OTT Releases This Week: ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಕಂಪ್ಲೀಟ್ ಲಿಸ್ಟ್
ಕಳೆದ ವಾರ ಲಾಂಗ್ ವೀಕೆಂಡ್‌ನಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗೆ ಬಂದಿತ್ತು. ಓಟಿಟಿಯಲ್ಲಿ ಕೂಡ ಸಾಕಷ್ಟು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ವೀಕ್ಷಕರನ್ನು ರಂಜಿಸಿತ್ತು. ಕನ್ನಡದ 2 ಸಿನಿಮಾಗಳು ಕೂಡ ಸಿನಿರಸಿಕರ ಮನಗೆದ್ದಿತ್ತು.
ಮತ್ತೊಂದು ವೀಕೆಂಡ್ ಎದುರಾಗುತ್ತಿದೆ. ಮತ್ತಷ್ಟು ಸಿನಿಮಾಗಳು ಇತ್ತ ಓಟಿಟಿ ಅತ್ತ ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಓಟಿಟಿಗೆ ಸಾಕಷ್ಟು ಸಿನಿಮಾಗಳು ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಶುಕ್ರವಾರ 'ಗುಡ್‌ಫ್ರೈಡೇ' ರಜೆ ಕೂಡ ಇದೆ. ಹಾಗಾಗಿ ಸಿನಿಮಾ ಸಂಭ್ರಮ ಕೊಂಚ ಜೋರಾಗಿಯೇ ಇರಲಿದೆ.

ಈ ವಾರ ಅಮೇಜಾನ್ ಪ್ರೈಂ, ನೆಟ್‌ಫಿಕ್ಸ್, ಜೀ-5, ಸೋನಿಲಿವ್, ಹಾಟ್‌ಸ್ಟರ್ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆ ಆಗಲಿವೆ. ಇನ್ನುಳಿದಂತೆ ವೆಬ್ ಸೀರಿಸ್‌ಗಳು ಓಟಿಟಿ ವೀಕ್ಷಕರನ್ನು ರಂಜಿಸಲಿವೆ. ಅದರ ಲಿಸ್ಟ್ ಮುಂದೆ ಇದೆ ಓದಿ.
ನೆಟ್‌ಫ್ಲಿಕ್ಸ್
1. ಸ್ಟೆಂಜರ್ಸ್ ಥಿಂಗ್ಸ್: ದಿ ಫಸ್ಟ್ ಷಾಡೋ
2. ರಾನ್ಸಮ್ ಕನ್ಯೋನ್(ವೆಬ್ ಸೀರಿಸ್) ಏಪ್ರಿಲ್ 17
3. ದಿ ರೂಮ್ ನೆಕ್ಸ್ಟ್ ಡೋರ್(ಸ್ಪ್ಯಾನಿಷ್ ಸಿನಿಮಾ) ಏಪ್ರಿಲ್ 19
4. ದಿ ಗ್ಲಾಸ್ ಡೋಮ್(ವೆಬ್ ಸೀರಿಸ್) ಏಪ್ರಿಲ್ 15
5. ಟಿಮ್ ಡಿಲ್ಲನ್: ಐಯಾಮ್ ಯುವರ್ ಮದರ್(ವೆಬ್ ಸೀರಿಸ್) ಏಪ್ರಿಲ್ 15
6. ಹೆವೆಲ್‌ಲಿ ಎವರ್ ಆಫ್ಟರ್(ವೆಬ್ ಸೀರಿಸ್) ಏಪ್ರಿಲ್ 15
7. ಐಹೋಸ್ಟೇಜ್( ಕ್ರೈಂ ಥ್ರಿಲ್ಲರ್ ಸಿನಿಮಾ) ಏಪ್ರಿಲ್ 18
ಅಮೇಜಾನ್ ಪ್ರೈಂ
1. ಗೋಪಿಲೋಲ
ಸಾವಯವ ಕೃಷಿ ವಿಷಯ ಆಧರಿಸಿ ಆರ್. ರವೀಂದ್ರ ನಿರ್ದೇಶನದ ಸಿನಿಮಾ 'ಗೋಪಿಲೋಲ' ಸಿನಿಮಾ ಈಗಾಗಲೇ ಓಟಿಟಿಗೆ ಬಂದಿದೆ. ಕಳೆದೊಂದು ವಾರದಿಂದ 99 ರೂಪಾಯಿ ಪಾವತಿಸಿ ಸಿನಿಮಾ ವೀಕ್ಷಿಸುವ ಅವಕಾಶ ಪ್ರೈಂ ವೀಡಿಯೋ ಚಂದಾದಾರರಿಗೆ ಸಿಕ್ಕಿದೆ. ಈ ವಾರ ಉಚಿತವಾಗಿ ಸಿನಿಮಾ ಲಭ್ಯವಾಗುವ ಸಾಧ್ಯತೆಯಿದೆ. ಅಂದಹಾಗೆ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಈ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಬಹಳ ತಡವಾಗಿ ಈ ಸಿನಿಮಾ ತೆರೆಗೆ ಬಂದಿತ್ತು. ಕಳೆದ ವರ್ಷ ಅಕ್ಟೋಬರ್ 4ರಂದು ಸಿನಿಮಾ ಬಿಡುಗಡೆ ಆಗಿತ್ತು. ಮಂಜುನಾಥ್ ಅರಸ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಿರ್ದೇಶಕ ಎಸ್. ನಾರಾಯಣ್ ಕೂಡ ತಾರಾಗಣದಲ್ಲಿದ್ದಾರೆ.

