For Quick Alerts
  ALLOW NOTIFICATIONS  
  For Daily Alerts

  ದಸರಾ ಹಬ್ಬದಂದೇ ಓಟಿಟಿಯಲ್ಲಿ 'ಗಾಳಿಪಟ' ಹಾರಿಸಲು ಹೊರಟ ಗಣಿ, ಯೋಗರಾಜ್‌ ಭಟ್: ಇಲ್ಲಿದೆ ಡಿಟೈಲ್ಸ್!

  |

  ಬರೋಬ್ಬರಿ 14 ವರ್ಷದ ಬಳಿಕ 'ಗಾಳಿಪಟ' ಸೀಕ್ವೆಲ್‌ ತೆರೆಮೇಲೆ ಬಂದಿತ್ತು. ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡಾ ದಿಗಂತ್ ಹಾಗೂ ಯೋಗರಾಜ್‌ ಭಟ್ ಕಾಂಬಿನೇಷನ್ ಮೋಡಿ ಮಾಡಿತ್ತು. ಇವರೊಂದಿಗೆ ನಿರ್ದೇಶಕ ಪವನ್ ಕುಮಾರ್ ಹೊಸದಾಗಿ ಎಂಟ್ರಿ ಕೊಟ್ಟು 'ಗಾಳಿಪಟ' ಹಾರಿಸಿದ್ದರು.

  ಥಿಯೇಟರ್‌ನಲ್ಲಿ 'ಗಾಳಿಪಟ 2' ಸಖತ್ತಾಗಿಯೇ ಸೌಂಡ್ ಮಾಡಿತ್ತು. ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ಟರ ಕಾಂಬಿನೇಷನ್ ಮೋಡಿ ಮಾಡಿತ್ತು. ಆಗಸ್ಟ್ 12ರಂದು ರಾಜ್ಯಾದ್ಯಂತ ತೆರೆಕಂಡು ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.

  12 ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿಯಲಿರೋ ಗೋಲ್ಡನ್ ಸ್ಟಾರ್ ಗಣೇಶ್: ಇಲ್ಲಿದೆ ಡಿಟೈಲ್ಸ್!12 ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿಯಲಿರೋ ಗೋಲ್ಡನ್ ಸ್ಟಾರ್ ಗಣೇಶ್: ಇಲ್ಲಿದೆ ಡಿಟೈಲ್ಸ್!

  ರಾಜ್ಯ ಅಷ್ಟೇ ಅಲ್ಲ. ಹೊರ ರಾಜ್ಯ ಹಾಗೂ ವಿದೇಶದಲ್ಲೂ ಭಟ್ರು ಮತ್ತೆ ಹಾರಿಸಿದ್ದ 'ಗಾಳಿಪಟ'ಗೆ ನಗುವಿನ ಸ್ವಾಗತ ಸಿಕ್ಕಿತ್ತು. ಸ್ನೇಹ, ಪ್ರೇಮ, ವಿರಹ ಇವೆಲ್ಲವನ್ನೂ ಬೆರೆಸಿ ಹಾರಾಡಲು ಬಿಟ್ಟಿದ್ದ ಭಟ್ರ ಫಾರ್ಮೂಲ ಕ್ಲಿಕ್ ಆಗಿತ್ತು. ಈಗ ಅದೇ ಸಿನಿಮಾ ಓಟಿಟಿಗೂ ಲಗ್ಗೆ ಇಡುತ್ತಿದೆ. ಹೆಚ್ಚಿನ ಡಿಟೈಲ್ಸ್ ಇಲ್ಲಿದೆ.

   ಜೀ 5 ಓಟಿಟಿಗೆ 'ಗಾಳಿಪಟ 2' ಹಾರಾಟ

  ಜೀ 5 ಓಟಿಟಿಗೆ 'ಗಾಳಿಪಟ 2' ಹಾರಾಟ

  ಇತ್ತೀಚೆಗೆ ಜೀ5 ಓಟಿಟಿಯಲ್ಲಿ ಕಿಚ್ಚ ಸುದೀಪ್ ನಟಿಸಿದ್ದ 'ವಿಕ್ರಾಂತ್ ರೋಣ' ಸಿನಿಮಾ ಸಂಚಲನ ಸೃಷ್ಟಿಸಿತ್ತು. 1000 ಮಿಲಿಯನ್ ಅಧಿಕ ನಿಮಿಷಕ್ಕೂ ಹೆಚ್ಚು ಕಾಲ ಜನರು ಸಿನಿಮಾ ವೀಕ್ಷಿಸಿದ್ದರು. ಈಗಾಗಲೇ ಟಾಪ್‌ ಟ್ರೆಂಡಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಈಗ ನಾಡಹಬ್ಬ ದಸರಾಗೆ ಗೋಲ್ಡನ್‌ ಸ್ಟಾರ್ ಹಾಗೂ ಗಣೇಶ್ ಕಾಂಬಿನೇಷನ್ ಸಿನಿಮಾ 'ಗಾಳಿಪಟ 2' ಪ್ರೀಮಿಯರ್ ಆಗುತ್ತಿದೆ. ಜೀ 5 ಈಗಾಗಲೇ ಸಂಭ್ರಮಕ್ಕೆ ಸಜ್ಜಾಗಿ ನಿಂತಿದೆ.

