ಒಟಿಟಿಯಲ್ಲಿ ಗರುಡ ಗಮನ ವೃಷಭ ವಾಹನ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ !
2021ರಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪೈಕಿ ಗರುಡ ಗಮನ ವೃಷಭ ವಾಹನ ವಾಹನ ಚಿತ್ರ ಕೂಡ ಪ್ರಮುಖವಾಗಿದೆ. ರಾಜ್ ಬಿ. ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರೌಡಿಸಂ ಲೋಕದ ಕಥೆ ಹೇಳಲಾಗಿದೆ. ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್ ಬಿ. ಶೆಟ್ಟಿ ನಟಿಸಿ ಗಮನ ಸೆಳೆದಿದ್ದಾರೆ. ಮತ್ತೊಂದು ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಗರುಡ ಗಮನ ವೃಷಭ ವಾಹನ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಬೇರೆಯೇ ರೀತಿ ಅನ್ನಿಸಿದ ಸಿನಿಮಾ. ಈ ಹಿಂದೆ ಎಲ್ಲೂ ನೋಡಿರದ ರೀತಿ ಗರುಡ ಗಮನ ವೃಷಭ ವಾಹನ ಸಿನಿಮಾ ಖುಷಿ ಕೊಟ್ಟಿತ್ತು. ಅದ್ಭುತ ಹಿನ್ನೆಲೆ ಸಂಗೀತ, ಕಲಾವಿದರ ಅಭಿನಯ ಎಲ್ಲವೂ ಸಖತ್ ಕಿಕ್ ಕೊಟ್ಟಿತ್ತು. ಮತ್ತೊಂದು ವಿಚಾರ ಏನಂದ್ರೆ ರಾಜ್ ಬಿ ಶೆಟ್ಟಿ ಅವರನ್ನು ಗರುಡ ಗಮನ ವೃಷಭ ವಾಹನ ಸಿನಿಮಾ ಬಿಡುಗಡೆಯಾಗುವವರೆಗೂ ಅವರನ್ನು ಕಾಮಿಡಿ ಹೀರೋ ಎಂದುಕೊಂಡಿದ್ದರು.
ಒಂದು ಮೊಟ್ಟೆಯ ಕಥೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಾಜ್ ಬಿ ಶೆಟ್ಟಿ 'ಒಂದು ಮೊಟ್ಟೆಯ ಕಥೆ' ಮೂಲಕ ನಕ್ಕು ನಗಿಸಿದ್ದರು. ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಶಿವನ ಅವತಾರ ತಾಳಿ ಕ್ರೌರ್ಯ ಮೆರೆದಿದ್ದರು. ಈ ಸಿನಿಮಾದಿಂದ ಇವರ ಇಮೇಜ್ ಬದಲಾಗಿದೆ. ಯಾವುದೇ ಪಾತ್ರಕ್ಕೂ ಸೈ ಎನ್ನಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಗರುಡ ಗಮನ ವೃಷಭ ವಾಹನ ಸಿನಿಮಾ ಈಗ ಜೀ 5 ಪಾಲಾಗಿದೆ.

ಜೀ 5 ಪಾಲಾದ ಗರುಡ ಗಮನ ವೃಷಭ ವಾಹನ ಚಿತ್ರ
ಗರುಡ ಗಮನ ವೃಷಭ ವಾಹನ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಈ ಸಿನಿಮಾವನ್ನು ಒಟಿಟಿಯಲ್ಲಿ ಪ್ರೇಕ್ಷಕರು ಇನ್ನು ಮುಂದೆ ನೋಡಬಹುದಾಗಿದೆ. ಅತ್ಯಂತ ಸಿಂಪಲ್ ಆಗಿ ಮೂಡಿಬಂದರೂ ಗರುಡ ಗಮನ ವೃಷಭ ವಾಹನ ಚಿತ್ರದ ಕಂಟೆಂಟ್ ವಿಭಿನ್ನವಾಗಿ ಮೂಡಿ ಬಂದಿದ್ದು ಪ್ರೇಕ್ಷಕರಿಗೆ ಹಿಡಿಸಿತ್ತು. ಈ ಚಿತ್ರವನ್ನು ನೋಡಿ ಅದೆಷ್ಟೋ ಮಂದಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ರೌಡಿಸಂ ಆಧಾರಿತ ಚಿತ್ರವನ್ನು ಹೀಗೂ ಮಾಡಬಹುದು ಎಂದು ರಾಜ್ ಬಿ ಶೆಟ್ಟಿ ಸಿನಿ ಮಂದಿಗೆ ತೋರಿಸಿಕೊಟ್ಟಿದ್ದರು.ಈ ಹಿಂದೆ ಗರುಡ ಗಮನ ವೃಷಭ ವಾಹನ ಚಿತ್ರವನ್ನು ನೆಟ್ಫ್ಲಿಕ್ಸ್ ಅವರು ಖರೀದಿ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಗರುಡ ಗಮನ ವೃಷಭ ವಾಹನ ಚಿತ್ರ ಜೀ 5 ಪಾಲಾಗಿದೆ.

