OTT releases this week: ಮಿಸ್ ಶೆಟ್ಟಿ ಜೊತೆ ಗದರ್-2 ಈ ವಾರ ಓಟಿಟಿಗೆ; ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಮತ್ತೊಂದು ವೀಕೆಂಡ್ ಬರ್ತಿದೆ. ಓಟಿಟಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಸಿದ್ಧವಾಗ್ತಿದೆ. ಈ ವಾರ ಥಿಯೇಟರ್‌ಗಳಲ್ಲಿ ದೊಡ್ಡ ಸಿನಿಮಾಗಳು ಬರ್ತಿಲ್ಲ. ಆದರೆ ಸೂಪರ್ ಹಿಟ್ ಸಿನಿಮಾಗಳು ಡಿಜಿಟಲ್ ಫ್ಲಾಟ್‌ಪಾರ್ಮ್‌ಗೆ ಎಂಟ್ರಿ ಕೊಡ್ತಿದ್ದು ಸಿನಿರಸಿಕರಿಗೆ ವೀಕೆಂಡ್‌ನಲ್ಲಿ ಸಖತ್ ಮಜಾ ಕಾದಿದೆ. 'ಮಿಸ್ ಶೆಟ್ಟಿ ಮಿಸ್ಟರ್' ಪೊಲಿಶೆಟ್ಟಿ ಜೊತೆಗೆ 'ಗದರ್-2' ಸಿನಿಮಾ ಕೂಡ ಸ್ಟ್ರೀಮಿಂಗ್ ಆಗಲಿದೆ.

ಈ ವಾರ ಕನ್ನಡದಲ್ಲಿ ವಿನೋದ್ ಪ್ರಭಾಕರ್ ನಟನೆಯ 'ಫೈಟರ್', ಚಿರು ಸರ್ಜಾ ಕೊನೆ ಸಿನಿಮಾ 'ರಾಜಮಾರ್ತಾಂಡ, ಮಾಲಾಶ್ರೀ ಅಭಿನಯದ 'ಮಾರಕಾಸ್ತ್ರ' ಸೇರಿದಂತೆ ಐದಾರು ಸಿನಿಮಾಗಳು ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಆದರೆ ಓಟಿಟಿಗೆ ಕನ್ನಡ ಸಿನಿಮಾ ಸಿನಿಮಾ, ವೆಬ್‌ ಸೀರಿಸ್ ಬರೋದೇ ಕಮ್ಮಿ. 'ಮುಂಬೈ ಡೈರೀಸ್- 2' ಸೇರಿದಂತೆ ಇನ್ನಷ್ಟು ವೆಬ್‌ ಸೀರಿಸ್‌ಗಳು ಸಹ ಈ ವಾರ ಓಟಿಟಿಯಲ್ಲಿ ಸಿಗಲಿದೆ.

Gadar 2 to Miss Shetty Mr Polishetty: OTT releases this week Movies web series list

ನೆಟ್‌ಫ್ಲಿಕ್ಸ್‌

1. ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ

ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಬಹಳ ದಿನಗಳ ಬಳಿಕ ನಟಿಸಿದ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಸೆಪ್ಟೆಂಬರ್ 7ಕ್ಕೆ ರಿಲೀಸ್ ಆಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಪಿ. ಮಹೇಶ್ ಬಾಬು ಎಂಬುವವರು ನಿರ್ದೇಶಿಸಿದ ಈ ಕಾಮಿಡಿ ಎಂಟರ್‌ಟೈನರ್‌ನಲ್ಲಿ ನವೀನ್ ಪೊಲಿಶೆಟ್ಟಿ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಕಥೆಯಲ್ಲಿ ಸ್ವೀಟಿ ಅಭಿಮಾನಿಗಳ ಮನಗೆದ್ದರು. ತೆಲುಗು ಜೊತೆಗೆ ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಅಕ್ಟೋಬರ್ 5ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

