OTTಯಲ್ಲಿ ಹೊಸ ದಾಖಲೆ ಬರೆದ ಭಜರಂಗಿ, ಗರುಡ ಗಮನ!

ಕನ್ನಡ ಸಿನಿಮಾಗಳು ottಯಲ್ಲಿ ತೆರೆಕಂಡು ಸಾಲು, ಸಾಲು ದಾಖಲೆಗಳನ್ನು ಬರೆಯುತ್ತಿವೆ. ಸಿನಿಮಾಗಳು ಚಿತ್ರ ಮಂದಿರದಲ್ಲಿ ರಿಲೀಸ್‌ ಆಗಿ ನಂತರ ಒಟಿಟಿಗೆ ಬಂದೂ ದಾಖಲೆ ಮಾಡುತ್ತಿವೆ. ಅದರಲ್ಲಿ ಕನ್ನಡ ಚಿತ್ರಗಳೂ ಕೂಡ ಮುಂದಿವೆ. ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಮತ್ತು ರಾಜ್‌.ಬಿ ಶೆಟ್ಟಿ, ರಿಷಬ್ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಸಿನಿಮಾಗಳು ಮತ್ತೇ ದಾಖಲೆ ಬರೆಯುತ್ತಿವೆ.

ಈ ಹಿಂದೆ ಈ ಚಿತ್ರಗಳು ಓಟಿಟಿಯಲ್ಲಿ ರಿಲೀಸ್ ಆದ ಮೊದಲ ದಿನವೇ ಯಾವ ಮಟ್ಟಿನ ದಾಖಲೆ ಮಾಡಿವೆ ಎನ್ನುವ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ದಾಖಲೆ ಮಾಡಿದ್ದವು. ಈ ಚಿತ್ರಗಳು ಓಟಿಟಿಗೆ ಎಂಟ್ರಿಕೊಟ್ಟು ಹಲವು ದಿನಗಳು ಕಳೆದರೂ ಕೂಡ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಹಾಗಾಗಿ ಚಿತ್ರದ ದಾಖಲೆ ಮುಂದುವರೆದಿದೆ.

ಈ ಚಿತ್ರಗಳ ಹೊಸ ದಾಖಲೆಯನ್ನು ಜೀ 5 ಓಟಿಟಿ ಹಂಚಿಕೊಂಡಿದೆ. ಈ ಎರಡು ಚಿತ್ರಗಳನ ರೆಕಾರ್ಡನ್ನು ಬೇರೆ ಯಾವುದೇ ಸಿನಿಮಾ ಬ್ರೇಕ್ ಮಾಡಲು ಸಾಧ್ಯ ಆಗಿಲ್ಲ. ಇದನ್ನು ನಂಬರ್ ಸಮೇತ ಜೀ 5 ಹಂಚಿಕೊಂಡಿದೆ.

OTT ಬಾಕ್ಸಾಫೀಸ್‌ನಲ್ಲಿ ಭಜರಂಗಿ 2 ದಾಖಲೆ!

OTT ಬಾಕ್ಸಾಫೀಸ್‌ನಲ್ಲಿ ಭಜರಂಗಿ 2 ದಾಖಲೆ!

ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಭಾವನಾ ಮೆನನ್‌ 'ಭಜರಂಗಿ 2' ಸಿನಿಮಾದ ಪ್ರಮುಖ ಆಕರ್ಷಣೆ. ಶಿವರಾಜ್‌ಕುಮಾರ್ ಹಾಗೂ ಎ. ಹರ್ಷ ಕಾಂಬಿನೇಷನ್ ಮತ್ತೊಂದು ಹೈಲೈಟ್. ಡಿಸೆಂಬರ್ 23ರಂದು ಈ ಸಿನಿಮಾ ಓಟಿಟಿಯಲ್ಲಿ ತೆರೆಕಂಡಿತ್ತು. ಅಲ್ಲಿಂದ ಇಲ್ಲಿವರೆಗೂ ಒಂದೊಂದು ಹೊಸ ದಾಖಲೆ ಸೃಷ್ಟಿಸುತ್ತಿದೆ. ಸದ್ಯ ಈ ಚಿತ್ರ ಮಾಡಿರುವ ಹೊಸ ದಾಖಲೆ ಎಂದರೆ 200 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳ ಗಡಿ ಮುಟ್ಟಿದೆ. ಈ ವಿಚಾರವನ್ನು ಪೋಸ್ಟರ್ ಮೂಲಕ ಜೀ 5 ಹಂಚಿಕೊಂಡಿದೆ.

