಥೆಗಳು ಮುಂದೆ ಬರಲ್ಲ.

ಎಕ್ಸ್ & ವೈ

'ಒಂದಲ್ಲಾ ಎರಡಲ್ಲಾ' ಸಿನಿಮಾ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶಿಸಿ ನಟಿಸಿರುವ ಸಿನಿಮಾ 'ಎಕ್ಸ್ & ವೈ'. ಇತ್ತೀಚೆಗೆ ತೆರೆಗೆ ಬಂದಿದ್ದ ಚಿತ್ರಕ್ಕೆ ದೊಡ್ಡದಾಗಿ ರೆಸ್ಪಾನ್ಸ್ ಸಿಗಲಿಲ್ಲ. ಆದರೆ ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ಜುಲೈ 25ರಂದು ಸಿನಿಮಾ ಸನ್ ನೆಕ್ಸ್ಟ್ ಓಟಿಟಿ ವೇದಿಕೆಗೆ ಬರಲಿದೆ. ಸತ್ಯ ಪ್ರಕಾಶ್‌ ಜೊತೆಗೆ ಬೃಂದಾ ಆಚಾರ್, ಪ್ರಕಾಶ್‌ ಅಥರ್ವ, ದೊಡ್ಡಣ್ಣ, ವೀಣಾ ಸುಂದರ್‌, ಧರ್ಮಣ್ಣ ಕಡೂರು, ಸುಂದರ್‌ ವೀಣಾ, ಆಯನಾ ಚಿತ್ರದ ತಾರಾಗಣದಲ್ಲಿದ್ದಾರೆ.

From X and Y to Ronth This week Ott Release Movies and web series list

ಆಟೋ ಆಂಬ್ಯುಲೆನ್ಸ್ ಮಹತ್ವದ ಬಗ್ಗೆ 'ಎಕ್ಸ್ & ವೈ' ಚಿತ್ರದಲ್ಲಿ ಸತ್ಯಪ್ರಕಾಶ್ ಚರ್ಚಿಸಿದ್ದಾರೆ. ತಂದೆ-ತಾಯಿಯನ್ನು ಹುಡುಕಿಕೊಂಡು ಆತ್ಮವೊಂದು ಭೂಮಿಗೆ ಬರುವುದರೊಂದಿಗೆ ಚಿತ್ರದ ಕಥೆ ಶುರುವಾಗುತ್ತದೆ. ಆರಂಭದಲ್ಲಿ ತಮಾಷೆಯಾಗಿ ಆರಂಭವಾಗುವ ಕಥೆ ಬಳಿಕ ಗಂಭೀರವಾಗುತ್ತಾ ಹೋಗುತ್ತದೆ. ಹೀರೊ ಎಂಬ ಬಿಲ್ಡಪ್ ಇಲ್ಲದೇ ಒಬ್ಬ ಕಲಾವಿದನಾಗಿ ಸತ್ಯಪ್ರಕಾಶ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ.

ಷೋ ಟೈಮ್

ಮದನ್ ದಕ್ಷಿಣಮೂರ್ತಿ ನಿರ್ದೇಶನದಲ್ಲಿ ನವೀನ್ ಚಂದ್ರ ಹಾಗೂ ಕಾಮಾಕ್ಷಿ ನಟನೆಯ ತೆಲುಗಿನ 'ಷೋ ಟೈಮ್' ಕೂಡ ಸನ್‌ ನೆಕ್ಟ್ಸ್ ಓಟಿಟಿಗೆ ಬರ್ತಿದೆ. ಜುಲೈ 25ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಜುಲೈ 4ರಂದು ತೆರೆಗೆ ಬಂದಿದ್ದ ಥ್ರಿಲ್ಲರ್ ಸಿನಿಮಾ 20 ದಿನಗಳ ಅಂತರದಲ್ಲಿ ಓಟಿಟಿಗೆ ಬರ್ತಿದೆ.

