Game Of Thrones: ಕನ್ನಡಕ್ಕೆ ಡಬ್ ಆಗಿ 'ಗೇಮ್ ಆಫ್ ಥ್ರೋನ್ಸ್' ಸ್ಟ್ರೀಮಿಂಗ್ ಶುರು: ಟ್ವಿಸ್ಟ್ ಏನಂದ್ರೆ?

ಸದ್ಯ ವಿಶ್ವದಾದ್ಯಂತ ಓಟಿಟಿ ಜಮಾನ ಶುರುವಾಗಿದೆ. ಥಿಯೇಟರ್ ಸಂಸ್ಕೃತಿಯನ್ನೇ ಅಲುಗಾಡಿಸುವ ಮಟ್ಟಕ್ಕೆ ಬೆಳೆದಿದೆ. ನೇರವಾಗಿ ದೊಡ್ಡ ದೊಡ್ಡ ಸಿನಿಮಾಗಳೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡ್ತಿವೆ. ಇನ್ನು ವೆಬ್‌ ಸೀರಿಸ್ ಕತೆ ಕೇಳೋದೆ ಬೇಡ. ಸಿನಿಮಾಗಳನ್ನು ಮೀರಿಸುವಂತೆ ವೆಬ್‌ ಸೀರಿಸ್‌ಗಳು ನಿರ್ಮಾಣವಾಗಿ ಪ್ರತಿ ವಾರ ಓಟಿಟಿ ವೀಕ್ಷಕರನ್ನು ರಂಜಿಸುತ್ತಿವೆ.

ಓಟಿಟಿ ಬರುವುದಕ್ಕೂ ಮುನ್ನ 'ಗೇಮ್ ಆಫ್ ಥ್ರೋನ್ಸ್' ಜಗತ್ತಿನ ನಂಬರ್ ಒನ್ ಟಿವಿ ಸೀರಿಸ್ ಎನಿಸಿಕೊಂಡಿತ್ತು. 2011ರಲ್ಲಿ ಶುರುವಾದ ಈ ಸೀರಿಸ್‌ಗೆ ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಎಸ್‌. ಎಸ್‌ ರಾಜಮೌಳಿ ಸೇರಿದಂತೆ ದೊಡ್ಡ ದೊಡ್ಡ ಫಿಲ್ಮ್ ಮೇಕರ್ಸ್, ಸ್ಟಾರ್ಸ್ ಈ ಸೀರಿಸ್‌ ನೋಡಿ ಮೆಚ್ಚಿಕೊಂಡಿದ್ದರು. ಇದರಿಂದ ಪ್ರೇರಣೆಗೊಂಡು ಸಿನಿಮಾ, ವೆಬ್‌ ಸೀರಿಸ್‌ಗಳನ್ನು ಕಟ್ಟಿ ಕೊಟ್ಟಿದ್ದರು. ಕೆಲ ನಿರ್ದೇಶಕರ ಮೇಲೆ 'ಗೇಮ್ ಆಫ್ ಥ್ರೋನ್ಸ್' ಪ್ರಭಾವ ಇದೆ.

Game-Of-Thrones-streaming-in-kannada

ಈ ಅಮೇರಿಕನ್ ಫ್ಯಾಂಟಸಿ, ಆಕ್ಷನ್ ಸೀರಿಸ್ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೆ. ಕೊಂಚ ಹಸಿಬಿಸಿ ದೃಶ್ಯಗಳಿಂದಲೂ ಈ ಸೀರಿಸ್ ಸದ್ದು ಮಾಡಿತ್ತು. ಇಂಗ್ಲೀಷ್‌ನಲ್ಲಿ ಈ HBO ಸೀರಿಸ್‌ ಅನ್ನು 'ಸ್ಟಾರ್ ವರ್ಲ್ಡ್' ಮತ್ತು 'ಸ್ಟಾರ್ ವರ್ಲ್ಡ್ HD' ಪ್ರಸಾರ ಮಾಡಿತ್ತು. ಇಂದಿನಿಂದ (ನವೆಂಬರ್ 8) 'ಗೇಮ್ ಆಫ್ ಥ್ರೋನ್ಸ್' ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಸ್ಟ್ರೀಮ್ ಆಗ್ತಿದೆ. ಜೀ ಸಿನಿಮಾ ಪ್ರಾದೇಶಿಕ ಭಾಷೆಗಳಲ್ಲಿ ಈ ಮಾಸ್ಟರ್‌ಪೀಸ್‌ ಸಿರೀಸ್ ರಿಲೀಸ್ ಮಾಡಿದೆ.