  ವಿದೇಶದಲ್ಲಿ 250 ಶೋ ಕಂಡ 'ಗಾಳಿಪಟ 2': ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?ವಿದೇಶದಲ್ಲಿ 250 ಶೋ ಕಂಡ 'ಗಾಳಿಪಟ 2': ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

   ಸ್ಟಾರ್ ಕಾಸ್ಟ್ ಹೈಲೈಟ್

  ಸ್ಟಾರ್ ಕಾಸ್ಟ್ ಹೈಲೈಟ್

  ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಜೊತೆ ಯೋಗ್‌ರಾಜ್ ಭಟ್ ನಿರ್ದೇಶನ ಅಂದ್ಮೇಲೆ ಅಲ್ಲಿ ಮನರಂಜನೆಗೇನೂ ಕಮ್ಮಿಯಿಲ್ಲ. ಇವರೊಂದಿಗೆ ಈ ಬಾರಿ ಪವನ್ ಕುಮಾರ್ ಕೂಡ ಮೂವರಲ್ಲೊಬ್ಬ ಹೀರೊ ಆಗಿ ನಟಿಸಿದ್ದಾರೆ. ಜೊತೆಗೆ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಮೂವರು ನಾಯಕಿಯರು. ಒಂದೊಳ್ಳೆ ಫ್ಯಾಮಿಲಿ ಎಂಟರ್ ಟೈನರ್ ಎನಿಸಿಕೊಂಡಿದ್ದ 'ಗಾಳಿಪಟ 2' ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಇದೇ ಸಿನಿಮಾ ಅಕ್ಟೋಬರ್ 5ರಿಂದ ಜೀ5 ಓಟಿಟಿಯಲ್ಲಿ ಸದ್ದು ಮಾಡೋಕೆ ಸಜ್ಜಾಗಿದೆ.

   ಅನಂತ್‌ನಾಗ್ ಕನ್ನಡ ಮೇಷ್ಟ್ರು

  ಅನಂತ್‌ನಾಗ್ ಕನ್ನಡ ಮೇಷ್ಟ್ರು

  'ಗಾಳಿಪಟ 2' ಪಾತ್ರಧಾರಿಗಳು ಇಲ್ಲೂ ಮುಂದೂವರೆದಿತ್ತು. ಹಿರಿಯ ನಟ ಅನಂತ್ ನಾಗ್ ಕನ್ನಡ ಮೇಷ್ಟ್ರಾಗಿ ಕಾಣಿಸಿಕೊಂಡಿದ್ದಾರೆ. ಹಾಗೇ ಪದ್ಮಜಾ ರಾವ್, ಸುಧಾಬೆಳವಾಡಿ, ರಂಗಾಯಣ ರಘು ಇಲ್ಲೂ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸಂತೋಷ್ ರೈ ಪಾತಾಜೆ ಕ್ಯಾಮರಾ ಟೆಕ್ನಿಕಲ್ ಟೀಮ್.

  ಬಾಕ್ಸಾಫೀಸ್‌ನಲ್ಲಿ 'ಗಾಳಿಪಟ 2' ಭರ್ಜರಿ ಸಕ್ಸಸ್: ಗೆಲುವಿಗೆ 5 ಪ್ರಮುಖ ಕಾರಣಗಳು?ಬಾಕ್ಸಾಫೀಸ್‌ನಲ್ಲಿ 'ಗಾಳಿಪಟ 2' ಭರ್ಜರಿ ಸಕ್ಸಸ್: ಗೆಲುವಿಗೆ 5 ಪ್ರಮುಖ ಕಾರಣಗಳು?

   ನಿರ್ಮಾಪಕರಿಂದ 3 ಸಿನಿಮಾ ಅನೌನ್ಸ್

  ನಿರ್ಮಾಪಕರಿಂದ 3 ಸಿನಿಮಾ ಅನೌನ್ಸ್

  'ಗಾಳಿಪಟ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿದ್ದಂತೆ ಮೂರು ಸಿನಿಮಾ ಬ್ಯಾಕ್ ಟು ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅರ್ಜುನ್ ಜನ್ಯ ನಿರ್ದೇಶಿಸುತ್ತಿರೋ ಶಿವಣ್ಣ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಇದರೊಂದಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಜೊತೆನೂ ಒಂದು ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲಾ ಸಿನಿಮಾಗಳ ಕೆಲಸನೂ ಆರಂಭ ಆಗಿದೆ. ಈ ಬೆನ್ನಲ್ಲೇ ಜೀ 5 ಓಟಿಟಿಯಲ್ಲಿ 'ಗಾಳಿಪಟ 2' ಹೇಗೆ ಹಾರಾಡುತ್ತೆ ಅನ್ನೋ ಕುತೂಹಲವಿದೆ.

  English summary
  Ganesh Diganth Starrer Yograj Bhat Directed Gaalipata 2 Movie Premiere In Zee 5, Know More.
  Wednesday, September 28, 2022, 17:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X