ರೋಂತ್(ಕನ್ನಡ ಡಬ್ಬಿಂಗ್)

ಜೂನ್ 13ಕ್ಕೆ ತೆರೆಗೆ ಬಂದಿದ್ದ ಮಲಯಾಳಂ ಸಿನಿಮಾ 'ರೋಂತ್' ಇದೀಗ ಹಾಟ್‌ಸ್ಟರ್‌ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಶಾಹಿ ಕಬೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳ ಕಥೆ ಚಿತ್ರದಲ್ಲಿದೆ. ಜೂನ್ 13ರಂದು ತೆರೆಗೆ ಬಂದಿದ್ದ ಸಿನಿಮಾ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಕನ್ನಡಕ್ಕೂ ಡಬ್ ಆಗಿ ಓಟಿಟಿಗೆ ಬಂದಿದೆ.

ಕಣ್ಣಪ್ಪ

ಮಂಚು ವಿಷ್ಣು ನಿರ್ಮಿಸಿ ನಟಿಸಿದ್ದ 'ಕಣ್ಣಪ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಮೋಹನ್ ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದು ಕೂಡ ಚಿತ್ರಕ್ಕೆ ವರವಾಗಲಿಲ್ಲ. ಜುಲೈ 25ರಂದು ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಬಹುದು ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಅಮೇಜಾನ್ ಪ್ರೈಂ

1. ಟಿನ್ ಸೋಲ್ಜರ್(ಇಂಗ್ಲೀಷ್ ಸಿನಿಮಾ) ಜುಲೈ 23

2. ಜಸ್ಟಿಸ್ ಆನ್ ಟ್ರಯಲ್(ಇಂಗ್ಲೀಷ್ ಸೀರಿಸ್) ಜುಲೈ 21

3. ನೋವಾಕ್ಸಿನ್(ಇಂಗ್ಲೀಷ್ ಸಿನಿಮಾ) ಜುಲೈ 25

4. ರಂಗೀನ್(ಹಿಂದಿ ವೆಬ್ ಸೀರಿಸ್) ಜುಲೈ 25

5. ಕೆಂಡ(ಕನ್ನಡ ಸಿನಿಮಾ) 99 ರೂ. ಪಾವತಿಸಿ ಈಗ ನೋಡಬಹುದು.

ನೆಟ್ ಫ್ಲಿಕ್ಸ್

1. ಎ ನಾರ್ಮಲ್ ವುಮೆನ್(ಇಂಡೋನೇಷ್ಯಾ ಸಿನಿಮಾ) ಜುಕೈ 25

2. ದಿ ಹಂಟಿಂಗ್ ವೀವ್ಸ್(ಇಂಗ್ಲೀಷ್ ವೆಬ್ ಸೀರಿಸ್) ಜುಲೈ 21

3. ಕ್ರಿಟಿಕಲ್: ಬಿಟ್ವೀನ್ ಲೈಫ್ ಅಂಡ್ ಡೆತ್(ಇಂಗ್ಲೀಷ್ ಸೀರಿಸ್) ಜುಲೈ 23

4. ಲೆಟರ್ಸ್ ಫ್ರಂ ದ ಫಾಸ್ಟ್(ಇಂಗ್ಲೀಷ್ ವೆಬ್ ಸೀರಿಸ್) ಜುಲೈ 23

5. ಹಿಟ್ ಮೇಕರ್ಸ್(ಇಂಗ್ಲೀಷ್ ವೆಬ್ ಸೀರಿಸ್) ಜುಲೈ 24

6. ಮಂಡಲ ಮರ್ಡರ್ಸ್(ಹಿಂದಿ ವೆಬ್ ಸೀರಿಸ್) ಜುಕೈ 25

7. ಟ್ರೈನ್ ರೆಕ್; ಪಿಐ ಮಾಮ್ಸ್(ಇಂಗ್ಲೀಷ್ ಸಿನಿಮಾ) ಜುಲೈ 22

ಹಾಟ್‌ಸ್ಟರ್

1. ವಾಷಿಂಗ್ಟನ್ ಬ್ಲಾಕ್(ಇಂಗ್ಲೀಷ್ ವೆಬ್ ಸಿರಿಸ್) ಜುಲೈ 23

2. ದಿ ಸೊಸೈಟಿ(ಹಿಂದಿ ರಿಯಾಲಿಟಿ ಶೋ) ಜುಲೈ 21

3. ಷರ್ಜಮಿನ್(ಹಿಂದಿ ಸಿನಿಮಾ) ಜುಲೈ 25

More from Filmibeat

English summary
Kannappa, X and Y, Ronth and more Interesting movies and web series ready to stream on ott this week;
Read more about: kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X