ವೆಬ್ ಸರಣಿ ಆಗುತ್ತಿದೆ ದೇಶದ ಎಕಾನಮಿ ಅಲುಗಿಸಿದ್ದ ಸ್ಕ್ಯಾಮ್‌: ತೆಲಗಿ ಪಾತ್ರಕ್ಕೆ ನಟ ಆಯ್ಕೆ

ದೇಶದ ಎಕಾನಮಿಯನ್ನೇ ಅಲುಗಿಸಿದ್ದ ಚಾಪಾ ಕಾಗದ ಹಗರಣ ವೆಬ್ ಸರಣಿ ರೂಪದಲ್ಲಿ ತೆರೆಗೆ ಬರುತ್ತಿದೆ. ಕರ್ನಾಟಕವೇ ಮೂಲವಾಗಿದ್ದ ಈ ಹಗರಣದ ಸೂತ್ರಧಾರಿ ಅಬ್ದುಲ್ ಕರೀಂ ತೆಲಗಿ ಪಾತ್ರಕ್ಕೆ ನಟನ ಆಯ್ಕೆಯೂ ಆಗಿದೆ.

ಲಕ್ಷ ಕೋಟಿಗೂ ದೊಡ್ಡ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿ ಕುರಿತಂತೆ ವೆಬ್ ಸರಣಿ ನಿರ್ಮಾಣವಾಗುತ್ತಿತ್ತು, ತೆಲಗಿ ಪಾತ್ರಕ್ಕೆ ಗಗನ್ ದೇವ್ ರಾಯರ್ ಅನ್ನು ಆಯ್ಕೆ ಮಾಡಲಾಗಿದೆ.

ಈ ಹಿಂದೆ 'ಸ್ಕ್ಯಾಮ್ 1992' ವೆಬ್ ಸರಣಿ ನಿರ್ದೇಶಿಸಿ ದೊಡ್ಡ ಖ್ಯಾತಿ ಗಳಿಸಿದ್ದ ಹನ್ಸಲ್ ಮೆಹ್ತಾ ಮತ್ತು ತಂಡವೇ ಈಗ 'ಸ್ಕ್ಯಾಮ್ 2003' ಹೆಸರಿನಲ್ಲಿ ಕರೀಂ ತೆಲಗಿಯ ಜೀವನ, ಛಾಪಾ ಕಾಗದ ಹಗರಣವನ್ನು ತೆರೆಗೆ ತರುತ್ತಿದೆ.

Gagan Dev Rair Cast As Abdul Kareem Telgi In Web Series Scam 2003

ಈ ಕುರಿತ ಸಣ್ಣ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಟೀಸರ್‌ನಲ್ಲಿ ತೆಲಗಿ ಪಾತ್ರದಲ್ಲಿ ನಟಿಸಲಿರುವ ಗಗನ್ ದೇವ್ ರಾಯರ್ ಅನ್ನು ಪರಿಚಯಿಸಲಾಗುತ್ತಿದೆ. ಗಗನ್ ದೇವ್ ರಾಯರ್ ಚಿತ್ರ ನೋಡಿದ ನೆಟ್ಟಿಗರು ಕರೀಂ ತೆಲಗಿಯನ್ನೇ ಹೋಲುವ ನಟನನ್ನು ಅರಸಿ ತಂದಿದ್ದಾರೆ ಹನ್ಸಲ್ ಮೆಹ್ತಾ ಎಂದಿದ್ದಾರೆ.

ಗಗನ್ ದೇವ್ ಈ ಹಿಂದೆ 'ಸೋಂಚರಿಯಾ', 'ಎ ಸೂಟೆಬಲ್ ಬಾಯ್', ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಗನ್ ದೇವ್ ಅವರನ್ನು ತೆಲಗಿ ಪಾತ್ರಕ್ಕೆ ಆಯ್ಕೆ ಮಾಡಿರುವುದಕ್ಕೆ ಹಲವು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. 'ಕೊನೆಗೂ ಅದ್ಭುತ ನಟ ಗಗನ್ ಸಲ್ಲಬೇಕಾದ ಗೌರವ ಈ ವೆಬ್ ಸರಣಿ ಮೂಲಕ ಸಲ್ಲಲಿದೆ'' ಎಂದಿದ್ದಾರೆ ಒಬ್ಬರು. ''ತೆಲಗಿಯಂತೆಯೇ ಕಾಣುವ ಹಾಗೂ ಅದ್ಭುತವಾಗಿ ನಟನೆಯನ್ನೂ ಮಾಡಬಲ್ಲ ನಟನನ್ನು ಹುಡುಕಿ ತಂದಿದ್ದಾರೆ. ವೆಬ್ ಸರಣಿ ನೋಡಲು ಕಾತರ ದುಪ್ಪಟ್ಟಾಗಿದೆ'' ಎಂದು ಕಮೆಂಟ್ ಮಾಡಿದ್ದಾರೆ ಮತ್ತೊಬ್ಬ ನೆಟ್ಟಿಗ.

ದೇಶ ಕಂಡ ಬೃಹತ್ ಹಗರಣದ ರೂವಾರಿ ಕರೀಂ ಲಾಲ್ ತೆಲಗಿ. ನಕಲಿ ಛಾಪಾ ಕಾಗದದಿಂದ ಲಕ್ಷಾಂತರ ಕೋಟಿಗಳನ್ನು ತೆಲಗಿ ಗಳಿಸಿದ್ದ. ಡ್ಯಾನ್ಸ್‌ ಬಾರ್‌ಗಳಿಗೆ ಹೋಗುವ ಚಟ ಹೊಂದಿದ್ದ ತೆಲಗಿ, ಮುಂಬೈನ ಗ್ರ್ಯಾಂಟ್ ರೋಡ್‌ನ ಟೊಪಾಜ್ ಬಾರ್‌ನಲ್ಲಿ ಒಂದೇ ರಾತ್ರಿಗೆ ಆಗಿನ ಕಾಲಕ್ಕೆ 90 ಲಕ್ಷ ರುಪಾಯಿಯನ್ನು ಬಾರ್ ಡ್ಯಾನ್ಸರ್‌ಗಳ ಮೇಲೆ ಸುರಿದಿದ್ದನಂತೆ!

2001ರಲ್ಲಿ ಬಂಧನಕ್ಕೆ ಒಳಗಾಗಿದ್ದ ತೆಲಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2017ರಲ್ಲಿ ನಿಧನ ಹೊಂದಿದ.

More from Filmibeat

English summary
Gagan Dev Rair cast as Abdul Kareem Telgi in web series scam 2003. Hansal Mehta directing the web series. web series will stream on Sony Liv.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X