OTTಯಿಂದ 'ಗಾಳಿಪಟ 2' ಚಿತ್ರಕ್ಕೆ ಭಾರಿ ಬೇಡಿಕೆ!

ಕನ್ನಡದಲ್ಲಿ ತೆರೆ ಕಂಡು ಸೂಪರ್ ಹಿಟ್ ಆದ ಚಿತ್ರ ಗಾಳಿಪಟ. ಗಾಳಿಪಟ ಸಿನಿಮಾ ಗಣೇಶ್, ದಿಗಂತ್ ಮತ್ತು ಗಾಯಕ ರಾಜೇಶ್‌ ಕೃಷ್ಣನ್ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾ.‌ ಈಗ ಈ‌ ಚಿತ್ರದ ಸೀಕ್ವೆಲ್ ಬರ್ತಿದೆ. ಸದ್ಯ ಸಿನಿಮಾದ ಶೂಟಿಂಗ್ ಕೊನೆ ಹಂತಕ್ಕೆ ಬಂದಿದೆ. ಇನ್ನೇನಿದ್ದರು ಸಿನಿಮಾ ರಿಲೀಸ್‌ಗೆ ರೆಡಿ ಆಗೋದೊಂದೆ ಬಾಕಿ ಇದೆ.

ಈಗಾಗಲೇ ನಟ ಗಣೇಶ್ ಮತ್ತು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ.‌ ಸದ್ಯ ಚಿತ್ರದ ಮತ್ತೊಂದು ಅಪ್ಡೇಟ್ ಹೊರ ಬಂದಿದೆ. ಗಾಳಿಪಟ 2 ಚಿತ್ರ ರಿಲೀಸ್‌ಗೂ ಮುನ್ನವೇ ಒಟಿಟಿಯಲ್ಲಿ ಸಿನಿಮಾ ಬರುವುದು ಪಕ್ಕಾ ಆಗಿದೆ‌.

ಈ ಚಿತ್ರ ಒಟಿಟಿಗೆ ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಬಗ್ಗೆ ರಿವೀಲ್ ಆಗಿದೆ‌. ಜೀ 5ಗೆ ಗಾಳಿಪಟ 2 ಸಿನಿಮಾ ಸೇಲ್ ಆಗಿದೆ. ಎಷ್ಟು ಮೊತ್ತಕ್ಕೆ ಸಿನಿಮಾ ಸೇಲ್ ಆಯ್ತು, ಯಾವಾಗ ಚಿತ್ರ ರಿಲೀಸ್ ಆಗುತ್ತೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...

Gaalipata 2 Kannada Movie Sold To Zee5 Ott For Huge Price

ಗಾಳಿಪಟ 2 ಸಿನಿಮಾ ಬಗ್ಗೆ ಹರಿದಾಡುತ್ತಿರುವ ಹೊಸ ಸುದ್ದಿ ಅಂದರೆ, ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ. ಚಿತ್ರದ ಟಿವಿ ಮತ್ತು ಒಟಿಟಿ ಹಕ್ಕುಗಳು ಒಟ್ಟಿಗೆ ಸೆಲ್ ಆಗಿವೆ. ಇದೇ ಮೊದಲ ಬಾರಿಗೆ ನಟ ಗಣೇಶ್ ಸಿನಿಮಾ ಒಂದು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿವೆ.

8 ಕೋಟಿಗೆ ಸೇಲ್ ಆಯ್ತು ಗಾಳಿಪಟ2!

ಸಿನಿಮಾದ ಸ್ಯಾಟಲೈಟ್ ರೈಟ್ಸ್, ಆಡಿಯೋ ಹಕ್ಕು ಮತ್ತು ಒಟಿಟಿಗೆ ಸೇರಿದಂತೆ ಒಟ್ಟು 8 ಕೋಟಿ ರೂಪಾಯಿಗೂ ಹೆಚ್ಚು ಪ್ರೀ-ರಿಲೀಸ್ ವಹಿವಾಟು ಆಗಿದೆಯಂತೆ. ಸಿನಿಮಾ ಮತ್ತು ಹಾಡುಗಳ ಮೇಲೆ ನಿರೀಕ್ಷೆ ಇರುವ ಕಾರಣಕ್ಕೆ ಇಷ್ಟೊಂದು ಮೊತ್ತಕ್ಕೆ ವ್ಯಾಪಾರ ಆಗಿದೆ. ಈ ಮೂಲಕ ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರದಲ್ಲೂ ಕಾಮಿಡಿ ಮತ್ತು ಲವ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆಯಂತೆ.

ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಮತ್ತು ದಿಗಂತ್ ನಟನೆಯ ಗಾಳಿಪಟ-2 ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ. ಗಾಳಿಪಟ ಭಾಗ ಒಂದು 2008 ರಲ್ಲಿ ತೆರೆಕಂಡಿತ್ತು. ಯೋಗ್‌ರಾಜ್ ಭಟ್‌ ನಿರ್ದೇಶನದಲ್ಲಿ ಬಂದ ಗಾಳಿಪಟ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಈ ಜೋಡಿ ಮತ್ತೆ ವಾಪಸ್‌ ಆಗಿದ್ದು, ನಿರೀಕ್ಷೆಗೆ ಕಾರಣ ಆಗಿದೆ.

ಗಣೇಶ್ ಮತ್ತು ದಿಗಂತ್ ಜೊತೆಗೆ ಹಿರಿಯ ನಟ ಅನಂತ್ ನಾಗ್, ನಿರ್ದೇಶಕ ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಮತ್ತು ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ, ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಗಾಳಿಪಟ 2 ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯದಲ್ಲಿಯೇ ಸಿನಿಮಾದ ಅಧಿಕೃತ ರಿಲೀಸ್ ದಿನಾಂಕ ಪ್ರಕಟಗೊಳ್ಳಲಿದೆ.

More from Filmibeat

English summary
Gaalipata 2 Kannada Movie Sold To Zee5 Ott For Huge price, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X