8 ಸೀಸನ್‌ಗಳಲ್ಲಿ 73 ಎಪಿಸೋಡ್‌ಗಳಾಗಿ 'ಗೇಮ್ ಆಫ್ ಥ್ರೋನ್ಸ್' ವೀಕ್ಷಕರನ್ನು ರಂಜಿಸಿತ್ತು. ಇದೀಗ ಅಷ್ಟು ಸೀಸನ್‌ ನಮ್ಮದೇ ಭಾಷೆಯಲ್ಲಿ ಸಿಗಲಿದೆ. ಈ ವರ್ಷ ಮಾರ್ಚ್‌ನಲ್ಲೇ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಹಾಗೂ HBO ನಡುವೆ ಒಪ್ಪಂದವಾಗಿತ್ತು. ಆ ಬಳಿಕ 'ಗೇಮ್ ಆಫ್ ಥ್ರೋನ್ಸ್', 'ದಿ ವೈರ್', 'ಹೌಸ್ ಆಫ್ ದಿ ಡ್ರ್ಯಾಗನ್' ರೀತಿಯ ಟಾಪ್ ರೇಟೆಡ್ ವೆಬ್ ಸೀರಿಸ್‌ನಿಂದ ತೆಗೆಯಲಾಗಿತ್ತು. ಜಿಯೋ ಸಿನಿಮಾ ಅಂತಹ ಸೀರಿಸ್‌ಗಳನ್ನು ಖರೀದಿಸಿತ್ತು.

ಟಿವಿ ಲೋಕದಲ್ಲಿ ಅತಿಹೆಚ್ಚು ವೀಕ್ಷಣೆ ಕಂಡ ದೊಡ್ಡ ಮಟ್ಟದಲ್ಲಿ ಹಿಟ್ ಆದ ಸೀರಿಸ್‌ 'ಗೇಮ್ ಆಫ್ ಥ್ರೋನ್ಸ್' ಎನ್ನಬಹುದು. ಇಂಗ್ಲೀಷ್‌ನಲ್ಲಿ ಎಲ್ಲಾ ಸೀಸನ್‌ ನೋಡಿ ಮುಗಿಸಿದವರು ಇದ್ದಾರೆ. ಆದರೂ ಬಹಳ ಜನ ಇದನ್ನು ಪ್ರಾದೇಶಿಕ ಭಾಷೆಗಳಲ್ಲಿ ನೋಡಬೇಕು ಎಂದುಕೊಂಡಿದ್ದರು. ಅಂತಹವರಿಗೆ ಜಿಯೋ ಸುವರ್ಣಾಕಾಶ ಹೊತ್ತು ತಂದಿದೆ.

2019 ರಲ್ ಈ ಸೀರಿಸ್ ಮುಗಿದ ಬಳಿಕ 'ಹೌಸ್ ಆಫ್ ಡ್ರಾಗನ್ಸ್' ಹೆಸರಿನಲ್ಲಿ ಮತ್ತೊಂದು ಹೊಸ ಸೀಸನ್ 2022ರಲ್ಲಿ ಪ್ರಾರಂಭವಾಗಿತ್ತು. ಇದೀಗ 'ಗೇಮ್ ಆಫ್ ಥ್ರೋನ್ಸ್' ಕನ್ನಡಕ್ಕೂ ಡಬ್ ಆಗಿ ಬಂದಿದೆ. ದಶಕಗಳ ಕಾಲ ಕನ್ನಡದಲ್ಲಿ ಡಬ್ಬಿಂಗ್‌ಗೆ ಅವಕಾಶ ಇರಲಿಲ್ಲ. ಐದಾರು ವರ್ಷಗಳ ಹಿಂದೆ ಅವಕಾಶ ಸಿಕ್ಕಿತ್ತು. ಆ ಬಳಿಕ ಸಾಕಷ್ಟು ಸಿನಿಮಾಗಳು ಡಬ್ ಆಗಿ ಬರೋಕೆ ಆರಂಭಿಸಿದ್ದವು. ಆದರೆ 'ಗೇಮ್ ಆಫ್ ಥ್ರೋನ್ಸ್' ಕನ್ನಡಕ್ಕೆ ಡಬ್ ಆಗಿ ಬಂದಿರುವ ದೊಡ್ಡ ವೆಬ್ ಸೀರಿಸ್ ಎನ್ನಬಹುದು. 'ಹೌಸ್ ಆಫ್ ಡ್ರಾಗನ್ಸ್' ಸ್ಟ್ರೀಮಿಂಗ್ ಆಗುತ್ತಿದೆ.

'ಗೇಮ್ ಆಫ್ ಥ್ರೋನ್ಸ್' ಸೀರಿಸ್ ಕನ್ನಡಕ್ಕೆ ಡಬ್ ಆಗಿ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ಎಲ್ಲರೂ ಉಚಿತವಾಗಿ ನೋಡಲು ಅವಕಾಶ ಇಲ್ಲ. ಜಿಯೋ ಸಿನಿಮಾ ಚಂದಾದಾರರು ಮಾತ್ರ ವೀಕ್ಷಿಸಲು ಅವಕಾಶ ಇದೆ. ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಸೇರಿದಂತೆ ಸಾಕಷ್ಟು ಸಿನಿಮಾ, ವೆಬ್‌ಸೀರಿಸ್‌ಗಳು ಉಚಿತವಾಗಿ ನೋಡಲು ಲಭ್ಯವಿದೆ. ಆದರೆ 'ಗೇಮ್ ಆಫ್ ಥ್ರೋನ್ಸ್' ನೋಡಲು ಚಂದಾದಾರರು ಆಗಿರಲೇಬೇಕು.

More from Filmibeat

English summary
Game Of Thrones is now available in Jio Cinema in Telugu, Tamil and Kannada audios
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X