15 ದಿನಕ್ಕೆ ಓಟಿಟಿಗೆ 'ಗ್ಯಾಂಗ್ಸ್ ಆಫ್ ಗೋದಾವರಿ' ಎಂಟ್ರಿ; ಕನ್ನಡದಲ್ಲೂ ಸ್ಟ್ರೀಮಿಂಗ್

ವಾರದ ಹಿಂದೆ ತೆರೆಕಂಡಿದ್ದ ತೆಲುಗು ಸಿನಿಮಾ 'ಗ್ಯಾಂಗ್ಸ್ ಆಫ್ ಗೋದಾವರಿ' ದಿಢೀರ್ ಓಟಿಟಿಗೆ ಬರ್ತಿದೆ. ಅಧಿಕೃತವಾಗಿ ಸ್ಟ್ರೀಮಿಂಗ್ ದಿನಾಂಕ ಘೋಷಣೆ ಆಗಿದೆ. ವಿಶ್ವಕ್ ಸೇನ್ ನಟನೆಯ ಚಿತ್ರದಲ್ಲಿ ಅಂಜಲಿ, ನೇಹಾ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಎಲೆಕ್ಷನ್ ರಿಸಲ್ಟ್ ಗಡಿಬಿಡಿ ನಡುವೆ ಚಿತ್ರಮಂದಿರಕ್ಕೆ ಬಂದ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು.

ಕೃಷ್ಣ ಚೈತನ್ಯಾ ಈ ಆಕ್ಷನ್ ಡ್ರಾಮಾಗೆ ಆಕ್ಷನ್ ಕಟ್ ಹೇಳಿದ್ದರು. ನಾಸರ್, ಸಾಯಿಕುಮಾರ್, ಹೈಪರ್ ಆದಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಕಾರ್ಯಕ್ರಮಕ್ಕೆ ತೆಲುಗು ನಟ ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆದರೆ ಅವರು ನಟಿ ಅಂಜಲಿ ಜೊತೆ ವರ್ತಿಸಿದ ರೀತಿ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.

Gangs of Godavari Streaming From 14th June On Netflix In Telugu Tamil Malayalam amp amp Kannada

ವೇದಿಕೆಯಲ್ಲೇ ನಟಿ ಅಂಜಲಿ ಅವರನ್ನು ಬಾಲಯ್ಯ ತೂಕಿದ್ದ ಘಟನೆ ನಡೆದಿತ್ತು. ಆಕೆ ಅದನ್ನು ಗಂಭೀರವಾಗಿ ಪರಗಣಿಸಲಿಲ್ಲ. ಬಾಲಕೃಷ್ಣ ನನ್ನ ಆತ್ಮೀಯ ಸ್ನೇಹಿತ ಎಂದು ಹೇಳಿ ಸುಮ್ಮನಾಗಿದ್ದರು. ಆದರೆ ನೆಟ್ಟಿಗರು ಮಾತ್ರ ಬಾಲಯ್ಯ ವಿರುದ್ಧ ಕೆಂಡಾಮಂಡಲವಾಗಿದ್ದರು. ಕಾರ್ಯಕ್ರಮದ ನಡುವೆ ಅವರು ಕುಡಿದು ಈ ರೀತಿ ನಡೆದುಕೊಂಡರು ಎನ್ನುವ ಆರೋಪವೂ ಕೇಳಿಬಂದಿತ್ತು.

ಮೇ 31ಕ್ಕೆ ತೆರೆಗಪ್ಪಳಿಸಿದ್ದ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಸರಿಯಾಗಿ 15 ದಿನಕ್ಕೆ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ. ಜೂನ್ 14ಕ್ಕೆ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಅಚ್ಚರಿ ಮೂಡಿಸಿದೆ. ಕಡಿಮೆ ಅಂದರೂ ಯಾವುದೇ ಸಿನಿಮಾ 22 ದಿನಗಳ ಬಳಿಕ ಓಟಿಟಿಗೆ ಬರುತ್ತದೆ. ಅದಕ್ಕಿಂತ ಮುನ್ನ ಈ ಸಿನಿಮಾ ಬರ್ತಿರೋದು ವಿಪರ್ಯಾಸ.