2. ಬೆಕ್‌ಹ್ಯಾಮ್ - ಡಾಕ್ಯೂ ಸೀರಿಸ್ - ಅಕ್ಟೋಬರ್ 4

3. ಲುಪಿನ್ ಭಾಗ 3 - ಸಿನಿಮಾ - ಅಕ್ಟೋಬರ್ 5

4. ಎವ್ರಿಥಿಂಗ್ ನೋ- ವೆಬ್ ಸೀರಿಸ್- ಅಕ್ಟೋಬರ್ 5

5. ಖುಫಿಯಾ - ಸಿನಿಮಾ - ಅಕ್ಟೋಬರ್ 5

6. ಸ್ಟ್ರಾಂಗ್ ಗರ್ಲ್ ನಾಮ್-ಸೂನ್ - ವೆಬ್ ಸೀರೀಸ್ - ಅಕ್ಟೋಬರ್ 7

7. ಇನ್ಸಿಡಿಯಸ್ - ಸಿನಿಮಾ- ಅಕ್ಟೋಬರ್ 6

8. ಎ ಡೆಡ್ಲಿ ಇನ್ವಿಟೇಷನ್- ಸಿನಿಮಾ- ಅಕ್ಟೋಬರ್ 6

9. ಫೇರ್ ಪ್ಲೇ - ಸಿನಿಮಾ - ಅಕ್ಟೋಬರ್ 6

10. ಬಲ್ಲೆರಿನಾ- ಸಿನಿಮಾ - ಅಕ್ಟೋಬರ್ 6

ಜೀ-5

1. ಗದರ್- 2

ಈ ವರ್ಷ ಬಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆದ ಗದರ್- 2 ಸಿನಿಮಾ ಅಕ್ಟೋಬರ್ 6 ರಂದು ಜೀ-5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಅಮೀಶಾ ಪಟೇಲ್ ಹಾಗೂ ಉತ್ಕರ್ಷ್ ಶರ್ಮಾ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಅನಿಲ್ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ವಿಶ್ವದಾದ್ಯಂತ 690 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಸೋಲಿನ ಸುಳಿಗೆ ಸಿಲುಕಿದ್ದ ಬಾಲಿವುಡ್‌ಗೆ ಗೆಲುವಿನ ಟಾನಿಕ್ ನೀಡಿತ್ತು.

ಡಿಸ್ನಿ+ ಹಾಟ್‌ಸ್ಟಾರ್

1. ಹಾಂಟೆಡ್ ಮ್ಯಾನ್ಷನ್ - ಸಿನಿಮಾ- ಅಕ್ಟೋಬರ್ 4

2. ಲೋಕಿ ಸೀಸನ್ 2 - ವೆಬ್ ಸೀರಿಸ್ - ಅಕ್ಟೋಬರ್ 6

ಅಮೇಜಾನ್ ಪ್ರೈಂ

1. ಮಿಸ್ಟರ್ ಪ್ರೆಗ್ನೆಂಟ್- ಸಿನಿಮಾ- ಅಕ್ಟೋಬರ್ 6

2. ಟೋಟಲಿ ಕಿಲ್ಲರ್ - ಸಿನಿಮಾ - ಅಕ್ಟೋಬರ್ 6

3. ಡೆಸ್ಪರೇಟ್ಲಿ ಸೀಕಿಂಗ್ ಸೋಲ್ಮೇಟ್ - ಡಾಕ್ಯೂ ಸೀರಿಸ್ - ಅಕ್ಟೋಬರ್ 6

4. ಮುಂಬೈ ಡೈರೀಸ್ ಸೀಸನ್- 2

ದಶಕದ ಹಿಂದೆ ಮುಂಬೈನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನ ಬಹಳ ಸಮಸ್ಯೆ ಎದುರಿಸುವಂತಾಯಿತು. ಆ ಸಂದರ್ಭಗಳಲ್ಲಿ ನಡೆದ ಘಟನೆಗಳನ್ನು ಆಧರಿಸಿ ನಿಖಿಲ್ ಅದ್ವಾನಿ ಮುಂಬೈ ಡೈರೀಸ್ ವೆಬ್‌ ಸೀರಿಸ್ ಕಟ್ಟಿಕೊಟ್ಟಿದ್ದಾರೆ. 2ನೇ ಸೀಸನ್ ಇದೇ ಅಕ್ಟೋಬರ್ 6ರಂದು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಸಿಗಲಿದೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

1. ಮಿಸ್ಟರ್ ಪ್ರೆಗ್ನೆಂಟ್- ಸಿನಿಮಾ- ಅಕ್ಟೋಬರ್ 6

2. ದಿ ಗ್ರೇಟ್ ಇಂಡಿಯನ್ ಸೂಸೈಡ್- ವೆಬ್ ಸೀರಿಸ್- ಅಕ್ಟೋಬರ್ 6

More from Filmibeat

English summary
OTT releases this week; Gadar 2, Miss Shetty Mr Polishetty, Mumbai Diaries Season 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X