2. ಗೌರಿ
ಕಳೆದ 10 ದಿನಗಳಿಂದ 'ಗೌರಿ' ಸಿನಿಮಾ ಪ್ರೈಂ ವೀಡಿಯೋದಲ್ಲಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಚಿತ್ರದಲ್ಲಿ ಸಮರ್ಜಿತ್ ಹಾಗೂ ಸಾನ್ಯಾ ಅಯ್ಯರ್ ನಟಿಸಿದ್ದಾರೆ. ಸದ್ಯಕ್ಕೆ ಸಿನಿಮಾ ವೀಕ್ಷಿಸಲು 99 ರೂಪಾಯಿ ಪಾವತಿಸಬೇಕು. ಈ ಶುಕ್ರವಾರದಿಂದ ಸಿನಿಮಾ ಉಚಿತವಾಗಿ ಸಿಗುವ ಸಾಧ್ಯತೆಯಿದೆ. ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಇಂದ್ರಜಿತ್ ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ ಇದು.
3. ಖೌಫ್(ಹಿಂದಿ ವೆಬ್ ಸೀರಿಸ್) ಏಪ್ರಿಲ್ 18
ಜೀ-5
1. ದಾವಿದ್(ಮಲಯಾಳಂ ಆಕ್ಷನ್ ಸಿನಿಮಾ) ಏಪ್ರಿಲ್ 18
2. ಲಾಗೌಟ್(ಹಿಂದಿ ಥ್ರಿಲ್ಲರ್ ಸಿನಿಮಾ) ಏಪ್ರಿಲ್ 18
ಅಹಾ ಓಟಿಟಿ
1. ಯಮಕಾಥಘಿ(ತಮಿಳು ಸೂಪರ್ ನ್ಯಾಚುರಲ್ ಸಿನಿಮಾ) ಏಪ್ರಿಲ್ 14
2. ಮನಮೈ(ತೆಲುಗು ಸಿನಿಮಾ) ಏಪ್ರಿಲ್ 14
ಹಾಟ್‌ಸ್ಟರ್
1. ದಿ ಸ್ಟೋಲೆನ್ ಗರ್ಲ್(ವೆಬ್ ಸೀರಿಸ್) ಏಪ್ರಿಲ್ 16
2. ಮೇರಿ ಹಸ್ಬೆಂಡ್ ಕಿ ಬೀವಿ(ಹಿಂದಿ ಸಿನಿಮಾ) ಏಪ್ರಿಲ್ 18
3. ಲಾ ಅಂಡ್ ಆರ್ಡರ್ : ಆರ್ಗನೈಜ್ಡ್ ಕ್ರೈಂ ಸೀಸನ್-5(ವೆಬ್ ಸೀರಿಸ್) ಏಪ್ರಿಲ್ 18
4. ದಿ ವೇ ಐ ಸೀ ಇಟ್(ಡಾಕ್ಯೂ ಸಿನಿಮಾ) ಏಪ್ರಿಲ್ 18
ಸನ್ ನೆಕ್ಸ್ಟ್ ಓಟಿಟಿ
1. ಕಾದಲ್ ಎಂಬದು ಪೋದು ಉಡಮೈ(ತಮಿಳು ಸಿನಿಮಾ) ಏಪ್ರಿಲ್ 15


Click it and Unblock the Notifications