Gangs of Godavari Streaming From 14th June On Netflix In Telugu Tamil Malayalam amp amp Kannada

ಬಹಳ ಹಿಂದೆಯೇ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಳಿಂದ ತಡವಾಗಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ವಿಶ್ವಕ್ ಸೇನ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಓಟಿಟಿ ಜೊತೆ ಮೊದಲೇ ಒಪ್ಪಂದ ಆಗಿದ್ದರಿಂದ ಬಹಳ ಬೇಗ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ ಎನ್ನಲಾಗ್ತಿದೆ.

ಹಳ್ಳಿಯಲ್ಲಿ ಕೆಲಸ ಕಾರ್ಯ ಇಲ್ಲದೇ ಸುತ್ತಾಡಿಕೊಂಡಿರುವ ಯುವಲಂಕಾಳ ರತ್ನ (ವಿಶ್ವಕ್ ಸೇನ್). ಆ ಹಳ್ಳಿಯಲ್ಲಿ ಎಂಎಲ್‌ಎ ಮಾಡುತ್ತಿರುವ ಅನ್ಯಾಯವನ್ನು ಕಂಡರೆ ಸಹಿಸುವುದಿಲ್ಲ. ಆತ ಕೂಡ ರಾಜಕೀಯಕ್ಕೆ ಬಂದು ಅವರ ವಿರುದ್ಧ ತಿರುಗಿ ಬೀಳುತ್ತಾನೆ. ಅವುಗಳ ಎಉದರು ಕಾನೂನುಬಾಹಿರ ಚಟುವಟಿಕೆಗಳ ಬಹಳಬೇಗ ಬೆಳೆಯುತ್ತಾನೆ. ರಾಜಕೀಯರಂಗದಲ್ಲಿ ಬದಲಾವಣೆ ಮಾಡುತ್ತೀನಿ ಎಂದು ಬಂದವನೇ ಬದಲಾಗುತ್ತಾನೆ.

ಮತ್ತೊಂದು ಕಡೆ ಲಂಕಾಳ ರತ್ನ ಜೀವನದಲ್ಲಿ ಬುಜ್ಜಿ (ನೇಹಾ ಶೆಟ್ಟಿ) ಇರ್ತಾಳೆ. ಅವನು ಅವಳನ್ನು ಪ್ರೀತಿಸುತ್ತಾನೆ ಮತ್ತು ಅವಳನ್ನು ಮದುವೆಯಾಗುತ್ತಾನೆ. ಮತ್ತೊಂದೆಡೆ, ಅವರು ರತ್ನಮಾಲಾ (ಅಂಜಲಿ) ಜೊತೆಗೂ ರಿಲೇಷನ್‌ಶಿಪ್‌ನಲ್ಲಿ ಇರ್ತಾನೆ. ಮುಂದೆ ಲಂಕಾ ರತ್ನನ ಜೀವನ ಹೇಗೆಲ್ಲಾ ತಿರುವು ಪಡೆಯುತ್ತದೆ. ಕೊನೆಗೆ ಅವನು ಬಯಸಿದ್ದನ್ನು ಸಾಧಿಸುತ್ತಾನಾ? ಇಲ್ವಾ? ಎನ್ನುವುದು ಸಿನಿಮಾ ಕಥೆ.

ಐಪಿಎಲ್, ಎಲೆಕ್ಷನ್ ಕಾರಣಕ್ಕೆ ಕನ್ನಡ ಮಾತ್ರವಲ್ಲ ತೆಲುಗಿನಲ್ಲಿ ಕೂಡ ಸಿನಿಮಾಗಳು ಇತ್ತೀಚೆಗೆ ಸದ್ದು ಮಾಡಲಿಲ್ಲ. 10 ದಿನಗಳ ಕಾಲ ತೆಲಂಗಾಣದಲ್ಲಿ ಚಿತ್ರಮಂದಿರಗಳ ಬಾಗಿಲು ಮುಚ್ಚುವಂತಾಗಿತ್ತು. ಸದ್ಯ ಎಲ್ಲಾ ಮುಗಿದಿದ್ದು ಸಿನಿಮಾಗಳು ಸಾಲುಸಾಲಾಗಿ ಬಿಡುಗಡೆಗೆ ಸಜ್ಜಾಗಿವೆ.

More from Filmibeat

English summary
Vishwak Sen starrer Gangs of Godavari ready to Streaming with in 15 days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X