twitter
    For Quick Alerts
    ALLOW NOTIFICATIONS  
    For Daily Alerts

    'ಗೇಮ್ ಆಫ್ ಥ್ರೋನ್ಸ್' ಅಭಿಮಾನಿಗಳಿಗೆ ಎಚ್‌ಬಿಓ ಕೊಟ್ಟಿತು ಸಿಹಿ ಸುದ್ದಿ

    |

    ವಿಶ್ವದ ನಂಬರ್ ವೆಬ್ ಸರಣಿ 'ಗೇಮ್ ಆಫ್ ಥ್ರೋನ್ಸ್' ಸರಣಿ ಮುಗಿದು ಏಪ್ರಿಲ್ 14 ಕ್ಕೆ ಮೂರು ವರ್ಷವಾಯಿತು. ಆಗಿನಿಂದಲೂ ಗೇಮ್‌ ಆಫ್ ಥ್ರೋನ್ಸ್‌ನ ಮುಂದುವರಿಸಿ ಎಂಬ ಒತ್ತಾಯ ಕೇಳಿಬರುತ್ತಲೇ ಇತ್ತು. ಇದೀಗ ಎಚ್‌ನಿಒ 'ಗೇಮ್ ಆಫ್ ಥ್ರೋನ್ಸ್' ಸರಣಿಯನ್ನು ಮುಂದುವರೆಸುವುದಾಗಿ ಅಧಿಕೃತವಾಗಿ ಹೇಳಿದೆ.

    'ಗೇಮ್ ಆಫ್ ಥ್ರೋನ್ಸ್' ಸರಣಿಯ ಮುಂದುವರೆದ ಭಾಗವಾಗಿರುವ(?!) 'ಹೌಸ್ ಆಫ್ ದಿ ಡ್ರ್ಯಾಗನ್' ಅನ್ನು ಎಚ್‌ಬಿಓ ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಮುಗಿದು ಬ್ರಿಟನ್‌ನಲ್ಲಿ ಚಿತ್ರೀಕರಣ ಸಹ ಆರಂಭವಾಗಿದೆ.

    'ಹೌಸ್ ಆಫ್‌ ದಿ ಡ್ರ್ಯಾಗನ್'ನ ಮುಖ್ಯ ನಟರೆಲ್ಲ ಒಟ್ಟಿಗೆ ಕೂತು ಚಿತ್ರಕತೆ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಚಿತ್ರವನ್ನು ಎಚ್‌ಬಿಓ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿತ್ತು.

     Game Of Thrones Prequel House Of The Dragon Started Shooting

    'ಹೌಸ್‌ ಆಫ್‌ ದಿ ಡ್ರ್ಯಾಗನ್' ವಿಶೇಷತೆಯೆಂದರೆ ಇದು 'ಗೇಮ್‌ ಆಫ್ ಥ್ರೋನ್ಸ್' ಸರಣಿಯ ಭಾಗವೇ ಆದರು 'ಗೇಮ್‌ ಆಫ್ ಥ್ರೋನ್ಸ್' ಸರಣಿಯ ಮುಂದುವರೆದ ಭಾಗವಲ್ಲ ಬದಲಿಗೆ ಹಿಂದಿನ ಭಾಗ!

    ಹೌದು, 'ಗೇಮ್ ಆಫ್ ಥ್ರೋನ್ಸ್' ವೆಬ್ ಸರಣಿಯ ಕತೆ ನಡೆವ ಕಾಲಕ್ಕಿಂತಲೂ 300 ವರ್ಷ ಹಿಂದೆ ನಡೆವ ಕತೆ ಹೊಂದಿರಲಿದೆ. ಟಾಗೇರಿಯನ್ಸ್, ಸ್ಟಾರ್ಕ್ಸ್, ಲ್ಯಾನಿಸ್ಟರ್ಸ್, ಗ್ರೇಜಾಯ್, ಟಲ್ಲಿ, ಅರೇಯನ್ಸ್ ಇನ್ನೂ ಕೆಲವು ಸಂಸ್ಥಾನಗಳ ಕತೆಯನ್ನು 'ಗೇಮ್ ಆಫ್ ಥ್ರೋನ್ಸ್' ಹೊಂದಿತ್ತು.

    ಆದರೆ 'ಹೌಸ್ ಆಫ್‌ ದಿ ಡ್ರ್ಯಾಗನ್‌'ನಲ್ಲಿ ಕತೆ ನಡೆಯುವ ವಿಸ್ತೃತ ಭೂಪ್ರದೇಶದ ಏಕೈಕ ವಾರಸುದಾರರಾಗಿದ್ದ ಟಾರ್ಗೇರಿಯನ್ಸ್ ಬಗ್ಗೆ ಆಗಿದ್ದು, ಹೇಗೆ ದೊಡ್ಡ ಯುದ್ಧ ನಡೆದು ವಿವಿಧ ಸಂಸ್ಥಾನಗಳು ಹುಟ್ಟಿಕೊಂಡವು, ಡ್ರಾಗನ್‌ಗಳು ಹೇಗೆ ಅವಸಾನಗೊಂಡವು ಎಂಬ ಕತೆಯನ್ನು ಒಳಗೊಂಡಿರಲಿದೆ.

     Game Of Thrones Prequel House Of The Dragon Started Shooting

    'ಗೇಮ್ ಆಫ್ ಥ್ರೋನ್ಸ್‌'ನ ಕೊನೆಯ ಎಪಿಸೋಡ್‌ನಲ್ಲಿ ಲ್ಯಾನಿಸ್ಟರ್ಸ್‌ ರಾಣಿ ಸರ್ಸಿಯನ್ನು ಕೊಂದು ಟಾರ್ಗೇರಿಯನ್ ಕೊನೆಯ ರಾಣಿ ಡೆನಿರಿಸ್ ಟಾರ್ಗೇರಿಯನ್‌ ಸಿಂಹಾಸನದ ಮೇಲೆ ಕೂರುವ ಸಮಯದಲ್ಲಿ ಆಕೆಯನ್ನು ಆಕೆಯ ಪ್ರಿಯತನ ಜಾನ್ ಸ್ನೋ ಕೊಲ್ಲುತ್ತಾನೆ. ಡೆನಿರಿಸ್‌ನ ಮೃತದೇಹವನ್ನು ಎತ್ತಿಕೊಂಡು ಡ್ರ್ಯಾಗನ್‌ ದೂರ ಹಾರಿ ಹೋಗುತ್ತದೆ. ನಂತರ ಸ್ಟಾರ್ಕ್ ಕುಟುಂಬದ ಬ್ರಾನ್ ಸ್ಟಾರ್ಕ್ (ತ್ರೀ ಐಯ್ಡ್ ರೇಬನ್) ಅನ್ನು ರಾಜನನ್ನಾಗಿ ಮಾಡಲಾಗುತ್ತದೆ. ಅಲ್ಲಿಗೆ 'ಗೇಮ್ ಆಫ್ ಥ್ರೋನ್ಸ್' ಕತೆ ಮುಗಿದಿದೆ.

    English summary
    Game of Thrones web series prequel 'House Of The Dragon' started shooting in UK said HBO.
    Wednesday, April 28, 2021, 14:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X