ಸಂಕ್ರಾಂತಿ ಸಂಭ್ರಮಕ್ಕೆ ಜೀ 5 ನಲ್ಲಿ ಚಿತ್ರ ಪ್ರೇಕ್ಷಕರ ಮುಂದೆ
ನವೆಂಬರ್ 19ರಂದು ರಿಲೀಸ್ ಆಗಿದ್ದ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಉತ್ತಮ ರೆಸ್ಪಾನ್ಸ್ ಕೂಡ ಪಡೆದುಕೊಂಡಿತ್ತು. ಹಾಗೇ ಕೆಲ ದಿನಗಳ ಹಿಂದೆಯೇ ಗರುಡ ಗಮನ ವೃಷಭ ವಾಹನ ಚಿತ್ರದ ಓಟಿಟಿ ಹಕ್ಕನ್ನು ಜೀ5 ಸಂಸ್ಥೆ ಪಡೆದುಕೊಂಡಿದ್ದರ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಸಧ್ಯದಲ್ಲೇ ಚಿತ್ರ ಓಟಿಟಿಯಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ ಬಿಡುಗಡೆ ದಿನಾಂಕ ಘೋಷಣೆಯಾಗಿರಲಿಲ್ಲ. ಇದೀಗ ಚಿತ್ರದ ಬಿಡುಗಡೆ ದಿನಾಂಕ ಖಚಿತವಾಗಿದೆ.

ಖುಷಿ ಹಂಚಿಕೊಂಡ ಚಿತ್ರತಂಡ ಹೇಳಿದ್ದೇನು ಗೊತ್ತಾ ?
2021ರಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪೈಕಿ ಗರುಡ ಗಮನ ವೃಷಭ ವಾಹನ ವಾಹನ ಚಿತ್ರ ಕೂಡ ಒಂದು. ರಾಜ್ ಬಿ. ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರೌಡಿಸಂ ಲೋಕದ ಕಥೆ ಹೇಳಲಾಗಿದೆ. ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಈ ಅದ್ಭುತವಾದ ಸಿನಿಮಾ ಜನವರಿ 15ಕ್ಕೆ ಜೀ 5 ನಲ್ಲಿ ರಿಲೀಸ್ ಆಗುತ್ತಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಗಮನ ವೃಷಭ ವಾಹನ ವಾಹನ ಚಿತ್ರ ಓಟಿಟಿಯಲ್ಲಿ ತೆರೆ ಕಾಣುತ್ತಿರುವ ಬಗ್ಗೆ ಚಿತ್ರತಂಡ ಖುಷಿ ವ್ಯಕ್ತಪಡಿಸಿದ್ದು, ಈ ವಿಚಾರವನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.
ಸಾಕಷ್ಟು ಕನ್ನಡ ಸಿನಿಮಾಗಳು ರಿಲೀಸ್ ಆಗ್ತಿವೆ ಜೀ 5 ನಲ್ಲಿ
ಇನ್ನು ಜೀ 5 ನಲ್ಲಿ ಸಾಕಷ್ಟು ಕನ್ನಡ ಸಿನಿಮಾಗಳು ತೆರೆಕಂಡಿದೆ. 2021ರಲ್ಲಿ ಕನ್ನಡದ ಹೆಸರಾಂತ ಚಿತ್ರಗಳು ಓಟಿಟಿಗೆ ಬಂದು ಸದ್ದು ಮಾಡಿದ್ದವು. ಡಿಸೆಂಬರ್ 3ರಂದು ತೆರೆಕಂಡಿದ್ದ ಮದಗಜ ಸಿನಿಮಾ 25 ದಿನದ ನಂತರ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ಭಜರಂಗಿ 2 ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟು ವೀಕ್ಷಕರ ಪ್ರೀತಿಗೆ ಪಾತ್ರವಾಗುತ್ತಿದೆ. ರವಿಚಂದ್ರನ್ ಅಭಿನಯದ ಕನ್ನಡಿಗ ಚಿತ್ರ ಕೂಡ ಓಟಿಟಿಯಲ್ಲಿ ರಿಲೀಸ್ ಆಗಿರೋದು ಗೊತ್ತೆ ಇದೆ.. ಈಗ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ನಟಿಸಿರುವ ಗರುಡ ಗಮನ ವೃಷಭ ವಾಹನ ಸಿನಿಮಾ ಕೂಡ ಜೀ 5 ನಲ್ಲಿ ರಿಲೀಸ್ ಆಗಲಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆಯಲ್ಲಿದೆ.


Click it and Unblock the Notifications