ಶಿವಣ್ಣ ಹಾದಿಯಲ್ಲೇ ರಾಜ್, ರಿಷಬ್!

ಶಿವಣ್ಣ ಹಾದಿಯಲ್ಲೇ ರಾಜ್, ರಿಷಬ್!

ಇನ್ನು ನಟ ರಾಜ್.ಬಿ ಶೆಟ್ಟಿ ನಿರ್ದೇಶನ ಮಾಡಿ ಅಭಿನಯಿಸಿರುವ 'ಗರುಡ ಗಮನ ವೃಷಭ ವಾಹನ' ಚಿತ್ರ ಕೂಡ 'ಭಜಂರಂಗಿ 2' ಚಿತ್ರದ ಮಾದರಿಯಲ್ಲೇ ದಾಖಲೆ ಬರೆದಿದೆ. ಈ ಚಿತ್ರದಲ್ಲಿ ರಾಜ್ ಶೆಟ್ಟಿ ಜೊತೆಗೆ ರಿಷಬ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಜೋಡಿಯ ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಅಂತೆಯೇ ಒಟಿಟಿಯಲ್ಲಿ ದಾಖಲೆ ಬರೆದಿದೆ. ಈ ಚಿತ್ರ ಕೂಡ 200 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳ ಗಡಿ ಮುಟ್ಟಿದೆ.

ರಿಲೀಸ್ ಆದ 3 ದಿನಕ್ಕೆ GGVV ದಾಖಲೆ!

ರಿಲೀಸ್ ಆದ 3 ದಿನಕ್ಕೆ GGVV ದಾಖಲೆ!

ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಗರುಡ ಗಮನ ವೃಷಭ ವಾಹನ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ನಂತರ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು ಅಲ್ಲಿಯೂ ಅಬ್ಬರಿಸುತ್ತಿದೆ. ಜೀ5 ಕನ್ನಡದಲ್ಲಿ ಜನವರಿ 13 ರಂದು ಈ ಸಿನಿಮಾ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಮೂರು ದಿನ ಪೂರ್ಣ ಕಳೆಯುವ ಮುನ್ನವೇ 8 ಕೋಟಿಗೂ ಹೆಚ್ಚು ನಿಮಿಷಗಳಷ್ಟು ಸಿನಿಮಾ ಸ್ಟ್ರೀಮಿಂಗ್ ಆಗಿದೆ.

10 ಕೋಟಿ ನಿಮಿಷ ವೀಕ್ಷಣೆ 'ಭಜರಂಗಿ 2' ಚಿತ್ರ!

10 ಕೋಟಿ ನಿಮಿಷ ವೀಕ್ಷಣೆ 'ಭಜರಂಗಿ 2' ಚಿತ್ರ!

'ಭಜರಂಗಿ 2' ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ ಸಿನಿಮಾ ನೋಡಲು ಜನರು ಮುಗಿಬಿದ್ದಿದ್ದರು. ಮೊದಲ ಮೂರು ದಿನವೇ ಶಿವಣ್ಣನ ಸಿನಿಮಾವನ್ನು 5 ಕೋಟಿಗೂ ಅಧಿಕ ನಿಮಿಷಗಳ ಕಾಲ ವೀಕ್ಷಣೆ ಮಾಡಲಾಗಿತ್ತು. ಕನ್ನಡ ಸಿನಿಮಾರಂಗದ ಮಟ್ಟಿಗೆ ಇಷ್ಟು ಕಡಿಮೆ ಸಮಯದಲ್ಲಿ ಈ ದಾಖಲೆ ಮಾಡಿದ ಮೊದಲ ಸಿನಿಮಾ ಆಗಿತ್ತು. ನಂತರ 16ನೇ ದಿನಕ್ಕೆ ಮತ್ತೊಂದು ಮೈಲಿಗಲ್ಲು ತಲುಪಿದ್ದು, 10 ಕೋಟಿ ನಿಮಿಷ ವೀಕ್ಷಣೆ ಪಡೆದುಕೊಂಡಿತ್ತು. ಕನ್ನಡ ಓಟಿಟಿಯಲ್ಲಿ ಇಷ್ಟು ದಾಖಲೆ ಮಾಡಿದ ಮೊದಲ ಸಿನಿಮಾ ಇದಾಗಿತ್ತು. ಇದೀಗ ಮತ್ತೊಂದು ದಾಖಲೆ ಮಾಡಿದೆ.

More from Filmibeat

English summary
Garuda Gamana Vrishabha Vahana And Bhajarangi 2 Movie New Record In OTT Zee 5
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X